Back
Home » ಸಿನಿ ಸಮಾಚಾರ
ಮತ್ತೊಂದು ಸ್ಟೈಲಿಶ್ ವಾಹನದ ಮೇಲೆ ಡಿ-ಬಾಸ್ ಕಣ್ಣು.!
Oneindia | 22nd Oct, 2019 02:50 PM

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರ್ ಕ್ರೇಜ್ ಎಲ್ಲರಿಗೂ ಗೊತ್ತಿರುವ ಸಂಗತಿ. ದಸರಾ ಹಬ್ಬದಲ್ಲಿ ಡಿ-ಬಾಸ್ ಮನೆ ಮುಂದೆ ನಿಂತಿದ್ದ ಕಾರುಗಳ ವಿಡಿಯೋ ವೈರಲ್ ಆಗಿತ್ತು. ದುಬಾರಿ ಕಾರುಗಳಿಗೆ ಒಡೆಯನಾಗಿರುವ ಡಿ ಬಾಸ್, ಮಾರುಕಟ್ಟೆಗೆ ಹೊಸ ಕಾರು ಬಂದ್ರೆ ಆ ಕಾರನ್ನ ಖರೀದಿ ಮಾಡುವಷ್ಟು ಕ್ರೇಜ್ ಹೊಂದಿದ್ದಾರೆ.

ವಿಶ್ವದ ಬಹುತೇಕ ವರ್ಲ್ಡ್ ಕ್ಲಾಸ್ ಕಾರುಗಳು ದರ್ಶನ್ ಮನೆಯಲ್ಲಿದೆ. ಇದೀಗ, ಒಡೆಯನ ಕಣ್ಣು ಮತ್ತೊಂದು ಸ್ಟೈಲಿಶ್ ಕಾರಿನ ಮೇಲೆ ಬಿದ್ದಿದೆ. ಹೌದು, ಸದ್ಯ ಸ್ವಿಡ್ಜರ್ಲ್ಯಾಂಡ್ ನಲ್ಲಿ ಒಡೆಯ ಸಿನಿಮಾದ ಹಾಡಿನ ಚಿತ್ರೀಕರಣದಲ್ಲಿರುವ ದರ್ಶನ್, ಸಾಂಗ್ ಶೂಟಿಂಗ್ ವೇಳೆ ಬಳಸಿರುವ ಸ್ಟೈಲಿಶ್ ಕಾರಿಗೆ ಫಿದಾ ಆಗಿದ್ದಾರೆ.

'ಚಕ್ರವರ್ತಿ' ದರ್ಶನ್ ಬಳಿ ಇದೆ 'ವರ್ಲ್ಡ್ ಕ್ಲಾಸ್' ಕಾರ್ ಗಳು.!

ಸ್ವಿಡ್ಜರ್ಲ್ಯಾಂಡ್ ಬಳಿ Polaris RZR ಮಾಡೆಲ್ ಕಾರಿಗೆ ದರ್ಶನ್ ಮರುಳಾಗಿದ್ದಾರೆ. ಈ ಕಾರುಗಳನ್ನು ಬಹಳ ಹತ್ತಿರದಿಂದ, ಸೂಕ್ಷ್ಮವಾಗಿ ನೋಡುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ದರ್ಶನ್ ಅವರು ಇಷ್ಟೊಂದು ಸೂಕ್ಷ್ಮವಾಗಿ ಕಾರು ನೋಡುತ್ತಿದ್ದಾರೆ ಅಂದ್ರೆ ಬಹುಶಃ, ಇದು ರಾಜರಾಜೇಶ್ವರಿನಗರಕ್ಕೆ ಬರಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಳಿ ಸಾಕಷ್ಟು ಕಾರ್ ಕಲೆಕ್ಷನ್ಸ್ ಗಳಿವೆ. ಜಾಗ್ವಾರ್, Porsche ,ಆಡಿ , i 20 ಕಾರ್, ರೇಂಜ್ ರೋವರ್, ದುಬಾರಿ ಫಾರ್ಚೂನರ್, ಮಿನಿಕೂಪರ್, ಹಮ್ಮರ್, ಜಿಪ್ಸಿ ಅಂತಹ ಬಗೆ ಬಗೆಯ ಕಾರುಗಳಿವೆ.

ದರ್ಶನ್ ಮನೆಗೆ ಮತ್ತೊಂದು ಕಾಸ್ಟ್ಲಿ ಕಾರ್: ಇನ್ನೊಬ್ಬ ನಟನ ಬಳಿಯೂ ಇದೆ ಈ ಕಾರು.!

ಸ್ವಿಡ್ಜರ್ಲ್ಯಾಂಡ್ ನಲ್ಲಿ Polaris ಕಾರಿಗೂ ಫಿದಾ ಆಗಿರುವ ಒಡೆಯ, ಮನಸ್ಸು ಮಾಡಿ ಅದನ್ನ ಖರೀದಿಸುತ್ತಾರಾ ಎಂಬುದು ಕಾದುನೋಡಬೇಕಿದೆ.

ಇನ್ನುಳಿದಂತೆ ಎಂ.ಡಿ ಶ್ರೀಧರ್ ನಿರ್ದೇಶನ ಮಾಡುತ್ತಿರುವ 'ಒಡೆಯ' ಸಿನಿಮಾದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಮತ್ತೊಂದೆಡೆ ತರುಣ್ ಸುಧೀರ್ ನಿರ್ದೇಶನದ 'ರಾಬರ್ಟ್' ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇದಾದ ಬಳಿಕ 'ಗಂಡುಗಲಿ ಮದಕರಿ ನಾಯಕ' ಸೇರಿದಂತೆ ಹಲವು ಸಿನಿಮಾಗಳು ಡಿ ಬಾಸ್ ಕೈಯಲ್ಲಿದೆ.

   
 
ಟೆಕ್ನಾಲಜಿ