ಆರಂಭದಲ್ಲಿ ಈ ಫೀಚರ್ ಕೇಔಲ ಎರಡು ಟ್ಯಾಬ್ಲೆಟ್ ಮತ್ತು ಎರಡು ಸ್ಮಾರ್ಟ್ಫೋನ್ಗಳಿಗೆ ಮಾತ್ರ ಲಭ್ಯವಿತ್ತು. ಲೆನೊವೊ ಸ್ಮಾರ್ಟ್ ಟ್ಯಾಬ್ ಎಂ 8 ಎಚ್ಡಿ ಮತ್ತು ಲೆನೊವೊ ಯೋಗ ಸ್ಮಾರ್ಟ್ ಟ್ಯಾಬ್, ನೋಕಿಯಾ 7.2 ಮತ್ತು ನೋಕಿಯಾ 6.2 ಆಂಬಿಡೆಂಟ್ ಡಿಸ್ಪ್ಲೇ ಫೀಚರ್ನ್ನು ಪಡೆದಿದ್ದವು. ಈಗ ಶಿಯೋಮಿ ರೆಡ್ಮಿ ಕೆ 20 ಪ್ರೊ ಮತ್ತು ನೋಕಿಯಾ 6.1 ಬಳಕೆದಾರರು ಕೂಡ ಈ ವೈಶಿಷ್ಟ್ಯ ಪಡೆಯುತ್ತಿದ್ದಾರೆ ಎಂದು ವರದಿಯಾಗಿದ್ದು, ಪೊಕೊ ಎಫ್ 1 ಬಳಕೆದಾರರೂ ಸಹ ಫೀಚರ್ ಬಳಕೆಯ ಬಗೆಗಿನ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದಾರೆ.
ವರದಿಯ ಪ್ರಕಾರ, ಫೀಚರ್ ಅಪ್ಡೇಟ್ ಆದ ನಂತರ ಆಂಡ್ರಾಯ್ಡ್ 10 ಒಎಸ್ ಬಳಕೆದಾರರು ಸೆಟ್ಟಿಂಗ್ಸ್ಗೆ ತೆರಳಿ, ಬಳಿಕ ಅಲ್ಲಿ ಅಸಿಸ್ಟಂಟ್ ಆಯ್ಕೆಯನ್ನು ಕ್ಲಿಕ್ ಮಾಡಿ "ಹೇ ಗೂಗಲ್" ಎಂದು ಹೇಳುವ ಮೂಲಕ ಫೀಚರ್ ಬಳಸಬಹುದು.
ಈ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಗೂಗಲ್ ವಿವರಿಸಿದ್ದು, ನಿಮ್ಮ ಮೊಬೈಲ್ನ್ನು ನೈಟ್ಸ್ಟ್ಯಾಂಡ್, ಲಿವಿಂಗ್ ರೂಮ್ ಟೇಬಲ್ ಅಥವಾ ಕಿಚನ್ ಕೌಂಟರ್ನಲ್ಲಿ ಚಾರ್ಜ್ ಮಾಡುತ್ತಿದ್ದಾಗಲೂ ನಿಮಗೆ ನಿಮ್ಮ ದಿನದ ಮೇಲ್ಭಾಗದಲ್ಲಿ ಉಳಿಯಲು ಸಹಾಯ ಮಾಡುತ್ತದೆ.
ಗೂಗಲ್ ಅಸಿಸ್ಟೆಂಟ್ನ ಆಂಬಿಯೆಂಟ್ ಮೋಡ್ ಹೊಸ ದೃಶ್ಯ ಅವಲೋಕನವಾಗಿದ್ದು, ಅಧಿಸೂಚನೆಗಳು ಮತ್ತು ರಿಮೈಂಡರ್ಸ್ ನೋಡುವುದು, ಪ್ಲೇಲಿಸ್ಟ್ ಪ್ರಾರಂಭಿಸುವುದು ಮತ್ತು ನಿಮ್ಮ ಸಾಧನದ ಲಾಕ್ಸ್ಕ್ರೀನ್ನಲ್ಲಿ ಸ್ಮಾರ್ಟ್ ಹೋಮ್ ಸಾಧನಗಳ ನಿಯಂತ್ರಣವನ್ನು ಸುಲಭಗೊಳಿಸುತ್ತದೆ. ನೀವು ನಿಮ್ಮ ಕಾರ್ಯ ಮುಗಿಸಿದಾಗ ನಿಮ್ಮ ಡಿಸ್ಪ್ಲೇ ಮತ್ತೊಂದು ವೈಯಕ್ತಿಕ ಸ್ಪರ್ಶಕ್ಕಾಗಿ ನಿಮ್ಮ ಗೂಗಲ್ ಫೋಟೋಗಳ ಖಾತೆಗೆ ಲಿಂಕ್ ಮಾಡಲಾದ ವೈಯಕ್ತಿಕ ಫೋಟೋಗಳ ಡಿಜಿಟಲ್ ಫೋಟೋ ಫ್ರೇಮ್ ಆಗಿ ಬದಲಾಗುತ್ತದೆ.
ಇತ್ತೀಚೆಗೆ ಬಿಡುಗಡೆಯಾದ ಪಿಕ್ಸೆಲ್ 4 ಮತ್ತು ಪಿಕ್ಸೆಲ್ 4 ಎಕ್ಸ್ಎಲ್ ಸ್ಮಾರ್ಟ್ಫೋನ್ಗಳಲ್ಲಿ ಹೊಸ ಗೂಗಲ್ ಅಸಿಸ್ಟೆಂಟ್ನ್ನು ಪರಿಚಯಿಸಿದೆ. ಮತ್ತು ಈ ಫೀಚರ್ ಈಗಾಗಲೇ ಪಿಕ್ಸೆಲ್ 4 ಸಾಧನಗಳಲ್ಲಿ ಇರುವುದರಿಂದ ಮುಂದಿನ ದಿನಗಳಲ್ಲಿ ಇತರ ಎಲ್ಲ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಿಗೆ ಲಭ್ಯವಾಗಬಹುದು. ಬಳಕೆದಾರರು ಹೆಚ್ಚಿನ ಸಮಯ ವ್ಯರ್ಥ ಮಾಡದೆ ಕಡಿಮೆ ಸಮಯದಲ್ಲಿ ಪ್ರತಿಕ್ರಿಯೆ ನೀಡಲು ಗೂಗಲ್ ಅಸಿಸ್ಟಂಟ್ನ್ನು ಆಯ್ಕೆ ಮಾಡಬಹುದು.
ಆಂಡ್ರಾಯ್ಡ್ ಪೊಲೀಸ್ನ ಇತ್ತೀಚಿನ ವರದಿಯಂತೆ, ಪಿಕ್ಸೆಲ್ 2 ಎಕ್ಸ್ಎಲ್ನಲ್ಲಿ ಗೂಗಲ್ ಅಸಿಸ್ಟೆಂಟ್ ಸ್ಪೀಚ್ ಔಟ್ಪುಟ್ ವಿಭಾಗ ಕೇವಲ ಎರಡು ಆಯ್ಕೆಗಳನ್ನು ಮಾತ್ರ ತೋರಿಸುತ್ತದೆ, ಅವುಗಳೆಂದರೆ 'ಆನ್' ಮತ್ತು 'ಹ್ಯಾಂಡ್ಸ್-ಫ್ರೀ ಮಾತ್ರ'. ಆದರೆ, ಪಿಕ್ಸೆಲ್ 4 ಎಕ್ಸ್ಎಲ್ 'ಪೂರ್ಣ', 'ಸಂಕ್ಷಿಪ್ತ' ಮತ್ತು 'ಯಾವುದೂ ಇಲ್ಲ' (ಹ್ಯಾಂಡ್ಸ್-ಫ್ರೀ ಹೊರತು) ಎಂಬ ಮೂರು ಆಯ್ಕೆಗಳನ್ನು ನೀಡುತ್ತಿದೆ. 'ಬ್ರೀಫ್' ಆಯ್ಕೆಯು ಹೊಸದಾಗಿದ್ದು, ಸರ್ವರ್ ಸೈಡ್ ಅಪ್ಡೇಟ್ನಂತೆ ಪಿಕ್ಸೆಲ್ 4 ಸಾಧನಗಳಿಗೆ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ, ಎಲ್ಲಾ ಪಿಕ್ಸೆಲ್ 4 ಸ್ಮಾರ್ಟ್ಫೋನ್ಗಳು ಸದ್ಯಕ್ಕೆ ಈ ಫೀಚರ್ನ್ನು ಹೊಂದಿಲ್ಲ.
ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಗೂಗಲ್ ಅಸಿಸ್ಟೆಂಟ್ನಲ್ಲಿ ಆಂಬಿಯೆಂಟ್ ಮೋಡ್ ವೈಶಿಷ್ಟ್ಯವನ್ನು ಹೊರತರುತ್ತಿದೆ. ನಿಮ್ಮ ಸ್ಮಾರ್ಟ್ಫೋನ್ ಪರದೆಯನ್ನು ಸ್ಮಾರ್ಟ್ ಡಿಸ್ಪ್ಲೇ ಆಗಿ ಪರಿವರ್ತಿಸುತ್ತದೆ. ಕ್ಯಾಲೆಂಡರ್, ಪ್ರಸ್ತುತ ಹವಾಮಾನ, ಅಧಿಸೂಚನೆಗಳು, ರಿಮೈಂಡರ್ಸ್, ಸಂಗೀತ ನಿಯಂತ್ರಣಗಳು ಮತ್ತು ಹೆಚ್ಚಿನವುಗಳಂತಹ ಅಗತ್ಯ ಮಾಹಿತಿಯನ್ನು ಡಿಸ್ಪ್ಲೇನಲ್ಲಿ ಈ ವೈಶಿಷ್ಟ್ಯ ನೀಡಲಿದೆ ಎಂದು ಎಕ್ಸ್ಡಿಎ ಡೆವಲಪರ್ಸ್ ವರದಿ ಮಾಡಿದೆ. ಇದಕ್ಕೂ ಮೊದಲು ಈ ಫೀಚರ್ನ್ನು ಈ ವರ್ಷಾರಂಭದ ಐಎಫ್ಎನಲ್ಲಿ ಗೂಗಲ್ ಘೋಷಿಸಿತ್ತು.