Back
Home » ಚಿತ್ರವಿಮರ್ಶೆ
Bharaate Review: ಮಾಸ್ ಪ್ರೇಕ್ಷಕರಿಗೆ ಕಿಕ್ ಹೆಚ್ಚಿಸುವ ಭರಾಟೆ
Oneindia | 19th Oct, 2019 01:46 PM
 • ರಾಜಸ್ತಾನ್ ಗೈಡ್ ಕರ್ನಾಟಕಕ್ಕೆ ಬಂದ

  ಸಿನಿಮಾದಲ್ಲೊಬ್ಬ ರಾಜಸ್ತಾನ್ ಗೈಡ್, ಆತನೇ ನಾಯಕ. ಅವನ ಹೆಸರು ಜಗನ್ ಲೋಹನ್ ರತ್ನಾಕರ (ಶ್ರೀ ಮುರಳಿ). ಆತನಿಗೆ ಹೊಡೆದು ಗಾಯ ಮಾಡುವುದು ಗೊತ್ತು, ಅದಕ್ಕೆ ಆಯುರ್ವೇದ ಚಿಕಿತ್ಸೆ ನೀಡುವುದು ಗೊತ್ತು. ಪ್ರವಾಸಿಗರಿಗೆ ರಾಜಸ್ತಾನ ಸುತ್ತಿಸುವ ಈತನಿಗೆ ಪ್ರವಾಸಕ್ಕೆ ಬಂದ ಹುಡುಗಿ ರಾಧ (ಶ್ರೀ ಲೀಲಾ) ಮೇಲೆ ಲವ್ ಆಗುತ್ತದೆ. ಇದೇ ವೇಳೆಗೆ ರಾಜಸ್ತಾನದ ಹುಡುಗ ಉತ್ತರ ಕರ್ನಾಟಕಕ್ಕೆ ಹೋಗಬೇಕಾದ ಸಂದರ್ಭ ಬರುತ್ತದೆ. ಇಲ್ಲಿಂದ ಸಿನಿಮಾದ ನಿಜವಾದ ಕಥೆ ತೆರೆದುಕೊಳ್ಳುತ್ತದೆ.

  ಶ್ರೀಮುರಳಿ ಜೊತೆ ಬುಲ್ ಬುಲ್ ರಚಿತಾ 'ಭರಾಟೆ' ಡಾನ್ಸ್


 • ಬಲ್ಲಾಳ.. ಪಲ್ಲವ.. ನಾಯಕರ.. ಆಳ್ವಿಕೆ

  ಬಲ್ಲಾಳ.. ಪಲ್ಲವ.. ನಾಯಕ.. ಈ ಮೂರು ಕುಟುಂಬಗಳ ಆಳ್ವಿಕೆ ಜೋರಾಗಿ ಇರುತ್ತದೆ. ಉತ್ತರ ಕರ್ನಾಟಕಕ್ಕೆ ಬರುವ ನಾಯಕ ಈ ಮೂರು ಮನೆತನಗಳ ವಿರುದ್ಧ 'ಯುದ್ಧ' ಮಾಡಬೇಕಾಗುತ್ತದೆ. ಅದು ಯಾಕೆ...?, ಹಾಗಾದರೆ ನಾಯಕನ ಹಿನ್ನಲೆ ಏನು..?, ಈ ಯುದ್ಧದಲ್ಲಿ ಗೆಲ್ಲುವವರು ಯಾರು..? ಎನ್ನುವುದು ಸಿನಿಮಾದ ಕುತೂಹಲಕಾರಿ ಅಂಶಗಳು.

  ಅಗಸ್ತ್ಯ ಶ್ರೀಮುರಳಿ ಜೊತೆಗೆ 'ಉಗ್ರಂ' ಡೈರೆಕ್ಟರ್


 • ಸಮರ ಸಾರುವ ಶ್ರೀಮುರಳಿ.. ಸೌಂದರ್ಯವತಿ ಶ್ರೀಲೀಲಾ

  ನಟ ಶ್ರೀಮುರಳಿ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಎರಡು ಪಾತ್ರಗಳನ್ನು ಅವರು ಚೆನ್ನಾಗಿ ನಿರ್ವಹಿಸಿದ್ದಾರೆ. ನಟನೆ, ಸಾಹಸ, ನೃತ್ಯ ಎಲ್ಲ ಕಡೆ ಶ್ರೀಮುರಳಿಯನ್ನು ತಡೆಯೊರು ಯಾರು ಇಲ್ಲ. ನಾಯಕಿ ಶ್ರೀಲೀಲಾ ತೆರೆ ಮೇಲೆ ತುಂಬ ಚೆನ್ನಾಗಿ ಕಾಣುತ್ತಾರೆ. ಅವರು ಕ್ಯೂಟ್ ನಟನೆ ಇಲ್ಲಿಯೂ ಮುಂದುವರೆದಿದೆ.


 • ಹೊಡೆದಾಟ.. ಹೊಡೆದಾಟ.. ಹೊಡೆದಾಟ..

  ಸಿನಿಮಾ ಶುರುವಾಗಿ 15 ನಿಮಿಷ ಆಗಿರಬಹುದು ಅಲ್ಲೊಂದು ಫೈಟ್ ಬರುತ್ತದೆ. ಆ ಸಾಹಸದ ಮೂಲಕ ನಾಯಕನ ಪರಿಚಯ ಮಾಡಲಾಗುತ್ತದೆ. ಆಮೇಲೆ ಮತ್ತೊಂದು ಫೈಟ್ ಬರುತ್ತದೆ, ನಂತರ ಇನ್ನೊಂದು ಫೈಟ್ ಬರುತ್ತದೆ.... ಹೀಗೆ ಮೊದಲಾರ್ಧ ಹೊಡೆದಾಟದಿಂದ ತುಂಬಿಕೊಂಡಿದೆ. ಸರಿ, ಸೆಕೆಂಡ್ ಹಾಫ್ ನಲ್ಲಿ ಏನಿದೆ ಅಂದ್ರೆ ಅಲ್ಲೂ ಕೂಡ ಹೊಡೆದಾಟ..ಹೊಡೆದಾಟ.. ಹೊಡೆದಾಟ. ಅಷ್ಟೊಂದು ಫೈಟ್ಸ್ ಇರುವುದು ಕಥೆಗೆ ಅಗತ್ಯ ಎಂದು ನಿರ್ದೇಶಕರಿಗೆ ಅನಿಸಿರಬಹುದು. ಆದರೆ, ನೋಡುಗರಿಗೆ ಮಾತ್ರ ಇದು ಅತಿರೇಕ.

  ಈ ವಾರ 'ಭರಾಟೆ' ಜೊತೆ ಬರ್ತಿದೆ ಮತ್ತೆರಡು ಕನ್ನಡ ಸಿನಿಮಾ


 • ತುಂಬ ದೊಡ್ಡ ಕಲಾವಿದ ಬಳಗ

  ಸಿನಿಮಾದಲ್ಲಿ ಹಾಸ್ಯ ನಟ ಕುರಿ ಪ್ರತಾಪ್ ರಿಂದ ಹಿಡಿದು, ಹಿರಿಯ ನಟಿ ತಾರ ವರೆಗೆ ಎಷ್ಟೊಂದು ಕಲಾವಿದರು ನಟಿಸಿದ್ದಾರೆ. ಅಷ್ಟೊಂದು ಕಲಾವಿದರಿಗೆ ಅವಕಾಶ ನೀಡಿದ್ದು ಮೆಚ್ಚುವ ವಿಷಯ. ಅದರಲ್ಲಿಯೂ ಒಲ್ಲಾಳ ಸಾಯಿ ಕುಮಾರ್, ಪಲ್ಲವ ರವಿಶಂಕರ್, ತಾರ, ಸುಮನ್, ರಂಗಾಯಣ ರಘು ನಟನೆ ಸಿನಿಮಾಗೆ ಪ್ಲಾಸ್ ಆಗಿದೆ.


 • ಸಿನಿಮಾಗೆ 'ಜೀವ' ನೀಡಿದ ಆಯುರ್ವೇದ

  ಸಾಹಸ ದೃಶ್ಯಗಳಿಂದ ಪೆಟ್ಟು ತಿನ್ನುತ್ತಿದ್ದ ಸಿನಿಮಾವನ್ನು ಕಾಪಾಡಿದ್ದು ಆಯುರ್ವೇದ. ಸಿನಿಮಾದ ಕಥೆಯಲ್ಲಿ ಆಯುರ್ವೇದ ಎಂಬ ವಿಷಯ ಇರುವ ಕಾರಣ ಅದು ನಿಜಕ್ಕೂ ಚಿತ್ರಕ್ಕೆ ಜೀವ ನೀಡಿದೆ. ಅದರಲ್ಲಿಯೂ ಕೊನೆಯಲ್ಲಿ ಇರುವ ರತ್ನಾಕರ ಪಾತ್ರ ಸಿನಿಮಾಗೆ ಘನತೆ ನೀಡಿದೆ. ಆಯುರ್ವೇದ ಹಿನ್ನಲೆ, ಆ ಪಾತ್ರ, ಪಾತ್ರದ ಹಾಡು ಇರದಿದ್ದರೆ ಸಿನಿಮಾ ನೋಡುವುದು ಬಹಳ ಕಷ್ಟವಾಗುತ್ತಿತ್ತು.


 • ಹಾಡು, ಉಳಿದವರ ಪಾಡು

  ಸಿನಿಮಾದ ಹಾಡುಗಳು ಇಷ್ಟ ಆಗುತ್ತದೆ. ಒಂದು ಹಾಡಿನಲ್ಲಿ ರಚಿತಾ ರಾಮ್ ಬಂದು ಹೊಗುತ್ತಾರೆ. ಹಾಡು ಮತ್ತು ಹೊಡೆದಾಟದ ನಡುವೆ ಪೈಪೋಟಿ ನಡೆದಿದೆ. ಹಾಸ್ಯ ದೃಶ್ಯಗಳು ನಗಿಸುತ್ತವೆ. ಕ್ಯಾಮರಾ ವರ್ಕ್ ಇಷ್ಟ ಆಗುತ್ತದೆ. ಮೇಕಿಂಗ್ ಅದ್ದೂರಿಯಾಗಿದೆ. ಸಿನಿಮಾ ಕೆಲವು ಕಡೆ ಬೋರ್ ಎನಿಸುತ್ತದೆ. ಉಳಿದವೆಲ್ಲ ಓಕೆ ಓಕೆ.


 • ಶ್ರಮವಿದೆ ಕಾಣಿಸುತ್ತದೆ, ಆದರೆ....

  'ಭರಾಟೆ' ದೊಡ್ಡ ಸಿನಿಮಾ. ಆ ಸಿನಿಮಾದಲ್ಲಿ ನಿರ್ದೇಶಕರ ಶ್ರಮ ಕಾಣಿಸುತ್ತದೆ. ಒಂದು ಒಳ್ಳೆಯ ವಿಷಯ ಹೇಳಿರುವುದು ತಿಳಿಯುತ್ತದೆ. ಆದರೆ, ಅತಿಯಾದ ಹೊಡೆದಾಟದ ನಡುವೆ ಸಿನಿಮಾದ ಆತ್ಮ ಕಳೆದುಹೋಗಿದೆ. ಲವ್, ಕಾಮಿಡಿ, ಸೆಂಟಿಮೆಂಟ್, ಅತಿ ಹೆಚ್ಚು ಆಕ್ಷನ್ ಇರುವ ಈ ಸಿನಿಮಾ ಮಾಸ್ ಅಭಿಮಾನಿಗಳಿಗೆ ರಂಜಿಸಬಹುದು.
ಕೆಲದಿನಗಳ ಹಿಂದೆ 'ಭರಾಟೆ' ಸಿನಿಮಾದ ಆಕ್ಷನ್ ಟೀಸರ್ ವೊಂದು ಬಿಡುಗಡೆ ಆಗಿತ್ತು. ಆ ಟೀಸರ್ ತುಂಬ ಫೈಟ್ಸ್ ಗಳು ಇತ್ತು. ಅದೇ ರೀತಿ ಸಿನಿಮಾದ ತುಂಬ ಆಕ್ಷನ್ ತುಂಬಿಕೊಂಡಿದೆ.ಮಾಸ್ ಪ್ರೇಕ್ಷಕರಿಗೆ ಫುಲ್ ಕಿಕ್ ಕೊಡುವಂತೆ ಭರಾಟೆ ಮೂಡಿಬಂದಿದೆ.

   
 
ಟೆಕ್ನಾಲಜಿ