Back
Home » ಸುದ್ದಿ
ಪಾಕ್ ಗಾಯಕಿಯಿಂದ ನರೇಂದ್ರ ಮೋದಿಗೆ ಆತ್ಮಹತ್ಯಾ ದಾಳಿ ಬೆದರಿಕೆ
Oneindia | 23rd Oct, 2019 12:14 PM

ಲಾಹೋರ್, ಅಕ್ಟೋಬರ್ 23: ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಭಾರತ ಸರ್ಕಾರದ ಕ್ರಮದಿಂದು ಉರಿದುಕೊಂಡು, ವಿಡಿಯೋವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾವು- ಮೊಸಳೆ ತೋರಿಸಿ ಬೆದರಿಕೆ ಹಾಕಿದ್ದಾ ಪಾಕಿಸ್ತಾನದ ಗಾಯಕಿ ಹೊಸ ವರಸೆಯಲ್ಲಿ ಬೆದರಿಸಿದ್ದಾಳೆ.

ಹಾವು, ಮೊಸಳೆ ಜತೆಗೆ ಪೋಸ್ ಕೊಟ್ಟಿದ್ದ ಪಾಕ್ ಗಾಯಕಿಗೆ ಜೈಲು ಭೀತಿ

ಅದೇ ಪಾಪ್ ಗಾಯಕಿ ರಬೀ ಪೀರ್ ಜಾದಾ ಈಗ ಆತ್ಮಹತ್ಯಾ ದಾಳಿಯ ಬೆದರಿಕೆ ಹಾಕಿದ್ದಾಳೆ. ಮಂಗಳವಾರದ ದಿನ ಟ್ವಿಟ್ಟರ್ ನಲ್ಲಿ ಫೋಟೋ ಹಾಕಿರುವ ಆಕೆ, ಆತ್ಮಹತ್ಯಾ ದಾಳಿಯ ಜಾಕೆಟ್ ನಂತೆ ಕಾಣುವುದನ್ನು ಧರಿಸಿ, ಕಾಶ್ಮೀರ ವಿಚಾರಕ್ಕೆ ಬೆದರಿಸಿದ್ದಾಳೆ. ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆ ಟ್ವೀಟ್ ಗೆ ಭಾರೀ ಪ್ರತಿಕ್ರಿಯೆ ಬರುತ್ತಿದೆ.

ಟ್ವಿಟ್ಟರ್ ಪ್ಲಾಟ್ ಫಾರ್ಮ್ ಅನ್ನು ಈ ರೀತಿ ಬೇಜವಾಬ್ದಾರಿಯಾಗಿ ಬಳಸಿಕೊಂಡು, ಜಗತ್ತಿನ ಎದುರು ಪಾಕಿಸ್ತಾನದ ಮಾನ ಕಳೆಯುತ್ತಿದ್ದಾಳೆ ಎಂದು ಆಕೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿಂದೆ ವನ್ಯಜೀವಿಗಳನ್ನು ಸಾಕುಪ್ರಾಣಿಗಳ ಥರ ಇಟ್ಟುಕೊಂಡಿದ್ದ ಕಾರಣಕ್ಕೆ ಆಕೆ ವಿರುದ್ಧ ಪಾಕಿಸ್ತಾನದ ವನ್ಯಜೀವಿ ಇಲಾಖೆ ಕ್ರಮಕ್ಕೆ ಮುಂದಾಗಿತ್ತು. ಲಾಹೋರ್ ನ ಕೋರ್ಟ್ ಆಕೆಗೆ ಬಂಧನ ವಾರೆಂಟ್ ನೀಡಿತ್ತು.

   
 
ಟೆಕ್ನಾಲಜಿ