Back
Home » ಸಿನಿ ಸಮಾಚಾರ
ಶ್ರೀರಾಮ, ಸೀತೆ, ಪೋರ್ನ್: ಸುಖಾಸುಮ್ಮನೆ ಹೊಸ ವಿವಾದ ಮೈಗೆಳೆದುಕೊಂಡ ಪ್ರಕಾಶ್ ರೈ
Oneindia | 23rd Oct, 2019 10:33 AM
 • ಹಿಂದೂಗಳ ಪವಿತ್ರ ಗ್ರಂಥ ರಾಮಾಯಣ

  ಖಾಸಗಿ ವಾಹಿನಿಯಲ್ಲಿನ ಡಿಬೇಟ್ ನಲ್ಲಿ ಭಾಗವಹಿಸಿದ್ದ ಪ್ರಕಾಶ್ ರೈ, ಹಿಂದೂಗಳ ಪವಿತ್ರ ಗ್ರಂಥ ರಾಮಾಯಣದಲ್ಲಿ ಬರುವ 'ರಾಮ-ಲೀಲಾ' ಬಗ್ಗೆ ಮಾತನಾಡುತ್ತಾ, ಅದಕ್ಕೆ ಪೋರ್ನ್ ಸೈಟ್ ಬಗ್ಗೆ ಉದಾಹರಣೆ ನೀಡಿದ್ದಾರೆ. ಇದು, ವ್ಯಾಪಕ ವಿರೋಧ, ಚರ್ಚೆ, ಪರವಿರೋಧ ವಾಗ್ಯುದ್ದಕ್ಕೆ ಕಾರಣವಾಗಿದೆ.


 • ರಾಮಲೀಲಾ ಕಾರ್ಯಕ್ರಮದ ಬಗ್ಗೆ ಸಿಟ್ಟಿನಿಂದ ಉತ್ತರ

  ರಾಮಲೀಲಾ ಕಾರ್ಯಕ್ರಮದ ಬಗ್ಗೆ ಸಿಟ್ಟಿನಿಂದ ಉತ್ತರಿಸುತ್ತಾ, "ಶ್ರೀರಾಮ, ಸೀತೆ, ಲಕ್ಷ್ಮಣ ಪಾತ್ರಧಾರಿಗಳನ್ನು ಹೆಲಿಕಾಪ್ಟರ್ ಮೂಲಕ ಮುಂಬೈನಿಂದ ಮೇಕಪ್ ಮಾಡಿ ಕರೆತರಲಾಗುತ್ತದೆ. ಅವರ ಹಿಂದೆ, ಐಎಎಸ್ ಅಧಿಕಾರಿಗಳು ಫೈಲ್ ಹಿಡಿದುಕೊಂಡು ಬರುತ್ತಾರೆ. ಈ ರೀತಿಯ ವಿದ್ಯಮಾನಗಳು ಈ ದೇಶದಲ್ಲಿ ನಡೆಯಬಾರದು" ಎಂದು ಪ್ರಕಾಶ್ ರೈ ಹೇಳುತ್ತಾರೆ.


 • ನಿಮಗೆ ವಿರೋಧವಿದ್ದರೆ, ಎಲ್ಲರಿಗೂ ಅದಕ್ಕೆ ಆಕ್ಷೇಪ ಇರಬೇಕು ಎಂದೇನಿಲ್ಲ

  "ನಿಮಗೆ ವಿರೋಧವಿದ್ದರೆ, ಎಲ್ಲರಿಗೂ ಅದಕ್ಕೆ ಆಕ್ಷೇಪ ಇರಬೇಕು ಎಂದೇನಿಲ್ಲ. ಇದು ಪ್ರಜಾಪ್ರಭುತ್ವ ದೇಶ, ಎಲ್ಲರ ಭಾವನೆಗೂ ಬೆಲೆ ಕೊಡಬೇಕಾಗುತ್ತದೆ" ಎಂದು ಸಂದರ್ಶಕ ಮರುಪ್ರಶ್ನೆಯನ್ನು ಹಾಕುತ್ತಾರೆ. ಇದಕ್ಕೆ ಖಾರವಾಗಿ ಉತ್ತರಿಸುತ್ತಾ ಪ್ರಕಾಶ್ ರೈ, ಮಕ್ಕಳು, ಪೋರ್ನ್ ವಿಚಾರವನ್ನು ಎಳೆದು ತಂದಿದ್ದಾರೆ.


 • ಮಕ್ಕಳು ಪೋರ್ನ್ ಸೈಟ್ ನೋಡುತ್ತಿದ್ದರೆ, ನಾವು ಸುಮ್ಮನೆ ಇರುತ್ತೇವಾ

  "ಮಕ್ಕಳು ಪೋರ್ನ್ ಸೈಟ್ ನೋಡುತ್ತಿದ್ದರೆ, ನಾವು ಸುಮ್ಮನೆ ಇರುತ್ತೇವಾ" ಎಂದು ಪ್ರಕಾಶ್ ರೈ, ರಾಮಲೀಲಾ ಕಾರ್ಯಕ್ರಮವನ್ನು ಅದಕ್ಕೆ ಹೋಲಿಸಿದ್ದಾರೆ. "ರಾಮಲೀಲಾ ಕಾರ್ಯಕ್ರಮಕ್ಕೂ, ಮಕ್ಕಳು ಪೋರ್ನ್ ಸೈಟ್ ನೋಡುವುದಕ್ಕೂ ಏನು ಸಂಬಂಧ" ಎನ್ನುವ ಪ್ರಶ್ನೆಗೆ, "ಇದು ಅಲ್ಪಸಂಖ್ಯಾತರಿಗೆ ಭಯ ತರುವ ಘಟನೆ" ಎಂದು ರೈ ಹೇಳಿದ್ದಾರೆ.


 • ದೇವಸ್ಥಾನಕ್ಕೆ ಹೋಗುವುದು, ಅಲ್ಲಿನ ವಿಗ್ರಹಕ್ಕೆ ಪೂಜಿಸುವುದು ಬೆಳೆದುಕೊಂಡ ಬಂದ ಪದ್ದತಿ

  "ಹಿಂದೂಗಳು ದೇವಸ್ಥಾನಕ್ಕೆ ಹೋಗುವುದು, ಅಲ್ಲಿನ ವಿಗ್ರಹಕ್ಕೆ ಪೂಜಿಸುವುದು ಬೆಳೆದುಕೊಂಡ ಬಂದ ಪದ್ದತಿ. ರಾಮಲೀಲಾ ಮುಂತಾದ ಕಾರ್ಯಕ್ರಮ ನಡೆಸಿ, ನಾಟಕ ಯಾಕೆ ಮಾಡುತ್ತಿದ್ದೀರಾ, ಜನರಿಗೆ ಭಯದ ಸನ್ನಿವೇಶವನ್ನು ಯಾಕೆ ಹುಟ್ಟುಹಾಕುತ್ತಿದ್ದೀರಾ. ಎನ್ನುವುದು ನನ್ನ ಪ್ರಶ್ನೆ" ಎಂದು ಪ್ರಕಾಶ್ ರೈ ಹೇಳಿದ್ದಾರೆ.
ಕಳೆದ ಒಂದೆರಡು ವರ್ಷಗಳಿಂದ ಸದಾ ಸುದ್ದಿಯಲ್ಲಿರುವ ನಟ ಪ್ರಕಾಶ್ ರೈ, 'ರಾಮಲೀಲಾ' ವಿಚಾರದಲ್ಲಿ ಮಾತನಾಡುತ್ತಾ, ಹೊಸ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ.

ಖಾಸಗಿ ವಾಹಿನಿಯಲ್ಲಿನ ಡಿಬೇಟ್ ವೇಳೆ, ಸಂದರ್ಶಕರ ಮರುಪ್ರಶ್ನೆಗೆ ಉತ್ತರಿಸುವ ವೇಳೆ, ಪ್ರಕಾಶ್ ರೈ ನೀಡಿರುವ ಹೇಳಿಕೆ, ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಮೊದಲು ನಾನು ಉಗಿದೆ.. ಈಗ ಜನ ಉಗಿತ್ತಿದ್ದಾರೆ- ಕೇಂದ್ರಕ್ಕೆ ಪ್ರಕಾಶ್ ರಾಜ್ ಪಂಚ್

''ನಾನು ಉಗುದೆ...ಒರಸ್ಕೊಂಡ್ರೀ...ಈಗ ಜನ ಕ್ಯಾಕರ್ಸ್ಕೊಂಡ್ ಉಗೀತಾ ಇದ್ದಾರೆ...ಎಷ್ಟೂಂತ ಒರಸ್ಕೊತೀರಪ್ಪ..'' ಎಂದು, ಇತ್ತೀಚೆಗೆ, ಕೇಂದ್ರ ಸರಕಾರ ಮತ್ತು ಬಿಜೆಪಿ ವಿರುದ್ದ ಪ್ರಕಾಶ್ ರೈ ಟ್ವೀಟ್ ಮಾಡಿದ್ದರು.

ಠೇವಣಿ ಮಾತ್ರವಲ್ಲ, ಪ್ರಕಾಶ್ ರಾಜ್ ತಮ್ಮ ಮಿದುಳನ್ನೂ ಕಳೆದುಕೊಂಡಿದ್ದಾರೆ - ಶಿಲ್ಪಾ ಗಣೇಶ್

ಡಿಬೇಟ್ ವೇಳೆ "ಇದು ಪ್ರಜಾಪ್ರಭುತ್ವ ದೇಶ, ಇನ್ನೊಬ್ಬರ ಭಾವನೆಯ ಬಗ್ಗೆ ಮಾತನಾಡುವುದು ತಪ್ಪಲ್ಲವೇ" ಎನ್ನುವ ಸಂದರ್ಶಕನ ಪ್ರಶ್ನೆಗೆ ಉತ್ತರಿಸುತ್ತಾ ಪ್ರಕಾಶ್ ರೈ, "ಮಕ್ಕಳು ಪೋರ್ನ್ ಸೈಟ್ ನೋಡುತ್ತಿದ್ದರೆ ಸುಮ್ಮನಿರಲು ಸಾಧ್ಯವೇ" ಎಂದು ಹೇಳಿದ್ದಾರೆ. ಮುಂದುವರಿಯುತ್ತಾ..

   
 
ಟೆಕ್ನಾಲಜಿ