Back
Home » ಸಿನಿ ಸಮಾಚಾರ
ನಟ ಪವನ್ ಕಲ್ಯಾಣ್ ಕುರಿತು ಶ್ರೀರೆಡ್ಡಿ ಅಸಭ್ಯ ಪೋಸ್ಟ್
Oneindia | 22nd Oct, 2019 07:53 PM

'ಕಾಸ್ಟಿಂಗ್ ಕೌಚ್' ಅಭಿಯಾನದಲ್ಲಿ ವಾಣಿಜ್ಯ ಮಂಡಳಿ ಎದುರು ಅರೆನಗ್ನವಾಗಿ ಪ್ರತಿಭಟನೆ ಮಾಡಿದ್ದ ನಟಿ ಶ್ರೀರೆಡ್ಡಿ, ಮತ್ತೆ ಮತ್ತೆ ಸುದ್ದಿಯಾಗುತ್ತಿದ್ದಾರೆ. ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ವಿರುದ್ಧ ಶ್ರೀರೆಡ್ಡಿ ಅಸಭ್ಯ ಪೋಸ್ಟ್ ಮಾಡುವ ಮೂಲಕ ಅವರ ಗೌರವಕ್ಕೆ ಧಕ್ಕೆ ತಂದಿದ್ದಾರೆ.

ಪವನ್ ಕಲ್ಯಾಣ್ ಕುರಿತು ವಿವಾದಾತ್ಮಕ ಕಾರ್ಟೂನ್ ಪೋಸ್ಟ್ ಮಾಡಿರುವ ಶ್ರೀರೆಡ್ಡಿ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪವನ್ ಕಲ್ಯಾಣ್ ಅಭಿಮಾನಿಗಳಂತೂ ಶ್ರೀರೆಡ್ಡಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಮೀಟೂ ಖ್ಯಾತಿಯ ತೆಲುಗು ನಟಿ ಶ್ರೀ ರೆಡ್ಡಿ?

ಇದಕ್ಕೂ ಮುಂಚೆ ಕೂಡ ಪವನ್ ಕಲ್ಯಾಣ್ ವಿರುದ್ಧ ಹಲವು ಸಲ ಟೀಕಿಸಿದ್ದಾರೆ. ಪವನ್ ಕಲ್ಯಾಣ್ ಅವರ ಖಾಸಗಿ ಜೀವನದ ಬಗ್ಗೆ ಪ್ರಶ್ನಿಸಿ, ಆರೋಪ, ಆಪಾದನೆಗಳನ್ನ ಮಾಡಿದ್ದಾರೆ.

ಚೆನ್ನೈನಲ್ಲಿ ರಸ್ತೆಯೊಂದರಲ್ಲಿ ಯುವಕ-ಯುವತಿ ರೋಮ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದನ್ನ ಪೋಸ್ಟ್ ಮಾಡಿ, ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ವಿಡಿಯೋದಲ್ಲಿ ಹುಡುಗಿ ಅಪ್ರಾಪ್ತೆಯಾಗಿದ್ದ ಕಾರಣ, ಈ ವಿಡಿಯೋ ನೋಡಿ ಆಕೆ ಆತ್ಮಹತ್ಯೆ ಮಾಡಿಕೊಂಡರೆ ಯಾರು ಹೊಣೆ? ನಿಮಗೆ ಸಾಮಾಜಿಕ ಜವಾಬ್ದಾರಿ ಇಲ್ಲವೇ ಎಂದು ಜನಸಾಮಾನ್ಯರು ಕಿಡಿಕಾರಿದ್ದರು.

   
 
ಟೆಕ್ನಾಲಜಿ