Back
Home » ಬಾಲಿವುಡ್
ನನಗೆ ಇಷ್ಟವಾದ ಆ ವಸ್ತುವನ್ನು ಯಾವ ಬಾಯ್ ಫ್ರೆಂಡ್ ಕೊಟ್ಟಿಲ್ಲ: ಇಲಿಯಾನ
Oneindia | 21st Oct, 2019 04:00 PM
 • ಶಿಬಾನಿ ದಾಂಡೇಕರ್ ಜೊತೆ ಇಲಿಯಾನ

  'ಹಲವು ಜನ ಬಾಯ್ ಫ್ರೆಂಡ್ ಇದ್ದರೂ, ನನ್ನದೊಂದು ಚಿಕ್ಕ ಕೋರಿಕೆಯನ್ನ ಯಾರೊಬ್ಬರು ಈಡೇರಿಸಿಲ್ಲ' ಎಂದು ಇಲಿಯಾನ ಹೇಳಿಕೊಂಡಿದ್ದಾರೆ. ಶಿಬಾನಿ ದಾಂಡೇಕರ್ ನಿರೂಪಣೆ ಮಾಡುತ್ತಿರುವ 'ದಿ ಲವ್ ಲಾಫ್ ಲೈಫ್' ಕಾರ್ಯಕ್ರಮದಲ್ಲಿ ಇಲಿಯಾನ ಭಾಗವಹಿಸಿದ್ದು, ಹಲವು ವಿಷಯಗಳನ್ನ ಈ ಕಾರ್ಯಕ್ರಮದಲ್ಲಿ ಚರ್ಚಿಸಲಾಗಿದೆ.

  ಬಿಟೌನ್ ಮಂಚದ ಸಂಸ್ಕೃತಿ ರಹಸ್ಯ ಬಿಚ್ಚಿಟ್ರು ಇಲಿಯಾನಾ


 • ಹೂವು ಅಂದ್ರೆ ತುಂಬಾ ಇಷ್ಟ

  ''ನನಗೆ ಹೂವು ಅಂದ್ರೆ ತುಂಬಾ ಇಷ್ಟ. ನಾನು ಬಹಳ ಜನರ ಜೊತೆ ಡೇಟಿಂಗ್ ಮಾಡಿದ್ದೀನಿ. ಆದರೆ ಯಾರು ಕೂಡ ನನಗೆ ಉಡುಗೊರೆಯಾಗಿ ಹೂವು ನೀಡಿಲ್ಲ. ನನಗೆ ನೆನಪಿರುವಾಗೆ, ನನ್ನ ತಂದೆ ಮಾತ್ರ ಇಂತಹ ಗಿಫ್ಟ್ ಕೊಟ್ಟಿದ್ದಾರೆ. ಅದಕ್ಕೂ ಮಿಗಿಲಾಗಿ ಯಾವ ಉಡುಗೊರೆಯೂ ನನಗೆ ಸಿಕ್ಕಿಲ್ಲ'' ಎಂದು ಇಲಿಯಾನ ಹೇಳಿಕೊಂಡಿದ್ದಾರೆ.


 • ಆ ಮೂವರು ನನಗೆ ಆಪ್ತರು

  ಬಾಲಿವುಡ್ ನಲ್ಲಿ ಯಾರ ಜೊತೆ ನಟಿಸಲು ಇಷ್ಟ ಪಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಲಿಯಾನ, ''ನನಗೆ ನರ್ಗಿಸ್ ಫಕ್ರಿ ಅಂದ್ರೆ ಬಹಳ ಇಷ್ಟ. ಆಕೆಯ ಜೊತೆ ನನಗೆ ಉತ್ತಮ ಬಾಂಧವ್ಯ ಇದೆ. ನಾವಿಬ್ಬರು ಕ್ಲೋಸ್ ಫ್ರೆಂಡ್ಸ್. ನಟ ಅರ್ಷಾದ್ ವಾರ್ಸಿ ಮತ್ತು ವರುಣ್ ಧವನ್ ಜೊತೆಯಲ್ಲೂ ನನಗೆ ಒಳ್ಳೆಯ ಸ್ನೇಹವಿದೆ'' ಎಂದು ತಿಳಿಸಿದ್ದಾರೆ.

  ವಿದೇಶಿ ಬಾಯ್ ಫ್ರೆಂಡ್ ಜೊತೆ ಸಂಬಂಧ ಮುರಿದುಕೊಂಡ್ರಾ ಇಲಿಯಾನಾ?


 • ನಾನು ನಟಿಯಾಗಲು ಬಯಸಿರಲಿಲ್ಲ

  ''ನಾನು ನಟಿಯಾಗಬೇಕು ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ನನಗೆ ಮೊದಲಿನಿಂದಲೂ ಗಾಯನದ ಮೇಲೆ ಹೆಚ್ಚು ಆಸಕ್ತಿ. ಬಹುಶಃ ನಾನು ಸಿಂಗರ್ ಆಗಬೇಕಿತ್ತು. ಆಕಸ್ಮಾತ್ ಆಗಿ ನಟನೆ ಆರಂಭಿಸಿದೆ. ನಟಿಯಾಗುತ್ತಿರಲಿಲ್ಲ ಅಂದಿದ್ದರೇ ನಾನು ಗಾಯಕಿಯಾಗಿರುತ್ತಿದ್ದೆ'' ಎಂದು ತಮ್ಮ ಮೊದಲ ಆಯ್ಕೆ ಯಾವುದಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ.


 • ಎರಡು ಚಿತ್ರದಲ್ಲಿ ನಟನೆ

  ಕಳೆದ ವರ್ಷ ತೆಲುಗಿನ 'ಅಮರ್ ಅಕ್ಬರ್ ಆಂಟೋನಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಇಲಿಯಾನ, ಹಿಂದಿಯಲ್ಲಿ ಎರಡು ಸಿನಿಮಾ ಮಾಡ್ತಿದ್ದಾರೆ. 'ಪಾಗಲ್ ಪಂತಿ' ಮತ್ತು 'ದಿ ಬಿಗ್ ಬುಲ್' ಎಂಬ ಸಿನಿಮಾದಲ್ಲಿ ಇಲಿಯಾನ ನಟಿಸುತ್ತಿದ್ದಾರೆ.
ದಕ್ಷಿಣ ಸಿನಿ ಪ್ರಪಂಚದಲ್ಲಿ ಸ್ಟಾರ್ ನಟಿಯಾಗಿ ಮೆರೆದ ಇಲಿಯಾನಾ, ಆಮೇಲೆ ಬಾಲಿವುಡ್ ಕಡೆ ಮುಖ ಮಾಡಿದರು. ಸೌತ್ ಇಂಡಸ್ಟ್ರಿಯಿಂದ ದೂರವಾದ ನಟಿ, ಈಗ ಬಾಲಿವುಡ್ ನಲ್ಲಿ ಖಾಯಂ ಸ್ಥಾನ ಪಡೆಯದೆ ಒದ್ದಾಡುತ್ತಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡುತ್ತಾ ಶಾಶ್ವತವಾಗಿ ನೆಲೆ ಕಾಣಲು ಹರಸಾಹಸ ಪಡುತ್ತಿದ್ದಾರೆ.

ವಿದೇಶಿ ಫೋಟೋಗ್ರಫರ್ ಜೊತೆ ಪ್ರೀತಿಯಲ್ಲಿದ್ದ ಇಲಿಯಾನಾ, ಇತ್ತೀಚಿಗಷ್ಟೆ ಆ ಸಂಬಂಧವನ್ನ ಮುರಿದುಕೊಂಡಿದ್ದರು. ಇದೀಗ, 'ದಿ ಲವ್ ಲಾಫ್ ಲೈಫ್' ಶೋನಲ್ಲಿ ಭಾಗವಹಿಸಿದ ಪೋಕಿರಿ ಬೆಡಗಿ ತನ್ನ ಖಾಸಗಿ ಜೀವನದ ಕೆಲವು ಗೊತ್ತಿಲ್ಲದ ಸಂಗತಿಗಳನ್ನ ಹೊರಹಾಕಿದ್ದಾರೆ.

ಬಾಯ್ ಫ್ರೆಂಡ್ ತುಟಿಗೆ ತುಟಿ ಒತ್ತಿದ ನಟಿ ಇಲಿಯಾನಾ ಫೋಟೋ ಸಖತ್ ವೈರಲ್!

ಡೇಟಿಂಗ್, ಬಾಯ್ ಫ್ರೆಂಡ್, ಲವ್, ಗಿಫ್ಟ್, ಸಿನಿಮಾ ಹೀಗೆ ಎಲ್ಲ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಹಲವು ಬಾಯ್ ಫ್ರೆಂಡ್ ಗಳು ಇದ್ದರೂ ನನ್ನದೊಂದು ಆಸೆ ಈಡೇರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

   
 
ಟೆಕ್ನಾಲಜಿ