Back
Home » Business
ಮೂರು ದಶಕಗಳ ಕನಿಷ್ಟ ಮಟ್ಟಕ್ಕೆ ಚೀನಾದ ಜಿಡಿಪಿ ಕುಸಿತ
Good Returns | 22nd Oct, 2019 05:15 PM

ಚೀನಾ ದೇಶದ ಜುಲೈ- ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಜಿಡಿಪಿ ದರ ಶೇ. 6ಕ್ಕೆ ಕುಸಿತ ಕಂಡಿದೆ. ಕಳೆದ ಮೂರು ದಶಕಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಭಾರತದ ಆರ್ಥಿಕತೆ ಹಿಂಜರಿತಕ್ಕೆ ಒಳಗಾಗಿದೆ ಎಂಬ ವರದಿಗಳ ಬೆನ್ನಲ್ಲೇ ನೆರೆಯ ಚೀನಾದಲ್ಲೂ ಇದೇ ಪರಿಸ್ಥಿತಿ ಎದುರಾಗಿದೆ.

ಚೀನಾದ ಜಿಡಿಪಿಯು ಮೊದಲ ತ್ರೈಮಾಸಿಕದಲ್ಲಿ ಶೇಕಡಾ 6.4ರಷ್ಟಿತ್ತು. ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 6.2ಕ್ಕೆ ಇಳಿದಿದೆ. ಇದೀಗ ಜುಲೈ- ಸೆಪ್ಟೆಂಬರ್‌ನ ತ್ರೈಮಾಸಿಕ ಅವಧಿಯಲ್ಲಿ ಶೇಕಡಾ 6ಕ್ಕೆ ಇಳಿಕೆಯಾಗಿದೆ ಎಂದು ಚೀನಾದ ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ ವರದಿ ಮಾಡಿದೆ.

ಚೀನಾ ದೇಶ 1992ರ ನಂತರ ಸಾಧಿಸುತ್ತಿರುವ ಕನಿಷ್ಠ ಬೆಳವಣಿಗೆ ದರ ಇದಾಗಿದ್ದು, ಪ್ರಸಕ್ತ ವರ್ಷ ಜಿಡಿಪಿ ಶೇ. 6 ರಿಂದ ಶೇ. 6.5ರಷ್ಟಾಗಬಹುದು ಎಂದು ಸರ್ಕಾರ ನಿರೀಕ್ಷೆ ಹೊಂದಿತ್ತು. ರಾಯಿಟ​ರ್ಸ್ ಕೈಗೊಂಡ ಸಮೀಕ್ಷೆ ಪ್ರಕಾರ, 2020ರಲ್ಲಿ ಚೀನಾದ ಜಿಡಿಪಿ ಕುಸಿತ ಕಂಡು ಶೇಕಡಾ 5.9ಕ್ಕೆ ತಲುಪಲಿದೆ ಎನ್ನಲಾಗಿತ್ತು.

ಚೀನಾದಲ್ಲಿನ ಬೇಡಿಕೆ ಕುಸಿತ ಹಾಗೂ ಯುಎಸ್-ಚೀನಾ ವ್ಯಾಪಾರ ಸಮರ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದೀಗ ಚೀನಾ ಸರ್ಕಾರವು ತೆರಿಗೆ ಹಾಗೂ ಬಡ್ಡಿ ದರಗಳನ್ನು ಕಡಿತ ಮಾಡಲು ಮುಂದಾಗಿದೆ.

   
 
ಟೆಕ್ನಾಲಜಿ