Back
Home » ಸುದ್ದಿ
ಝಕೀರ್ ಮೂಸಾನ ಉತ್ತರಾಧಿಕಾರಿ ಹಮೀದ್ ಲೆಲ್ಹರಿಯನ್ನು ಬಲಿ ಹಾಕಿದ ಸೇನೆ
Oneindia | 23rd Oct, 2019 12:53 PM

ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಅಕ್ಟೋಬರ್ 23: ಕಾಶ್ಮೀರದ ಅಲ್ ಕೈದಾ ಘಟಕದ ಮುಖ್ಯಸ್ಥ- ಝಕೀರ್ ಮೂಸಾನ ಉತ್ತರಾಧಿಕಾರಿಯಾಗಿದ್ದ ಹಮೀದ್ ಲೆಲ್ಹರಿಯನ್ನು ಮಂಗಳವಾರ ಸಂಜೆ ಭಾರತದ ಭದ್ರತಾ ಪಡೆ ಹೊಡೆದುರುಳಿಸಿದೆ.

ಕಳೆದ ಮೇ ತಿಂಗಳಲ್ಲಿ ಮೂಸಾ ಸಾವಿನ ನಂತರ ಅಲ್ ಕೈದಾ ಉಗ್ರ ಸಂಘಟನೆಯ ನಂಟಿರುವ ಅನ್ಸರ್ ಘಜ್ವತ್- ಉಲ್- ಹಿಂದ್ ನ ಹೊಸ ಮುಖ್ಯಸ್ಥನಾಗಿ ಲೆಲ್ಹರಿಯನ್ನು ಆಯ್ಕೆ ಮಾಡಲಾಗಿತ್ತು.

ಉಗ್ರರ ನೆಲೆ ಧ್ವಂಸ: ಭಾರತದ ಬಳಿ ಪುರಾವೆ ಕೇಳಿದ ಪಾಕಿಸ್ತಾನ

ಅವಂತಿಪೋರ್ ನಲ್ಲಿ ಮಂಗಳವಾರ ಸಂಜೆ ನಡೆದ ಗುಂಡಿನ ಚಕಮಕಿಯಲ್ಲಿ ಹಮೀದ್ ಲೆಲ್ಹರಿ ಮತ್ತು ಆತನ ಇಬ್ಬರು ಸ್ಥಳೀಯ ಸಹಚರರನ್ನು ಕೊಲ್ಲಲಾಗಿದೆ. ಭಯೋತ್ಪಾದಕರು ಇರುವ ಬಗ್ಗೆ ಸುಳಿವು ದೊರೆತ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ದಾಳಿ ನಡೆಸಿದ್ದವು. ಕಾಶ್ಮೀರ್ ವಲಯ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಸ್ಥಳದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂವತ್ತು ವರ್ಷದ ಲೆಲ್ಹರಿ ಮೂಲತಃ ಪುಲ್ವಾಮಾದವನು.

ಝಕೀರ್ ಮೂಸಾ ಯಾರು?

ಎರಡು ವರ್ಷಗಳ ಹಿಂದೆ ಕಾಶ್ಮೀರಲ್ಲಿನ ಅಲ್ ಕೈದಾ ನೇತೃತ್ವ ವಹಿಸಿದ್ದವನು ಝಕೀರ್ ಮೂಸಾ. ಅದಕ್ಕೂ ಮುನ್ನ, ಅಂದರೆ ಬುರ್ಹಾನ್ ವನಿ ಹತ್ಯೆ ನಂತರ ಹಿಜ್ಬುಲ್ ಮುಜಾಹಿದೀನ್ ನ ನೇತೃತ್ವ ವಹಿಸಿದ್ದ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಜಲಂಧರ್ ನಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಮೂಸಾ ತಪ್ಪಿತಸ್ಥ ಎಂದು ಎನ್ ಐಎ ಕೋರ್ಟ್ ಘೋಷಿಸಿತ್ತು.

ಈ ವರ್ಷದ ಮೇ ತಿಂಗಳಲ್ಲಿ ದಕ್ಷಿಣ ಕಾಶ್ಮೀರದ ಟ್ರಾಲ್ ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಝಕೀರ್ ಮೂಸಾನನ್ನು ಭಾರತದ ಭದ್ರತಾ ಪಡೆ ಕೊಂದು ಹಾಕಿತ್ತು.

   
 
ಟೆಕ್ನಾಲಜಿ