Back
Home » ಸಿನಿ ಸಮಾಚಾರ
ಸಲ್ಮಾನ್-ಸುದೀಪ್ 'ದಬಾಂಗ್-3' ಚಿತ್ರಕ್ಕೆ ಅನೂಪ್ ಭಂಡಾರಿ ಸಾಹಿತ್ಯ
Oneindia | 22nd Oct, 2019 12:37 PM
 • ಕನ್ನಡ ವರ್ಷನ್ ಗೆ ಅನೂಪ್ ಭಂಡಾರಿ ಹಾಡುಗಳು

  ಮೊದಲ ಬಾರಿಗೆ ಅನೂಪ್ ಡಬ್ಬಿಂಗ್ ಸಿನಿಮಾವೊಂದಕ್ಕೆ ಸಾಹಿತ್ಯ ಬರೆಯುತ್ತಿದ್ದಾರೆ. ದಬಾಂಗ್-3ಗೆ ಮೊದಲು ಒಂದು ಹಾಡನ್ನು ಅನೂಪ್ ಬರೆದರಂತೆ ನಂತರ ಈ ಹಾಡು ಕೇಳಿ ಇಂಪ್ರೆಸ್ ಆದ ಸುದೀಪ್, ಚಿತ್ರದ ಆರು ಹಾಡುಗಳನ್ನು ಅನೂಪ್ ಅವರ ಬಳಿಯೆ ಬರೆಸಿದ್ದಾರಂತೆ. ಸಲ್ಮಾನ್ ಮತ್ತು ಸುದೀಪ್ ಚಿತ್ರಕ್ಕೆ ಹಾಡು ಬರೆದ ಸಂತಸದಲ್ಲಿದ್ದಾರೆ ಅನೂಪ್.

  'ದಬಾಂಗ್' ಬಳಿಕ ಸಲ್ಮಾನ್ ಖಾನ್ ಹೊಸ ಸಿನಿಮಾ 'ರಾಧೇ'


 • ಕನ್ನಡ ಗಾಯಕರು ಹಾಡಲಿದ್ದಾರೆ

  ದಬಾಂಗ್-3 ಕನ್ನಡ ವರ್ಷನ್ ಹಾಡುಗಳನ್ನು ಕನ್ನಡ ಗಾಯಕರು ಹಾಡಲಿದ್ದಾರಂತೆ. ಅನೂಪ್ ಸಾಹಿತ್ಯ ಬರೆಯುತ್ತಿದ್ದಾರೆ ಅಂದ್ರೆ ಹಿಂದಿ ಹಾಡುಗಳನ್ನು ಕನ್ನಡಕ್ಕೆ ರಿಮೇಕ್ ಮಾಡದೆ, ಫ್ರೆಶ್ ಆಗಿ ವಿಭಿನ್ನವಾಗಿ ಬರೆಯುತ್ತಿದ್ದಾರೆ. ಒಂದೊಂದು ಹಾಡಿಗೂ ಅನೂಪ್ ಸಾಕಷ್ಟು ಸಮಯ ತೆಗೆದುಕೊಂಡು ಬರೆದಿದ್ದಾರಂತೆ. ಚಿತ್ರಕ್ಕೆ ಸಾಜಿದ್-ವಾಜಿದ್ ಸಂಗೀತ ಸಂಯೋಜನೆ ಮಾಡಿದ್ದಾರೆ.


 • ಗುರುದತ್ ಗಾಣಿಗ ಸಂಭಾಷಣೆ

  ದಬಾಂಗ್-3 ಕನ್ನಡ ವರ್ಷನ್ ಗೆ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ನಿರ್ದೇಶಕ ಗುರುದತ್ ಗಾಣಿಗ ಕನ್ನಡ ಸಂಭಾಷಣೆ ಬರೆಯುತ್ತಿದ್ದಾರಂತೆ. ಈ ಕೆಲಸವನ್ನು ಗುರುದತ್ ಗೆ ವಿತರಕ ಜಾಕ್ ಮಂಜು ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ನಂತರ ಗುರುದತ್ ಯಾವ ಸಿನಿಮಾವನ್ನು ಕೈಗೆತ್ತಿಕೊಂಡಿಲ್ಲ.


  ಜಗ್ಗೇಶ್ ಸಹಕಾರದಿಂದ 'ಕೋಟಿಗೊಬ್ಬ-3' ಪೋಲ್ಯಾಂಡ್ ಸಮಸ್ಯೆ ಸುಖಾಂತ್ಯ


 • ಅಕ್ಟೋಬರ್ 23ಕ್ಕೆ ಟ್ರೈಲರ್

  ದಬಾಂಗ್-3 ಟ್ರೈಲರ್ ರಿಲೀಸ್ ಗೆ ಇನ್ನೊಂದೆ ದಿನ ಬಾಕಿ ಇದೆ. ನಾಳಎ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ. ಕೋರಮಂಗಳದ ಪಿವಿಆರ್ ಥಿಯೇಟರ್ ನಲ್ಲಿ ಚಿತ್ರದ ಟ್ರೈಲರ್ ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ. ದಬಾಂಗ್-3 ಚಿತ್ರಕ್ಕೆ ಪ್ರಭುದೇವ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಸಲ್ಮಾನ್ ಖಾನ್, ಚುಲ್ ಬುಲ್ ಪಾಂಡೆಯಾಗಿ ಕಾಣಿಸಿಕೊಂಡರೆ ಸುದೀಪ್ ಬಲ್ಲಿ ಸಿಂಗ್ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರ ಇದೆ ವರ್ಷ ಕೊನೆಯಲ್ಲಿ ಅಂದರೆ ಡಿಸೆಂಬರ್ 20ಕ್ಕೆ ತೆರೆಗೆ ಬರುತ್ತಿದೆ.
ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಮತ್ತು ಸುದೀಪ್ ಅಭಿನಯದ 'ದಬಾಂಗ್-3' ಚಿತ್ರ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಈಗಾಗಲೆ ಫಸ್ಟ್ ಲುಕ್ ಮತ್ತು ಟೀಸರ್ ಮೂಲಕ ಕುತೂಹಲ ಹೆಚ್ಚಿಸಿರುವ ದಬಾಂಗ್-3 ಟ್ರೈಲರ್ ಮೂಲಕ ಎಂಟ್ರಿ ಕೊಡಲು ಸಜ್ಜಾಗುತ್ತಿದೆ. ಇದರ ನಡುವೆ ಚಿತ್ರದಿಂದ ಮತ್ತೊಂದು ಇಂಟ್ರಸ್ಟಿಂಗ್ ವಿಚಾರ ಬಹಿರಂಗವಾಗಿದೆ.

ದಬಾಂಗ್-3 ಚಿತ್ರಕ್ಕೆ ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಹಾಡುಗಳನ್ನು ಬರೆಯುತ್ತಿದ್ದಾರಂತೆ. ಅಂದ್ಹಾಗೆ ಅನೂಪ್ ಭಂಡಾರಿ ಹಿಂದಿ ಸಾಹಿತ್ಯ ಬರೆಯುತ್ತಿದ್ದಾರೆ ಅಂತ ಅಂದ್ಕೋಬೇಡಿ. ದಬಾಂಗ್-3 ಕನ್ನಡ ವರ್ಷನ್ ಗೆ ಹಾಡುಗಳನ್ನು ಅನೂಪ್ ರಚಿಸುತ್ತಿದ್ದಾರೆ.

ಸಲ್ಮಾನ್ ಖಾನ್ ಬಾಡಿಗಾರ್ಡ್ ತಿಂಗಳ ಸಂಬಳ ಇಷ್ಟೊಂದಾ..!

   
 
ಟೆಕ್ನಾಲಜಿ