Back
Home » ಬಾಲಿವುಡ್
ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿದ ಅಮಿತಾಬ್ ಬಚ್ಚನ್ ಅನಾರೋಗ್ಯ ಸುದ್ದಿ
Oneindia | 18th Oct, 2019 12:04 PM

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅನಾರೋಗ್ಯ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕಳೆದ ಮೂರು ದಿನಗಳಿಂದ ಅಮಿತಾಬ್ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಬಿಗ್ ಬಿಯನ್ನು ಮಂಗಳವಾರ ರಾತ್ರಿ 2 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಕುಟುಂಬದವರಾಗಲಿ ಅಥವಾ ಆಸ್ಪತ್ರೆ ಕಡೆಯಿಂದ ಯಾವುದೆ ಅಧಿಕೃತ ಮಾಹಿತಿ ಹೊರಬಂದಿಲ್ಲ. ಆದ್ರೆ ಅಮಿತಾಬ್ ಅನಾರೋಗ್ಯದ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಆಸ್ಪತ್ರೆಗೆ ಕುಟುಂಬದವರು ಮತ್ತು ಆಪ್ತರು ಮಾತ್ರ ಭೇಟಿ ಮಾಡಿ ಆರೋಗ್ಯ ವಿಚಾರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

'ದಾದಾಸಾಹೇಬ್ ಫಾಲ್ಕೆ' ಅಮಿತಾಬ್ ಬಚ್ಚನ್ ಭೇಟಿಯಾದ ಶಿವರಾಜ್ ಕುಮಾರ್

ಅಮಿತಾಬ್ ಅನಾರೋಗ್ಯದ ವಿಚಾರ ಅಭಿಮಾನಿಗಳಿಗಳಲ್ಲೂ ಗೊಂದಲ ಸೃಷ್ಟಿಮಾಡಿದೆ. ನಿಜಕ್ಕು ಅಮಿತಾಬ್ ಆಸ್ಪತ್ರಗೆ ದಾಖಲಾಗಿದ್ದಾರಾ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಅಲ್ಲದೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಮಿತಾಬ್ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಇನ್ನು ಗುರುವಾರ ರಾತ್ರಿ ಅಮಿತಾಬ್ ತಮ್ಮ ಬ್ಲಾಗ್ ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ.

"ಇದ್ದಕ್ಕಿದ್ದಂತೆ ಪ್ರಪಂಚವು ಪ್ರಕಾಶಮಾನವಾಗಿ ಮತ್ತು ಬಿಸಿಲಿದ್ದಂತೆ ಗೋಚವಾಗುತ್ತಿದೆ. ತಿಂಗಳುಗಳ ಬಳಿಕ ಅಂತಿಮವಾಗಿ ಸೂರ್ಯನ ನೋಟ" ಎಂದು ಬರೆದುಕೊಂಡಿದ್ದಾರೆ ಇದು ಅಭಿಮಾನಿಗಳಲ್ಲಿ ಮತ್ತಷ್ಟು ಅನುಮಾನ ಮೂಡಿಸಿದೆ.

ಅಮಿತಾಬ್ ಅನೇಕ ವರ್ಷಗಳಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. 1982 ಕೂಲಿ ಚಿತ್ರದ ಚಿತ್ರೀಕರಣ ಸಮಯದಲ್ಲಿ ಅಪಘಾತವಾದಾಗ ಅಮಿತಾಬ್ ಆಸ್ಪತ್ರೆಗೆ ದಾಖಲಾಗಿದ್ದರು. ಆ ಸಮಯದಲ್ಲಿ ರಕ್ತ ಪಡೆದ ಅಮಿತಾಭ್ ರಕ್ತದಾನಿಯಲ್ಲಿದ್ದ ಹೆಪಟೈಟೀಸ್ ಬಿ ಅಮಿತಾಬ್ ದೇಹ ಸೇರಿಕೊಂಡಿತ್ತು.

ಅಲ್ಲಿಂದ ಅಮಿತಾಬ್ ಹೆಪಟೈಟೀಸ್ ಬಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಿಗ್ ಬಿ ಲಿವರ್ ಕೇವಲ 25ರಷ್ಟು ಮಾತ್ರ ಕೆಲಸ ಮಾಡುತ್ತಿರುವುದಂತೆ. ಈ ಬಗ್ಗೆ ಸ್ವತಃ ಅಮಿತಾಬ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಮಿತಾಬ್ ಬೇಗ ಗುಣಮುಖರಾಗಲಿ ಎನ್ನುವುದು ಅಭಿಮಾನಿಗಳ ಆಶಯ.

   
 
ಟೆಕ್ನಾಲಜಿ