Back
Home » ಸಿನಿ ಸಮಾಚಾರ
ರಕ್ಷಿತ್ ಶೆಟ್ಟಿಗೆ ಸವಾಲಾಗಿ ನಿಂತ ಭಾರತದ ಇಬ್ಬರು ಸೂಪರ್ ಸ್ಟಾರ್ಸ್!
Oneindia | 22nd Oct, 2019 03:47 PM
 • ಡಿಸೆಂಬರ್ ನಲ್ಲಿ ಶ್ರೀಮನ್ನಾರಾಯಣ

  ರಕ್ಷಿತ್ ಶೆಟ್ಟಿ ಮತ್ತು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ ಅವರು ಪ್ರಕಟ ಮಾಡಿರುವ ಪ್ರಕಾರ, ಡಿಸೆಂಬರ್ 27 ರಂದು 'ಅವನೇ ಶ್ರೀಮನ್ನಾರಾಯಣ' ಸಿನಿಮಾ ತೆರೆಗೆ ಬರ್ತಿದೆ. ಸದ್ಯದ ಮಾಹಿತಿ ಪ್ರಕಾರ, ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಗೆ ತಯಾರಾಗಿದೆ. ಇಂತಹ ಮೆಗಾ ಚಿತ್ರಕ್ಕೆ ಈಗ ಬಹುದೊಡ್ಡ ಸವಾಲು ಎದುರಾಗಿದೆ.

  ಕೊರಿಯನ್ ಚಿತ್ರ ರೀಮೇಕ್ ಮಾಡ್ತಾರಂತೆ ಸಲ್ಮಾನ್ ಖಾನ್


 • ರಕ್ಷಿತ್ ಗೆ ಸವಾಲಾದ ಸಲ್ಮಾನ್.!

  ಡಿಸೆಂಬರ್ 27ಕ್ಕೆ ಅವನೇ ಶ್ರೀಮನ್ನಾರಾಯಣ ಸಿನಿಮಾ ಬರ್ತಿದೆ ಎಂಬುದು ಖಚಿತ. ಆದರೆ, ರಕ್ಷಿತ್ ಶೆಟ್ಟಿ ಸಿನಿಮಾ ರಿಲೀಸ್ ಗೂ ಒಂದು ವಾರದ ಮುಂಚೆ ಸಲ್ಮಾನ್ ಖಾನ್ ನಟಿಸಿರುವ 'ದಬಾಂಗ್-3' ಸಿನಿಮಾ ಬಿಡುಗಡೆಯಾಗುತ್ತೆ ಎನ್ನುವುದು ಗಮನಿಸಬೇಕಾದ ವಿಚಾರ. ಈ ಚಿತ್ರದಲ್ಲಿ ಸುದೀಪ್ ಕೂಡ ನಟಿಸಿರುವುದು ಕರ್ನಾಟಕದ ಮಟ್ಟಿಗೆ ವಿಶೇಷವಾಗಿರುವುದರಿಂದ ಶ್ರೀಮನ್ನಾರಾಯಣನಿಗೆ ಚಾಲೆಂಜ್ ಆಗಬಹುದು.

  'ದಬಾಂಗ್' ಕನ್ನಡ ವರ್ಷನ್ಗೆ ಸಲ್ಮಾನ್ ಖಾನ್ ಡಬ್ ಮಾಡಿದ್ದಾರಾ?


 • ರಕ್ಷಿತ್ ವರ್ಸಸ್ ಸುದೀಪ್!

  ದಬಾಂಗ್ 3 ಚಿತ್ರದಲ್ಲಿ ಸುದೀಪ್ ಖಳನಾಯಕನಾಗಿ ನಟಿಸಿದ್ದಾರೆ. ಸ್ವತಃ ಸುದೀಪ್ ಕನ್ನಡದಲ್ಲಿ ಡಬ್ ಮಾಡಿದ್ದಾರೆ. ಒಂದು ವೇಳೆ ಸಲ್ಮಾನ್ ಖಾನ್ ಕೂಡ ಕನ್ನಡದಲ್ಲೇ ಡಬ್ ಮಾಡಿದ್ರೆ ದಬಾಂಗ್ 3 ಚಿತ್ರಕ್ಕೆ ಕರ್ನಾಟಕದಲ್ಲಿ ಒಳ್ಳೆಯ ಓಪನಿಂಗ್ ಸಿಗುವ ನಿರೀಕ್ಷೆ ಇದೆ. ಈ ಕಾರಣದಿಂದ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಪಾಲಿಗೆ ದಬಾಂಗ್ ಮುಖ್ಯವಾಗಿದೆ. ಇದೇ ಸಮಯದಲ್ಲಿ ಶ್ರೀಮನ್ನಾರಾಯಣ ಬರ್ತಿದ್ದು, ಥಿಯೇಟರ್ ಸಮಸ್ಯೆ ಅಥವಾ ಕಲೆಕ್ಷನ್ ಮೇಲೆ ಪರಿಣಾಮ ಬೀರಬಹುದು ಎಂಬ ಪ್ರಶ್ನೆಯೂ ಇದೆ.


 • ಎರಡು ಪ್ಯಾನ್ ಇಂಡಿಯಾ ಚಿತ್ರಗಳು

  ಹಾಗ್ನೋಡಿದ್ರೆ, ದಬಾಂಗ್ ಮತ್ತು ಅವನೇ ಶ್ರೀಮನ್ನಾರಾಯಣ ಚಿತ್ರಗಳು ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದೆ. ದೇಶಾದ್ಯಂತ ಐದು ಭಾಷೆಯಗಳಲ್ಲಿ ಸಿನಿಮಾ ಆಗಲಿದೆ. ರಕ್ಷಿತ್ ಶೆಟ್ಟಿ ಚಿತ್ರದಲ್ಲಿ ಶಾನ್ವಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ದಬಾಂಗ್ 3 ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ನಾಯಕಿಯಾಗಿದ್ದಾರೆ.
ನಿನ್ನೆಯವರೆಗೂ ಇಂತಹದೊಂದು ಚರ್ಚೆ ಇರಲಿಲ್ಲ. ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ಇದೀಗ, ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಭಾರಿ ಫೈಟ್ ಎದುರಾಗುವ ಸೂಚನೆ ಸಿಕ್ಕಿದೆ.

ಮೂರು ವರ್ಷದ ಬಳಿಕ ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣ ಅವತಾರವೆತ್ತಿ ಬರ್ತಿದ್ದಾರೆ. ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿರುವ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಕನ್ನಡ ಚಿತ್ರರಂಗದ ತಾಕತ್ ಏನು ಎಂಬುದನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತೆ ಎಂಬ ಅಶಯ ಹುಟ್ಟಿಕೊಂಡಿದೆ. ಅದಕ್ಕೆ ತಕ್ಕಂತೆ ಟೀಸರ್ ಕೂಡ ಗಮನ ಸೆಳೆದಿತ್ತು.

'ಅವನೇ ಶ್ರೀಮನ್ನಾರಾಯಣ' ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದ ನಿರ್ಮಾಪಕ

ಆದ್ರೀಗ, ರಕ್ಷಿತ್ ಶೆಟ್ಟಿಯ ರೀ-ಎಂಟ್ರಿಗೆ ಭಾರತದ ಇಬ್ಬರು ಸೂಪರ್ ಸ್ಟಾರ್ ಸವಾಲಾಗಿ ನಿಲ್ಲುವ ಸೂಚನೆ ಕೊಟ್ಟಿದ್ದಾರೆ. ಅರೇ ಏನಿದು? ಮುಂದೆ ಓದಿ....

   
 
ಟೆಕ್ನಾಲಜಿ