ವಿಶ್ವದಾದ್ಯಂತ ಸಂಭವಿಸುವ ಒಟ್ಟಾರೆ ಸಾವುಗಳಲ್ಲಿ ಶೇಕಡಾ 31ರಷ್ಟು ಸಾವುಗಳಿಗೆ ಹೃದಯಸಂಬಂಧಿ ತೊಂದರೆಗಳು ಕಾರಣವಾಗಿದ್ದು ಇದರಲ್ಲಿ ಶೇಕಡಾ 85ರಷ್ಟು ಹೃದಯಾಘಾತದಿಂದ ಸಂಭವಿಸಿವೆ. ನಡುವಯಸ್ಸು ದಾಟಿದ ಬಳಿಕ ದೇಹಕ್ಕೆ ಎದುರಾಗುವ ಕಾಯಿಲೆಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಹೆಚ್ಚಿನ ಕಾಳಜಿಯ ಅಗತ್ಯವಿದೆ. ಏಕೆಂದರೆ ಉಳಿದ ಅಂಗಗಳಿಗಿಂತಲೂ ಹೃದಯದ ವೈಫಲ್ಯಕ್ಕೆ ಎದುರಾಗುವ ಕಾರಣಗಳು ಹಲವಾರಿವೆ.
ಹಾಗಾಗಿ ನಡುವಯಸ್ಸು ದಾಟಿದ ಪ್ರತಿ ವ್ಯಕ್ತಿಯೂ ತಮ್ಮ ಕುಟುಂಬ ವೈದ್ಯರ ಬಳಿ ಕಾಲಕಾಲಕ್ಕೆ ತಮ್ಮ ಆರೋಗ್ಯವನ್ನು ತಪಾಸಣೆಗೊಳಪಡಿಸಿಕೊಳ್ಳುತ್ತಾ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಮುಂದಿನ ಜೀವನವನ್ನು ಸುಖಕರವಾಗಿಸಬಹುದು. ಆರೋಗ್ಯವೇ ಭಾಗ್ಯ ಎಂಬ ಗಾದೆಮಾತಿನ ಪ್ರಕಾರ, ಹೃದಯದ ಆರೋಗ್ಯ ಚೆನ್ನಾಗಿದ್ದರೆ ಅದೇ ದೊಡ್ಡ ಭಾಗ್ಯವೆಂದೇ ಹೇಳಬಹುದು. ಆದರೆ ಯಾವ ಪರೀಕ್ಷೆಗಳನ್ನು ಮಾಡಿಸಬೇಕು? ಮೊದಲಾದ ಪ್ರಶ್ನೆಗಳಿಗೆ ಇಂದಿನ ಲೇಖನದಲ್ಲಿ ಅಮೂಲ್ಯ ಮಾಹಿತಿಯನ್ನು ಒದಗಿಸಲಾಗಿದೆ. ಇದರ ಜೊತೆಗೇ ನಿಮ್ಮ ಕುಟುಂಬ ವೈದ್ಯರು ನೀಡುವ ಸಲಹೆಯನ್ನು ಪಾಲಿಸುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ.
ಅಧ್ಯಯನದ ಪ್ರಕಾರ ಈ ಐದು ಸರಳ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ತೋರದವರು ಉಳಿದವರಿಗಿಂತ ಹೃದಯದ ತೊಂದರೆಗಳನ್ನು ಎದುರಿಸುವ ಸಾಧ್ಯತೆ ಇಪ್ಪತ್ತು ಪಟ್ಟು ಹೆಚ್ಚಿದೆ. ಈ ಪರೀಕ್ಷೆಗಳ ಮೂಲಕ ಪಡೆಯುವ ಮಾಹಿತಿಗಳು ಇತರ ಸಾಮಾನ್ಯ ವಿಧಾನಗಳಾದ ರಕ್ತದೊತ್ತಡ ಮಾಪನ ಮತ್ತು ಕೊಲೆಸ್ಟ್ರಾಲ್ ಮಟ್ಟಗಳ ಪರಿಶೀಲನೆಗಿಂತಲೂ ಹೆಚ್ಚು ನಿಖರವಾದ ವಿವರಗಳನ್ನು ನೀಡುತ್ತವೆ. ಅಲ್ಲದೇ ಈ ಪರೀಕ್ಷೆಗಳು ವ್ಯಕ್ತಿ ನಡೆಸುತ್ತಿರುವ ಜೀವನಕ್ರಮದಲ್ಲಿ ಬದಲಾವಣೆಯನ್ನೂ ಸೂಚಿಸುವ ಮೂಲಕ ಹೃದಯದ ಆರೋಗ್ಯವನ್ನು ಉತ್ತಮಗೊಳಿಸಲು ಯತ್ನಿಸುತ್ತವೆ. ಹಾಗಿದ್ದರೆ ದೀರ್ಘಾಯುಷ್ಯಕ್ಕೆ ಯಾವ ಪರೀಕ್ಷೆಗಳು ಅಗತ್ಯ, ಯಾವ ಪರೀಕ್ಷೆಗಳಿಂದ ಯಾವ ಸಮಸ್ಯೆಗಳ ಬಗ್ಗೆ ಮಾಹಿತಿ ತಿಳಿಯಬಹುದು, ಈ ಕೂಡಲೇ ನಿಮ್ಮ ವೈದ್ಯರಲ್ಲಿ ಯಾವೆಲ್ಲಾ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಮುಂದೆ ಓದಿ.