ನಾವು ತಿನ್ನುವ ಆಹಾರಗಳು ಎಷ್ಟರ ಮಟ್ಟಿಗೆ ಶುದ್ಧವಾಗಿದೆ ಎಂಬುವುದು ಪ್ರತಿಯೊಬ್ಬರನ್ನು ಕಾಡುವ ಸಮಸ್ಯೆಯಾಗಿದೆ. ನಾವು ಗುಣಮಟ್ಟದ್ದು ಎಂದು ದುಬಾರಿ ಬೆಲೆಕೊಟ್ಟು ತರುವ ಎಷ್ಟೋ ಆಹಾರ ವಸ್ತುಗಳು ಕಲಬೆರಕೆಯ ಆಹಾರಗಳಾಗಿರುತ್ತವೆ ಎನ್ನುವುದು ಕಟು ಸತ್ಯ. ಈ ಲೇಖನದಲ್ಲಿ ನಾವು ಇವತ್ತು ಶುದ್ಧ ಹಸುವಿನ ತುಪ್ಪ ಕಂಡು ಹಿಡಿಯುವುದು ಹೇಗೆ ಎಂಬ ಮಾಹಿತಿ ನೀಡುತ್ತಿದ್ದೇವೆ.
ಶುದ್ಧ ತುಪ್ಪ ಅಂತ ಹೇಳುತ್ತಾ ಮಾರುಕಟ್ಟೆಯಲ್ಲಿ ಅನೇಕ ಕಂಪನಿಗಳ ತುಪ್ಪಗಳು ದೊರೆಯುತ್ತವೆ, ಆದರೆ ಎಲ್ಲಾ ತುಪ್ಪಗಳು ಶುದ್ಧವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಏಕೆಂದರೆ ಕೆಲ ತುಪ್ಪಗಳಲ್ಲಿ ವನಸ್ಪತಿ ಮಿಶ್ರವಾಗಿರುತ್ತದೆ. ಏಕೆಂದರೆ ವನಸ್ಪತಿ ಬೆಲೆ ತುಂಬಾ ಕಡಿಮೆ ಇರುವುದರಿಂದ ತಕ್ಷಣ ನೋಡಿದಾಗ ತುಪ್ಪದ ರೀತಿಯಲ್ಲೇ ಕಾಣುವುದರಿಂದ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಕೆಲವೊಂದು ತುಪ್ಪದಲ್ಲಿ ಪ್ರಾಣಿಗಳ ತುಪ್ಪವನ್ನು ಬಳಸುತ್ತಾರೆ. ವನಸ್ಪತಿಗಳಲ್ಲಿರುವ ಟ್ರ್ಯಾನ್ಸ್ಕೊಬ್ಬಿನಂಶ ನಮ್ಮ ದೇಹಕ್ಕೆ ಹಾನಿಕಾರವಾಗಿದೆ. ಇನ್ನು ಆಕರ್ಷಕವಾಗಿ ಕಾಣಲು ಕೃತಕ ಬಣ್ಣವನ್ನು ಕೂಡ ಬಳಸಿರುತ್ತಾರೆ. ನಾವು ಆರೋಗ್ಯಕ್ಕೆ ಒಳ್ಳೆಯದೆಂದು ಕಲಬೆರಕೆಯಾದ ತುಪ್ಪವನ್ನು ತಿನ್ನಲು ಪ್ರಾರಂಭಿಸಿದರೆ ಇದರಿಂದ ಅನಾರೋಗ್ಯ ತಪ್ಪಿದ್ದಲ್ಲ.
ಇನ್ನು ಶುದ್ಧ ತುಪ್ಪ ತುಂಬಾ ಗಟ್ಟಿಯಾಗಿರುವುದಿಲ್ಲ, ಎಣ್ಣೆಯ ರೀತಿಯೂ ಇರವುದಿಲ್ಲ, ಇನ್ನು ಒಂದು ಪದರ ಎಣ್ಣೆ ರೀತಿಯಿದ್ದು, ಕೆಳಗಡೆ ಗಟ್ಟಿಯಾಗಿರುವುದಿಲ್ಲ, ಶುದ್ಧ ತುಪ್ಪವನ್ನು ಒಂದು ಡಬ್ಬದಲ್ಲಿ ತುಂಬಿಟ್ಟರೆ ಅದು ಮೇಲಿನಿಂದ ಕೆಳಗೆವರೆಗೆ ನೋಡಲು ಒಂದೇ ರೀತಿ ಇರುತ್ತದೆ, ಹಾಗೂ ಜಿಡ್ಡು-ಜಿಡ್ಡಾಗಿರುತ್ತದೆ. ಕಲಬೆರಕೆ ಮಾಡಿದ ತುಪ್ಪ ನೋಡಲು ಅಕರ್ಷಕವಾಗಿದ್ದು ಗ್ರಾಹಕರನ್ನು ಸೆಳೆಯುತ್ತದೆ, ತುಪ್ಪಕ್ಕೆ ದನ, ಎಮ್ಮೆ, ಹಂದಿ ಮುಂತಾದ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡುತ್ತದೆ. ಇನ್ನು ತುಪ್ಪದ ವಾಸನೆ ಬರಬೆಕೆಂದು ಕೃತಕ ಸುವಾಸನೆಗಳನ್ನು ಕೂಡ ಬಳಸಿರುತ್ತಾರೆ.
ತುಪ್ಪದಲ್ಲಿ ಹಲವಾರು ಔಷಧೀಯ ಗುಣಗಳಿರುವುದರಿಂದ ಇದನ್ನು ಅಯುರ್ವೇದದಲ್ಲಿ ಅನೇಕ ಅರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಮದ್ದಾಗಿ ಬಳಸಲಾಗುವುದು. ತುಪ್ಪ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕಿ, ದೇಹಕ್ಕೆ ಅಗ್ಯತವಾದ ಒಳ್ಳೆಯ ಕೊಬ್ಬಿನಂಶ ಹಾಗೂ ಪೋಷಕಾಂಶಗಳನ್ನು ನೀಡುತ್ತದೆ. ಮಕ್ಕಳ ಬುದ್ಧಿಶಕ್ತಿ ಹಾಗೂ ದೈಹಿಕ ಬೆಳವಣಿಗೆಗೆ ತುಪ್ಪ ಸಹಾಯ ಮಾಡುವುದರಿಂದ ಮಕ್ಕಳಿಗೆ ಕೂಡ ತುಪ್ಪ ಹಾಕಿ ಆಹಾರ ನೀಡಲಾಗುವುದು. ಶುದ್ಧ ತುಪ್ಪವೆಂದು ಕಲಬೆರಕೆಯಾದ ತುಪ್ಪ ನೀಡಿದರೆ ಬೆಳೆಯುವ ಮಕ್ಕಳ ಅರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ನೀವು ಕೊಂಡು ತಂದ ತುಪ್ಪದ ಶುದ್ಧತೆಯನ್ನು ಕೆಲವು ಪರೀಕ್ಷೆಗಳ ಮೂಲಕ ಕಂಡು ಹಿಡಿಯಬಹುದಾಗಿದೆ. ತುಪ್ಪದ ಶುದ್ಧತೆಯನ್ನು ಮನೆಯಲ್ಲಿಯೇ ಕಂಡು ಹಿಡಿಯಬಹುದಾಗಿದ್ದು ಇಲ್ಲಿ ತುಪ್ಪ ಕಲಬೆರಕೆಯಾಗಿದೆಯೇ ಇಲ್ಲವೆ ಎಂದು ಕಂಡು ಹಿಡಿಯುವುದು ಹೇಗೆ ಎಂಬ ಮಾಹಿತಿ ನೀಡಲಾಗಿದೆ ನೋಡಿ: