Back
Home » ಸಿನಿ ಸಮಾಚಾರ
ಇಂಡಸ್ಟ್ರಿಯಲ್ಲಿ ಕೆಟ್ಟ ಹೆಸರು ಬಂದರೆ ಶಾಪ ಎಂದು ಶಿವರಾಜ್ ಕುಮಾರ್ ಹೇಳಿದ್ದೇಕೆ?
Oneindia | 16th Jan, 2020 06:03 PM
 • ಸೆಟ್ ನಲ್ಲಿಯೆ ಇದ್ದರು ಶಿವಣ್ಣ

  ಶಿವರಾಜ್ ಕುಮಾರ್ ಕೂಡ ಸೆಟ್ ನಲ್ಲಿಯೆ ಇದ್ದರು. ಆದರೆ ಆ ಸಮಯದಲ್ಲಿ ಶಿವಣ್ಣ ದೃಶ್ಯ ಚಿತ್ರೀಕರಣ ಇರದ ಕಾರಣ ಸೆಟ್ ನಿಂದ ಹೊರಗೆ ಇದ್ದರು. ದೊಡ್ಡ ಮಟ್ಟಕ್ಕೆ ಸೌಂಡ್ ಆಗಿದ್ದು ಕೇಳಿ ಓಡಿ ಬಂದು ನೋಡಿದ್ದಾರೆ. ಸೆಟ್ ಧಗಧಗ ಹೊತ್ತಿ ಉರಿಯುತ್ತಿತ್ತು. ಚಿತ್ರದ ಸೆಕೆಂಡ್ ಹಾಫ್ ನ ತುಂಬಾ ಪ್ರಮುಖವಾದ ದೃಶ್ಯವನ್ನು ಚಿತ್ರೀಕರಣ ಮಾಡಲಾಗುತ್ತಿತ್ತು.

  ಆಪರೇಷನ್ ವೇಳೆ ಶಿವಣ್ಣನ ಹಾಡು ಕೇಳಿ ಕುಣಿದ ಅಭಿಮಾನಿಯ ವಿಡಿಯೋ ವೈರಲ್


 • ಭಜರಂಗಿ ಹೆಸರು ಇರುವುದರಿಂದ ಏನು ಆಗಿಲ್ಲ

  "ಸೆಟ್ ಒಳಗೆ ಸುಮಾರು 250ರಿಂದ 300 ಜನ ಇದ್ದರು. ಜ್ಯೂನಿಯರ್ ಆರ್ಟಿಸ್ಟ್ ಗಳೆ 200 ಕ್ಕು ಹೆಚ್ಚು ಜನ ಇದ್ದರು. ಜೊತೆಗೆ ಪ್ರಮುಖ ಕಲಾವಿದರು 15 ರಿಂದ 20 ಜನ ಇದ್ದರು. ಒಬ್ಬರಿ ಏನೆ ಆಗಿದ್ದರು ತುಂಬ ನೋವಾಗುತ್ತಿತ್ತು. ಆದರೆ ಭಜರಂಗಿ ಹೆಸರು ಇರುವುದರಿಂದ ಏನು ಆಗಿಲ್ಲ" ಎಂದು ಹೇಳಿದ್ದಾರೆ.


 • ಇಂಡಸ್ಟ್ರಿಯಲ್ಲಿ ಕೆಟ್ಟ ಹೆಸರು ಬಂದರೆ ಶಾಪ

  ಜಯಣ್ಣ ನಿರ್ಮಾಣದ ಸಿನಿಮಾ. ತುಂಬಾ ದುಬಾರಿ ಸೆಟ್ ಆಗಿತ್ತು. ಅದ್ಭುತವಾಗಿ ಸೆಟ್ ನಿರ್ಮಾಣ ಮಾಡಲಾಗಿತ್ತು. ಆದರೆ ಸೆಟ್ ಹೋದರು ಪರವಾಗಿಲ್ಲ. ಇನ್ನೊಂದು ಸೆಟ್ ಹಾಕಬಹುದು. ಯಾರಿಗಾದರು ಒಬ್ಬರಿಗೆ ಏನಾಗಿದ್ರೂ ನೋವಾಗುತ್ತಿತ್ತು. ಜೊತೆಗೆ ಕೆಟ್ಟ ಹೆಸರು ಬರುತ್ತಿತ್ತು. ಇಂಡಸ್ಟ್ರಿಯಲ್ಲಿ ಆ ರೀತಿ ಕೆಟ್ಟ ಹೆಸರು ಬಂದರೆ ಶಾಪ ಅದು. ಆದರೀಗ ಆಂಜನೇಯ ಶಾಪದಿಂದ ದೂರ ಮಾಡಿದ್ದಾನೆ" ಎಂದು ಹೇಳಿದ್ದಾರೆ.

  ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಡಾ.ರಾಜ್ ಕುಟುಂಬ.!


 • ಬೆಂಕಿ ಅಂದರೆ ನನಗೆ ತುಂಬ ಇಷ್ಟ

  'ಬೆಂಕಿ ಅಂದರೆ ನನಗೆ ತುಂಬ ಇಷ್ಟ, ಆದರೆ ಬೆಂಕಿ ಎಲ್ಲರಿಗೂ ಇಷ್ಟ ಆಗಲ್ಲ. ಇತ್ತೀಚಿಗಷ್ಟೆ ಫಸ್ಟ್ ಲುಕ್ ರಿಲೀಸ್ ಮಾಡಲಾಗಿತ್ತು. ಎಲ್ಲರು ತುಂಬಾ ಇಷ್ಟಪಟ್ಟಿದ್ದಾರೆ. ಟ್ರೆಂಡ್ ಸೆಟ್ ಆಗಿದೆ. ಬಹುಶಃ ದೃಷ್ಟಿ ಆಗಿರಬೇಕು" ಎಂದರು. ಭಜರಂಗಿ-2 ಚಿತ್ರೀಕರಣ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಎ.ಹರ್ಷ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಭಜರಂಗಿ-2 ಚಿತ್ರದಲ್ಲಿ ಶಿವಣ್ಣನಿಗೆ ನಾಯಕಿಯಾಗಿ ಟಗರು ಖ್ಯಾತಿಯ ಭಾವನಾ ಕಾಣಿಸಿಕೊಂಡಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ 2' ಸಿನಿಮಾ ಸೆಟ್ ಗೆ ಬೆಂಕಿ ಬಿದ್ದು ಅದ್ದೂರಿ ಸೆಟ್ ಸುಟ್ಟು ಭಸ್ಮವಾಗಿದೆ. ಶಾಟ್ ಸರ್ಕ್ಯೂಟ್ ನಿಂದ ಚಿತ್ರೀಕರಣದ ಸೆಟ್ ಗೆ ಬೆಂಕಿ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಸುಮಾರು 1 ಗಂಟೆ ಕಾಲ ಸೆಟ್ ಹೊತ್ತಿ ಉರಿದಿದೆ.

ಬೆಂಗಳೂರಿನ ಹೊರವಲಯ ಮೋಹನ್ ಬಿ ಕೆರೆ ಸ್ಟೂಡಿಯೊದಲ್ಲಿ'ಭಜರಂಗಿ 2' ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರದ ಪ್ರಮುಕ ದೃಶ್ಯವನ್ನು ಸೆರೆಹಿಡಿಯಲಾಗುತ್ತಿತ್ತು. ಸುಮಾರು ಕೋಟಿ ವೆಚ್ಚದಲ್ಲಿ ಭಜರಂಗಿ-2 ಸೆಟ್ ನಿರ್ಮಾಣ ಮಾಡಲಾಗಿತ್ತು. ಆದರೀಗ ಸೆಟ್ ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್ ಯಾರಿಗೂ ಏನು ಆಗಿಲ್ಲ. ಈ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾತನಾಡಿದ್ದಾರೆ.

'ಭಜರಂಗಿ 2' ಸಿನಿಮಾದ ಸೆಟ್ ನಲ್ಲಿ ಬೆಂಕಿ ಅವಘಡ

'ಭಜರಂಗಿ 2' ಸಿನಿಮಾದ ಬಹು ಪಾಲು ಚಿತ್ರೀಕರಣ ಸೆಟ್ ನಲ್ಲಿಯೇ ನಡೆಯುತ್ತಿದೆ. ಸದ್ಯ ಚಿತ್ರದ ದೃಶ್ಯಕ್ಕಾಗಿ ಗುಹೆಯ ಸೆಟ್ ಹಾಕಲಾಗಿತ್ತು. ಸುಮಾರು ಒಂದು ಕೋಟಿ ಈ ಸೆಟ್ ಗಾಗಿ ವೆಚ್ಚ ಮಾಡಲಾಗಿದೆ ಎಂದು ಹೇಳಲಾಗುತ್ತಿತ್ತು. ಆದರೀಗ ಶಾಟ್ ಸರ್ಕ್ಯೂಟ್ ನಿಂದ ಆ ಸೆಟ್ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ಪ್ರಾಣಪಾಯದಿಂದ ಎಲ್ಲರೂ ಪಾರಾಗಿದ್ದಾರೆ.

   
 
ಟೆಕ್ನಾಲಜಿ