Back
Home » ಟಿವಿ
ಕಿರುತೆರೆ ಲೋಕದ ಈ ಸುಂದರಿಯರು ಮೇಕಪ್ ಇಲ್ಲದೆ ಹೇಗೆ ಕಾಣ್ತಾರೆ ನೋಡಿ
Oneindia | 24th Oct, 2019 02:24 PM
 • 'ಅಗ್ನಿಸಾಕ್ಷಿ' ಖ್ಯಾತಿಯ ಚಂದ್ರಿಕಾ

  ಕಿರುತೆರೆಯಲ್ಲಿನ ಅತಿ ಜನಪ್ರಿಯ ಧಾರಾವಾಹಿ 'ಅಗ್ನಿಸಾಕ್ಷಿ'ಯಲ್ಲಿನ ಚಂದ್ರಿಕಾ ಪಾತ್ರಧಾರಿ ಪ್ರಿಯಾಂಕಾ ಮೇಕಪ್ ಮಾಡಿಕೊಂಡಿರುವ ಹಾಗೂ ಮೇಕಪ್ ಇಲ್ಲದೇ ಇರುವ ಫೋಟೋಗಳಿವು.

  'ಬಿಗ್ ಬಾಸ್ ಕನ್ನಡ-7': ಟಾರ್ಗೆಟ್ ಆದ 'ಅನ್ನಪೂರ್ಣೇಶ್ವರಿ' ಸುಜಾತ


 • ಮೇಕಪ್ ಇಲ್ಲದೆ ಭೂಮಿ ಶೆಟ್ಟಿ ಹೇಗೆ ಕಾಣ್ತಾರೆ ನೋಡಿ...

  ಕಲರ್ಸ್ ಕನ್ನಡ ವಾಹಿನಿಯ 'ಕಿನ್ನರಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದಾಕೆ ಭೂಮಿ ಶೆಟ್ಟಿ. ಮೇಕಪ್ ಇಲ್ಲದೆ ಭೂಮಿ ಶೆಟ್ಟಿ ಹೇಗೆ ಕಾಣ್ತಾರೆ ಅಂತ ನೀವೇ ನೋಡಿ...

  'ಮಜಾ'ಕ್ಕಾಗಿ ಚೈತ್ರ ಕೊಟ್ಟೂರು ಹೀಗೆಲ್ಲ ಮಾಡ್ತಿದ್ದಾರಾ.?


 • ಚೈತ್ರ ವಾಸುದೇವನ್ ಕಾಣೋದು ಹೀಗೆ...

  ಸ್ಟಾರ್ ನಟರ ಸಂದರ್ಶನ, ಈವೆಂಟ್ ಗಳಲ್ಲಿ ಆಂಕರಿಂಗ್ ಮಾಡುವ ಚೈತ್ರ ವಾಸುದೇವನ್ ಮುಖದ ಮೇಲೆ ಬಣ್ಣ ಹಚ್ಚದೇ ಇದ್ದಾಗ ಕಾಣೋದು ಹೀಗೆ...

  'ದುನಿಯಾ' ಹಿಟ್ ಆದರೂ ದುಡ್ಡು ಬರ್ಲಿಲ್ಲ: ರಶ್ಮಿ ಗೋಳು ಕೇಳೋರು ಇರಲಿಲ್ಲ.!


 • 'ನಾಗಿಣಿ' ದೀಪಿಕಾ ದಾಸ್

  ಇನ್ಸ್ಟಾಗ್ರಾಮ್ ನಲ್ಲಿ ಐದು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿ ದೀಪಿಕಾ ದಾಸ್. ಸಿನಿಮಾಗಳಲ್ಲೂ ನಟಿಸಿರುವ ದೀಪಿಕಾ ದಾಸ್ ಗೆ ಖ್ಯಾತಿ ತಂದುಕೊಟ್ಟಿದ್ದು 'ನಾಗಿಣಿ' ಧಾರಾವಾಹಿ. ವಿತ್ ಅಂಡ್ ವಿತೌಟ್ ಮೇಕಪ್ ದೀಪಿಕಾ ದಾಸ್ ಹೀಗೆ ಕಾಣ್ತಾರೆ.


 • ಚೈತ್ರ ಕೊಟ್ಟೂರು ಈ ತರಹ ಕಾಣ್ತಾರೆ

  ಬರಹಗಾರ್ತಿ ಆಗಿರುವ ಚೈತ್ರ ಕೊಟ್ಟೂರು 'ಸೂಜಿದಾರ' ಎಂಬ ಚಿತ್ರದಲ್ಲಿ ನಾಯಕಿ ಆಗಿ ನಟಿಸಿದ್ದಾರೆ. ಈಕೆ ಮೇಕಪ್ ಇಲ್ಲದೆ 'ಬಿಗ್ ಬಾಸ್' ಮನೆಯಲ್ಲಿ ಕಾಣಿಸಿಕೊಂಡಿದ್ದು ಈ ತರಹ...


 • ಇದು ರಶ್ಮಿ 'ದುನಿಯಾ'

  ಮೇಕಪ್ ಹಾಕಿಕೊಂಡರೂ, ಹಾಕಿಕೊಳ್ಳದೇ ಇದ್ದರೂ ದುನಿಯಾ ರಶ್ಮಿ ಒಂದೇ ತರಹ ಕಾಣ್ತಾರೆ. ಬೇಕಾದ್ರೆ, ನೀವೇ ನೋಡಿ...


 • ಸಿಂಪಲ್ ಸಿತಾರಾ

  'ರಾಧಾ ರಮಣ' ಧಾರಾವಾಹಿಯಲ್ಲಿ ಸಿತಾರಾ ದೇವಿ ಪಾತ್ರ ನಿಭಾಯಿಸುತ್ತಿದ್ದ ಸುಜಾತ 'ಬಿಗ್ ಬಾಸ್' ಮನೆಯೊಳಗೆ ಕ್ಯಾಮರಾಗಳಲ್ಲಿ ಸೆರೆ ಆಗುತ್ತಿರುವುದು ಹೀಗೆ...


 • ಚೆಂದದ ಹುಡುಗಿ ಚಂದನ

  'ರಾಜಾ ರಾಣಿ' ಧಾರಾವಾಹಿ ಖ್ಯಾತಿಯ ಚಂದನ ಕೂಡ ಅಷ್ಟೇ. ಮೇಕಪ್ ಇಲ್ಲದೇ ಇದ್ದರೂ ಚೆಂದ ಕಾಣ್ತಾರೆ. 'ಬಿಗ್ ಬಾಸ್' ನಿಂದಾಗಿ ಚಂದನಗೆ ಫ್ಯಾನ್ ಫಾಲೋವಿಂಗ್ ಕೂಡ ಜಾಸ್ತಿ ಆಗಿದೆ.
'ಬಿಗ್ ಬಾಸ್' ಮನೆಯಲ್ಲಿ ಕಂಡಿರೋ ಮುಖಗಳ ಕಾಣದೇ ಇರೋ ಮುಖ ಬಯಲಾಗುತ್ತೆ ಅಂತಾರೆ. 'ಒಂಟಿ ಮನೆ'ಯೊಳಗೆ ಸ್ಪರ್ಧಿಗಳ ಅಸಲಿ ಮುಖ ಹೊರಗೆ ಬರುತ್ತೆ ಎನ್ನುತ್ತಾರೆ. ಹೊರಗಿನಿಂದ ಅರಮನೆಯಂತೆ ಕಾಣುವ ಸೆರೆಮನೆಯಲ್ಲಿ ಸ್ಪರ್ಧಿಗಳ ಮುಖವಾಡ ಕಳಚುತ್ತೋ, ಇಲ್ವೋ.. ಆದರೆ ಮೇಕಪ್ ಇಲ್ಲದ ಮುಖಗಳು ಮಾತ್ರ ಬಹಿರಂಗವಾಗುವುದು ಖಂಡಿತ.

ಕಿರುತೆರೆಯಲ್ಲಿ... ಬೆಳ್ಳಿಪರದೆ ಮೇಲೆ ಮೇಕಪ್ ಮಾಡಿಕೊಂಡ ನಟಿಯರನ್ನ ನೋಡಿರುವ ವೀಕ್ಷಕರಿಗೆ 'ಬಿಗ್ ಬಾಸ್' ಮನೆಯಲ್ಲಿ ಅದೇ ನಟಿಯರನ್ನ ನೋಡಿದರೆ ಅಚ್ಚರಿ ಆಗದೇ ಇರಲ್ಲ. ಯಾಕಂದ್ರೆ, 'ದೊಡ್ಮನೆ'ಯೊಳಗೆ ಮೇಕಪ್ ಮಾಡಿಕೊಳ್ಳದ ನಟಿಯರ ಮುಖ ಕೂಡ ಕ್ಯಾಮರಾದಲ್ಲಿ ಸೆರೆಯಾಗುತ್ತೆ.

ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ನಟಿಯರ ವಿತ್ ಮೇಕಪ್ ಮತ್ತು ವಿತೌಟ್ ಮೇಕಪ್ ಫೋಟೋಗಳ ಕಲೆಕ್ಷನ್ ಇಲ್ಲಿದೆ. ಫೋಟೋ ಸ್ಲೈಡ್ ಗಳಲ್ಲಿ ನೋಡಿ..

   
 
ಟೆಕ್ನಾಲಜಿ