Back
Home » ಬಾಲಿವುಡ್
'ದಬಾಂಗ್' ಬಳಿಕ ಸಲ್ಮಾನ್ ಖಾನ್ ಹೊಸ ಸಿನಿಮಾ 'ರಾಧೇ'
Oneindia | 18th Oct, 2019 08:12 PM

ಸಲ್ಮಾನ್ ಖಾನ್ ಅಭಿನಯದ ದಬಾಂಗ್-3 ಸಿನಿಮಾ ಇದೇ ಡಿಸೆಂಬರ್ ತಿಂಗಳಲ್ಲಿ ತೆರೆಗೆ ಬರ್ತಿದೆ. ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಚಿತ್ರಮಂದಿರಕ್ಕೆ ಬರಲಿರುವ ಈ ಚಿತ್ರಕ್ಕಾಗಿ ಸಲ್ಲು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.

ಪ್ರಭುದೇವ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಖಳನಟನಾಗಿ ನಟಿಸಿದ್ದಾರೆ. ಸೋನಾಕ್ಷಿ ಸಿನ್ಹಾ ನಾಯಕಿಯಾಗಿದ್ದಾರೆ. ಇದೀಗ, ಪ್ರಭುದೇವ ಮತ್ತೊಂದು ಚಿತ್ರವನ್ನ ಸಲ್ಮಾನ್ ಖಾನ್ ಜೊತೆ ಮಾಡುತ್ತಿದ್ದಾರೆ.

ಸಲ್ಮಾನ್ ಖಾನ್ ಬಾಡಿಗಾರ್ಡ್ ತಿಂಗಳ ಸಂಬಳ ಇಷ್ಟೊಂದಾ..!

ಈ ಚಿತ್ರಕ್ಕೆ 'ರಾಧೇ: ಯೂ ಆರ್ ಮೋಸ್ಟ್ ವಾಂಟೆಡ್ ಭಾಯ್' ಎಂದು ಹೆಸರಿಟ್ಟಿದ್ದು, ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ವಾಂಟೆಡ್, ದಬಾಂಗ್ 3 ಸಿನಿಮಾ ಬಳಿಕ ಮೂರನೇ ಸಲ ಈ ಕಾಂಬಿನೇಷನ್ ಒಂದಾಗುತ್ತಿದೆ.

ಬನ್ಸಾಲಿ ಚಿತ್ರದಿಂದ ಸಲ್ಮಾನ್ ಹೊರಬರಲು ಆಲಿಯಾ ಜೊತೆಗಿನ 'ಆ ಸೀನ್' ಕಾರಣ.!

ರಾಧೇ ಚಿತ್ರದಲ್ಲು ಸಲ್ಲು ಭಾಯ್ ಪೊಲೀಸ್ ಆಗಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ಮುಂದಿನ ವರ್ಷ ಈದ್ ಹಬ್ಬಕ್ಕೆ ತೆರೆಗೆ ಬರಲಿದೆ ಎಂದು ಸಲ್ಲು ಅಧಿಕೃತವಾಗಿ ಪ್ರಕಟ ಮಾಡಿದ್ದಾರೆ. ನವೆಂಬರ್ ತಿಂಗಳಿನಿಂದ ಈ ಸಿನಿಮಾ ಆರಂಭವಾಗುತ್ತಿದ್ದು, ಕೊರಿಯನ್ ಚಿತ್ರದ ರೀಮೇಕ್ ಆಗಿದೆ.

ಸಲ್ಮಾನ್ ಖಾನ್ ಗೆ ಜೋಡಿಯಾಗಿ ಈ ಚಿತ್ರದಲ್ಲಿ ದಿಶಾ ಪಟಾನಿ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

   
 
ಟೆಕ್ನಾಲಜಿ