ಹೌದು, ಇಂದು (ನ.19) 'ರೆಡ್ಮಿ ನೋಟ್ 8' ಸ್ಮಾರ್ಟ್ಫೋನ್ ಫ್ಲ್ಯಾಶ್ ಸೇಲ್ ನಡೆಯಲಿದ್ದು, ಜನಪ್ರಿಯ ಅಮೆಜಾನ್ ತಾಣದಲ್ಲಿ ಮತ್ತು ಕಂಪನಿಯ ಅಧಿಕೃತ ವೆಬ್ತಾಣದಲ್ಲಿ ಖರೀದಿಗೆ ಸಿಗಲಿದೆ. ಈ ಸ್ಮಾರ್ಟ್ಫೋನ್ 6GB RAM ಮತ್ತು 8GB RAM ಹಾಗೂ 4GB RAM + 64GB ಸಾಮರ್ಥ್ಯ ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ವೇಗದ ಕಾರ್ಯದಕ್ಷತೆಗೆ 'ಮೀಡಿಯಾಟೆಕ್ ಹಿಲಿಯೊ G90T' ಪ್ರೊಸೆಸರ್ ಒಳಗೊಂಡಿದೆ. ಹಾಗಾದರೇ 'ರೆಡ್ಮಿ ನೋಟ್ 8' ಸ್ಮಾರ್ಟ್ಫೋನ್ ಹೊಂದಿರುವ ಇನ್ನಿತರೆ ಫೀಚರ್ಸ್ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.
ಆಕರ್ಷಕ ನೋಟವನ್ನು ಪಡೆದಿರುವ ಶಿಯೋಮಿ ರೆಡ್ಮಿ ನೋಟ್ 8 ಸ್ಮಾರ್ಟ್ಫೋನ್ 6.39-ಇಂಚಿನ ಪೂರ್ಣ-ಎಚ್ಡಿ + 1080x2340 ಪಿಕ್ಸೆಲ್ಗಳು ಪರದೆ ಹೊಂದಿದೆ, 90 ಪ್ರತಿಶತದಷ್ಟು ಸ್ಕ್ರೀನ್-ಟು -ಬಾಡಿ ಅನುಪಾತ ಮತ್ತು 19.5: 9 ಆಕಾರ ಅನುಪಾತ. ಸ್ಮಾರ್ಟ್ಫೋನ್ ಮುಂಭಾಗ ಮತ್ತು ಹಿಂಭಾಗದಲ್ಲಿ ಗೊರಿಲ್ಲಾ ಗ್ಲಾಸ್ 5 ಅನ್ನು ಒಳಗೊಂಡಿದೆ ಮತ್ತು ವಾಟರ್ ಡ್ರಾಪ್ ಶೈಲಿಯ ನಾಚ್ ಅಪ್ ಫ್ರಂಟ್ ಅನ್ನು ಹೊಂದಿದೆ.
ರೆಡ್ಮಿ ನೋಟ್ 8 ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 665 ಚಿಪ್ಸೆಟ್ನಿಂದ ಕಾರ್ಯನಿರ್ವಹಿಸುತ್ತದೆ. ಇದು 6 ಜಿಬಿ RAM ಮತ್ತು 128 ಜಿಬಿ ಆನ್ಬೋರ್ಡ್ ಸಂಗ್ರಹ ಪಡೆದಿದೆ. ಹಾಗೂ 4GB ಆಯ್ಕೆಯು ಸಿಗಲಿದೆ. ಪ್ರೊಸೆಸರ್ ವೇಗ ಉತ್ತಮವಿದ್ದು, ಅದಕ್ಕೆ ಹೆಚ್ಚಿನ ಬೆಂಬಲ ನೀಡಲು ಆಂಡ್ರಾಯ್ಡ್ 9 ಪೈ ಒದಗಿಸಲಾಗಿದೆ. ಈ ಫೋನ್ ಅಧಿಕ ಡೇಟಾ ಬೇಡುವ ಗೇಮ್ಸ್ ಹಾಗೂ ಮಲ್ಟಿಟಾಸ್ಕ್ ಕೆಲಸಗಳಿಗೆ ಹೆಚ್ಚಿನ ಸಪೋರ್ಟ್ ನೀಡುತ್ತದೆ.
ರೆಡ್ಮಿ ನೋಟ್ 8 ಫೋನಿನ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳನ್ನು ನೀಡಲಾಗಿದೆ. ಶಿಯೋಮಿ ಮೊದಲ ಬಾರಿಗೆ ಕಡಿಮೆ ಬೆಲೆಗೆ ಕ್ವಾಡ್ ಕ್ಯಾಮೆರಾ ನೀಡುತ್ತಿದೆ. ಇದರಲ್ಲಿ ಪ್ರಥಮ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಪಡೆದಿದೆ. ಎರಡನೇಯದು 8 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸೆನ್ಸಾರ್ ಹೊಂದಿದೆ. ಮತ್ತು ಉಳಿದೆರಡು ಕ್ಯಾಮೆರಾಗಳು 2 ಮೆಗಾಪಿಕ್ಸೆಲ್ ನಲ್ಲಿವೆ. ಇನ್ನು ಸೆಲ್ಫಿಗಾಗಿ 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒದಗಿಸಲಾಗಿದೆ.
ಪ್ರಸ್ತುತ 4,000mAh ಸಾಮರ್ಥ್ಯದ ಬ್ಯಾಟರಿ ಸಾಮನ್ಯವಾಗಿದ್ದು, ರೆಡ್ಮಿ ನೋಟ್ 8 ಸ್ಮಾರ್ಟ್ಫೋನಲ್ಲಿಯೂ ಸಹ 4000mAh ಬ್ಯಾಟರಿ ಲೈಫ್ ನೀಡಲಾಗಿದೆ. ಮತ್ತು 18W ವೇಗದ ಚಾರ್ಜಿಂಗ್ಗೆ ಬೆಂಬಲವನ್ನು ಒದಗಿಸಿದ್ದು, ಬೇಗನೆ ಚಾರ್ಜ್ ಪಡೆದುಕೊಳ್ಳಲು ನೆರವಾಗಲಿದೆ. ಇದರೊಂದಿಗೆ ಯುಎಸ್ಬಿ ಟೈಪ್-ಸಿ ಪೋರ್ಟ್, 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಐಆರ್ ಬ್ಲಾಸ್ಟರ್ ಅನ್ನು ಸ್ಮಾರ್ಟ್ಪೋನ್ ಒಳಗೊಂಡಿದೆ.
ಭಾರತದಲ್ಲಿ ರೆಡ್ಮಿ ನೋಟ್ 8 ಸ್ಮಾರ್ಟ್ಫೋನ್ ಆರಂಭಿಕ ಬೆಲೆಯು 9,999 ರೂ.ಗಳಾಗಿದೆ. 4 ಜಿಬಿ RAM + 64 ಜಿಬಿ ವೇರಿಯಂಟ್ ಮಾದರಿಯ ರೆಡ್ಮಿ ನೋಟ್ 8 ಫೋನ್ ಬೆಲೆ 9,999 ರೂ.ಗಳಾದರೆ, 6 ಜಿಬಿRAM + 128 ಜಿಬಿ ಮಾದರಿಯ ರೆಡ್ಮಿ ನೋಟ್ 8 ಬೆಲೆ ಕೇವಲ 12,999 ರೂ.ಗಳಾಗಿವೆ. ಇತ್ತೀಚಿಗೆ ಇ-ಕಾಮರ್ಸ್ ತಾಣದಲ್ಲಿ ಖರೀದಿಸಬಹುದು.
ಜನಪ್ರಿಯ ಶಿಯೋಮಿ ಕಂಪನಿಯು ಇತ್ತೀಚಿಗಷ್ಟೆ 'ರೆಡ್ಮಿ ನೋಟ್ 8' ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈಗಾಗಲೇ ಈ ಸ್ಮಾರ್ಟ್ಫೋನ್ ಫ್ಲ್ಯಾಶ್ ಸೇಲ್ ಕಂಡಿದೆ. ಆದ್ರೆ 'ರೆಡ್ಮಿ ನೋಟ್ 8' ಸ್ಮಾರ್ಟ್ಫೋನ್ ಅಮೆಜಾನ್ ಇ-ಕಾಮರ್ಸ್ ತಾಣದಲ್ಲಿ ಇಂದು ಮಧ್ಯಾಹ್ನ 12ರಿಂದ ಮತ್ತೊಮ್ಮೆ ಫ್ಲ್ಯಾಶ್ ಸೇಲ್ ಶುರುಮಾಡಲಿದೆ. ಆರಂಭಿಕ ಬೆಲೆಯು 9,999ರೂ.ಗಳಾಗಿದೆ. ಕ್ವಾಡ್ ಕ್ಯಾಮೆರಾ ಮತ್ತು ಪ್ರೊಸೆಸರ್ ಫೀಚರ್ಗಳು ಮುಖ್ಯ ಹೈಲೈಟ್ಸ್ಗಳಾಗಿವೆ.