Back
Home » ಸಮ್ಮಿಲನ
ಕಠುಮಾತಿನಿಂದಲೇ ಮುಖಕ್ಕೆ ಹೊಡೆದಂತೆ ಮಾತನಾಡುವ ರಾಶಿಯಗಳಿವರು
Boldsky | 19th Oct, 2019 03:08 PM
 • 1. ಕನ್ಯಾರಾಶಿ (ಆಗಸ್ಟ್ 23 - ಸೆಪ್ಟೆಂಬರ್ 22)

  ಕನ್ಯಾರಾಶಿಯವರು ಸೂಕ್ಷ್ಮಸಂವೇದಿಗಳಾಗಿರಬಹುದು ಮತ್ತು ಸಹಾನುಭೂತಿಯುಳ್ಳವರೂ ಆಗಿದ್ದಾರು, ಆದರೆ ಕೆಲ ಸಂದರ್ಭಗಳಲ್ಲಿ ಅವರು ನಿಮ್ಮ ಭಾವನೆಗಳನ್ನೂ ನುಚ್ಚುನೂರಾಗಿಸಿಬಿಡುತ್ತಾರೆ. ಮನಸ್ಸನ್ನು ಛಿದ್ರಗೊಳಿಸುವ ದಿಶೆಯಲ್ಲಿ ಈ ರಾಶಿಯವರಿಗೆ ಸ್ವಭಾವತ: ಕರಗತವಾಗಿರುವಂತೆ ಕಂಡುಬಂದರೂ ಅಚ್ಚರಿಯಿರಲಾರದು, ಹಾಗಿರುತ್ತದೆ ಅವರ ಮಾತಿನ ಕಠುವರಸೆ!

  ತಮ್ಮ ಬಗ್ಗೆಯೂ ಸೇರಿದಂತೆ ಇತರರ ಬಗ್ಗೆಯೂ ಈ ರಾಶಿಯವರು ತೀರಾ ಕಠುವಾಗಿಯೇ ವರ್ತಿಸುತ್ತಾರೆ. ಈ ರಾಶಿಯವರು ಇತರರ ಬಗ್ಗೆ ಕಟುವಾಗಿ, ಕುಟುಕುವಂತೆಯೂ ಹಾಗೂ ತಾತ್ಸಾರದ ಮನೋಭಾವದಿಂದಲೂ ಇರುವಂತೆ ಕಂಡುಬಂದರೂ ಅಚ್ಚರಿಯೇನಲ್ಲ. ಈ ರಾಶಿಯವರ ವ್ಯಕ್ತಿತ್ವದ ಮತ್ತೊಂದು ಋಣಾತ್ಮಕ ಅಂಶವೆಂದರೆ ಇವರು ಕಟುವಾದ ಟೀಕೆ ಟಿಪ್ಪಣಿಗಳನ್ನು ಮಾಡುವ ಪ್ರವೃತ್ತಿಯುಳ್ಳವರಾಗಿದ್ದರೂ ಎಲ್ಲಾ ವಿಷಯಗಳಲ್ಲಿಯೂ ಪರಿಪೂರ್ಣತೆಯನ್ನೇ ನೋಡುವ ಒರಟು ಸ್ವಭಾವದವರೂ ಆಗಿರುತ್ತಾರೆ.


 • 2. ಸಿಂಹ (ಜುಲೈ 23 - ಆಗಸ್ಟ್ 22)

  ಸಿಂಹ ರಾಶಿಯವರ ಸ್ನೇಹಶೀಲ ಹಾಗೂ ಉದಾತ್ತ ಮನೋಭಾವದವವನ್ನು ನೋಡಿರುವವರಿಗೆ ಅವರು ಕಡ್ಡಿಮುರಿದಂತೆ ಮಾತನಾಡುವ ಸನ್ನಿವೇಶವನ್ನೂ ಊಹಿಸುವುದಕ್ಕೂ ಸಾಧ್ಯವಾಗಲಿಕ್ಕಿಲ್ಲ. ತೀಕ್ಷ್ಣಸ್ವರೂಪದ ಕಟು ಟೀಕೆಗಳನ್ನು ಹೊರಹಾಕುವ ಸಾಮರ್ಥ್ಯವನ್ನು ಸಿಂಹ ರಾಶಿಯಲ್ಲಿ ಜನಿಸಿರುವವರಿಗೆ ಖಂಡಿತಾ ಇದ್ದೇ ಇದೆ. ಜನರು ತಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಇಲ್ಲವೆಂದು ಈ ರಾಶಿಯವರಿಗೇನಾದರೂ ಅನ್ನಿಸಿದಲ್ಲಿ, ಅವರು ಬಹಳ ಗಂಭೀರ, ಸ್ವ-ಕೇಂದ್ರಿತ ಅಥವಾ ಅಸಹಿಷ್ಣುಗಳು ಆಗುವ ಸಾಧ್ಯತೆ ಹೆಚ್ಚಿದೆ. ತಾವೇನನ್ನು ಯೋಚಿಸುತ್ತಿದ್ದೇವೆ ಹಾಗೂ ತಮ್ಮ ಭಾವನೆ ಏನು ಎಂಬುದನ್ನು ಬಹಿರಂಗಪಡಿಸಲು ಸಿಂಹ ರಾಶಿಯವರು ಹಿಂಜರಿಯಲಾರರು. ಆರಂಭದಲ್ಲಿ ಸಾಕಷ್ಟು ತಾಳ್ಮೆ ವಹಿಸುವ ಈ ರಾಶಿಯವರು ನಿಜಕ್ಕೂ ಉಗ್ರಕೋಪಿಷ್ಟರೇ. ಕೆಲವೊಮ್ಮೆ ಅವರ ಕೋಪತಾಪಗಳು ಅವರ ಭಯಾನಕತೆಗಳು ಅವರ ಮಾತಿನ ಮೂಲಕ ಹೊರಹಾಕಲ್ಪಡುತ್ತವೆ ಎಚ್ಚರ!.


 • 3. ವೃಶ್ಚಿಕ (ಅಕ್ಟೋಬರ್ 23 - ನವೆಂಬರ್ 21)

  ವೃಶ್ಚಿಕ ರಾಶಿಯವರನ್ನೊಮ್ಮೆ ಕೆಣಕಿ ನೋಡಿ; ಖಂಡಿತವಾಗಿಯೂ ನಿಮಗವರು ಪ್ರತ್ಯುತ್ತರ ನೀಡದೇ ಬಿಡಲಾರರು. ವೃಶ್ಚಿಕ ರಾಶಿಯವರ ಪ್ರತಿದಾಳಿಯು ನಿರೀಕ್ಷಿತವೇ ಆಗಿರುತ್ತದೆ. ವೃಶ್ಚಿಕ ರಾಶಿಯವರು ಅತೀ ಪ್ರಾಮಾಣಿಕರು, ಅದೆಷ್ಟರಮಟ್ಟಿಗೆ ಎಂದರೆ ಕೆಲವೊಮ್ಮೆ ಇವರ ಪ್ರಾಮಾಣಿಕತೆಯೇ ಅನ್ಯರ ಪಾಲಿಗೆ ನೋವುಂಟು ಮಾಡುತ್ತದೆ. ವೃಶ್ಚಿಕ ರಾಶಿಯವರೇನಾದರೂ ಘಾಸಿಗೊಂಡಲ್ಲಿ, ಅವರು ಇತರರನ್ನೂ ನೆಮ್ಮದಿಯಿಂದ ಇರಲು ಬಿಡುವ ಜಾಯಮಾನದವರಲ್ಲ. ಅವರು ಕೇಡು ಬಯಸಬಹುದು ಅಥವಾ ಅಸಮಾಧಾನಗೊಳ್ಳಬಹುದು. ಆದರೆ ಹಾಗಾದಾಗಲೆಲ್ಲಾ ಅವುಗಳನ್ನು ವ್ಯಕ್ತಪಡಿಸದೇ ಹಾಗೆಯೇ ಒಳಗೇ ಅದುಮಿಟ್ಟುಕೊಳ್ಳುವ ಜಾಯಮಾನದವರು ಅವರಲ್ಲ. ಜೊತೆಗೆ, ವೃಶ್ಚಿಕ ರಾಶಿಯವರು ತೀಕ್ಷ್ಣಸ್ವಭಾವದವರಾಗಿದ್ದು, ಮನಸ್ಸನ್ನು ಮತ್ತಷ್ಟು ಇರಿಯುವ ದಿಶೆಯಲ್ಲಿ ಏನನ್ನು ಹೇಳಬೇಕೆನ್ನುವುದನ್ನು ಚೆನ್ನಾಗಿ ಅರಿತವರಾಗಿರುತ್ತಾರೆ.


 • 4. ಕರ್ಕ (ಜೂನ್ 21 - ಜುಲೈ 22)

  ಸವಿಯಾದ ಮತ್ತು ಸೂಕ್ಷ್ಮಮನಸ್ಥಿತಿಯುಳ್ಳ ಕರ್ಕ ರಾಶಿಯವರು ನಾಲಗೆಯನ್ನು ಮನಸೋಯಿಚ್ಚೆ ಹರಿಬಿಡುವ ಸ್ವಭಾವದವರೂ ಆಗಿರುತ್ತಾರೆಂದರೆ ನಂಬಲು ಬಲು ಕಷ್ಟವಾದೀತು. ಆದರೆ, ವೃಶ್ಚಿಕ ರಾಶಿಯವರಂತೆ ಇವರೂ ಸಹ, ತಾವು ಹೇಗೆ ಇನ್ನೊಬ್ಬರಿಂದ ಘಾಸಿಗೊಂಡರೋ, ಅದೇ ತೀವ್ರತೆಯಲ್ಲಿ ತಮ್ಮ ಹರಿತ ಮಾತಿನ ಮೂಲಕ ಇನ್ನೊಬ್ಬರಿಗೂ ಘಾಸಿಯನ್ನುಂಟು ಮಾಡಲು ಹಿಂಜರಿಯಲಾರರು. ಕಟಕ ರಾಶಿಯವರಿಂದ ಬರುವ ಬಿರುನುಡಿಗಳು ಮತ್ತಷ್ಟು ಘಾತಕವೇ ಆಗಿರುತ್ತವೆ, ಏಕೆಂದರೆ ಅಂತಹ ಬಿರುನುಡಿಗಳು ಕರ್ಕ ರಾಶಿಯವರಿಂದ ಅಷ್ಟರಮಟ್ಟಿಗೆ ಅನಿರೀಕ್ಷಿತದ್ದೇ ಆಗಿರುತ್ತವೆ. ಅವರ ಕೋಪಕ್ಕೆ ಗುರಿಯಾಗುವಂತಹದ್ದು ಏನನ್ನು ನೀವು ಮಾಡಿದಿರೆಂಬ ಸುಳಿವೂ ನಿಮಗೆ ದೊರೆಯದು, ಆದರೆ ಮಾಡಬಾರದ್ದನ್ನೇನೋ ನೀವು ಮಾಡಿದ್ದೀರೆನ್ನುವುದಂತೂ ನಿಮಗೆ ಖಾತ್ರಿಯಾಗುತ್ತದೆ. ಏಕೆಂದರೆ, ಕರ್ಕ ರಾಶಿಯವರು ಏನನ್ನೋ ಕಟುವಾಗಿ ಮಾತನಾಡಿಬಿಡುತ್ತಾರೆ ಮತ್ತು ಅವರು ಹಾಗೆ ಏಕೆ ಮಾತನಾಡಿದರು ಎಂಬುದನ್ನು ಅರಿತುಕೊಳ್ಳುವುದೇ ನಿಮಗೆ ಕಷ್ಟವಾಗಿ ಬಿಡುತ್ತದೆ.


 • 5. ಮೇಷ (ಮಾರ್ಚ್ 21 - ಏಪ್ರಿಲ್ 19)

  ಮೇಷ ರಾಶಿಯವರು ಅತ್ಯಂತ ವಿನೋದ ಪ್ರವೃತ್ತಿಯುಳ್ಳವರೂ ಅತ್ಯಂತ ಸ್ನೇಹಜೀವಿಗಳೂ ಆಗಿರುತ್ತಾರೆಂಬುದೇನೋ ನಿಜ. ಆದರೆ, ಯಾವುದಾದರೊಂದು ವಸ್ತು, ವ್ಯಕ್ತಿ, ವಿಷಯದ ಕಾರಣದಿಂದ ಅವರ ಮನಸ್ಥಿತಿಯು ಹದಗೆಟ್ಟಿತೆಂದರೆ ಯಾವ ಬಗೆಯ ಕೇಡನ್ನುಂಟು ಮಾಡಲೂ ಹಿಂದೇಟು ಹಾಕದಷ್ಟು ಒರಟರಾಗಿಬಿಡುತ್ತಾರೆ. ಮೇಷ ರಾಶಿಯವರ ಮನಸ್ಥಿತಿಯು ಕದಡುವುದು ಬಲು ಬೇಗ ಹಾಗೂ ಅಂತಹ ಮನಸ್ಥಿತಿಯಲ್ಲಿ ಮನಸ್ಸಿಗೆ ನಾಟುವಂತಹ ಮಾತನ್ನು ಹೇಳಿಬಿಡುವರು ಹಾಗೂ ಪರಿಣಾಮವನ್ನೂ ಲೆಕ್ಕಿಸದೇ ಪ್ರತಿಕ್ರಿಯಿಸುವ ರೀತಿಯೇ ಭಯಾನಕ.
"ಕೆನ್ನೆಗೆ ಬಾರಿಸಿದಂತೆ ಮಾತನಾಡುತ್ತಾರೆ" ಅಥವಾ "ಮುಖಕ್ಕೆ ಹೊಡೆದಂತೆ ಮಾತನಾಡುವವರು" ಎಂದು ನೀವು ಎಂದಾದರೂ ಹೇಳಿದ್ದೀರಾ?. ಕಟುಟೀಕೆ ಮಾಡುವ ಸ್ವಭಾವವರು, ವ್ಯಂಗ್ಯವಾಗಿ ಮಾತನಾಡುವವರು, ಕಠಿಣವಾಗಿ ಮಾತನಾಡುವವರು, ಬಿರುನುಡಿಗಳನ್ನಾಡುವವರು ಹಾಗೂ ಸೂಕ್ಷ್ಮ ಸಂವೇದನೆ ಇಲ್ಲದವರು ಎಂದೇ ಕುಖ್ಯಾತಿ ಪಡೆಯುವ ಇವರು ಇತರರ ಬಗ್ಗೆ ಚಿಂತಿಸದೇ ಅನಿಸಿದ್ದನ್ನು ಹೊರಹಾಕುತ್ತಾರೆ. ತಮ್ಮ ಬಗ್ಗೆ ಬೇರೆಯವರು ಇತರರು ಏನೆಂದುಕೊಳ್ಳುತ್ತಾರೋ ಎಂಬುದರ ಕುರಿತು ಒಂಚೂರೂ ತಲೆಕೆಡಿಸಿಕೊಳ್ಳಲ್ಲದೇ ಮೆದುಳಿಗೆ ಬಂದದ್ದು ಮಾತಿನ ಮೂಲಕ ಹೊರಹಾಕಲು ಯಾವುದೇ ಮುಜುಗುರವನ್ನೂ ಪಡಲಾರರು.

ಹಾಗೆ ಖಂಡತುಂಡವಾಗಿ, ಕಡ್ಡಿಮುರಿದಂತೆ ನಿಷ್ಟುರವಾಗಿ ಮಾತನಾಡುವುದಕ್ಕೂ ಕೂಡಾ ಬಹಳ ಧೈರ್ಯ ಇರಬೇಕು, ಅಲ್ಲದೇ ಎಲ್ಲವನ್ನೂ ಎದುರಿಸಲು ಹಾಗೂ ಎದುರು ಹಾಕಿಕೊಳ್ಳಲು ಸಿದ್ಧರಿಸುವ ಸ್ವಭಾವ ನಿಮ್ಮದಾಗಿರಬೇಕಾಗುತ್ತದೆ. ಆದರಲ್ಲಿ ಇಂತಹ ಗುಣದವರೇನಾದರೂ ನಿಮ್ಮ ಬಾಸ್ ಆದರೆ ಮುಗಿದೇ ಹೋಯಿತು ಕತೆ, ಇವರು ನಿಮ್ಮೊಡನೆ ಎಂದಿಗೂ ನಯವಾಗಿ ವ್ಯವಹರಿಸಲಾರರು ಹಾಗೂ ನಿಮ್ಮ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಮುಲಾಜಿಲ್ಲದೇ ತಮಗನಿಸಿದ್ದನ್ನು ನೇರವಾಗಿಯೇ ಹೇಳಿಬಿಡುತ್ತಾರೆ.

ನಿಮ್ಮ ವ್ಯಕ್ತಿತ್ವದಲ್ಲೂ ಕಟು ಆಯಾಮವೊಂದಿದ್ದರೆ, ಪ್ರಾಯಶ: ನೀವು ಬುದ್ಧಿವಂತರೇ ಆಗಿರುತ್ತೀರಿ ಮತ್ತು ನೀವು ಮೂರ್ಖರ ಹುಚ್ಚಾಟಗಳನ್ನು ಸಹಿಸಿಕೊಳ್ಳುವವರು ಆಗಿರಲಾರಿರಿ. ನಿಮಗನಿಸಿದ್ದನ್ನು ನೇರವಾಗಿ ಹೇಳಿಬಿಡುವುದೇ ನಿಮಗೆ ಮುಖ್ಯವಾಗಿರುತ್ತದೆ ಹಾಗೂ ಭಾವನೆಗಳನ್ನು ಹಾಗೆಯೇ ಒಳಗೆ ಅದುಮಿಟ್ಟುಕೊಳ್ಳುವುದೆಂದರೆ ಅದು ನಿಮಗೆ ಆಗಿಬರದ ಸಂಗತಿ. ಯಾರನ್ನೇ ಆಗಲೀ ಮುಲಾಜಿಲ್ಲದೇ ಬೊಟ್ಟುಮಾಡಿ ಟೀಕಿಸುವ ಪ್ರವೃತ್ತಿಯವರು ನೀವೆಂದು ಎಲ್ಲರೂ ನಿಮ್ಮ ಕುರಿತು ಭಯಗೊಳ್ಳುತ್ತಾರೆಂದಾದಲ್ಲಿ, ಬಹುಶ: ಅವರೆಲ್ಲರೂ ನಿಮ್ಮಿಂದ ಅಂತರವನ್ನು ಕಾಯ್ದುಕೊಳ್ಳಲು ಮುಂದಾದಾರು.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇಂತಹ ಗುಣಗಳನ್ನು ಹೊಂದಿರುವ ರಾಶಿಚಕ್ರಗಳು ಯಾವುವು ಎಂದು ತಿಳಿಯಬಹುದು. ಯಾವುದೇ ಸಂದರ್ಭಗಳಲ್ಲಿಯೂ ಅಳೆದು ತೂಗಿ ಮಾತನಾಡುವ ಸ್ವಭಾವವಲ್ಲದ ಕೆಲವು ಒರಟು ರಾಶಿಚಕ್ರಗಳ ಬಗ್ಗೆ ತಿಳಿಯಲು ಮುಂದೆ ಓದಿ.

 
ಟೆಕ್ನಾಲಜಿ