ಉತ್ತಮ ದೈಹಿಕ ಆರೋಗ್ಯವನ್ನು ಹೊಂದಲು ಪೌಷ್ಟಿಕಾಂಶ ಭರಿತ ಊಟ-ತಿಂಡಿಯನ್ನು ಮಾಡಿದರೆ ಸಾಲದು. ಅದರ ಜೊತೆಗೆ ಒಂದಿಷ್ಟು ದೈಹಿಕ ವ್ಯಾಯಾಮ ಅಥವಾ ದೇಹ ದಂಡನೆಯು ಆಗಬೇಕು, ಇಲ್ಲವಾದರೆ ದೇಹದಲ್ಲಿ ಅನಗತ್ಯ ಬೊಜ್ಜು ಸಂಗ್ರಹವಾಗುತ್ತವೆ. ಅನಗತ್ಯವಾದ ಬೊಜ್ಜು ಮತ್ತು ದೇಹದ ತೂಕವು ನಮ್ಮ ಕಾಲು ಮತ್ತು ಪಾದಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ದೇಹದ ತೂಕ ಹೆಚ್ಚಾದಂತೆ ಪಾದಗಳಿಗೆ ತೂಕದ ನಿರ್ವಹಣೆ ಕಷ್ಟವಾಗುವುದು. ಆಗ ಮಂಡಿ ನೋವು, ಪಾದಗಳ ಸೆಳೆತ ಮತ್ತು ಅತಿಯಾದ ಆಯಾಸ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
ನಮ್ಮ ಪಾದಗಳು ನಮ್ಮ ದೇಹದ ಸಂಪೂರ್ಣ ತೂಕವನ್ನು ಹೊರುತ್ತವೆ. ನಾವು ನಿಲ್ಲುವಾಗ, ನಡೆಯುವಾಗ, ಕೆಲಸ ಮಾಡುವಾಗ, ಓಡುವಾಗ ಹೀಗೆ ಬೇರೆ ಬೇರೆ ಸಂದರ್ಭಗಳಲ್ಲೂ ನಮ್ಮ ಪಾದಗಳು ನಮಗೆ ಬೆಂಬಲಿಸುತ್ತವೆ. ದೇಹದ ಸಂಪೂರ್ಣ ಭಾರವನ್ನು ಹೊರುವಾಗ ಪಾದಗಳ ಸ್ನಾಯುಗಳು ದಿನವಿಡೀ ಕೆಲಸ ಮಾಡುತ್ತಿರುತ್ತವೆ. ಹಾಗಾಗಿ ನಾವು ನಮ್ಮ ಪಾದಗಳ ಆರೈಕೆ ಹಾಗೂ ಶಕ್ತಿಯನ್ನು ಹೆಚ್ಚಿಸಲು ಸೂಕ್ತ ಗಮನ ನೀಡಬೇಕು. ಅದಕ್ಕಾಗಿ ಕೆಲವು ಆಸನಗಳನ್ನು ಅಥವಾ ವ್ಯಾಯಾಮಗಳನ್ನು ಮಾಡಬೇಕು.
ಸಾಮಾನ್ಯವಾಗಿ ನಾವು ದೇಹವನ್ನು ದಂಡಿಸಲು ವಿವಿಧ ವ್ಯಾಯಾಮ, ಯೋಗಾಸನ, ನಡಿಗೆ, ಓಟಗಳನ್ನು ಮಾಡುತ್ತೇವೆ. ಆದರೆ ಪ್ರತ್ಯೇಕವಾಗಿ ಪಾದಗಳ ಬಗ್ಗೆ ಕಾಳಜಿಯನ್ನು ವಹಿಸುವುದು ಕಮ್ಮಿ. ಪಾದಗಳ ಆರೈಕೆಗೆ ಮತ್ತು ಅವುಗಳ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕೆಲವು ಸ್ಟ್ರೆಚಸ್ ಗಳನ್ನು ಮಾಡಬೇಕು. ಅವುಗಳ ಮಾಹಿತಿ ನಿಮಗೂ ಬೇಕಿದ್ದರೆ ಈ ಮುಂದಿನ ವಿವರಣೆಯನ್ನು ಪರಿಶೀಲಿಸಿ.