Back
Home » ಸಮ್ಮಿಲನ
ಶುಕ್ರವಾರದ ದಿನ ಭವಿಷ್ಯ (18-10-2019)
Boldsky | 18th Oct, 2019 10:03 AM
 • ಮೇಷ: 21 ಮಾರ್ಚ್ - 19 ಏಪ್ರಿಲ್

  ನೀವು ಇಂದು ಕೆಲಸಕ್ಕಾಗಿ ಪ್ರಯಾಣಿಸುತ್ತಿದ್ದರೆ ಅಗತ್ಯ ದಾಖಲೆಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಲು ಮರೆಯದಿರಿ. ನಿಮ್ಮ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಅದರ ಕುರಿತು ಹೆಚ್ಚಿನ ಚಿಂತನೆ ನಡೆಸುವ ಅಗತ್ಯವಿಲ್ಲ. ಕಚೇರಿಯಲ್ಲಿ ಕೆಲಸದ ಒತ್ತಡ ಮಧ್ಯಮವಾಗಿರುತ್ತದೆ. ಇಂದು ನೀವು ನಿಮಗಾಗಿ ಕೆಲವು ಹೆಚ್ಚುವರಿ ಸಮಯವನ್ನು ಪಡೆಯಲು ಸಾಧ್ಯವಾಗುತ್ತದೆ. ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧವು ಸಿಹಿಯಾಗಿರುತ್ತದೆ. ಒಡಹುಟ್ಟಿದವರೊಂದಿಗೆ ಕೆಲವು ಸಮಸ್ಯೆಗಳು ಉಂಟಾಗಬಹುದು. ಅವು ನಿಮಗೆ ಒತ್ತಡವನ್ನು ಹೆಚ್ಚಿಸಬಹುದು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ನಿಮ್ಮನ್ನು ಸದೃಢ ವಾಗಿಡಲು ಮತ್ತು ಚುರುಕಾಗಿಡಲು ಪ್ರತಿ ದಿನ ವ್ಯಾಯಾಮ ಮಾಡಿ.
  ಅದೃಷ್ಟ ಬಣ್ಣ: ಬಿಳಿ
  ಅದೃಷ್ಟ ಸಂಖ್ಯೆ: 16
  ಅದೃಷ್ಟ ಸಮಯ: ಬೆಳಿಗ್ಗೆ 11:00 ರಿಂದ 12:25 ರವರೆಗೆ


 • ವೃಷಭ: 20 ಏಪ್ರಿಲ್ - 20 ಮೇ

  ನಿಮ್ಮ ಬಾಸ್ ನಿಮ್ಮ ಮೇಲೆ ನಿಗಾ ಇಡುತ್ತಾರೆ. ಆದ್ದರಿಂದ ನೀವು ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸುವುದು ಉತ್ತಮ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಇಂದು ನಿಮಗೆ ಹಣ ಸಂಪಾದಿಸಲು ಹೊಸ ಅವಕಾಶವಿದೆ. ಅಲ್ಲದೆ ನಿಮ್ಮ ತಂದೆ ನಿಮಗೆ ಆರ್ಥಿಕವಾಗಿ ಸಹಾಯ ಮಾಡುತ್ತಾರೆ. ವೈವಾಹಿಕ ಜೀವನವು ಸಂತೋಷವಾಗಿರುತ್ತದೆ. ಆರೋಗ್ಯವು ತುಂಬಾ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸಿ. ಏಕೆಂದರೆ ನಿಮ್ಮ ನಡುವೆ ತಪ್ಪು ತಿಳುವಳಿಕೆ ಉಂಟಾಗಬಹುದು.
  ಅದೃಷ್ಟ ಬಣ್ಣ: ಕ್ರೀಮ್
  ಅದೃಷ್ಟ ಸಂಖ್ಯೆ: 12
  ಅದೃಷ್ಟ ಸಮಯ: ಸಂಜೆ 6:30 ರಿಂದ 10:00 ರವರೆಗೆ


 • ಮಿಥುನ: 21 ಮೇ - 20 ಜೂನ್

  ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಸಣ್ಣ ಜಗಳವನ್ನು ಹೊಂದಬಹುದು ಆದರೆ ಅದು ಶೀಘ್ರದಲ್ಲೇ ಪರಿಹಾರವಾಗುವುದು. ಕಚೇರಿಯಲ್ಲಿ ಗಾಸಿಪ್ಗಳಿಂದ ದೂರವಿರಿ. ಬಾಕಿ ಇರುವ ಕಾರ್ಯಗಳನ್ನು ಸಹ ಪೂರ್ಣಗೊಳಿಸಲು ಪ್ರಯತ್ನಿಸಿ. ಆರ್ಥಿಕ ರಂಗದಲ್ಲಿ ಇಂದು ಉತ್ತಮ ದಿನ. ನಿಮ್ಮ ಹಣಕಾಸಿನ ಸ್ಥಿತಿಯು ಸುಧಾರಿಸುವ ಸಾಧ್ಯತೆಗಳಿವೆ. ಪ್ರಯಾಣಕ್ಕೆ ಒಳ್ಳೆಯ ದಿನವಲ್ಲ. ಸುದೀರ್ಘ ಪ್ರಯಾಣವನ್ನು ತಪ್ಪಿಸಿ ಏಕೆಂದರೆ ಅದು ನಿಮಗೆ ದಣಿವು ಮತ್ತು ದುರ್ಬಲವಾಗಿರುತ್ತದೆ.
  ಅದೃಷ್ಟ ಬಣ್ಣ: ನೇರಳೆ
  ಅದೃಷ್ಟ ಸಂಖ್ಯೆ: 2
  ಅದೃಷ್ಟ ಸಮಯ: ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 3:00 ರವರೆಗೆ


 • ಕರ್ಕ: 21 ಜೂನ್ - 22 ಜುಲೈ

  ಕೆಲಸದಲ್ಲಿ ಇಂದು ಹತಾಶೆ ಅನುಭವಿಸಬಹುದು. ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಪ್ರೀತಿ ಇರುತ್ತದೆ. ನಿಮ್ಮ ಸಂಗಾತಿಯು ನಿಮ್ಮನ್ನು ಬೆಂಬಲಿಸುತ್ತಾರೆ. ನಿಮ್ಮ ಔದಾರ್ಯದ ಲಾಭ ಪಡೆಯಲು ಕೆಲವರು ಪ್ರಯತ್ನಿಸಬಹುದು. ಯಾವುದೇ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಚೆನ್ನಾಗಿ ಯೋಚಿಸಿ. ಏಕೆಂದರೆ ಇಂದು ದೊಡ್ಡ ನಷ್ಟವಾಗುವ ಸಾಧ್ಯತೆಯಿದೆ. ಆರೋಗ್ಯವಾಗಿರಲು ಉತ್ತಮ ಆಹಾರವನ್ನು ಕುಡಿಯುವುದರ ಜೊತೆಗೆ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ.
  ಅದೃಷ್ಟ ಬಣ್ಣ: ಗಾಢ ನೀಲಿ
  ಅದೃಷ್ಟ ಸಂಖ್ಯೆ: 11
  ಅದೃಷ್ಟ ಸಮಯ: ಮಧ್ಯಾಹ್ನ 2:00 ರಿಂದ 5:20 ರವರೆಗೆ


 • ಸಿಂಹ: 23 ಜುಲೈ - 22 ಆಗಸ್ಟ್

  ಸ್ವೀಕರಿಸಿದ ಹಣವು ನಿರೀಕ್ಷೆಯಂತೆ ಇರುತ್ತದೆ. ಇಂದು ನೀವು ಹೆಚ್ಚು ಖರ್ಚು ಮಾಡುವ ಮನಸ್ಥಿತಿಯಲ್ಲಿರುತ್ತೀರಿ. ಆದರೆ ನೀವು ಹೆಚ್ಚು ಉಳಿಸಲು ಪ್ರಯತ್ನಿಸಬೇಕು. ಕುಟುಂಬ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು. ಕೆಲವು ಸಮಸ್ಯೆಗಳಿಗೆ ತಕ್ಷಣದ ಗಮನ ಬೇಕು. ಇಲ್ಲದಿದ್ದರೆ ಅದು ನಿಮ್ಮ ಕೆಲಸದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವು ಇಂದು ಕೆಲವು ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ. ನಿಮಗೆ ಹೊಸ ಜವಾಬ್ದಾರಿಯನ್ನು ನೀಡಬಹುದು. ಇದು ನಿಮಗೆ ಸ್ವಲ್ಪ ಒತ್ತಡವನ್ನುಂಟು ಮಾಡುತ್ತದೆ. ಆದರೆ ಶಾಂತ ಮನಸ್ಸು ಮತ್ತು ಉತ್ತಮ ಯೋಜನೆಯಿಂದ ಎಲ್ಲವೂ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ.
  ಅದೃಷ್ಟ ಬಣ್ಣ: ಹಳದಿ
  ಅದೃಷ್ಟ ಸಂಖ್ಯೆ: 10
  ಅದೃಷ್ಟ ಸಮಯ: ಬೆಳಿಗ್ಗೆ 6:00 ರಿಂದ 12:20 ರವರೆಗೆ


 • ಕನ್ಯಾ: 23 ಆಗಸ್ಟ್ - 22 ಸೆಪ್ಟೆಂಬರ್

  ಹಣದ ವಿಷಯದಲ್ಲಿ ದಿನವು ಶುಭವಾಗಿರುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ನೀವು ಸಾಲಗಳನ್ನು ತೀರಿಸಲು ಸಹ ಸಾಧ್ಯವಾಗುತ್ತದೆ. ನಿಮ್ಮ ತಂದೆ ನಿಮ್ಮ ಬಗ್ಗೆ ಸ್ವಲ್ಪ ಅಸಮಾಧಾನ ಹೊಂದುತ್ತಾರೆ. ಅವರು ನಿಮ್ಮ ನಿರ್ಧಾರಗಳನ್ನು ಒಪ್ಪುವುದಿಲ್ಲ. ನೀವು ವೈವಾಹಿಕ ಜೀವನದ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ. ಇಂದು ನಿಮ್ಮ ಸಂಗಾತಿಯೊಂದಿಗೆ ಮುಕ್ತ ಸಂಭಾಷಣೆ ನಡೆಸಲು ಪ್ರಯತ್ನಿಸಿ. ಯಾರಿಗೂ ಸುಳ್ಳು ಹೇಳಬೇಡಿ. ವ್ಯವಹಾರಕ್ಕೆ ಸಂಬಂಧಿಸಿದ ಪ್ರಯಾಣವು ಪ್ರಯೋಜನಕಾರಿಯಾಗಲಿದೆ. ನೀವು ಸಂಜೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು.
  ಅದೃಷ್ಟ ಬಣ್ಣ: ಪೀಚ್
  ಅದೃಷ್ಟ ಸಂಖ್ಯೆ: 28
  ಅದೃಷ್ಟ ಸಮಯ: ಮಧ್ಯಾಹ್ನ 12:00 ರಿಂದ 4:30 ರವರೆಗೆ


 • ತುಲಾ: 23 ಸೆಪ್ಟೆಂಬರ್ - 22 ಅಕ್ಟೋಬರ್

  ನಿಮ್ಮ ಕಠಿಣ ಪರಿಶ್ರಮಕ್ಕೆ ಮೆಚ್ಚುಗೆ, ಪ್ರಶಂಸೆ ಮತ್ತು ಬಹುಮಾನ ದೊರೆಯುವ ಸಾಧ್ಯತೆಗಳಿವೆ. ಇಂದು ವಿಷಯಗಳು ನಿಮ್ಮ ಪರವಾಗಿ ಇರುತ್ತದೆ. ನೀವು ಎಲ್ಲದರಲ್ಲೂ ಯಶಸ್ಸನ್ನು ಸಾಧಿಸುವಿರಿ. ಇಂದು ನೀವು ಸಾಕಷ್ಟು ಹಣವನ್ನು ಗಳಿಸಬಹುದು. ನೀವು ಉತ್ತಮ ಅವಕಾಶವನ್ನು ಪಡೆಯುತ್ತೀರಿ. ಸಂಬಂಧಕ್ಕೆ ದಿನವು ಅನುಕೂಲಕರವಾಗಿರುತ್ತದೆ. ನಿಮ್ಮ ಸ್ನೇಹಿತರೊಂದಿಗೆ ನೀವು ಉತ್ತಮ ಸಮಯವನ್ನು ಹೊಂದಿರುತ್ತೀರಿ. ಬಿಡುವಿಲ್ಲದ ದಿನಚರಿಯ ಹೊರತಾಗಿಯೂ ನೀವು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಕ್ಷಣಗಳನ್ನು ಕಳೆಯಲು ಸಾಧ್ಯವಾಗುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ.
  ಅದೃಷ್ಟ ಬಣ್ಣ: ತಿಳಿ ಕೆಂಪು
  ಅದೃಷ್ಟ ಸಂಖ್ಯೆ: 15
  ಅದೃಷ್ಟ ಸಮಯ: ಬೆಳಿಗ್ಗೆ 7:20 ರಿಂದ ಮಧ್ಯಾಹ್ನ 3:00 ರವರೆಗೆ


 • ವೃಶ್ಚಿಕ: 23 ಅಕ್ಟೋಬರ್ - 21 ನವೆಂಬರ್

  ಕಚೇರಿ ವಾತಾವರಣವು ಉತ್ತಮವಾಗಿರುತ್ತದೆ. ನಿಮ್ಮ ಕಾರ್ಯಕ್ಷಮತೆಯೂ ಸುಧಾರಿಸುತ್ತದೆ. ನಿಮ್ಮ ಪ್ರಯತ್ನಗಳು ಫಲಪ್ರದವಾಗುತ್ತವೆ. ನೀವು ಸಂತೋಷವಾಗಿರುತ್ತೀರಿ. ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಉಳಿಯುತ್ತದೆ. ಸಂಗಾತಿಯ ಮುಂದೆ ನಿಮ್ಮ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಬಹುದು. ತೊಂದರೆಯಿಂದ ದೂರವಾಗಲು ಇತರರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸಿ. ಇಂದು ನೀವು ಹೆಚ್ಚುವರಿ ಸಂಪಾದಿಸಲು ಸಾಧ್ಯವಾಗುತ್ತದೆ. ನಿಮ್ಮ ಹಳೆಯ ಮತ್ತು ಪ್ರಮುಖ ಸಂಪರ್ಕಗಳು ನಿಮಗೆ ಹೆಚ್ಚು ಉಪಯುಕ್ತವಾಗಬಹುದು. ನೀವು ನಿರಾಳವಾಗಿರುತ್ತೀರಿ. ಇಂದು ಪ್ರಯಾಣಕ್ಕೆ ಉತ್ತಮ ದಿನವಲ್ಲ.
  ಅದೃಷ್ಟ ಬಣ್ಣ: ಮರೂನ್
  ಅದೃಷ್ಟ ಸಂಖ್ಯೆ: 7
  ಅದೃಷ್ಟ ಸಮಯ: ಬೆಳಿಗ್ಗೆ 7:00 ರಿಂದ 10:00 ರವರೆಗೆ


 • ಧನು: 22 ನವೆಂಬರ್ - 21 ಡಿಸೆಂಬರ್

  ಸಕಾರಾತ್ಮಕ ಮನೋಭಾವದಿಂದ ನಿಮ್ಮ ವೈವಾಹಿಕ ಜೀವನದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ಪ್ರಣಯ ಜೀವನದಲ್ಲಿ ಎಲ್ಲವೂ ಸಾಮಾನ್ಯವಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ಪರಸ್ಪರ ತಿಳುವಳಿಕೆ ಇಂದು ಉತ್ತಮವಾಗಿರುತ್ತದೆ. ಹಿಂದಿನ ತಪ್ಪು ನಿರ್ಧಾರವು ನಿಮ್ಮ ಮಾನಸಿಕ ಶಾಂತಿಯನ್ನು ಭಂಗಗೊಳಿಸುತ್ತದೆ. ನೀವು ಒಬ್ಬಂಟಿಯಾಗಿ ಕಾಣುವಿರಿ ಮತ್ತು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ನಿಮ್ಮ ಹತ್ತಿರ ಇರುವವರೊಂದಿಗೆ ಮಾತನಾಡುವುದು ಸೂಕ್ತ. ಉದ್ಯಮಿಗಳಿಗೆ ಶುಭವಾಗಲಿದೆ. ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು. ಆದಾಗ್ಯೂ ನೀವು ಹಿರಿಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.
  ಅದೃಷ್ಟ ಬಣ್ಣ: ಕೆಂಪು
  ಅದೃಷ್ಟ ಸಂಖ್ಯೆ: 8
  ಅದೃಷ್ಟ ಸಮಯ: ಮಧ್ಯಾಹ್ನ 2:30 ರಿಂದ 6:40


 • ಮಕರ: 22 ಡಿಸೆಂಬರ್ - 19 ಜನವರಿ

  ನೀವು ಯಾವುದೇ ತೊಂದರೆಯಲ್ಲಿದ್ದರೆ ಹಿರಿಯರ ಸಲಹೆಯನ್ನು ಪಡೆಯಿರಿ. ನಿಮ್ಮ ಸಮಸ್ಯೆಗಳಿಗೆ ನೀವು ಖಂಡಿತವಾಗಿಯೂ ಪರಿಹಾರವನ್ನು ಪಡೆಯುತ್ತೀರಿ. ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಸಮಯಕ್ಕೆ ಪೂರ್ಣಗೊಳ್ಳುತ್ತವೆ. ಆದರೆ ವ್ಯಾಪಾರಸ್ಥರು ಜಾಗರೂಕರಾಗಿರಿ. ನಿಮ್ಮ ಸಂಗಾತಿಯೊಂದಿಗೆ ವಾದಗಳನ್ನು ತಪ್ಪಿಸಲು ಸೂಚಿಸಲಾಗುತ್ತದೆ. ನಿಮ್ಮ ಸಂಗಾತಿಯ ಆರೋಗ್ಯವು ಕಳವಳಕಾರಿಯಾಗಿರುತ್ತದೆ. ಇಂದು ಸಾಲವನ್ನು ಪಡೆಯದಿರಿ. ಪೋಷಕರ ಪ್ರೀತಿ ಮತ್ತು ಬೆಂಬಲದಿಂದ ನೀವು ಆತ್ಮವಿಶ್ವಾಸವನ್ನು ಗಳಿಸುವಿರಿ. ನಿಮಗೆ ತೊಂದರೆಯಾಗುವುದರಿಂದ ಇಂದು ಅಪಾಯಕಾರಿ ಕೆಲಸಗಳನ್ನು ಮಾಡುವುದನ್ನು ತಪ್ಪಿಸಿ.
  ಅದೃಷ್ಟ ಬಣ್ಣ: ಬಿಳಿ
  ಅದೃಷ್ಟ ಸಂಖ್ಯೆ: 34
  ಅದೃಷ್ಟ ಸಮಯ: ಬೆಳಿಗ್ಗೆ 11:50 ರಿಂದ ಮಧ್ಯಾಹ್ನ 2:25


 • ಕುಂಭ: 20 ಜನವರಿ - 18 ಫೆಬ್ರವರಿ

  ನವ ದಂಪತಿಗಳಿಗೆ ಇಂದು ಉತ್ತಮ ದಿನ. ನಿಮ್ಮ ಪ್ರೀತಿ, ಸ್ನೇಹ ಮತ್ತು ಬಂಧ ಹೆಚ್ಚಾಗುತ್ತದೆ. ನಿಮ್ಮ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ. ಇಂದು ನೀವು ಶಕ್ತಿಯಿಂದ ತುಂಬಿರುತ್ತೀರಿ. ಮನೆಯಲ್ಲಿ ವಿಶೇಷ ಪೂಜೆಅನ್ನು ಸಹ ಆಯೋಜಿಸಬಹುದು. ನಿಮ್ಮ ಕುಟುಂಬದೊಂದಿಗೆ ಸ್ವಲ್ಪ ಸಮಯವನ್ನು ಕಳೆಯಲು ನಿಮಗೆ ಸಾಧ್ಯವಾಗುತ್ತದೆ. ವ್ಯಾಪಾರದ ಉದ್ದೇಶಗಳಿಗಾಗಿ ಪ್ರಯಾಣವು ಉತ್ತಮವಾಗಿರುತ್ತದೆ. ಇಂದು ಯಾವುದೇ ರೀತಿಯ ಚರ್ಚೆಯನ್ನು ತಪ್ಪಿಸಿ ಏಕೆಂದರೆ ವಿಷಯಗಳು ನಿಮ್ಮ ವಿರುದ್ಧವಾಗಿ ಹೋಗಬಹುದು.
  ಅದೃಷ್ಟ ಬಣ್ಣ: ಗುಲಾಬಿ
  ಅದೃಷ್ಟ ಸಂಖ್ಯೆ: 14
  ಅದೃಷ್ಟ ಸಮಯ: ಮಧ್ಯಾಹ್ನ 2:20 ರಿಂದ 4:30 ರವರೆಗೆ


 • ಮೀನ: 19 ಫೆಬ್ರವರಿ - 20 ಮಾರ್ಚ್

  ನಿಮ್ಮ ಜೀವನ ಸಂಗಾತಿಯೊಂದಿಗೆ ಸ್ಮರಣೀಯ ದಿನವಾಗಬಹುದು. ನಿಮ್ಮಿಬ್ಬರ ನಡುವಿನ ಎಲ್ಲಾ ತಪ್ಪುಗ್ರಹಿಕೆಯು ಇಂದು ಕೊನೆಗೊಳ್ಳುತ್ತದೆ. ಎಲ್ಲವನ್ನೂ ಪ್ರೀತಿಯಿಂದ ಗೆಲ್ಲಬಹುದು ಎಂದು ನೀವು ಭಾವಿಸುವಿರಿ. ನೀವು ಇಂದು ವಿವಾದದಲ್ಲಿ ಸಿಲುಕಿಕೊಂಡರೆ, ತಾಳ್ಮೆ ಮತ್ತು ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಆರ್ಥಿಕ ರಂಗದಲ್ಲಿ ಉತ್ತಮ ದಿನ. ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ನೀವು ಕಷ್ಟಪಟ್ಟು ಕೆಲಸ ಮಾಡಿದರೆ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.
  ಅದೃಷ್ಟ ಬಣ್ಣ: ಬೂದು
  ಅದೃಷ್ಟ ಸಂಖ್ಯೆ: 9
  ಅದೃಷ್ಟ ಸಮಯ: ಬೆಳಿಗ್ಗೆ 8:00 ರಿಂದ 10:15 ರವರೆಗೆ
ಬದುಕು ಎನ್ನುವುದು ಒಂದು ನದಿ ಇದ್ದ ಹಾಗೆ. ಕೊನೆ ಇಲ್ಲದ ಪಯಣ. ಈ ಪಯಣದ ಮಧ್ಯೆ ಏನೆಲ್ಲಾ ಸಿಗುತ್ತದೆಯೋ ಅದೆಲ್ಲವನ್ನೂ ಜೊತೆಯಲ್ಲಿಯೇ ಕರೆದೊಯ್ಯುತ್ತದೆ. ಹಾಗಂತ ಯಾವುದೂ ಕೊನೆಯವರೆಗೆ ಉಳಿಯುವುದಿಲ್ಲ. ನಿಜ, ಜೀವನದ ಪಯಣದುದ್ದಕ್ಕೂ ಸಿಕಿ ಕಹಿ ಘಟನೆಗಳು ಹಾಗೂ ವ್ಯಕ್ತಿಗಳು ಸಿಗುತ್ತಾರೆ. ಅವು ಯಾವುದೂ ಶಾಶ್ವತವಾಗಿ ನಮ್ಮೊಂದಿಗೆ ಉಳಿಯುವುದಿಲ್ಲ.

ನಮ್ಮೊಂದಿಗೆ ಬಂದ ವ್ಯಕ್ತಿಗಳು ಹಾಗೂ ಅನುಭವಿಸಿದ ಸನ್ನಿವೇಶಗಳ ಅನುಭವ ಹಾಗೂ ನೆನಪುಗಳು ಮಾತ್ರವೇ ನಮ್ಮೊಂದಿಗೆ ಉಳಿದುಕೊಳ್ಳುತ್ತವೆ. ಆ ಅನುಭವಗಳೇ ಜೀವನ ಎಂದರೇನು? ಎನ್ನುವ ಪಾಠವನ್ನು ಹೇಳಿಕೊಡುತ್ತವೆ. ಶುಕ್ರವಾರವಾದ ಈ ಶುಭ ದಿನ ಆ ಮಹಾ ಲಕ್ಷ್ಮಿಯು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಯಾವೆಲ್ಲಾ ಬದಲಾವಣೆಯನ್ನು ತರುತ್ತಾಳೆ? ನಿಮ್ಮ ಜೀವನದ ಪಯಣದಲ್ಲಿ ಯಾವೆಲ್ಲಾ ಘಟನೆಗಳು ನಡೆಯಬಹುದು? ಎನ್ನುವುದನ್ನು ನೀವು ತಿಳಿದು ಕೊಳ್ಳಬೇಕೆಂದುಕೊಂಡಿದ್ದರೆ, ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ಈ ಮುಂದಿನ ರಾಶಿ ಭವಿಷ್ಯವನ್ನು ಪರಿಶೀಲಿಸಿ....

 
ಟೆಕ್ನಾಲಜಿ