Back
Home » ಸಿನಿ ಸಮಾಚಾರ
ಸಂಭಾವನೆ ವಿಚಾರದಲ್ಲಿ ಕಿರಿಕ್ ಮಾಡಿಕೊಂಡ ರಶ್ಮಿಕಾ ಮಂದಣ್ಣ?
Oneindia | 22nd Oct, 2019 10:37 AM

ಸ್ಯಾಂಡಲ್ ವುಡ್ ನ ಕಿರಿಕ್ ಸುಂದರಿ ರಶ್ಮಿಕಾ ಮಂದಣ್ಣ ಸದ್ಯ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ದಸ್ಯ ಮಹೇಶ್ ಬಾಬು ಜೊತೆ "ಸರಿಲೇರು ನೀಕೆವರು" ಚಿತ್ರದ ಚಿತ್ರೀಕರಣದಲ್ಲಿರುವ ರಶ್ಮಿಕಾ ವಿರುದ್ಧ ಮತ್ತೊಂದು ವಿವಾದ ಕೇಳಿ ಬರುತ್ತಿದೆ.

ಸಂಭಾವನೆ ವಿಚಾರವಾಗಿ ಕಾಮ್ರೇಡ್ ನಾಯಕಿ ತೆಲುಗು ನಿರ್ಮಾಪಕರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಹೆಚ್ಚು ಸಂಭಾವನೆ ನೀಡುವಂತೆ ನಿರ್ಮಾಪಕರ ಬಳಿ ಬೇಡಿಕೆ ಇಡುತ್ತಿದ್ದಾರಂತೆ. ಇದರಿಂದ ಈಗ ರಶ್ಮಿಕಾಗೆ ಮೂರು ದೊಡ್ಡ ಸಿನಿಮಾಗಳ ಅವಕಾಶ ಕೈತಪ್ಪಿಹೋಗಿದೆ ಎಂದು ಹೇಳಲಾಗುತ್ತಿದೆ.

ಚೆನ್ನೈನಲ್ಲಿ ಕುರಿ ಕಾಯುತ್ತಿರುವ ನಟಿ ರಶ್ಮಿಕಾ ಮಂದಣ್ಣ

'ಗೀತಾ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಸಿನಿಮಾಗಳಿಂದ ತೆಲುಗು ಪ್ರೇಕ್ಷಕರ ಮನ ಗೆದ್ದಿರುವ ರಶ್ಮಿಕಾ ನಂತರ ಸಂಭಾವನೆಯನ್ನು ಏರಿಸಿಕೊಂಡಿದ್ದರು. ನಿರ್ಮಾಪಕ ದಿಲ್ ರಾಜು ನಿರ್ಮಾಣದ ನಾಗ ಚೈತನ್ಯ ನಾಯಕನಾಗಿ ಅಭಿನಯಿಸುತ್ತಿರುವ ಚಿತ್ರಕ್ಕೆ ರಶ್ಮಿಕಾ ನಾಯಕಿ ಎಂದು ಹೇಳಲಾಗಿತ್ತು. ಆದರೆ ಸಂಭಾವನೆ ವಿಚಾರವಾಗಿ ರಶ್ಮಿಕಾ ಚಿತ್ರದಿಂದ ಹೊರ ಬಂದಿದ್ದಾರಂತೆ.

ಇದಲ್ಲದೆ ದಿಲ್ ರಾಜು ಅವರ ಮತ್ತೊಂದು ಸಿನಿಮಾಗೂ ರಶ್ಮಿಕಾಗೆ ಆಫರ್ ನೀಡಲಾಗಿತ್ತು. ಆದರೆ ಆ ಸಿನಿಮಾ ಕೂಡ ಒಪ್ಪಿಕೊಂಡಿಲ್ಲ ಎನ್ನುವ ಸುದ್ದಿ ಬಾಲಿವುಡ್ ನಲ್ಲಿ ಹರಿದಾಡುತ್ತಿದೆ. ಇದರ ಜೊತೆಗೆ ತೆಲುಗಿನ ಜೆರ್ಸಿ ಸಿನಿಮಾ ಬಾಲಿವುಡ್ ಗೆ ರಿಮೇಕ್ ಆಗುತ್ತಿದೆ. ಶಾಹಿದ್ ಕಪೂರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿ ಜೆರ್ಸಿ ಹಿಂದಿ ಸಿನಿಮಾದಲ್ಲಿ ರಶ್ಮಿಕಾ ನಾಯಕಿ ಎಂದು ಹೇಳಲಾಗಿತ್ತು.

ಆದ್ರೆ ಬಾಲಿವುಡ್ ಸಿನಿಮಾ ಕೂಡ ಕೈ ತಪ್ಪಿದೆ. ಕಾರಣ ಜರ್ಸಿ ಹಿಂದಿ ರಿಮೇಕ್ ಸಿನಿಮಾದಲ್ಲಿ ನಿರ್ಮಾಪಕರಲ್ಲಿ ದಿಲ್ ರಾಜು ಕೂಡ ಒಬ್ಬರಾಗಿದ್ದಾರೆ. ಹಾಗಾಗಿ ರಶ್ಮಿಕಾ ಸಿನಿಮಾದಿಂದ ಹೊರಗುಳಿಯ ಬೇಕಾಗಿದೆ. ಸದ್ಯ ತಮಿಳಿನಲ್ಲಿ ಒಂದು ಸಿನಿಮಾ ಮತ್ತು ತೆಲುಗಿನಲ್ಲಿ ಎರಡು ಸಿನಿಮಾಗಳಿವೆ. ಕನ್ನಡದಲ್ಲಿ ಪೊಗರು ಸಿನಿಮಾ ರಿಲೀಸ್ ತಯಾರಿಯಲ್ಲಿದೆ.

   
 
ಟೆಕ್ನಾಲಜಿ