Back
Home » Car News
ಐ ಸ್ಮಾರ್ಟ್ ಸಾಫ್ಟ್‌ವೇರ್ ಅಪ್‍‍ಡೇಟ್ ಪಡೆದ ಎಂಜಿ ಹೆಕ್ಟರ್
DriveSpark | 22nd Oct, 2019 02:47 PM
 • ಐ ಸ್ಮಾರ್ಟ್ ಸಾಫ್ಟ್‌ವೇರ್ ಅಪ್‍‍ಡೇಟ್ ಪಡೆದ ಎಂಜಿ ಹೆಕ್ಟರ್

  ಹೆಕ್ಟರ್ 'ಐ‍‍ಸ್ಮಾರ್ಟ್' ಸಿಸ್ಟಂ‍‍ಗಾಗಿ ಕಂಪನಿಯು ತನ್ನ ಮೊಟ್ಟಮೊದಲ ಓ‍ವರ್-ದಿ-ಏರ್ ನವೀಕರಣವನ್ನು ಬಿಡುಗಡೆ ಮಾಡಿದೆ. ಹೊಸ ನವೀಕರಣವು ಅಸ್ತಿತ್ವದಲ್ಲಿರುವ ಸಾಫ್ಟ್‌ವೇರ್ ವೈಶಿಷ್ಟ್ಯಗಳು ಮತ್ತು ಎಐ ವಾಯ್ಸ್ ಕಾಮೆಂಡ್ಸ್ ಸೇರಿದಂತೆ ಕೆಲವು ಸುಧಾರಣೆಗಳನ್ನು ಹೊಂದಿರಲಿವೆ.


 • ಐ ಸ್ಮಾರ್ಟ್ ಸಾಫ್ಟ್‌ವೇರ್ ಅಪ್‍‍ಡೇಟ್ ಪಡೆದ ಎಂಜಿ ಹೆಕ್ಟರ್

  ಇನ್ಫೋಟೇನ್‌ಮೆಂಟ್ ಸಿಸ್ಟಂಗೆ ಸಾಫ್ಟ್‌ವೇರ್ ನವೀಕರಣವು ಸ್ಮಾರ್ಟ್‍‍ಪೋನ್ ನವೀಕರಣವಾಗುವ ರೀತಿಯಲ್ಲಿ ಆಗುತ್ತದೆ. ನವೀಕರಣವನ್ನು ಹಂತಹಂತವಾಗಿ ಹೊರತರಲು ಎಂಜಿ ಯೋಜಿಸಿದೆ. ಪರ್ಯಾಯವಾಗಿ ಸಾಫ್ಟ್‌ವೇರ್ ಬಿಡುಗಡೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಹೆಕ್ಟರ್ ಎಸ್‍‍ಯು‍ವಿ ಮಾಲೀಕರು ಎಂಜಿ ಪಲ್ಸ್ ಹಬ್ ಸೇವೆಯನ್ನು ಸಂಪರ್ಕಿಸಬಹುದು.


 • ಐ ಸ್ಮಾರ್ಟ್ ಸಾಫ್ಟ್‌ವೇರ್ ಅಪ್‍‍ಡೇಟ್ ಪಡೆದ ಎಂಜಿ ಹೆಕ್ಟರ್

  ಎಐ ಇಂಟರ್ನೆಟ್ ಸಂಪರ್ಕವನ್ನು 10.4 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ‍‍ನೊಂದಿಗೆ ಜೋಡಿಸಲಾಗಿದೆ. ಇದು ಸ್ಮಾರ್ಟ್‍‍ಪೋನ್ ಅಪ್ಲಿಕೇಶನ್ ಮತ್ತು ವಾಯ್ಸ್ ಕಾಮೆಂಡ್‍‍ಗಳ ಮೂಲಕ ಎಸ್‍‍ಯು‍ವಿ ವಿವಿಧ ವೈಶಿಷ್ಟ್ಯಗಳನ್ನು ನಿಯಂತ್ರಿಸಬಹುದು. ಇದರಲ್ಲಿ ಎಸಿ, ಸನ್‍‍ರೂಫ್‍, ಟೈಲ್‍‍ಗೇಟ್ ಮತ್ತು ಡೋರ್‍‍ಗಳು ಸೇರಿವೆ.


 • ಐ ಸ್ಮಾರ್ಟ್ ಸಾಫ್ಟ್‌ವೇರ್ ಅಪ್‍‍ಡೇಟ್ ಪಡೆದ ಎಂಜಿ ಹೆಕ್ಟರ್

  ಹೆಕ್ಟರ್ ಎಸ್‍‍ಯು‍ವಿಯ ವೈಶಿಷ್ಟ್ಯಗಳನ್ನು ನಿಯಂತ್ರಿಸಲು ಆನ್-ಬೋರ್ಡ್ ವಾಯ್ಸ್ ಅಸಿಸ್ಟ್ ನೊಂದಿಗೆ ಮಾತನಾಡಬಹುದು. 100 ಕ್ಕೂ ಹೆಚ್ಚು ವಾಯ್ಸ್ ಕಾಮೆಂಡ್‍ಗಳನ್ನು ಸಕ್ರಿಯಗೊಳಿಸಲಾಗಿದೆ. 'ಹಲೋ ಎಂಜಿ' ಎಂದು ಮಾಲೀಕರು ಹೇಳಿದ ತಕ್ಷಣ ಹೆಚ್ಚಿನ ಸೂಚನೆಗಳನ್ನು ಕೈಗೊಳ್ಳಲು ಆನ್‍-ಬೋರ್ಡ್ ವಾಯ್ಸ್ ಅಸಿಸ್ಟ್ ಸಕ್ರಿಯಗೊಳಿಸುತ್ತದೆ. ಉದಾಹರಣೆಗೆ, ಸನ್‍‍ರೂಫ್ ತೆರೆಯಲು ಚಾಲಕನು 'ಹಲೋ ಎಂಜಿ ಒಪನ್ ಸನರೂಫ್' ಎಂದು ಹೇಳಿದಾಗ ಸನ್‍‍ರೂಫ್ ತೆರೆಯುತ್ತದೆ.


 • ಐ ಸ್ಮಾರ್ಟ್ ಸಾಫ್ಟ್‌ವೇರ್ ಅಪ್‍‍ಡೇಟ್ ಪಡೆದ ಎಂಜಿ ಹೆಕ್ಟರ್

  ಈ ಎಸ್‍‍ಯು‍ವಿನಲ್ಲಿ ಲೈವ್ ಟ್ರಾಫಿಕ್ ಅಲರ್ಟ್‍‍ಗಳು, ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ(ಟಿ‍‍ಪಿಎಂಎಸ್), ಜಿಯೋ-ಫೆನ್ಸಿಂಗ್, ತುರ್ತು ಕರೆ, ಸಾಮಾನ್ಯ ಸಹಾಯಕ್ಕಾಗಿ ಸಂಪರ್ಕಿಸಲು ಒಂದು ಬಟನ್ ಮತ್ತು ಪ್ರೀಮಿಯಂ ಗಾನಾ ಆ್ಯಪ್‍ನ ವೈವಿಧ್ಯಮಯ ಮ್ಯೂಸಿಕ್ ಸಂಗ್ರಹ, ಆನ್-ಬೋರ್ಡ್ ನ್ಯಾವಿಗೇಷನ್ ಅನ್ನು ಹೊಂದಿದೆ.


 • ಐ ಸ್ಮಾರ್ಟ್ ಸಾಫ್ಟ್‌ವೇರ್ ಅಪ್‍‍ಡೇಟ್ ಪಡೆದ ಎಂಜಿ ಹೆಕ್ಟರ್

  ಎಂಜಿ ಹೆಕ್ಟರ್ ಕಾರು ಪೆಟ್ರೋಲ್ ಆವೃತ್ತಿಯಲ್ಲಿ 1.5 ಲೀಟರ್ ಎಂಜಿನ್‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 143 ಬಿಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಡೀಸೆಲ್ ಮಾದರಿಯಲ್ಲಿ 2.0 ಲೀಟರ್ ಟಬೋಜಾರ್ಜ್ಡ್ ಎಂಜಿನ್‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮೂಲಕ 170 ಬಿಹೆಚ್‍‍ಪಿ ಪವರ್ ಮತ್ತು 350 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

  MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್


 • ಐ ಸ್ಮಾರ್ಟ್ ಸಾಫ್ಟ್‌ವೇರ್ ಅಪ್‍‍ಡೇಟ್ ಪಡೆದ ಎಂಜಿ ಹೆಕ್ಟರ್

  ಇದರಲ್ಲಿ ಬ್ಲ್ಯಾಕ್ ಕಲರ್ ಥೀಮ್ ಹೊಂದಿರುವ ಇಂಟರಿಯರ್‍‍ನೊಂದಿಗೆ ಆಡಿಯೋ ಸಿಸ್ಟಂ, ಕ್ಲೈಮೆಟ್ ಕಂಟ್ರೋಲ್, ಇನ್ಫೋಟೇನ್‌ಮೆಂಟ್ ಕಂಟ್ರೋಲ್, ಆಟೋ ಎಸಿ, ಪವರ್ ವಿಂಡೋ, ಫಾಸ್ಟ್ ಚಾರ್ಜಿಂಗ್, ಆಟೋಮ್ಯಾಟಿಕ್ ಹೆಡ್‍‍‍ಲ್ಯಾಂಪ್, 10.4 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಡಿಸ್‍‍ಪ್ಲೇ ಸೌಲಭ್ಯವಿದೆ. ಎಂಜಿ ಹೆಕ್ಟರ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 12.18 ಲಕ್ಷಗಳಾಗಿದ್ದು, ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ಪ್ರಕಾರ ರೂ. 16.68 ಲಕ್ಷಗಳಾಗಿದೆ.

  MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!


 • ಐ ಸ್ಮಾರ್ಟ್ ಸಾಫ್ಟ್‌ವೇರ್ ಅಪ್‍‍ಡೇಟ್ ಪಡೆದ ಎಂಜಿ ಹೆಕ್ಟರ್

  ಹೆಕ್ಟರ್ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದು, ಏರ್‍‍ಬ್ಯಾಗುಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಫ್ರಂಟ್ ಆಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ರೇರ್ ಪಾರ್ಕಿಂಗ್ ಕ್ಯಾಮೆರಾ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಸೌಲಭ್ಯವನ್ನು ಒದಗಿಸಲಾಗಿದೆ.

  MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!


 • ಐ ಸ್ಮಾರ್ಟ್ ಸಾಫ್ಟ್‌ವೇರ್ ಅಪ್‍‍ಡೇಟ್ ಪಡೆದ ಎಂಜಿ ಹೆಕ್ಟರ್

  ಕಂಪನಿಯು ಹೆಕ್ಟರ್ ಮೊದಲ 5,0000 ಯು‍‍ನಿ‍ಟ್‍‍ಗಳನ್ನು ಉತ್ಪಾದಿಸಲು ಸುಮಾರು 3 ತಿಂಗಳುಗಳ ಕಾಲ ಅವಧಿಯನ್ನು ತೆಗೆದುಕೊಂಡಿತ್ತು. ಆದರೆ ಮುಂದಿನ 5,000 ಯು‍‍ನಿ‍ಟ್‍ಗಳನ್ನು 1.5 ತಿಂಗಳಲ್ಲಿ ಉತ್ಪಾದಿಸಲಾಗಿದೆ. ಪ್ರಾರಂಭದ ಸಮಯದಲ್ಲಿ ಮಾಸಿಕ ಉತ್ಪಾದನೆಯು 1,500 ಯು‍‍ನಿ‍ಟ್‍ಗಳಾಗಿತ್ತು. ಆದರೆ ಭಾರೀ ಬೇಡಿಕೆಯಿಂದಾಗಿ, ಉತ್ಪಾದನೆಯನ್ನು ತಿಂಗಳಿಗೆ 3,000 ಯುನಿ‍‍ಟ್‍ಗಳಿಗೆ ಹೆಚ್ಚಿಸಲಾಗಿದೆ.


 • ಐ ಸ್ಮಾರ್ಟ್ ಸಾಫ್ಟ್‌ವೇರ್ ಅಪ್‍‍ಡೇಟ್ ಪಡೆದ ಎಂಜಿ ಹೆಕ್ಟರ್

  ಎಐ ಸಾಫ್ಟ್‌ವೇರ್ ಒಳಗೊಂಡ ವಾಹನವಾಗಿರುವುದರಿಂದ ಇನ್ನಷ್ಟು ಗ್ರಾಹಕರನ್ನು ಸೆಳೆಯಬಹುದು. ಇನ್ಫೋಟೇನ್‌ಮೆಂಟ್ ಮತ್ತು ಇಂಟರ್ನೆಟ್ ಸಂಪರ್ಕ ವೈಶಿಷ್ಟ್ಯಗಳನ್ನು ನವೀಕರಿಸಿದೆ. ಎಂಜಿ ಹೆಕ್ಟರ್ ಸುಧಾರಿತ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.
ಎಂಜಿ ಹೆಕ್ಟರ್ ಎಸ್‍‍ಯು‍ವಿ‍ಗೆ ಹೊಸದಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(ಎಐ) ಸಾಫ್ಟ್‌ವೇರ್ ಅನ್ನು ಅಳವಡಿಸಲಾಗಿದೆ. ಭಾರತದಲ್ಲಿ ಎಂಜಿ ಮೋಟಾರ್ ಕಂಪನಿಯ ಮೊದಲ ಎಸ್‍ಯು‍ವಿ ಹೆಕ್ಟರ್ ಆಗಿದೆ. ಈ ಎಸ್‍ಯು‍ವಿ ಇಂಟರ್ನೆಟ್ ಸಂಪರ್ಕಕ್ಕಾಗಿ ಎಂಬೆಡೆಡ್ ಇಸಿಮ್ ಅನ್ನು ಹೊಂದಿದೆ.

   
 
ಟೆಕ್ನಾಲಜಿ