Back
Home » ಸಿನಿ ಸಮಾಚಾರ
ರಶ್ಮಿಕಾ ಇಷ್ಟು ದೊಡ್ಡ ಶ್ರೀಮಂತರಾ? ಮಂದಣ್ಣ ಕುಟುಂಬದ ಒಟ್ಟು ಆಸ್ತಿ ವಿವರ
Oneindia | 16th Jan, 2020 05:59 PM
 • ಐಷರಾಮಿ ಬಂಗಲೆ ಮತ್ತು ಕಾರು

  ಮೂಲತಃ ವೀರಾಜಪೇಟೆ ಸಮೀಪದ ಮೈತಾಡಿ ಗ್ರಾಮದವರು. ವೀರಾಜಪೇಟೆಯ ಕುಕ್ಲೂರು ಗ್ರಾಮದಲ್ಲಿರುವ ಎರಡು ಅಂತಸ್ತಿನ ಕೋಟಿ ಮೌಲ್ಯದ ಐಷರಾಮಿ ಕಟ್ಟಡ ಹೊಂದಿದ್ದಾರೆ. ಎರಡು ಐಷರಾಮಿ ಕಾರುಗಳನ್ನು ಹೊಂದಿರುವ ಮದನ್ ಮಂದಣ್ಣ.


 • ಕಾಫಿ ತೋಟ ಹೊಂದಿದ್ದಾರೆ

  ಹುಟ್ಟೂರು ಮೈತಾಡಿ ಗ್ರಾಮದಲ್ಲಿ ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ ಹೆಸರಿನಲ್ಲಿ 24 ಎಕೆರೆ ಕಾಫಿ ತೋಟ ಇದೆಯಂತೆ. ಇತ್ತೀಚೆಗೆ ಬಿಟ್ಟಂಗಾಲದಲ್ಲಿ 5.50 ಎಕರೆ ಜಾಗ ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

  ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ: ಗಮನಿಸಬೇಕಾದ ಅಂಶಗಳು


 • ಶಾಲೆ ನಿರ್ಮಾಣಕ್ಕೆ ಜಾಗ ಖರೀದಿ

  ಕಾಫಿ ತೋಟ ಹೊರು ಪಡಿಸಿ, ಹೊಸ ಉದ್ಯಮ ಆರಂಭಿಸಲು ಸಜ್ಜಾಗಿದ್ದಾರೆ ಮಂದಣ್ಣ ಕುಟುಂಬ, ಹೊಸ ಶಾಲೆ ಕಟ್ಟಲು ಜಾಗ ಖರೀದಿಸಿದ್ದರಂತೆ. ಇಂಟರ್ ನ್ಯಾಷನಲ್ ಸ್ಕೂಲ್ ನಿರ್ಮಿಸಲು ಚಿಂತನೆ ನಡೆಸಿದ್ದಾರೆ. ಪೆಟ್ರೋಲ್ ಬಂಕ್ ನಿರ್ಮಿಸಲು ಕೂಡ ಪ್ಲಾನ್ ಆಗಿತ್ತಂತೆ.

  ಒಂದು ಸಿನಿಮಾಗೆ ರಶ್ಮಿಕಾ ಮಂದಣ್ಣ ಸಂಭಾವನೆ ಎಷ್ಟು?


 • ಕಲ್ಯಾಣ ಮಂಟಪ ಇದೆಯಂತೆ

  ವೀರಾಜಪೇಟೆಯಲ್ಲಿರುವ ಐಷರಾಮಿ ಕಲ್ಯಾಣ ಮಂಟಪ

  ಸೆರಿನಿಟ್ ಹಾಲ್. ಇಲ್ಲಿ ಮದುವೆಗೆ ದಿನಕ್ಕೆ ಒಂದೂವರೆ ಲಕ್ಷ ಬಾಡಿಗೆಯಂತೆ. ವೀರಾಜಪೇಟೆಯ ವಿಜಯನಗರದಲ್ಲಿದ್ದ ಮನೆಯನ್ನು ಒಂದು ವರ್ಷದ ಹಿಂದೆ ಒಂದು ಕಾಲು ಕೋಟಿಗೆ ಮಾರಾಟ ಮಾಡಿದ್ದಾರೆ ಎಂಬ ಸುದ್ದಿಯೂ ಇದೆ.
ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಮಾತ್ರವಲ್ಲ, ತೆಲುಗು ಹಾಗೂ ತಮಿಳಿನಲ್ಲು ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ. ಇಂತಹ ಸಮಯದಲ್ಲಿ ರಶ್ಮಿಕಾ ನಿವಾಸದ ಮೇಲೆ ಐಟಿ ದಾಳಿ ಆಗಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.

ರಶ್ಮಿಕಾ ಕುಟುಂಬದ ಮೇಲೆ ಐಟಿ ರೇಡ್ ಆಗಿರುವುದಕ್ಕೆ ನಿಜವಾದ ಕಾರಣ ಬಹಿರಂಗವಾಗಿಲ್ಲ. ತೆರಿಗೆ ಕಟ್ಟಿಲ್ಲ ಎಂಬ ಕಾರಣಕ್ಕೋ ಅಥವಾ ಅಕ್ರಮ ಆದಾಯ ಇದೆ ಎನ್ನುವುದಕ್ಕೋ ಅಥವಾ ಯಾರಾದರೂ ದೂರು ನೀಡಿರುವ ಹಿನ್ನಲೆ ಆಗಿರುವ ದಾಳಿ ಎನ್ನುವುದು ಬಳಿಕವಷ್ಟೇ ತಿಳಿಯಬೇಕಿದೆ.

ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ರೈಡ್

ಅಂದ್ಹಾಗೆ, ರಶ್ಮಿಕಾ ಮಂದಣ್ಣ ಕುಟುಂಬ ಮೊದಲಿನಿಂದಲೂ ಶ್ರೀಮಂತನ ಮನೆತನವೇ. ವಿರಾಜಪೇಟೆಯಲ್ಲಿ ಉತ್ತಮ ಮೌಲ್ಯದ ಆಸ್ತಿಪಾಸ್ತಿ ಅವರ ತಂದೆಯ ಹೆಸರಲ್ಲಿದೆ. ಹಾಗಿದ್ರೆ, ರಶ್ಮಿಕಾ ಕುಟುಂಬದ ಒಟ್ಟು ಆಸ್ತಿ ಮೌಲ್ಯ ಎಷ್ಟಿರಬಹುದು? ಇಲ್ಲಿದೆ ಓದಿ....

   
 
ಟೆಕ್ನಾಲಜಿ