Back
Home » ಇತ್ತೀಚಿನ
ಫ್ಲಿಪ್‌ಕಾರ್ಟ್‌ : ಸ್ಯಾಮ್‌ಸಂಗ್‌ ಪೋನ್‌ಗಳಿಗೆ ಭಾರಿ ಡಿಸ್ಕೌಂಟ್!
Gizbot | 20th Nov, 2019 04:40 PM
 • ಫ್ಲಿಪ್‌ಕಾರ್ಟ್‌

  ಹೌದು ಫ್ಲಿಪ್‌ಕಾರ್ಟ್‌ ಈಗ ಮೂರು ದಿನಗಳ ಸ್ಯಾಮ್‌ಸಂಗ್‌ ಉತ್ಸವವನ್ನು ಆಯೋಜಿಸಿದ್ದು, ಇದೇ ನವೆಂಬರ್‌ 21ರಿಂದ ನವೆಂಬರ್‌ 23 ರವೆರೆಗೆ ಈ ಸೇಲ್ ನಡೆಯಲಿದೆ. ಈ ವೇಳೆ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನಗಳಿಗೆ ಹೆಚ್ಚಿನ ರಿಯಾಯಿತಿ ಸಿಗಲಿದೆ. ಅಷ್ಟಕ್ಕೂ ಮೂರು ದಿನಗಳ ಈ ರಿಯಾಯಿತಿ ಮೇಳದಲ್ಲಿ ಸ್ಯಾಮ್‌ಸಂಗ್‌ ಕಂಪೆನಿಯ ಯಾವೆಲ್ಲಾ ಮೊಬೈಲ್‌ಗಳು ರಿಯಾಯಿತಿ ದರದಲ್ಲಿ ದೊರೆಯಲಿದೆ ಅನ್ನೊದನ್ನ ಹೇಳ್ತೀವಿ ಮುಂದೆ ಓದಿರಿ.


 • ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ50

  ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ50 ಫೋನ್‌ 6.4ಇಂಚು ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, Exynos 9610 SOC ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದರೊಂದಿಗೆ 4GB RAM ಮತ್ತು 64GB ಶೇಖರಣಾ ಸಾಮರ್ಥ್ಯ ಹೊಂದಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು ಅವುಗಳು ಕ್ರಮವಾಗಿ 25 ಮೆಗಾಪಿಕ್ಸೆಲ್, 8 ಮೆಗಾಪಿಕ್ಸೆಲ್ ಮತ್ತು 5 ಮೆಗಾಪಿಕ್ಸೆಲ್ ಸೆನ್ಸಾರ್ನಲ್ಲಿವೆ. 21,000 ರೂ.ಗಳಿದ್ದ ಈ ಫೋನ್ ಈಗ ಕೇವಲ 14,999 ರೂಗಳಿಗೆ ಲಭ್ಯವಿದೆ.


 • ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್9

  ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 9 ಮತ್ತು ಗ್ಯಾಲಕ್ಸಿ ಎಸ್ 9 + ಪೋನ್‌ ಕ್ವಾಡ್ ಎಚ್ಡಿ + ಡಿಸ್ಪ್ಲೇ ಹೊಂದಿದ್ದು, Exynos 9810 SoC ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಗ್ಯಾಲಕ್ಸಿ ಎಸ್ 9 4GB RAM ಮತ್ತು 64GB ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದ್ದರೆ. ಗ್ಯಾಲಕ್ಸಿ ಎಸ್ 9 + 6GB RAM ಮತ್ತು 64GB ಸ್ಟೋರೇಜ್‌ ಕ್ಯಾಪಾಸಿಟಿ ಹೊಂದಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಗ್ಯಾಲಕ್ಸಿ ಎಸ್ 9 27,999ರೂ ಮತ್ತು ಗ್ಯಾಲಕ್ಸಿ ಎಸ್ 9 + 34,999 ರೂಗಳಿಗೆ ಲಭ್ಯವಿದೆ.


 • ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10

  ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್ 10 6.3ಇಂಚಿನ ಡಿಸ್ಪ್ಲೇ, ಗ್ಯಾಲಕ್ಸಿ ನೋಟ್ 10+ 6.8-ಇಂಚಿನ ಡಿಸ್ಪ್ಲೇ ಹೊಂದಿದ್ದು ಈ ಎರಡೂ ಮಾದರಿಯ ಪೋನ್‌ಗಳು Exynos 9825 SoC ಪ್ರೊಸೆಸರ್‌ ಅನ್ನು ಒಳಗೊಂಡಿವೆ. ಗ್ಯಾಲಕ್ಸಿ ನೋಟ್‌ 10 8GB RAM ಮತ್ತು 256GB ಸ್ಟೋರೇಜ್‌ ಸಾಮರ್ಥ್ಯ ಹೊಂದಿದ್ದರೆ ಗ್ಯಾಲಕ್ಸಿ ನೋಟ್ 10+ 12GB RAM ಮತ್ತು 256GB ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ. ನೋಟ್‌10 ಮತ್ತು ನೋಟ್ 10+ ಎರಡು ಕೂಡ ಟ್ರಿಪಲ್ ರಿಯರ್ ಕ್ಯಾಮೆರಾಗಳು ಮತ್ತು 10 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿವೆ. ಗ್ಯಾಲಕ್ಸಿ ನೋಟ್ 10 ರೂ 69,999 ಕ್ಕೆ ಮತ್ತು ಗ್ಯಾಲಕ್ಸಿ ನೋಟ್ 10+ ರೂ 79,999 ಕ್ಕೆ ಲಭ್ಯವಿದೆ.


 • ಇತರೆ ಸ್ಮಾರ್ಟ್‌ಫೋನ್‌

  ಇನ್ನು 6GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಗ್ಯಾಲಕ್ಸಿ ಎಸ್ 10e 50,100 ರೂಗಳಿಗೆ ಲಭ್ಯವಿದ್ದರೆ, 8GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಗ್ಯಾಲಕ್ಸಿ ಎಸ್ 10 61,900 ರೂಗಳಿಗೆ ಲಭ್ಯವಿದೆ. ಗ್ಯಾಲಕ್ಸಿ ಎಸ್ 10 + 8GB RAM ಮತ್ತು 128GB ಸ್ಟೋರೇಜ್ 69,900 ರೂಗಳಿಗೆ ಲಭ್ಯವಿದೆ. ಇದರ ಜೊತೆಗೆ ಸ್ಯಾಮ್‌ಸಂಗ್‌ ನ ಇತರೆ ಸಿರೀಸ್‌ಗಳು ಕೂಡ ರಿಯಾಯಿತಿ ಧರದಲ್ಲಿ ಫ್ಲಿಪ್‌ ಕಾರ್ಟ್‌ ಮಾರುಕಟ್ಟೆಯಲ್ಲಿ ದೊರೆಯಲಿವೆ.
ಜನಪ್ರಿಯ ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ ಇದೀಗ ಸ್ಯಾಮ್‌ಸಂಗ್‌ ಉತ್ಸವವನ್ನು ಆಯೋಜಿಸಿದೆ. ಈ ಮೇಳದಲ್ಲಿ ಸ್ಯಾಮಸಂಗ್ ಗ್ಯಾಲಕ್ಸಿ ಎ-ಸರಣಿ, ಗ್ಯಾಲಕ್ಸಿ ಎಸ್-ಸರಣಿ ಮತ್ತು ಗ್ಯಾಲಕ್ಸಿ ನೋಟ್ ಸ್ಮಾರ್ಟ್ ಪೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದೆ. ಅಷ್ಟೇ ಅಲ್ಲ ಈಗಷ್ಟೇ ಹೊಸದಾಗಿ ಬಿಡುಗಡೆಯಾದ ಗ್ಯಾಲಕ್ಸಿ ನೋಟ್ 10 ಮೇಲೂ ಕೂಡ ಆಕರ್ಷಕ ರಿಯಾಯಿತಿ ತಿಳಿಸಿದೆ.

 
ಟೆಕ್ನಾಲಜಿ