Back
Home » ಆರೋಗ್ಯ
ವಿಶ್ವ ಮಕ್ಕಳ ಮೂಳೆ ಮತ್ತು ಕೀಲು ನೋವು ದಿನ: ಮಕ್ಕಳಲ್ಲಿ ಕೀಲುನೋವಿಗೆ ಕಾರಣಗಳು ಮತ್ತು ಪರಿಹಾರ
Boldsky | 19th Oct, 2019 12:46 PM
 • ತೀವ್ರ ಕೀಲು ನೋವು ಎಂದರೇನು?

  ಶೇ.30ರಷ್ಟು ಶಾಲಾ ಮಕ್ಕಳಲ್ಲಿ ದೀರ್ಘಕಾಲಿಕ ಮಾಂಸಖಂಡ ನೋವಿನ ಅನುಭವವಾಗುವುದು ಎಂದು ಅಧ್ಯಯನಗಳು ಹೇಳಿವೆ. ಇದರಲ್ಲಿ ಅರ್ಧದಷ್ಟು ಮಕ್ಕಳಲ್ಲಿನ ನೋವು ತೀವ್ರ ನೋವಿನಿಂದಾಗಿ ಆಗಿರುತ್ತದೆ.

  ತೀವ್ರ ನೋವು ಹೆಚ್ಚಾಗಿ ಮಕ್ಕಳಲ್ಲಿ ಶಾಲೆಗೆ ಮೊದಲು ಅಥವಾ ಹದಿಹರೆಯಕ್ಕೆ ಮೊದಲು ಕಾಣಿಸುವುದು ಮತ್ತು ಹದಿಹರೆಯದ ಬಳಿಕ ಇದು ಮಾಯವಾಗುವುದು. ಈ ನೋವು ಯಾವುದೇ ರೀತಿಯ ಹಾನಿ ಉಂಟು ಮಾಡುವುದಿಲ್ಲ ಮತ್ತು ಯಾವುದೇ ಗಂಭೀರ ಸಮಸ್ಯೆಯ ಲಕ್ಷಣವಲ್ಲ.

  ತೀವ್ರ ನೋವು ಸಾಮಾನ್ಯವಾಗಿ ತೊಡೆ, ಸಣ್ಣ ಸ್ನಾಯುಗಳಲ್ಲಿ ಕಾಣಿಸಿಕೊಳ್ಳುವುದು ಅಥವಾ ಮೊಣಕಾಲಿನ ಹಿಂಭಾಗದಲ್ಲಿ ನೋವು ಬರುವುದು. ಆದರೆ ಕೆಲವೊಂದು ಸಂದರ್ಭದಲ್ಲಿ ಇದು ಕೈಗಳಲ್ಲೂ ಬರಬಹುದು. ಈ ರೀತಿಯ ನೋವು ಹೊಂದಿರುವಂತಹ ಮಕ್ಕಳಲ್ಲಿ ಸೆಳೆತ ಅಥವಾ ಲಘು ಪ್ರಮಾಣದಿಂದ ತೀವ್ರ ನೋವು ಕಾಣಿಸುವುದು. ಮಕ್ಕಳಿಗೆ ತಲೆ ನೋವು, ನಿರ್ಲಕ್ಷಿಸಬೇಡಿ!, ಇದು ಮಾಮೂಲಿ ತಲೆ ನೋವಲ್ಲ!


 • ತೀವ್ರ ನೋವಿನ ಗುಣಲಕ್ಷಣಗಳು

  * ಇದು ಸಂಜೆ ವೇಳೆ ಅಥವಾ ರಾತ್ರಿ ಕಾಣಿಸಿಕೊಂಡು ಬೆಳಗ್ಗೆ ಹಾಗೆ ಮಾಯವಾಗುವುದು.

  * ಈ ನೋವು ನಿದ್ರೆಯಲ್ಲಿರುವ ಮಗುವನ್ನು ಎಚ್ಚರಗೊಳಿಸಬಹುದು.

  * ಒಂದು ಕಾಲಿನ ಬದಲು ಎರಡೂ ಕಾಲಿಗೆ ಬರಬಹುದು.

  * ಇದು ತಾತ್ಕಾಲಿಕವಾಗಿ ಅಥವಾ ಕೆಲವು ರಾತ್ರಿಗಳಲ್ಲಿ ಬಿಡದೆ ಬರಬಹುದು.

  * ಈ ನೋವಿನೊಂದಿಗೆ ತಲೆನೋವು ಅಥವಾ ಹೊಟ್ಟೆನೋವು ಕಾಡಬಹುದು.

  * ಮಕ್ಕಳಲ್ಲಿ ಮೂಳೆಗಳು ಬೆಳವಣಿಗೆ ಆಗುತ್ತಿರುವಂತಹ ಸಂದರ್ಭದಲ್ಲಿ ಈ ನೋವು ಕಾಡುವುದು ಎಂದು ಹೆಚ್ಚಾಗಿ ಜನರು ಭಾವಿಸಿರುವರು. ಆದರೆ ವೈದ್ಯಕೀಯ ವಲಯದ ಪ್ರಕಾರ ಮೂಳೆ ಬೆಳವಣಿಗೆ ವೇಳೆ ನೋವುವಾಗುವಂತಹ ಯಾವುದೇ ಸಾಕ್ಷ್ಯಗಳು ಇಲ್ಲ.

  * ದಿನದಾಟದ ವೇಳೆ ಓಡುವಾಗ, ಜಿಗಿಯುವಾಗ ಮತ್ತು ಹತ್ತುವಾಗ ಮಗುವಿನಲ್ಲಿ ನೋವು ಕಂಡುಬರುವುದು

  * ನಿಶ್ಯಕ್ತಿ, ವಿಶ್ರಾಂತಿಯಿಲ್ಲದ ಕಾಲಿನ ಸಮಸ್ಯೆ, ಕಡಿಮೆ ನೋವಿನ ಅಸಹಿಷ್ಣುತೆ ಅಥವಾ ವಿಟಮಿನ್ ಡಿ ಕೊರತೆಯಿಂದಲೂ ತೀವ್ರ ನೋವು ಬರಬಹುದು.

  ಮಕ್ಕಳಲ್ಲಿ ಕೀಲು ನೋವಿಗೆ ಬೇರೆ ಕಾರಣಗಳು ಏನು?

  ಮಕ್ಕಳಲ್ಲಿ ಕೀಲು ನೋವಿಗೆ ಕೆಲವೊಂದು ಗಂಭೀರ ಸಮಸ್ಯೆಗಳು ಕಾರಣವಾಗಿರಬಹುದು. ಅದೇನೆಂದರೆ...


 • ಜುವೆನೈಲ್ ಇಡಿಯೋಪಥಿಕ್ ಸಂಧಿವಾತ

  ಮಗು ಪದೇ ಪದೇ ಕೀಲು ನೋವಿನ ಬಗ್ಗೆ ದೂರುತ್ತಲಿದ್ದರೆ ಆಗ ಇದು ಜುವೆನೈಲ್ ಇಡಿಯೋಪಥಿಕ್ ಸಂಧಿವಾತ ಅಥವಾ ಜೆಐಎ ಕಾರಣವಾಗಿರಬಹುದು. ಜೆಐಎಯಿಂದಾಗಿ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಗಂಟುಗಳಲ್ಲಿ ನೋವು ಮತ್ತು ಊತ ಕಾಣಿಸಿಕೊಳ್ಳಬಹುದು. ಇದರಿಂದಾಗಿ ಮಕ್ಕಳ ಚಲನೆ ಹಾಗೂ ಶಕ್ತಿ ಮೇಲೆ ಪರಿಣಾಮವಾಗಬಹುದು.

  ಹಲವಾರು ರೀತಿಯ ಜೆಐಎ ನೋವುಗಳು ಇವೆ ಮತ್ತು ಇದರ ಲಕ್ಷಣಗಳು ಭಿನ್ನವಾಗಿರಬಹುದು. ಇದರಿಂದಾಗಿ ವೈದ್ಯರಿಗೂ ಇದನ್ನು ಪತ್ತೆ ಮಾಡುವುದು ತುಂಬಾ ಕಠಿಣ ಕೆಲಸವಾಗಿರುವುದು. ಅದಾಗ್ಯೂ, ಇದನ್ನು ಆರಂಭದಲ್ಲೇ ಪತ್ತೆ ಮಾಡಿದರೆ ಅದಕ್ಕೆ ಚಿಕಿತ್ಸೆ ನೀಡಬಹುದು. ಯಾಕೆಂದರೆ ಜೆಐಎ ಮೂಳೆಯ ಬೆಳವಣಿಗೆ ಮೇಲೆ ಪರಿಣಾಮ ಬೀರುವುದು ಮತ್ತು ಇದರಿಂದಾಗಿ ದೈಹಿಕ ಅಸಮಾನ್ಯತೆ ಕಾಣಿಸಬಹುದು. ಮಾನ್ಸೂನ್ ಕಾಯಿಲೆಗಳಿಂದ ನಿಮ್ಮ ಮಕ್ಕಳನ್ನು ರಕ್ಷಿಸುವುದು ಹೇಗೆ?


 • ಲೂಪಸ್

  ಸಿಸ್ಟಮೆಟಿಕ್ ಲೂಪಸ್ ಎರಿಥೆಮಾಟೋಸಸ್(ಎಸ್ ಎಲ್ ಇ) ಅಥವಾ ಲೂಪಸ್ ಒಂದು ಅಟೋ ಇಮ್ಯೂನ್ ಕಾಯಿಲೆಯಾಗಿದ್ದು, ಇದು ದೇಹದ ಯಾವುದೇ ಅಂಗಾಂಗಕ್ಕೂ ಹಾನಿ ಉಂಟು ಮಾಡಬಹುದು. ಲೂಪಸ್ ಸಣ್ಣ ಮಕ್ಕಳಲ್ಲಿ ಹೆಚ್ಚು ಕಾಣಿಸುವುದಿಲ್ಲ. ಆದರೆ ಹದಿಹರೆಯದ ಮಕ್ಕಳಲ್ಲಿ ಇದು ಕಂಡುಬರುವುದು. ಅದರಲ್ಲೂ ಹದಿಹರೆಯದ ಹುಡುಗಿಯರನ್ನು ಇದು ಕಾಡುವುದು.

  ಲೂಪಸ್ ವಿವಿಧ ರೀತಿಯ ಲಕ್ಷಣಗಳನ್ನು ತೋರಿಸಿಕೊಡಬಹುದು, ವಿಶ್ರಾಂತಿ ಬಳಿಕವೂ ಬಳಲಿಕೆ ಕಂಡುಬರುವುದು. ಕೀಲುಗಳಲ್ಲಿ ನೋವು, ಊತ ಅಥವಾ ಬಿಗಿ ಸೆಳೆತ ಮೂಗು ಅಥವಾ ಸುತ್ತಲಿನ ಭಾಗದ ಚರ್ಮದಲ್ಲಿ ದದ್ದು ಕಾಣಿಸುವುದು

  ಜ್ವರ, ಕೂದಲು ಉದುರುವಿಕೆ, ಲೂಪಸ್ ದೀರ್ಘಾವಧಿಯ ಪರಿಸ್ಥಿತಿಯಾಗಿದೆ ಮತ್ತು ಇದರ ಲಕ್ಷಣಗಳು ತುಂಬಾ ಭಿನ್ನವಾಗಿ ಇರಬಹುದು. ಆರಂಭದಲ್ಲೇ ಇದನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಿದರೆ ಆಗ ಪರಿಸ್ಥಿತಿ ಸುಧಾರಣೆ ಆಗುವುದು.


 • ಲೈಮ್ ಡಿಸೀಸ್

  ಉಣ್ಣಿ ಎಂದು ಕರೆಯಲ್ಪಡುವ ಕೀಟಗಳಿಂದ ಹರಡುವಂತಹ ಬ್ಯಾಕ್ಟೀರಿಯಾ ಸೋಂಕನ್ನು ಲೈಮ್ ಡೀಸಿಸ್ ಎಂದು ಕರೆಯಲಾಗುತ್ತದೆ. ಉಣ್ಣಿಗಳು ಬೊರೆಲಿಯಾ ಬರ್ಗ್ಡೋರ್ಫೆರಿ ಎನ್ನುವ ಬ್ಯಾಕ್ಟೀರಿಯಾವನ್ನು ಸಾಗಿಸುವುದು. ಉಣ್ಣಿ ಮನುಷ್ಯರಿಗೆ ಕಡಿದ ವೇಳೆ ಈ ಬ್ಯಾಕ್ಟೀರಿಯಾವು ಹರಡುವುದು. ಈ ಉಣ್ಣಿಗಳು ಹುಲ್ಲುಗಾವಲು ಪ್ರದೇಶ ಮತ್ತು ಮರಗಳಿರುವ ಕೆಲವೊಂದು ಜಾಗಗಳಲ್ಲಿ ಬೆಳೆಯುವುದು. ಜಿಂಕೆ ಮತ್ತು ಇಲಿಗಳ ಮೇಲೆ ಇದು ವಾಸಿಸುತ್ತದೆ.

  ಲೈಮ್ ಡಿಸೀಸ್ ನ ಲಕ್ಷಣಗಳು :

  ಉಣ್ಣಿ ಕಡಿದ ಜಾಗದಲ್ಲಿ ಚರ್ಮವು ಕೆಂಪಾಗುವುದು ಮತ್ತು ಇದು ಕೆಲವೊಂದು ಸಂದರ್ಭದಲ್ಲಿ ಗೂಳಿಯ ಕಣ್ಣಿನ ದದ್ದು ಎನ್ನುವರು. ನಿಶ್ಯಕ್ತಿ, ಜ್ವರ ಅಥವಾ ಚಳಿ, ಕೀಲು ಕೀಲು ನೋವುಕೀಲು ನೋವುಕೀಲು ನೋವುಕೀಲು ನೋವುಕೀಲು ನೋವುಕೀಲು ಕೀಲು ಅಥವಾ ಸ್ನಾಯು ನೋವು, ಮುಖದ ಪಾರ್ಶ್ವವಾಯು, ಲೈಮ್ ಡಿಸೀಸ್ ಇರುವಂತಹ ಜಾಗದಲ್ಲಿ ಯಾರಾದರೂ ವಾಸಿದರೆ ಆಗ ಈ ಸೋಂಕು ಹರಡುವುದು. ಮನೆಯಿಂದ ಹೊರಗಡೆ ಆಟವಾಡುವಂತಹ ಮಕ್ಕಳಿಗೆ ಇದರ ಅಪಾಯವು ಹೆಚ್ಚಾಗಿರುವುದು.

  ಲೈಮ್ ಡಿಸೀಸ್ ತಡೆಯಲು ಮಕ್ಕಳು ಉದ್ದಗಿನ ಪ್ಯಾಂಟ್ ಮತ್ತು ಉದ್ದ ಕೈ ಅಂಗಿ ಧರಿಸಬೇಕು. ಹೊರಗಡೆ ಆಟವಾಡಿ ಬಂದ ಮಕ್ಕಳ ದೇಹದಲ್ಲಿ ಯಾವುದಾದರೂ ಉಣ್ಣೆ ಕಡಿತದ ಗಾಯವಿದೆಯಾ ಎಂದು ಪೋಷಕರು ಪರೀಕ್ಷೆ ಮಾಡಬೇಕು.

  ಉಣ್ಣೆ ಕಡಿತದ ದದ್ದು ಕಾಣಿಸಲು ಸುಮಾರು ಮೂರು ವಾರಗಳು ಬೇಕಾಗಬಹುದು. ಇದಕ್ಕೆ ಮೊದಲು ಕೀಲು ಕೀಲು ನೋವುಕೀಲು ನೋವುಕೀಲು ನೋವುಕೀಲು ನೋವುಕೀಲು ನೋವುಕೀಲು ಕೀಲು ನೋವು ಕಾಣಿಸುವುದು ಮತ್ತು ಇದು ಮಕ್ಕಳಲ್ಲಿ ಕಂಡುಬರುವ ಏಕೈಕ ಲಕ್ಷಣವಾಗಿದೆ.

  ತೀವ್ರ ರೀತಿಯಲ್ಲಿ ಇದು ಸಮಸ್ಯೆ ಉಂಟು ಮಾಡುವ ಮೊದಲು ಇದನ್ನು ಆರಂಭದಲ್ಲೇ ಪತ್ತೆ ಮಾಡಿ, ಅದಕ್ಕೆ ಚಿಕಿತ್ಸೆ ನೀಡಬೇಕು. ಉಣ್ಣೆ ಮಕ್ಕಳಿಗೆ ಕಡಿದಿದೆ ಎಂದು ಸಂಶಯವಿರುವವರು ವೈದ್ಯರ ಬಳಿಗೆ ತಪಾಸಣೆಗೆ ಕರೆದುಕೊಂಡು ಹೋಗಬೇಕು.


 • ರಕ್ತದ ಕ್ಯಾನ್ಸರ್

  ರಕ್ತದ ಕ್ಯಾನ್ಸರ್ ಮೂಳೆ ಮಜ್ಜೆಗೆಯಲ್ಲಿ ಆರಂಭಗೊಳ್ಳುವುದು. ಮಕ್ಕಳಲ್ಲಿ ಕಂಡುಬರುವಂತಹ ಸಾಮಾನ್ಯ ಕ್ಯಾನ್ಸರ್ ಇದಾಗಿದೆ. ರಕ್ತದ ಕ್ಯಾನ್ಸರ್ ನಿಂದಾಗಿ ಕೀಲು ಕೀಲು ನೋವುಕೀಲು ನೋವುಕೀಲು ನೋವುಕೀಲು ನೋವುಕೀಲು ನೋವುಕೀಲು ಕೀಲು ಮತ್ತು ಮೂಳೆಗಳಲ್ಲಿ ನೋವು ಕಂಡುಬರುವುದು. ಇದರೊಂದಿಗೆ ಇತರ ಕೆಲವು ಲಕ್ಷಣಗಳು ಕಾಣಿಸುವುದು.

  ಲಕ್ಷಣಗಳು ಮತ್ತು ಅದರ ತೀವ್ರತೆಯು ಭಿನ್ನವಾಗಿ ಇರಬಹುದು. ಇದು ರಕ್ತದ ಕ್ಯಾನ್ಸರ್ ನ ವಿಧಕ್ಕೆ ಅನುಗುಣವಾಗಿದೆ ಮತ್ತು ಈ ರೀತಿಯ ಸಮಸ್ಯೆಗಳು ಕಂಡುಬರಬಹುದು.

  ರಕ್ತಹೀನತೆ, ರಕ್ತಸ್ರಾವ ಅಥವಾ ಬೇಗ ಗಾಯವಾಗುವುದು, ಸೋಂಕು ಮತ್ತು ಪದೇ ಪದೇ ಬರುವ ಜ್ವರ, ಹೊಟ್ಟೆ ನೋವು, ಊದಿಕೊಂಡ ದುಗ್ಧರಸ ಗ್ರಂಥಿಗಳು, ಉಸಿರಾಟದ ತೊಂದರೆ

  ಮಕ್ಕಳಲ್ಲಿ ಯಾವ ರೀತಿಯ ರಕ್ತದ ಕ್ಯಾನ್ಸರ್ ಇದೆ ಎನ್ನುವುದನ್ನು ಮೊದಲು ತಿಳಿದುಕೊಂಡ ಬಳಿಕ ವೈದ್ಯರು ಇದಕ್ಕೆ ಚಿಕಿತ್ಸೆ ಸೂಚಿಸುವರು.


 • ತೀವ್ರ ನೋವು ನಿವಾರಣೆ ಹೇಗೆ?

  ತೀವ್ರ ನೋವಿಗೆ ಯಾವುದೇ ರೀತಿಯ ನಿರ್ದಿಷ್ಟ ಚಿಕಿತ್ಸೆಗಳು ಇಲ್ಲ. ಅದಾಗ್ಯೂ, ಕೆಲವೊಂದು ಮನೆಮದ್ದಿನಿಂದ ಮಕ್ಕಳಲ್ಲಿ ನೋವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.

  * ಬಿಸಿನೀರಿನ ಸ್ನಾನ

  ಬಿಸಿ ನೀರಿನಲ್ಲಿ ರಾತ್ರಿ ಮಲಗುವ ಮೊದಲು ಸ್ನಾನ ಮಾಡಿದರೆ ಆಗ ನೋವು ಮತ್ತು ಸೆಳೆತವು ಕಡಿಮೆ ಆಗುವುದು ಮತ್ತು ನಿದ್ರೆಗೆ ಇದು ಸಹಕರಿಸುವುದು.

  * ಮಸಾಜ್

  ನಿಧಾನವಾಗಿ ಮಸಾಜ್ ಮಾಡುವುದು ಅಥವಾ ಬಾಧಿತ ಜಾಗವನ್ನು ಸರಿಯಾಗಿ ಉಜ್ಜುವ ಪರಿಣಾಮವಾಗಿ ಮಕ್ಕಳಿಗೆ ಆರಾಮ ಸಿಗುವುದು. ಮಕ್ಕಳನ್ನು ಅಪ್ಪಿ ಹಿಡಿಯುವುದು ಅಥವಾ ಕಚಕುಳಿ ಮಾಡುವುದು ಕೂಡ ನೆರವಿಗೆ ಬರುವುದು.

  * ಸ್ಟ್ರೆಚಿಂಗ್

  ಹಗಲಿನಲ್ಲಿ ಮಕ್ಕಳು ಕಾಲು ಮತ್ತು ತೊಡೆಸಂಧನ್ನು ಸ್ವಲ್ಪ ಸ್ಟ್ರೆಚ್ ಮಾಡುವ ವ್ಯಾಯಾಮ ಅಭ್ಯಸಿಸಿದರೆ ಅದರಿಂದ ನೋವು ಕಡಿಮೆ ಆಗುವುದು. ಈ ರೀತಿಯ ವ್ಯಾಯಾಮವು ಮಕ್ಕಳಿಗೆ ತುಂಬಾ ಸವಾಲಿನದ್ದಾಗಿರುವುದು. ವೈದ್ಯರಲ್ಲಿ ಯಾವ ರೀತಿಯ ವ್ಯಾಯಾಮ ಒಳ್ಳೆಯದು ಎಂದು ಕೇಳಿನೋಡಿ.

  * ಬಿಸಿ ಶಾಖ

  ಬಿಸಿಯಾದ ಪ್ಯಾಡ್ ಅಥವಾ ಬಿಸಿ ನೀರಿನ ಬಾಟಲಿಯನ್ನು ಬಾಧಿತ ಜಾಗಕ್ಕೆ ಇಡಿ. ನೀರು ಅತೀ ಬಿಸಿಯಾಗಿರಬಾರದು ಮತ್ತು ಚರ್ಮವು ಸುಡದಂತೆ ನೋಡಿಕೊಳ್ಳಿ. ನಿದ್ರೆಯ ವೇಳೆ ಇದನ್ನು ಬಳಸಬೇಡಿ.

  * ನೋವು ನಿವಾರಕ

  ಅಸೆಟಾಮಿನೋಫೆನ್ ಅಥವಾ ಐಬುಪ್ರೊಫೇನ್ ನೋವು ನಿವಾರಕ ಔಷಧಿಗಳು ನೋವು ನಿವಾರಣೆ ಮಾಡಲು ನೆರವಾಗುವುದು. ಈ ವೇಳೆ ಮಕ್ಕಳಿಗೆ ಆಸ್ಪಿರಿನ್ ನೀಡಬಾರದು. ಮಕ್ಕಳಿಗೆ ಆಸ್ಪಿರನ್ ನ್ನು ವೈದ್ಯರು ಕೂಡ ಸಲಹೆ ಮಾಡುವುದಿಲ್ಲ. ನಿಮ್ಮಲ್ಲೂ ಈ ಲಕ್ಷಣಗಳು ಇದೆಯೇ? ಹಾಗಿದ್ದರೆ ನೀವೂ ಹೆಲಿಕಾಪ್ಟರ್ ಪೋಷಕರು!


 • ಯಾವಾಗ ವೈದ್ಯರನ್ನು ಭೇಟಿಯಾಗಬೇಕು

  ಮಕ್ಕಳಲ್ಲಿ ಕಾಲು ನೋವಿಗೆ ತೀವ್ರ ನೋವು ಸಾಮಾನ್ಯ ಕಾರಣವಾಗಿದೆ ಮತ್ತು ಇದು ಕೆಲವು ಸಮಯದ ಬಳಿಕ ಅಂದರೆ ಮಗು ದೊಡ್ಡದಾಗುತ್ತಾ ನೋವು ಮಾಯವಾಗುವುದು. ಆದರೆ ನೋವು ಹಾಗೆ ಉಳಿದಿದ್ದರೆ, ತೀವ್ರವಾಗಿದ್ದರೆ ಮತ್ತು ಅಸಾಮಾನ್ಯವಾಗಿದ್ದರೆ ಆಗ ವೈದ್ಯರನ್ನು ಭೇಟಿಯಾಗಲೇಬೇಕು.

  ಕೀಲು ಕೀಲು ನೋವುಕೀಲು ನೋವುಕೀಲು ನೋವುಕೀಲು ನೋವುಕೀಲು ನೋವುಕೀಲು ಕೀಲು ನೋವಿನ ಜತೆಗೆ ಬೇರೆ ಯಾವುದೇ ಲಕ್ಷಣಗಳು ಕಂಡುಬಂದರೆ ಆಗ ನೀವು ವೈದ್ಯರನ್ನು ಭೇಟಿ ಮಾಡಿ.

  ಗಂಟುಗಳಲ್ಲಿ ಊತ, ಕೆಂಪಾಗುವುದು ಅಥವಾ ಮೆತ್ತಗಾಗುವುದು, ಇತ್ತೀಚಿನ ಗಾಯ, ನಡೆದಾಡಲು ಕಷ್ಟವಾಗುವುದು, ಜ್ವರ, ತೂಕ ಇಳಿಕೆ, ದದ್ದು, ಹಸಿವು ಇಲ್ಲದಿರುವುದು, ನಿಶ್ಯಕ್ತಿ ಮತ್ತು ದುರ್ಬಲತೆ. ವೈದ್ಯರು ಕೆಲವೊಂದು ದೈಹಿಕ ಪರೀಕ್ಷೆ ಮಾಡಿಕೊಂಡು ಇದಕ್ಕೆ ಕಾರಣವೇನೆಂದು ಅವರು ತಿಳಿಯುವರು.


 • ಪೋಷಕರಿಗೆ ಎಚ್ಚರ

  ಮಕ್ಕಳ ಕಾಲು ಅಥವಾ ಕೀಲುಗಳಲ್ಲಿ ನೋವು ಕಾಣಿಸಿಕೊಂಡರೆ ಆಗ ಪೋಷಕರು ತುಂಬಾ ಚಿಂತೆಗೀಡಾಗುವರು. ಶಾಲಾ ಮಕ್ಕಳಲ್ಲಿ ಸಾಮಾನ್ಯವಾಗಿ ಇಂತಹ ನೋವು ಕಂಡುಬರುವುದು ಮತ್ತು ಇದು ಅದಾಗಿಯೇ ಗುಣಮುಖವಾಗುವುದು. ಇದು ವ್ಯಾಯಮ ಹಾಗೂ ಆಟದಿಂದ ಬಂದಿರಬಹುದು.

  ಮೇಲಿನ ಯಾವುದೇ ಲಕ್ಷಣಗಳು ಕಂಡುಬಂದರೆ ಅಥವಾ ಪೋಷಕರಿಗೆ ತುಂಬಾ ಚಿಂತೆಯಾಗಿದ್ದರೆ ಆಗ ಅವರು ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಬಹುದು. ಕೆಲವೊಂದು ಸಂದರ್ಭದಲ್ಲಿ ಇಂತಹ ನೋವಿಗೆ ವೈದ್ಯಕೀಯ ನೆರವು ಬೇಕಾಗಬಹುದು.
ಇಂದು ವಿಶ್ವ ಮಕ್ಕಳ ಮೂಳೆ ಹಾಗೂ ಕೀಲು ನೋವು ದಿನ. ಬಾಲ್ಯದಲ್ಲೇ ಮಕ್ಕಳು ಮೂಳೆಗಳಲ್ಲಿ ಉಂಟಾಗುವ ಕೀಲು ನೋವಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ವಿಶ್ವಾದ್ಯಂತ ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಮಕ್ಕಳ ಮೂಳೆಗಳಲ್ಲಿ ವಿವಿಧ ತೆರನಾದ ಸಮಸ್ಯೆಗಳು, ಅದರ ಲಕ್ಷಣ ಹಾಗೂ ಚಿಕಿತ್ಸೆಗಳ ಬಗ್ಗೆ ಬೆಳಕು ಚೆಲ್ಲುವ ಸಂಬಂಧ ಈ ದಿನ ಬಹಳ ಮಹತ್ವದ ದಿನವಾಗಿದೆ.

ವಿಶ್ವ ಮಕ್ಕಳ ಮೂಳೆ ದಿನದ ವಿಶೇಷ ಮಕ್ಕಳ ಮೂಳೆ ಗಂಟು ನೋವಿಗೆ ಕಾರಣಗಳು-ಪರಿಹಾರದ ಬಗ್ಗೆ ಮುಂದೆ ಲೇಖನದಲ್ಲಿ ವಿವರಿಸಲಾಗಿದೆ.

ಮಕ್ಕಳು ಯಾವಾಗಲೂ ಆಟವಾಡುತ್ತಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕಾರಣದಿಂದಾಗಿ ಅವರು ಬೀಳುವುದು ಹಾಗೂ ಏಳುವುದು ಸಾಮಾನ್ಯವಾಗಿರುವುದು. ಕೆಲವೊಂದು ಸಲ ಬಿದ್ದ ರಭಸಕ್ಕೆ ದೊಡ್ಡ ಮಟ್ಟದ ನೋವು ಕಾಣಿಸಬಹುದು. ಆದರೆ ಇದು ಅಷ್ಟೇ ಬೇಗನೆ ಮಾಯವಾಗುವುದು ಕೂಡ. ಆದರೆ ಪದೇ ಪದೇ ಕಾಲು ನೋವು ಎಂದು ಮಕ್ಕಳು ಹೇಳುತ್ತಿದ್ದರೆ, ಆಗ ಖಂಡಿತವಾಗಿಯೂ ಪೋಷಕರಿಗೆ ತುಂಬಾ ಚಿಂತೆಯಾಗುವುದು. ಈ ನೋವು ಮಕ್ಕಳಲ್ಲಿ ಹೆಚ್ಚಾಗುತ್ತಲಿದ್ದರೆ ಆಗ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಮಕ್ಕಳಲ್ಲಿ ಕಾಣಿಸಿಕೊಳ್ಳುವಂತಹ ಕೀಲು ನೋವಿನ ಕೆಲವು ಲಕ್ಷಣಗಳು ಹಾಗೂ ಅದರ ಚಿಹ್ನೆಗಳ ಬಗ್ಗೆ ತಿಳಿಯಬೇಕು. ಕೆಲವೊಂದು ಸಲ ಮಕ್ಕಳಲ್ಲಿ ಸ್ನಾಯು ಸೆಳೆತದಿಂದಾಗಿ ನೋವು ಕಾಣಿಸಿಕೊಳ್ಳಬಹುದು. ಮೊಣಕಾಲಿನ ಹಿಂಭಾಗದಲ್ಲಿ ಇದು ಕಾಣಿಸುವುದು. ಕಾಲು ಇನ್ನೊಂದು ಕಾರಣವೆಂದರೆ ಜುವೆನೈಲ್ ಇಡಿಯೋಪಥಿಕ್ ಸಂಧಿವಾತ(ಜೆಐಎ), ಲೂಪಸ್, ಲೈಮ್ ಡಿಸೀಸ್ ಮತ್ತು ರಕ್ತದ ಕ್ಯಾನ್ಸರ್ ಆಗಿರಬಹುದು.

ಮಕ್ಕಳಲ್ಲಿ ಹೆಚ್ಚಾಗುತ್ತಿರುವ ನೋವು ಎಂದರೇನು ಮತ್ತು ಇದಕ್ಕೆ ಮನೆಯಲ್ಲೇ ಹೇಗೆ ಚಿಕಿತ್ಸೆ ನೀಡಬಹುದು ಎಂದು ನಾವು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಮಕ್ಕಳಲ್ಲಿ ಕಾಣಿಸುವಂತಹ ಕೀಲು ನೋವಿಗೆ ಬೇರೆ ಕಾರಣಗಳ ಬಗ್ಗೆ ಕೂಡ ನಾವು ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ.

   
 
ಟೆಕ್ನಾಲಜಿ