Back
Home » ಸಿನಿ ಸಮಾಚಾರ
'ತುರ್ತು ನಿರ್ಗಮನ': ಮತ್ತೆ ಬಂದ್ರು ಸುನೀಲ್, ಸಂಯುಕ್ತ ಹೆಗ್ಡೆ
Oneindia | 16th Jan, 2020 06:10 PM

'ತುರ್ತು ನಿರ್ಗಮನ' ಕನ್ನಡ ಸಿನಿಮಾದ ಟೀಸರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಸಿನಿಮಾದ ಟೀಸರ್ ತುಂಬ ಇಂಟ್ರೆಸ್ಟಿಂಗ್ ಆಗಿದೆ.

ನಟ ಸುನೀಲ್ ರಾವ್ ಸಿನಿಮಾದ ನಾಯಕನಾಗಿದ್ದಾರೆ. ದೊಡ್ಡ ಗ್ಯಾಪ್ ನಂತರ ಮತ್ತೆ ಬೆಳ್ಳಿ ಪರದೆ ಮೇಲೆ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಪಾತ್ರಕ್ಕೆ ತಕ್ಕ ಹಾಗೆ ಇದ್ದಾರೆ ಎನ್ನುವ ಕಾರಣಕ್ಕೆ ಸುನೀಲ್ ರನ್ನು ಆಯ್ಕೆ ಮಾಡಲಾಗಿದೆಯಂತೆ. ವರ್ಷಗಳ ನಂತರ ಸಂಯುಕ್ತ ಹೆಗ್ಡೆ ಕೂಡ ಮತ್ತೆ ಎಂಟ್ರಿ ನೀಡಿದ್ದು, ಚಿತ್ರದ ನಾಯಕಿಯಾಗಿದ್ದಾರೆ.

ರಾಬರ್ಟ್-ಕೋಟಿಗೊಬ್ಬನ ಜೊತೆ ಕಿಚ್ಚು ಹಚ್ಚಿದ ಸಲಗ, ಶೋಕಿವಾಲ

ಈ ಸಿನಿಮಾದ ವಿಷಯವೇ ತುಂಬ ಕುತೂಹಲಕಾರಿಯಾಗಿದೆ. ಚಿತ್ರದ ನಾಯಕನ ಪಾತ್ರ ಸಾಯುವ ಕೊನೆಯ 3 ದಿನದಲ್ಲಿ ಏನೆಲ್ಲ ಮಾಡಬಹುದು ಎನ್ನುವುದು ಕಥೆಯಾಗಿದೆ. ಇದರ ಜೊತೆಗೆ ಮೂರು ದಿನದ ಬದುಕು ಎನ್ನುವ ಫಿಲಾಸಫಿಯನ್ನು ಕೂಡ ಹೇಳಿದ್ದಾರೆ.

ಹೇಮಂತ್ ಕುಮಾರ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ 'ಗೋದಿ ಬಣ್ಣ ಸಾಧಾರಣ ಮೈ ಕಟ್ಟು' ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಜೊತೆಗೆ ಜಾಹಿರಾತು, ಕಿರುಚಿತ್ರಗಳ ಮೂಲಕ ಗಮನ ಸೆಳೆದಿದ್ದರು.

ರಾಜ್ ಬಿ ಶೆಟ್ಟಿ, ಸುಧಾರಾಣಿ, ಅಚ್ಚುತ್ ಕುಮಾರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿ ಅಜಿತ್ ಕುಮಾರ್ ಸಂಕಲನ, ಧೀರೆಂದ್ರ ದೊಸ್ ಸಂಗೀತ, ಪ್ರಯಾಗ್ ಮುಕುಂದನ್ ಕ್ಯಾಮರಾ ವರ್ಕ್ ಸಿನಿಮಾದಲ್ಲಿ ಇದೆ. ಫೆಬ್ರವರಿಯಲ್ಲಿ ಸಿನಿಮಾ ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ.

   
 
ಟೆಕ್ನಾಲಜಿ