Back
Home » ಸಮ್ಮಿಲನ
ಈ ಐದು ರಾಶಿಗಳಿಗೆ 2020 ಅದೃಷ್ಟ ತರಲಿದೆ!
Boldsky | 21st Oct, 2019 04:38 PM
  • ಮಕರ ರಾಶಿ

    ಡಿಸೆಂಬರ್ 22 ರಿಂದ ಜನವರಿ 20ರ ಒಳಗೆ ಜನಿಸುವವರ ರಾಶಿಯು ಮಕರ ರಾಶಿ ಎಂದು ಪರಿಗಣಿಸಲಾಗುವುದು. ಇವರು 2020ರಲ್ಲಿ ಜೀವನದ ಅತ್ಯುತ್ತಮ ಅವಧಿಯನ್ನು ಅನುಭವಿಸುವರು. ಇವರು ಯಾವುದೇ ವಿಷಯ ಅಥವಾ ಯೋಜನೆಯನ್ನು ಕೈಗೊಂಡರೆ ಅವು ಅದ್ಭುತ ಫಲಿತಾಂಶದ ಮೂಲಕ ಯಶಸ್ಸನ್ನು ತಂದುಕೊಡುತ್ತದೆ. ನಿಮ್ಮ ರಾಶಿಯ ಆಡಳಿತಗಾರನ ಮೇಲೆ ಶನಿಯ ದೃಷ್ಟಿ ಇರುತ್ತದೆ. ಇತರ ಗ್ರಹಗಳ ಅನುಕೂಲತೆ ಹಾಗೂ ಉತ್ತಮ ಫಲದಿಂದಾಗಿ ನೀವು ಇಷ್ಟಪಡುವ ಎಲ್ಲಾ ಸಂಗತಿಗಳು ಸುಲಭವಾಗಿ ನೆರವೇರುತ್ತವೆ. ಯಾವ ವಿಷಯವು ನಿಮಗೆ ಕಷ್ಟವಾಗಿ ಪರಿಣಮಿಸದು. ಹಾಗಾಗಿ ನೀವು 2020ರಲ್ಲಿ ಅದ್ಭುತ ಯಶಸ್ಸು ಹಾಗೂ ಅದೃಷ್ಟವನ್ನು ಹೊಂದುವ ವ್ಯಕ್ತಿಗಳಾಗಿರುತ್ತೀರಿ.


  • ಕನ್ಯಾ ರಾಶಿ

    ಆಗಸ್ಟ್ 23 ರಿಂದ ಸಪ್ಟೆಂಬರ್ 22ರ ಅವಧಿಯಲ್ಲಿ ಜನಿಸುವ ವ್ಯಕ್ತಿಗಳು ಕನ್ಯಾರಾಶಿಯನ್ನು ಹೊಂದಿರುತ್ತಾರೆ. ಇವರಿಗೆ 2020ರ ವರ್ಷವು ಫಲಪ್ರದವಾಗಿರುತ್ತವೆ. ಹೊಸ ವರ್ಷದಲ್ಲಿ ಇವರ ಹಣಕಾಸಿನ ಸ್ಥಿತಿಯು ಅತ್ಯುತ್ತಮವಾಗಿರುತ್ತದೆ. ಅದು ಅವರನ್ನು ಅತ್ಯುತ್ತಮ ಮಟ್ಟಕ್ಕೆ ಕರೆದೊಯ್ಯುವುದು. ಅದನ್ನು ಅವರು ವಿಶೇಷ ಕುತೂಹಲದಿಂದ ಕಾಯಬಹುದು. ಅಂದರೆ ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ಜೊತೆಗೆ ವಿವಿಧ ಮೂಲದಿಂದ ಅಥವಾ ಒಂದೇ ಮೂಲದಿಂದ ಹಣದ ಹರಿವು ಹೆಚ್ಚಾಗಿರುತ್ತದೆ.

    ನೀವು ಹೊಸ ಸಂಗತಿಗಳಿಗೆ ಸಂಬಂಧಿಸಿದಂತೆ ಹಣದ ಹೂಡಿಕೆಯನ್ನು ಮಾಡಬಹುದು. ಅದರ ಬಗ್ಗೆ ಎರಡು ಚಿಂತನೆ ಮಾಡುವ ಅಗತ್ಯ ಇರುವುದಿಲ್ಲ. ಯೋಜನೆಯನ್ನು ಕೈಗೊಳ್ಳುವ ಮೊದಲೇ ಸಾಕಷ್ಟು ಚಿಂತನೆ ಹಾಗೂ ಸಮಾಲೋಚನೆ ನಡೆಸಿಯೇ ನಿರ್ಧಾರವನ್ನು ಕೈಗೊಳ್ಳುವ ವ್ಯಕ್ತಿಗಳು ನೀವಾಗಿರುತ್ತೀರಿ. ಹಾಗಾಗಿ ನೀವು ಅಂತಿಮ ನಿರ್ಧಾರಕ್ಕೆ ಬಂದ ಮೇಲೆ ಹಣದ ಹೂಡಿಕೆ ಮಾಡಬಹುದು. ನಿಮಗೆ ಕೆಲವು ವಿಷಯಕ್ಕೆ ಸಂಬಂಧಿಸಿದಂತೆ ಉಡುಗೊರೆ ಹಾಗೂ ಅದೃಷ್ಟವು ನಿಮ್ಮ ಹಿಂದೆಯೇ ಬರುತ್ತವೆ.


  • ವೃಷಭ ರಾಶಿ

    ಏಪ್ರಿಲ್ 20 ರಿಂದ ಮೇ 21ರ ಅವಧಿಯಲ್ಲಿ ಜನಿಸುವವರು ವೃಷಭ ರಾಶಿಯವರಾಗಿರುತ್ತಾರೆ. ಯುರೇನಸ್ ಗ್ರಹದ ಪ್ರಭಾವ ಹಾಗೂ ಭೂಮಿಯ ಚಿಹ್ನೆಯನ್ನು ಹೊಂದಿರುವ ಏಕೈಕ ರಾಶಿ ವೃಷಭ. ಹಾಗಾಗಿ ಇವರು ವರ್ಷದ ಆರಂಭದಲ್ಲಿ ಕೊಂಚ ಆತಂಕ ಹಾಗೂ ತೊಂದರೆಯನ್ನು ಅನುಭವಿಸಬಹುದು. ಆದರೆ ಹಠಾತ್ ಬದಲಾವಣೆಯಿಂದ ಸ್ಥಿತಿಗಳು ಉತ್ತಮ ಬದಲಾವಣೆಯನ್ನು ಕಂಡುಕೊಳ್ಳುತ್ತವೆ.

    ಅನಿರೀಕ್ಷಿತವಾಗಿ ಉಂಟಾಗುವ ಬದಲಾವಣೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಗುರು ಮತ್ತು ಶನಿಯು ನಿಮಗೆ ಉತ್ತಮ ಅದೃಷ್ಟವನ್ನು ತಂದುಕೊಡಲು ಸಹಾಯ ಮಾಡುತ್ತವೆ. ಪ್ರೀತಿಯ ವಿಷಯದಲ್ಲಿ 2020ರ ವರ್ಷ ಅತ್ಯುತ್ತಮ ಅದೃಷ್ಟವನ್ನು ತಂದುಕೊಡುತ್ತದೆ. ಹೊಸ ವ್ಯಕ್ತಿಯ ಭೇಟಿಯು ನಿಮಗೆ ಲಾಭವನ್ನು ತಂದುಕೊಡುವುದು. ಆತ್ಮೀಯರು ಹಾಗೂ ಪ್ರೇಮಿಯಿಂದ ಆಳವಾದ ಪ್ರೀತಿ ದೊರೆಯುವುದು. ನಿಮ್ಮ ಆರ್ಥಿಕ ಜೀವನವು ಅದ್ಭುತ ಬದಲಾವಣೆಯನ್ನು ತಂದುಕೊಡುತ್ತದೆ.


  • ಸಿಂಹ ರಾಶಿ

    ಜುಲೈ 22ರಿಂದ ಆಗಸ್ಟ್ 23ರ ಅವಧಿಯಲ್ಲಿ ಜನಿಸಿದವರು ಸಿಂಹ ರಾಶಿಯನ್ನು ಹೊಂದಿರುತ್ತಾರೆ. ಸಿಂಹ ರಾಶಿಯ ವ್ಯಕ್ತಿಗಳು ಯಾವುದೇ ಶ್ರಮವಿಲ್ಲದೆಯೇ ಎಲ್ಲರ ಗಮನವನ್ನು ಕೇಂದ್ರೀಕರಿಸುವ ವ್ಯಕ್ತಿಗಳಾಗಿರುತ್ತಾರೆ. ಕಾಂತಿಯವಾದ ವ್ಯಕ್ತಿತ್ವ ಹಾಗೂ ಸ್ವಭಾವವು ಎಲ್ಲರ ಗಮನ ಸೆಳೆಯುವುದು. ಇವರನ್ನು ಇತರರು ಸುಲಭವಾಗಿ ಮೆಚ್ಚಿಕೊಳ್ಳುತ್ತಾರೆ. ಅಂತೆಯೇ ಇವರನ್ನು ಅಸಹನೀಯವಾಗಿ ಕಾಣುವುದು ಸಹ ಅವರಿಗೆ ಅಷ್ಟೇ ಕಷ್ಟದ ಸಂಗತಿಯಾಗಿರುತ್ತದೆ.

    ಈ ರಾಶಿಯವರು ಸದಾ ಉತ್ಸುಕರು ಹಾಗೂ ಗೆಲುವಿನ ಮನೋಭಾವ ಹೊಂದಿದವರಾಗಿರುವುದರಿಂದ ಅದೃಷ್ಟದ ಚಿಹ್ನೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇವರು ಕೈಗೊಂಡ ಪ್ರತಿಯೊಂದು ಯೋಜನೆಯಲ್ಲೂ ಅಧಿಕ ಶ್ರಮವನ್ನು ವಿನಿಯೋಗಿಸುವುದರ ಮೂಲಕ ಸಾಧನೆಯನ್ನು ಮಾಡುತ್ತಾರೆ. 2020ರಲ್ಲಿ ಆಶ್ಚರ್ಯಕರವಾದಂತಹ ಅದ್ಭುತ ಆರೋಗ್ಯ ಸ್ಥಿತಿಯನ್ನು ಪಡೆದುಕೊಳ್ಳುವರು. ವೃತ್ತಿ ಕ್ಷೇತ್ರದಲ್ಲಿ ಉತ್ತಮ ಅವಕಾಶ ಹಾಗೂ ಪ್ರೀತಿಯ ಜೀವನದಲ್ಲಿ ಸಂಗಾತಿಯೊಂದಿಗೆ ಅಥವಾ ಪ್ರೇಮಿಯೊಂದಿಗೆ ಸುಗಮವಾದ ಸಂಬಂಧವನ್ನು ಹೊಂದಿರುತ್ತಾರೆ.


  • ಧನು ರಾಶಿ

    ನವೆಂಬರ್ 22 ರಿಂದ ಡಿಸೆಂಬರ್ 21ರ ಅವಧಿಯಲ್ಲಿ ಜನಿಸಿದವರು ಧನು ರಾಶಿಯ ವ್ಯಕ್ತಿಗಳು ಎಂದು ಹೇಳಲಾಗುವುದು. ಧನು ರಾಶಿಯು ಅತ್ಯಂತ ಸಾಹಸ ಚಿಹ್ನೆಗಳಲ್ಲಿ ಒಂದು. ಇವರು ಆಳವಾದ ಕಾಲ್ಪನಿಕ ಚಿಂತನೆಯನ್ನು ನಡೆಸುತ್ತಾರೆ. ಇವರು ಏನನ್ನು ಬಯಸುತ್ತಾರೆ ಅಥವಾ ಏನನ್ನು ಸಾಧಿಸಲು ಚಿಂತಿಸುತ್ತಾರೆ ಎನ್ನುವುದಕ್ಕೆ ಯಾವುದೇ ಗಡಿಯಿಲ್ಲ. ಅವರ ಈ ಬಗೆಯ ಆಲೋಚನೆಯೇ ಬಹುತೇಕ ಸಂದರ್ಭದಲ್ಲಿ ಸಹಾಯವಾಗುತ್ತದೆ. ಇವರು ತಮಗೆ ಯಾವುದೇ ನಿರ್ಬಂಧಗಳನ್ನು ಹಾಕಿಕೊಳ್ಳಲು ಬಯಸುವುದಿಲ್ಲ.

    2020ರ ವರ್ಷವು ಇವರ ಗುರಿ ಸಾಧಿಸಲು ಹಾಗೂ ಅಂದುಕೊಂಡ ಯೋಜನೆಯನ್ನು ಸುಲಭವಾಗಿ ಕೈಗೊಳ್ಳಲು ಸಹಾಯ ಮಾಡುತ್ತದೆ. ಇಷ್ಟು ದಿನಗಳ ಕಾಲ ಅನುಭವಿಸಿದ ತೊಂದರೆಗಳು ಹಾಗೂ ಹಿಂಸೆಗಳು ದೂರವಾಗುತ್ತವೆ. ಇವರು 2020ರಲ್ಲಿ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಅಸಂಖ್ಯಾತ ಪ್ರಯೋಜನಗಳನ್ನು ಪಡೆದುಕೊಳ್ಳುವರು. ಅಂತೆಯೇ ಅವರು ಇಷ್ಟಪಡುವಂತೆ ಸುಂದರ ಪ್ರಯಾಣಗಳನ್ನು ಅನುಭವಿಸುವರು.




ಹೊಸ ವರ್ಷ ಎನ್ನುವುದು ಎಲ್ಲರಿಗೂ ಒಂದು ಬಗೆಯ ವಿಶೇಷ ಸಂಭ್ರಮವನ್ನು ಮೂಡಿಸುತ್ತದೆ. ಪ್ರಸ್ತುತ ಸ್ಥಿತಿಗಿಂತ ಮುಂದಿನ ದಿನದಲ್ಲಾದರೂ ಕೊಂಚ ಬದಲಾವಣೆ ಹಾಗೂ ಸಂತೋಷ ದೊರೆಯಬಹುದು ಎನ್ನುವ ನಿರೀಕ್ಷೆ ಇರುತ್ತದೆ. ಗ್ರಹಗತಿಗಳ ಬದಲಾವಣೆ ಹಾಗೂ ನಕ್ಷತ್ರಗಳ ಪ್ರಭಾವವೂ ಅವರ ಚಲನೆ ಹಾಗೂ ಸ್ಥಾನ ಬದಲಾವಣೆಯಿಂದ ವಿಶೇಷ ಬದಲಾವಣೆ ಉಂಟಾಗುವುದು. ಅವು ಮನುಷ್ಯನ ಜೀವನದಲ್ಲಿ ಮಹತ್ತರವಾದ ಬದಲಾವಣೆಯನ್ನು ತರುತ್ತವೆ ಎಂದು ನಂಬಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2020ರಲ್ಲಿ ಕೆಲವು ಗ್ರಹಗಳು ಹಾಗೂ ನಕ್ಷತ್ರಗಳು ವಿಶೇಷ ಚಲನೆಯನ್ನು ಕೈಗೊಳ್ಳುತ್ತವೆ. ಅವು ಒಂದು ಮನೆಯಿಂದ ಇನ್ನೊಂದು ಮನೆಗೆ ವಿಭಿನ್ನ ಬದಲಾವಣೆ ಹಾಗೂ ಪರಿಣಾಮಗಳನ್ನು ಉಂಟುಮಾಡುತ್ತವೆ. ಅವು ಮನುಷ್ಯರ ಮೇಲೆ ನೇರ ಪ್ರಭಾವ ಬೀರುವವು. ಅವುಗಳಿಂದಾಗಿ ವ್ಯಕ್ತಿ ಆರೋಗ್ಯ, ಜೀವನ, ಸಂಗಾತಿ, ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಮನಾರ್ಹ ತೊಂದರೆ ಅಥವಾ ಅದೃಷ್ಟಗಳು ಉಂಟಾಗಬಹುದು.

2020ರಲ್ಲಿ ಉಂಟಾಗುವ ಖಗೋಳ ಕಾಯಗಳ ಬದಲಾವಣೆಯು ದ್ವಾದಶ ರಾಶಿಗಳ ಮೇಲೆ ಸಾಕಷ್ಟು ಪರಿಣಾಮಕಾರಿ ಪ್ರಭಾವ ಬೀರುತ್ತವೆ. ಅವುಗಳಲ್ಲಿ ಮಕರ, ಕನ್ಯಾ, ವೃಷಭ, ಸಿಂಹ, ಧನು ರಾಶಿಯವರು ಅತ್ಯುತ್ತಮ ಅದೃಷ್ಟವನ್ನು ಪಡೆದುಕೊಳ್ಳುವರು. ಇವರು ತಮ್ಮ ಅದೃಷ್ಟದಿಂದಾಗಿ ಜೀವನದಲ್ಲಿ ಸಾಕಷ್ಟು ಉನ್ನತ ಸ್ಥಾನವನ್ನು ಪಡೆದುಕೊಳ್ಳುವರು ಎಂದು ಅಂದಾಜಿಸಲಾಗಿದೆ. ಹಾಗಾದರೆ ಇವರ ಅದೃಷ್ಟ ಹೇಗಿದೆ ಎನ್ನುವುದನ್ನು ನೀವು ತಿಳಿದುಕೊಳ್ಳುವ ಕುತೂಹಲ ಹೊಂದಿದ್ದರೆ, ಲೇಖನದ ಮುಂದಿನ ಭಾಗ ಸಾಕಷ್ಟು ವಿವರಣೆಯನ್ನು ನೀಡುವುದು.

   
 
ಟೆಕ್ನಾಲಜಿ