Back
Home » ಇತ್ತೀಚಿನ
ಭಾರತದಲ್ಲಿ ಲಭ್ಯವಿರುವ ಟಾಪ್ 5 ಪವರ್‌ಬ್ಯಾಂಕ್ ಇಲ್ಲಿವೆ!!..ಯಾವುವು ಗೊತ್ತಾ?
Gizbot | 16th Jan, 2020 10:00 AM
 • ಹೌದು

  ಹೌದು, ಸ್ಮಾರ್ಟ್‌ಫೋನ್ ಮಾರುಕಟ್ಟೆ ಎಷ್ಟು ವಿಶಾಲವಾಗಿ ಬೆಳೆಯುತ್ತಿದೆಯೋ ಹಾಗೇಯೆ ಸ್ಮಾರ್ಟ್‌ಫೋನ್ ಆಕ್ಸ್‌ಸರಿಸ್ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ನಿರ್ಮಾಣವಾಗುತ್ತಿದೆ. ಸ್ಮಾರ್ಟ್‌ಫೋನ್‌ ಗ್ರಾಹಕರಿಗೆ ಪವರ್‌ ಬ್ಯಾಂಕ್‌ಗಳು ತುಂಬಾ ಉಪಯುಕ್ತವಾಗಿದ್ದು, ಆದರೆ ಮಾರುಕಟ್ಟೆಯಲ್ಲಿ ಸೀಗುವ ತರಹೇವಾರಿ ಪವರ್ ಬ್ಯಾಂಕ್‌ಗಳಲ್ಲಿ ಯಾವುದನ್ನು ಖರೀದಿಸಬೇಕು ಎನ್ನುವುದೇ ಗ್ರಾಹಕರಿಗೆ ದೊಡ್ಡ ಪ್ರಶ್ನೇಯಾಗಿದೆ. ಅದಕ್ಕಾಗಿ ನಾವು ಇಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಅತ್ಯುತ್ತಮ ಎನಿಸುವ ಟಾಪ್ 5 ಪವರ್ ಬ್ಯಾಂಕ್ ಗಳ ಬಗ್ಗೆ ತಿಳಿಸಿಕೊಡ್ತೀವಿ ಈ ಲೇಖನವನ್ನ ಓದಿ.


 • MI 20000mAh 2I

  ಶಿಯೋಮಿ ಕಂಪೆನಿಯ 20000mAh ಬ್ಯಾಟರಿ ಸಾಮರ್ಥ್ಯದ Mi ಪವರ್ ಬ್ಯಾಂಕ್ 2i ಟಾಪ್‌5 ಅತ್ಯುತ್ತಮ ಪವರ್‌ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಇದು ಅತ್ಯುತ್ತಮ ಗುಣಮಟ್ಟ ಮತ್ತು ಹೆಚ್ಚಿನ ಪವರ್‌ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಇದರಲ್ಲಿರುವ ಸಿಂಗಲ್‌-ಪೋರ್ಟ್ ಫಾಸ್ಟ್ ಚಾರ್ಜ್ ಬೆಂಬಲದಿಂದಾಗಿ ವೇಗವಾಗಿ ಚಾರ್ಜಿಂಗ್‌ ಮಾಡುತ್ತದೆ. ಇನ್ನು ಈ ಪವರ್ ಬ್ಯಾಂಕ್ ಡ್ಯುಯಲ್ ಯುಎಸ್ಬಿ ಔಟ್‌ಪುಟ್‌ ಅನ್ನು ಬೆಂಬಲಿಸುತ್ತದೆ. ಮತ್ತು ಏಕಕಾಲದಲ್ಲಿ 2 ಸಾಧನಗಳನ್ನು ಚಾರ್ಜ್ ಮಾಡಲು ನಿಮಗೆ ಅನುಮತಿಸುತ್ತದೆ. ಅಲ್ಲದೆ ಇದು ಕೇವಲ 358 ಗ್ರಾಂ ತೂಕವನ್ನು ಹೊಂದಿರುವುದರಿಂದ ಕ್ಯಾರಿ ಮಾಡುವುದು ಕೂಡ ಸುಲಭವಾಗಿದೆ.


 • ಫಿಲಿಪ್ಸ್‌ 11000mAh ಪವರ್‌ಬ್ಯಾಂಕ್

  ಫಿಲಿಪ್ಸ್ 11000 mAh ಪವರ್ ಬ್ಯಾಂಕ್ ಕೂಡ ಅತ್ಯುತ್ತಮ ಪವರ್‌ ಬ್ಯಾಂಕ್‌ಗಳಲ್ಲಿ ಒಂದಾಗಿದ್ದು, ಈ ಪೋರ್ಟಬಲ್ ಪವರ್ ಬ್ಯಾಂಕ್ ಟ್ರಾವಲ್‌ ಮಾಡುವಾಗ ಎರಡು ಪೂರ್ಣ ರೀಚಾರ್ಜ್‌ಗಳಿಗೆ ಹೆಚ್ಚುವರಿ ಶಕ್ತಿಯನ್ನು ನೀಡುತ್ತದೆ. ಇದು ತುಂಬಾ ಪೋರ್ಟಬಲ್ ಆಗಿದ್ದು, ಯುಎಸ್ಬಿ ಸಂಪರ್ಕದೊಂದಿಗೆ ಬರುತ್ತದೆ. ಇದು ಸ್ಪಷ್ಟವಾದ ಎಲ್ಇಡಿ ಬ್ಯಾಟರಿ ಪ್ರದರ್ಶನವನ್ನು ಹೊಂದಿದೆ, ಇದರಿಂದ ಬ್ಯಾಟರಿ ಶಕ್ತಿಯ ಪ್ರಮಾಣವನ್ನ ತಿಳಿಯಬಹುದಾಘಿದ್ದು, ಟ್ರಾಔಎಲ್‌ ಮಾಡುವಾಗ ಬಳಸಬಹುದಾದ ಉತ್ತಮ ಪವರ್‌ ಬ್ಯಾಂಕ್‌ ಆಗಿದೆ.


 • ಆಂಬ್ರೇನ್ ಪಿಪಿ -20

  ಆಂಬ್ರೇನ್ ಪಿಪಿ -20 ಪವರ್‌ ಬ್ಯಾಂಕ್‌ 20,000mAh ಬ್ಯಾಟರಿ ಪ್ಯಾಕ್‌ ಆಪ್‌ ಹೊಂದಿರುವ ಪವರ್ ಬ್ಯಾಂಕ್ ಆಗಿದ್ದು, ಇದು 5v/ 2.1a ಕಂಬೈನ್ಡ್‌ ರೇಟಿಂಗ್‌ನ ಡ್ಯುಯಲ್ ಯುಎಸ್‌ಬಿ ಇನ್‌ಪುಟ್‌ಗಳನ್ನ ಹೊಂದಿದೆ. ಇದರಲ್ಲಿ ಒಂದು ಯುಎಸ್‌ಬಿ ಇನ್‌ಪುಟ್ ಮೈಕ್ರೊ ಯುಎಸ್‌ಬಿ ಪೋರ್ಟ್ ಅನ್ನು ಹೊಂದಿದ್ದು, ಇನ್ನೊಂದು ಟೈಪ್ ಸಿ ಪೋರ್ಟ್ ಮತ್ತು ಡ್ಯುಯಲ್ ಯುಎಸ್‌ಬಿ ಔಟ್‌ಪುಟ್‌ ಅನ್ನ ಹೊಂದಿದೆ. ಇನ್ನು ಇದು ಪ್ರೀಮಿಯಂ ರಬ್ಬರೀಕೃತ ಫಿನಿಶ್ ಹೊಂದಿರುವುದರಿಂದ , ಹೆಚ್ಚಿನ ಸಾಮರ್ಥ್ಯದ ಪಾಲಿಮರ್ ಬ್ಯಾಟರಿ ಮತ್ತು ಡ್ಯುಯಲ್ ಇನ್ಪುಟ್ ಮತ್ತು ಡ್ಯುಯಲ್ ಔಟ್‌ಪುಟ್ ಹೊಂದಿದೆ.


 • ಸಿಸ್ಕಾ P1016B

  ಸಿಸ್ಕಾ P1016B ಪವರ್‌ ಬ್ಯಾಂಕ್‌ 10000mAh ಬ್ಯಾಟರಿ ಪ್ಯಾಕ್‌ ಆಪ್‌ ಹೊಂದಿದ್ದು, ಡ್ಯುಯಲ್ ಯುಎಸ್ಬಿ ಔಟ್‌ಪುಟ್‌ ಮತ್ತು ಟೈಪ್-ಸಿ ಇನ್ಪುಟ್ ಹಾಗೂ ಮೈಕ್ರೋ ಯುಎಸ್‌ಬಿ ಇನ್‌ಪುಟ್‌ ಅನ್ನು ಒಳಗೊಂಡಿದೆ. ಇದು ಡ್ಯುಯಲ್ ಯುಎಸ್ಬಿ ಔಟ್‌ಪುಟ್‌ ನಲ್ಲಿ ಪೋರ್ಟ್ 1 + ಪೋರ್ಟ್ 2:dc 5v = 2.4a ಹೊಂದಿದೆ. ಅಲ್ಲದೆ ಈ ಪವರ್ ಬ್ಯಾಂಕ್ ದೀರ್ಘಕಾಲದ ಬ್ಯಾಟರಿ ಅವಧಿಯನ್ನು ಹೊಂದಿದ್ದು, ಬ್ಯಾಟರಿ ಸೂಚಕ ಮತ್ತು ಇಂಟೆಲಿಜೆಂಟ್-ಮಲ್ಟಿ-ಪ್ರೊಟೆಕ್ಷನ್ ಸರ್ಕ್ಯೂಟ್‌ಗಳನ್ನು ಹೊಂದಿದೆ. ಅಲ್ಲದೆ ಓವರ್‌ಚಾರ್ಜಿಂಗ್ ಮತ್ತು ಡಿಸ್ಚಾರ್ಜ್ ರಕ್ಷಣೆಯನ್ನು ಹೊಂದಿದೆ.


 • ಲೆನೊವೊ 10400mAh ಪವರ್‌ ಬ್ಯಾಂಕ್

  ಲೆನೊವೊ 10400 mAh ಪವರ್ ಬ್ಯಾಂಕ್ ಅತ್ಯುತ್ತಮ ಪವರ್‌ ಬ್ಯಾಂಕ್‌ಗಳಲ್ಲಿ ಒಂದಾಗಿದ್ದು, ಯುಎಸ್‌ಬಿ ಚಾರ್ಜಿಂಗ್ ಹೊಂದಿದೆ ಮತ್ತು 5.5 ಗಂಟೆಗಳ ಚಾರ್ಜಿಂಗ್ ಅವಧಿಯನ್ನ ಹೊಂದಿದೆ. ಈ ಪವರ್‌ ಬ್ಯಾಂಕ್ 2 ಯುಎಸ್‌ಬಿ ಪೋರ್ಟ್ /s ಮತ್ತು 5v ವಿದ್ಯುತ್ ಉತ್ಪಾದನೆಯನ್ನು ಹೊಂದಿದೆ. ಅಲ್ಲದೆ 200 ಎಂಎಂ ಟೈಪ್ ಬಿ ಟು ಮೈಕ್ ಬಿ ಕೇಬಲ್, ಒಳಗೊಂಡಿದೆ. ಇದು 140.5 x 63.7 x 21.6 ಮಿಮೀ ಗಾತ್ರವನ್ನು ಹೊಂದಿದ್ದು, ಪವರ್ ಬ್ಯಾಂಕ್ 248 ಗ್ರಾಂ ತೂಗುತ್ತದೆ ಮತ್ತು ಬಹಳ ಪೋರ್ಟಬಲ್ ಮತ್ತು ಸಾಂದ್ರವಾಗಿರುತ್ತದೆ. ಓವರ್‌ ಚಾರ್ಜಿಮಗ್‌ನಿಂದ ರಕ್ಷಣೆಯನ್ನು ನೀಡುತ್ತದೆ.
ಇದು ಸ್ಮಾರ್ಟ್‌ಫೋನ್‌ ಜಮಾನ. ನೀವು ಎಲ್ಲಿಯೇ ಹೋದರು ಸ್ಮಾರ್ಟ್‌ಫೋನ್‌ ಇಲ್ಲದೆ ಹೋಗೋದಕ್ಕೆ ಇಷ್ಟ ಪಡೋದಿಲ್ಲ. ಆದರೆ ನಿಮ್ಮ ಸ್ಮಾರ್ಟ್‌ಫೋನ್‌ ಬ್ಯಾಟರಿ ಬಾಳಿಕೆ ಬೇಗ ಮುಗಿದು ಹೋಗುತ್ತಿದೆಯಾ? ಎಲ್ಲಿಯಾದರೂ ಹೊರಗಡೆ ಹೋದಾಗ ಬ್ಯಾಟರಿ ಮುಗಿದು ಬಿಟ್ಟರೇ ಹೇಗೆ ಅಂತ ಚಿಂತೆ ಮಾಡ್ತೀರಾ? ಹಾಗಾದರೆ, ನೀವು ಪವರ್‌ ಬ್ಯಾಂಕ್ ಒಂದನ್ನು ಖರೀದಿಸಲೇಬೇಕು. ಹಾಗಾದರೇ ಯಾವ ಪವರ್ ಬ್ಯಾಂಕ್‌ ಖರೀದಿಸಿವುದು ಉತ್ತಮ ಅನ್ನೊದಕ್ಕೆ ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ಕಂಪೆನಿಗಳ ಪವರ್‌ ಬ್ಯಾಂಕ್‌ಗಳು ಲಭ್ಯವಿದೆ.

   
 
ಟೆಕ್ನಾಲಜಿ