Back
Home » Business
ದೀಪಾವಳಿ ಧಮಾಕಾ! ಬೈಕ್, ಕಾರು ಖರೀದಿಸುವವರಿಗೆ ಭಾರೀ ಡಿಸ್ಕೌಂಟ್, ಯಾವ ಕಂಪನಿ ಏನು ಆಫರ್?
Good Returns | 23rd Oct, 2019 10:45 AM
 • ಹೋಂಡಾ

  ದೀಪಾವಳಿಯ ಶುಭಘಳಿಗೆಯಲ್ಲಿ ಹೋಂಡಾ ಕಾರ್ ತನ್ನ ಉನ್ನತ ಮಾಡೆಲ್ ಮೇಲೆ ಅತ್ಯಾಕರ್ಷಕ ರಿಯಾಯಿತಿಯನ್ನು ನೀಡಿದೆ. ಕಾರು ತಯಾರಕ ತನ್ನ ಏಳು ಮಾದರಿಗಳಲ್ಲಿ ಹೋಂಡಾ ಅಮೇಜ್, ಜಾಝ್ ಮತ್ತು ಸಿಟಿಯ ಬೆಲೆಗಳನ್ನು ಕಡಿತಗೊಳಿಸಿದೆ. ಶೋ ರೂಂಗಳಲ್ಲಿ ರೂ. 9.79 ಲಕ್ಷ ಬೆಲೆಯ ಗ್ರಾಹಕರು ತಮ್ಮ ಹಳೆಯ ಕಾರಿಗೆ ಬದಲಾಗಿ ಹೋಂಡಾ ಅಮೇಜ್‌ನಲ್ಲಿ ರೂ. 42,000ವರೆಗೆ ರಿಯಾಯಿತಿ ಪಡೆಯಬಹುದು. ಎಕ್ಸಚೆಂಜ್ ಇಲ್ಲದೆ, ಗ್ರಾಹಕರು ರೂ. 28,000 ರಿಯಾಯಿತಿ ಜೊತೆಗೆ ಇತರ ಪ್ರಯೋಜನಗಳೂ ಪಡೆಯಲಿದ್ದಾರೆ.
  ಗ್ರಾಹಕರು ರೂ. 25, 000ಗಳವರೆಗೆ ರಿಯಾಯಿತಿ ಮತ್ತು ಹೋಂಡಾ ಜಾಝ್ ನಲ್ಲಿ 25,000 ರೂಪಾಯಿ ಮೌಲ್ಯದ ಕಾರು ವಿನಿಮಯಕ್ಕೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದು. ಹೋಂಡಾ ಜಾಝ್ ಮೂಲ ಬೆಲೆ ರೂ. 9.41 ಲಕ್ಷ.
  ಹೊಂಡಾ ಸಿಟಿ ರೂ. 14.16 ಲಕ್ಷ ಬೆಲೆ ಹೊಂದಿದ್ದು, ನಗದು ರಿಯಾಯಿತಿ ದರ ರೂ. 32,000 ರೂ. ಮತ್ತು ಕಾರು ವಿನಿಮಯಕ್ಕೆ ಹಚ್ಚುವರಿ ರಿಯಾಯಿತಿ ರೂ. 30,000 ಪಡೆಯಬಹುದು.


 • ಮಾರುತಿ ಸುಜುಕಿ

  ಹಬ್ಬದ ಋತುವಿನ ಲಾಭ ಪಡೆಯಲು ಮತ್ತು ಮಾರಾಟವನ್ನು ಸುಧಾರಿಸಲು ಮಾರುತಿ ಸುಜುಕಿ ತನ್ನ ಕಾರುಗಳಿಗೆ ಭಾರಿ ರಿಯಾಯಿತಿಯನ್ನು ನೀಡುತ್ತಿದೆ.
  ಎಂಎಸ್ಐ ಅರೆನಾ
  ವಿಟಾರಾ ಬ್ರೆಜ್ಜಾ (ಡೀಸೆಲ್) ಗೆ ರೂ. 45,000 ನಗದು ರಿಯಾಯಿತಿ ಮತ್ತು 5 ವರ್ಷಗಳ ಖಾತರಿಯೊಂದಿಗೆ ನೀಡಲಾಗುತ್ತದೆ. ಕಂಪನಿಯು ರೂ. 20,000ವರೆಗೆ ವಿನಿಮಯ ರಿಯಾಯಿತಿ ಮತ್ತು 10,000 ರೂ. ಕಾರ್ಪೊರೇಟ್ ರಿಯಾಯಿತಿಯನ್ನು ನೀಡುತ್ತದೆ. ಇದು ಒಟ್ಟು ಉಳಿತಾಯವನ್ನು 96,100 ರೂಪಾಯಿ.


 • ಮಾರುತಿ ಸುಜುಕಿ ಡಿಜೈರ್

  ಮಾರುತಿ ಸುಜುಕಿ ಡಿಜೈರ್ (ಡೀಸೆಲ್) 83,900 ರೂ.ಗಳವರೆಗಿನ ಪ್ರಯೋಜನಗಳೊಂದಿಗೆ ಲಭ್ಯವಿದೆ. ಇದರಲ್ಲಿ ನಗದು ಪ್ರಯೋಜನ, ಪೂರಕ 5 ವರ್ಷಗಳ ವಿಸ್ತೃತ ಖಾತರಿ, ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿ ಸೇರಿವೆ.


 • ಮಾರುತಿ ಸುಜುಕಿ ಸ್ವಿಫ್ಟ್

  ಹಲವು ವರ್ಷಗಳಿಂದ ಕಂಪನಿಯ ಹೆಚ್ಚು ಮಾರಾಟವಾದ ಮಾರುತಿ ಸುಜುಕಿ ಸ್ವಿಫ್ಟ್, ಪೆಟ್ರೋಲ್ ಕಾರಿಗೆ ರೂ. 50,000 ಮತ್ತು ಡೀಸೆಲ್ ಕಾರಿಗೆ ರೂ. 77,600 ಮತ್ತು ಇನ್ನಿತರ ಖಾತರಿ ಪ್ಯಾಕೇಜ್ ಜೊತೆಗೆ ನೀಡಲಾಗುತ್ತದೆ.


 • ಮಾರುತಿ ಸುಜುಕಿ ಆಲ್ಟೊ

  ಮಾರುತಿ ಸುಜುಕಿ ಆಲ್ಟೊ, ಆಲ್ಟೊ ಕೆ 10 ಮತ್ತು ಸೆಲೆರಿಯೊಗೆ ಕ್ರಮವಾಗಿ 60,000, 55,000 ಮತ್ತು 60,000 ರೂ.ಗಳವರೆಗೆ ಸೌಲಭ್ಯಗಳನ್ನು ನೀಡಲಾಗುತ್ತದೆ. ಇದರಲ್ಲಿ ವಿನಿಮಯ ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಸೇರಿವೆ.


 • ಟಾಟಾ ಮೋಟಾರ್ಸ್

  ಟಾಟಾಟಾ ಮೋಟಾರ್ಸ್ ಹೊಸ ಖರೀದಿದಾರರಿಗೆ ನಗದು ಪ್ರಯೋಜನಗಳನ್ನು ಮತ್ತು ತಮ್ಮ ಹಳೆಯ ಕಾರುಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುವವರಿಗೆ ರಿಯಾಯಿತಿಯನ್ನು ನೀಡುತ್ತಿದೆ. ಕಾರ್ಪೊರೇಟ್ ಉದ್ಯೋಗಿಗಳಿಗಾಗಿ ಕಂಪನಿಯು ನಿರ್ದಿಷ್ಟ ಯೋಜನೆಗಳನ್ನು ಪ್ರಾರಂಭಿಸಿದೆ.

  ಟಾಟಾ ಹೆಕ್ಸಾ 1.65 ಲಕ್ಷ ರೂಗಳವರೆಗೆ ಸೌಲಭ್ಯಗಳನ್ನು ಘೋಷಿಸಿದೆ.
  ಟಾಟಾ ನೆಕ್ಸನ್ 87,000 ರೂ.ಗಳವರೆಗೆ ರಿಯಾಯಿತಿಗೆ ಲಭ್ಯವಿದೆ.
  ಟಾಟಾ ಟಿಯಾಗೊ ಮತ್ತು ಟಾಟಾ ಟಿಯಾಗೊ ಎನ್‌ಆರ್‌ಜಿ ಎರಡೂ 70,000 ರೂ.ಗಳವರೆಗೆ ಸೌಲಭ್ಯ ಲಭ್ಯವಿದೆ.
  ಟಾಟಾ ಟಿಗೊರ್ ರೂ. 1.17 ಲಕ್ಷ ಹಾಗು ಟಾಟಾ ಹ್ಯಾರಿಯರ್ ರೂ. 65,000 ಸೌಲಭ್ಯಗಳನ್ನು ಒಳಗೊಂಡಿದೆ.


 • ಬಜಾಜ್ ಆಟೋ

  ಬಜಾಜ್ ಆಟೋ ಮೋಟಾರು ಸೈಕಲ್‌ಗಳ ಅತಿದೊಡ್ಡ ರಫ್ತುದಾರ ಮತ್ತು 150 ಸಿಸಿ ಮೋಟಾರ್‌ಸೈಕಲ್ ಮಾರಾಟ ಮಾಡುವ ಪ್ರಮುಖ ಕಂಪನಿ ಬಜಾಜ್ ಆಟೋ ಲಿಮಿಟೆಡ್ ಆಕರ್ಷಕ ರಿಯಾಯಿತಿಯನ್ನು ನೀಡುತ್ತಿದೆ. ಜೊತೆಗೆ ಅದರ ಮೋಟಾರ್‌ಸೈಕಲ್‌ಗಳಲ್ಲಿ ಉಚಿತ ಸೇವೆಗಳು ಮತ್ತು ಖಾತರಿ ನೀಡುತ್ತದೆ. ಬಜಾಜ್ ಮೋಟರ್ ಸೈಕಲ್‌ಗಳಲ್ಲಿ, ಕಂಪನಿಯು ರೂ. 6,000 ವರೆಗಿನ ನಗದು ರಿಯಾಯಿತಿಯನ್ನು ನೀಡುತ್ತದೆ. ಜೊತೆಗೆ 5 ಉಚಿತ ಸೇವೆಗಳು ಮತ್ತು 5 ವರ್ಷಗಳವರೆಗೆ ಉಚಿತ ವಾರಂಟಿ ನೀಡುತ್ತದೆ. ಎಂಟ್ರಿ ಲೆವೆಲ್ ಬಜಾಜ್ ಸಿಟಿ 100, ಬಜಾಜ್ ಪ್ಲಾಟಿನಾ ಮತ್ತು ಬಜಾಜ್ ಪಲ್ಸರ್ ಶ್ರೇಣಿಯ ಜೊತೆಗೆ ಬಜಾಜ್ ಡೊಮಿನಾರ್ 400 ಬಜಾಜ್ ಮೋಟಾರ್‌ಸೈಕಲ್ ಮಡೆಲ್ ಗಳಲ್ಲಿ ಆಫರ್‌ಗಳು ಲಭ್ಯವಿವೆ. ಬಜಾಜ್ ಅವೆಂಜರ್ ಶ್ರೇಣಿ, ಬಜಾಜ್ ವಿ ಮತ್ತು ಬಜಾಜ್ ಡಿಸ್ಕವರ್ ಸರಣಿ ಆಫರ್ ಲಭ್ಯವಿವೆ. ಈ ಎಲ್ಲಾ ಕೊಡುಗೆಗಳು 2019 ರ ಅಕ್ಟೋಬರ್ 31 ರವರೆಗೆ ಮಾನ್ಯವಾಗಿರುತ್ತವೆ.


 • ಟಿವಿಎಸ್ ಮೋಟಾರ್, ಹೀರೋ, ಹೊಂಡಾ ಆಫರ್

  ಟಿವಿಎಸ್ ಮೋಟಾರ್, ಹೀರೋ, ಹೊಂಡಾ ಆಫರ್ ದ್ವಿಚಕ್ರ ವಾಹನ ತಯಾರಕರಾದ ಟಿವಿಎಸ್ ಮೋಟಾರ್ ಕಂಪನಿ, ಹೀರೋ ಮೊಟೊಕಾರ್ಪ್, ಹಾಗೆಯೇ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಸಹ ಗ್ರಾಹಕರನ್ನು ಆಮಿಷವೊಡ್ಡಲು ಹಬ್ಬದ ಋತುವಿನ ಕೊಡುಗೆಗಳನ್ನು ಹೊರತರುವ ನಿರೀಕ್ಷೆಯಿದೆ. ಸಾಂಪ್ರದಾಯಿಕವಾಗಿ ಭಾರತೀಯರು ಹಬ್ಬದ ಸಂದರ್ಭದಲ್ಲಿ ಹೊಸ ದ್ವಿಚಕ್ರ ಮತ್ತು ಕಾರುಗಳನ್ನು ಖರೀದಿಸಲು ಮುಂದಾಗುತ್ತಾರೆ.

  ದಸರಾ - ದೀಪಾವಳಿ ಬಿಗ್ ಆಫರ್! ಕಾರುಗಳ ಮೇಲೆ 4 ಲಕ್ಷದವರೆಗೆ ಡಿಸ್ಕೌಂಟ್!! ಬೈಕ್ ಮೇಲೂ ಬಂಪರ್ ಆಫರ್..
ದೀಪಾವಳಿ ಅಥವಾ ಧನ್ ತೆರಸ್ ದಿನದಂದು ನೀವು ಕಾರು, ಬೈಕ್ ಖರೀದಿಸಿದರೆ ಶುಭಕರ. ವಾಹನ ಖರೀದಿಸಲು ಯೋಜಿಸುತ್ತಿದ್ದರೆ, ನೀವು ಹೋಂಡಾ, ಮಾರುತಿ ಸುಜುಕಿ ಮತ್ತು ಟಾಟಾ ಮೋಟಾರ್ಸ್‌ನಲ್ಲಿ ರಿಯಾಯಿತಿಯನ್ನು ಪಡೆಯಲು ಸುವರ್ಣಾವಕಾಶವಿದೆ. ಭಾರತದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ತನ್ನ ನೆಕ್ಸಾ ಡೀಲರ್ಶಿಪ್ ಮೂಲಕ ಮಾರಾಟವಾಗುವ ಎಲ್ಲಾ ಡೀಸೆಲ್ ಕಾರುಗಳಿಗೆ ನಗದು ರಿಯಾಯಿತಿ, ವಿನಿಮಯ ಬೋನಸ್, ಕಾರ್ಪೊರೇಟ್ ರಿಯಾಯಿತಿ ಮತ್ತು 5 ವರ್ಷಗಳ ವಿಸ್ತೃತ ಖಾತರಿಯನ್ನು ನೀಡುತ್ತಿದೆ. ಜೊತೆಗೆ ಇನ್ನಿತರ ಕಂಪನಿಗಳು ನೀಡುವ ಆಫರ್ ಗಳ ಬಗ್ಗೆ ಇಲ್ಲಿ ನೋಡೋಣ:

   
 
ಟೆಕ್ನಾಲಜಿ