Back
Home » ಆರೋಗ್ಯ
ಆಘಾತ ಎಂದರೇನು? ಕಾರಣಗಳು, ಲಕ್ಷಣಗಳು ಮತ್ತು ಪರಿಣಾಮಗಳು
Boldsky | 17th Oct, 2019 03:00 PM
  • ಆಘಾತಕ್ಕೆ ಮೂಲ ಕಾರಣಗಳು ಯಾವುದು?

    ಆಘಾತವೆಂದರೆ ಅದು ತೀರ ನಕಾರಾತ್ಮಕವಾದ ಘಟನೆಯಾಗಿದ್ದು, ಪೀಡಿತರ ಮಾನಸಿಕ ಹಾಗೂ ಭಾವನಾತ್ಮಕ ಸ್ಥಿರತೆ ಮೇಲೆ ಪರಿಣಾಮ ಬೀರುವುದು. ದೈಹಿಕ ಹಲ್ಲೆ ಮತ್ತು ಇತರ ಕೆಲವೊಂದು ಮಾನಸಿಕ ಘಟನೆಗಳು ಈ ಆಘಾತಕ್ಕೆ ಕಾರಣವಾಗಿದೆ.

    ಆಘಾತವೆಂದರೆ ನೇರವಾಗಿ ಅದು ಪರಿಣಾಮ ಬೀರಬೇಕೆಂದಿಲ್ಲ. ಅಂತಹ ಯಾವುದೇ ಘಟನೆ ವೀಕ್ಷಿಸಿದರೂ ಅದರ ಪರಿಣಾಮ ವ್ಯಕ್ತಿಯ ಮೇಲೆ ಆಗಬಹುದು. ಒಂದು ಕೆಟ್ಟ ಘಟನೆಯನ್ನು ಸ್ವಲ್ಪ ದೂರದಿಂದ ನೋಡಿದರೂ ಅದರ ಪರಿಣಾಮವು ಆಘಾತಕ್ಕೆ ಕಾರಣವಾಗಬಹುದು. ಸಣ್ಣ ಮಕ್ಕಳು ಆಘಾತಕ್ಕೆ ಬೇಗನೆ ಗುರಿಯಾಗುವರು ಮತ್ತು ಇದರ ಬಳಿಕ ಅವರಿಗೆ ಮನಶಾಸ್ತ್ರಜ್ಞರ ನೆರವು ನೀಡಬೇಕು ಮತ್ತು ಭಾವನಾತ್ಮಕವಾಗಿಯೂ ಅವರ ಬಗ್ಗೆ ಜಾಗೃತಿ ವಹಿಸಬೇಕು.


  • ಆಘಾತಕ್ಕೆ ಕೆಲವೊಂದು ಸಾಮಾನ್ಯ ಮೂಲಗಳು

    * ಆತ್ಯಾಚಾರ

    * ಕೌಟುಂಬಿಕ ಹಿಂಸೆ

    * ನೈಸರ್ಗಿಕ ವಿಪತ್ತು

    * ತೀವ್ರ ಅನಾರೋಗ್ಯ ಅಥವಾ ಗಾಯ

    * ಯಾವುದೇ ಹಿಂಸೆಯನ್ನು ವೀಕ್ಷಿಸುವುದು

    ಆಘಾತದಿಂದ ಬಳಲುತ್ತಿರುವ ವ್ಯಕ್ತಿಯ ಚಿಹ್ನೆಗಳು ಯಾವುದು?

    ಆಘಾತಕ್ಕೆ ಕಾರಣಗಳು ಮತ್ತು ಲಕ್ಷಣಗಳು ಬೇರೆ ಬೇರೆ ಆಗಿರಬಹುದು. ಆದರೆ ಆಘಾತಕ್ಕೆ ಕೆಲವೊಂದು ಮೂಲ ಲಕ್ಷಣಗಳನ್ನು ಇಲ್ಲಿ ಕಾಣಬಹುದು. ಆಘಾತಕ್ಕೆ ಒಳಗಾಗಿರುವಂತಹ ಜನರು ಯಾವಾಗಲೂ ನಡುಗುತ್ತಿರುವರು ಮತ್ತು ದಿಗ್ಬ್ರಮೆಗೆ ಒಳಗಾಗುವರು. ಸಾಮಾನ್ಯದಂತೆ ಅವರು ಯಾವುದೇ ರೀತಿಯ ಮಾತಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಕಳೆದು ಹೋದಂತೆ ಇರುವರು ಅಥವಾ ಮಾತಿನ ವೇಳೆ ಅವರು ಭಾಗಿಯಾಗದೆ ಇರುವರು.

    ಆಘಾತಕ್ಕೆ ಒಳಗಾಗಿರುವ ವ್ಯಕ್ತಿಯ ಮತ್ತೊಂದು ಲಕ್ಷಣವೆಂದರೆ ಅದು ಆತಂಕ. ರಾತ್ರಿ ಭಯಗಳು, ಕಳಪೆ ಏಕಾಗ್ರತೆ ಮತ್ತು ಮನಸ್ಥಿತಿ ಬದಲಾಗುವುದು. ಆಘಾತದ ಈ ಲಕ್ಷಣಗಳು ತುಂಬಾ ಸಾಮಾನ್ಯ ಮತ್ತು ಅತಿಯಾಗಿ ಇರದು. ಪ್ರತಿಯೊಬ್ಬ ವ್ಯಕ್ತಿಯು ಆಘಾತಕ್ಕೆ ತುಂಬಾ ಭಿನ್ನವಾಗಿ ಪ್ರತಿಕ್ರಿಯೆ ನೀಡಬಹುದು. ಕೆಲವೊಂದು ಸಂದರ್ಭದಲ್ಲಿ ಇಂತಹ ಆಘಾತವನ್ನು ಪೀಡಿತ ವ್ಯಕ್ತಿಯ ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಗುರುತಿಸದೆ ಇರಬಹುದು. ಈ ಪ್ರಕರಣಗಳು ಆಘಾತದ ಬಳಿಕ ಯಾರೊಂದಿಗಾದರೂ ಮಾತನಾಡುವ ಪ್ರಾಮುಖ್ಯತೆ ತಿಳಿಸುತ್ತದೆ ಮತ್ತು ಇಲ್ಲಿ ಯಾವುದೇ ರೀತಿಯ ಆರಂಭಿಕ ಲಕ್ಷಣಗಳನ್ನು ತೋರಿಸುವುದಿಲ್ಲ. ಆಘಾತವು ದಿನ, ವಾರ, ತಿಂಗಳು ಅಥವಾ ಕೆಲವು ವರ್ಷಗಳ ತನಕ ಮುಂದುವರಿಯಹುದು.


  • ಭಾವನಾತ್ಮಕ ಚಿಹ್ನೆಗಳು

    ಆಘಾತವು ಪ್ರಕಟಗೊಳ್ಳುವ ಅತ್ಯುತ್ತಮ ವಿಧಾನವೆಂದರೆ ಅದು ಭಾವನೆ. ಕೆಲವೊಂದು ಸಾಮಾನ್ಯ ಭಾವನೆಗಳಾಗಿರುವಂತಹ ನಿರಾಕರಣೆ, ಕೋಪ, ಬೇಸರ ಮತ್ತು ಭಾವನೆಗಳ ಸ್ಫೋಟ ಇತ್ಯಾದಿಗಳು. ಆಘಾತಕ್ಕೆ ಒಳಗಾಗಿರುವಂತಹ ಪೀಡಿತರು ತಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗೆ ತಮಗಾದ ಆಘಾತದ ಭಾವನೆಗಳನ್ನು ಅಗಾಧ ಮಟ್ಟದಲ್ಲಿ ಪರೋಕ್ಷವಾಗಿ ಪ್ರದರ್ಶಿಸಬಹುದು. ಹೀಗಾಗಿ ಆಘಾತವು ಪ್ರೀತಿಪಾತ್ರರಿಗೆ ಕೂಡ ತುಂಬಾ ಕಠಿಣವಾಗಿರುವುದು. ಆದರೆ ಆಘಾತದಿಂದ ಆಗಿರುವ ಭಾವನೆಗಳ ಲಕ್ಷಣಗಳನ್ನು ತಿಳಿದುಕೊಂಡರೆ ಆಗ ಅದು ತುಂಬಾ ಸಹಕಾರಿ ಆಗಲಿದೆ.


  • ದೈಹಿಕ ಸಂಜ್ಞೆಗಳು

    ಆಘಾತವು ಯಾವಾಗಲೂ ದೈಹಿಕ ಹಾಗೂ ಮಾನಸಿಕವಾಗಿ ಪ್ರಕಟವಾಗುವುದು. ಕೆಲವೊಂದು ಸಾಮಾನ್ಯ ದೈಹಿಕ ಲಕ್ಷಣಗಳೆಂದರೆ ಅದು ಆಲಸ್ಯ, ಆಯಾಸ, ಕಳಪೆ ಏಕಾಗ್ರತೆ ಮತ್ತು ಹೃದಯ ಬಡಿತ ಹೆಚ್ಚಾಗುವುದು. ಪೀಡಿತರದಲ್ಲಿ ಆತಂಕ ಅಥವಾ ನೋವಿನ ಆಘಾತ, ಕೆಲವೊಂದು ಸಂದರ್ಭಗಳಿಗೆ ಸರಿಯಾಗಿ ಹೊಂದಿಕೊಳ್ಳದೆ ಇರುವ ಪರಿಸ್ಥಿತಿ ನಿರ್ಮಾಣವಾಗಬಹುದು. ದೈಹಿಕ ಗಾಯ ಅಥವಾ ಅನಾರೋಗ್ಯದಿಂದಾಗಿ ಆಘಾತದ ದೈಹಿಕ ಲಕ್ಷಣಗಳು ಕಾಣಿಸಿಕೊಳ್ಳುವುದು. ಇದು ನಿಜವಾಗಿರುವುದು ಮತ್ತು ಇದು ಎಚ್ಚರಿಕೆಯ ಕರೆಗಂಟೆಯಾಗಿದೆ. ಇದರ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಆಘಾತದಿಂದ ಆಗಿರುವ ಒತ್ತಡವನ್ನು ಕಡಿಮೆ ಮಾಡಬೇಕು.


  • ಖಿನ್ನತೆ ಮತ್ತು ಆಘಾತ

    ಖಿನ್ನತೆ ಮತ್ತು ಆಘಾತವು ತುಂಬಾ ದೊಡ್ಡ ಪ್ರಮಾಣದಲ್ಲಿದೆ. ಇದು ಭಾವನೆಗಳನ್ನು ನಾಶ ಮಾಡಬಹುದು ಮತ್ತು ದೀರ್ಘಕಾಲದ ತನಕ ಅಥವಾ ಕೆಲವು ವಾರಗಳ ಕಾಲ ಇದು ಇರಬಹುದು. ಆಘಾತ ಉಂಟಾದ ವೇಳೆ ಈ ಆಘಾತದ ಬಳಿಕ ಖಿನ್ನತೆಯು ಕಾಣಿಸುವುದು. ಸಾಮಾನ್ಯ ಜನರಿಗಿಂತಲೂ ಪಿಟಿಎಸ್ ಡಿ ಬೆಳವಣಿಗೆ ಇರುವವರಲ್ಲಿ ಖಿನ್ನತೆಯು ಮೂರರಿಂದ ಐದು ಪಟ್ಟು ಹೆಚ್ಚಾಗಿರುವುದು ಎಂದು ಅಧ್ಯಯನಗಳು ಹೇಳಿವೆ.


  • ಆಘಾತದ ಅಲ್ಪಾವಧಿ ಮತ್ತು ದೀರ್ಘಾವಧಿ ಪರಿಣಾಮಗಳು

    ಆಘಾತದ ಎಲ್ಲಾ ಪರಿಣಾಮಗಳು ಅಲ್ಪಕಾಲಿಕ ಅಥವಾ ವಾರ ಹಾಗೂ ಕೆಲವೊಂದು ತಿಂಗಳು, ವರ್ಷಗಳ ಕಾಲ ಇರಬಹುದು. ಆಘಾತದ ಪರಿಣಾಮವನ್ನು ತಕ್ಷಣವೇ ಗುರುತಿಸಿದರೆ ಆಗ ಇದು ಶಾಶ್ವತವಾಗಿ ಕಾಡುವುದನ್ನು ತಪ್ಪಿಸಬಹುದು. ಇದನ್ನು ಆದಷ್ಟು ಬೇಗ ಪತ್ತೆ ಮಾಡಿದರೆ ಆಗ ಪೀಡಿತರು ಇದರಿಂದ ಚೇತರಿಸಿಕೊಳ್ಳುವ ಸಾಧ್ಯತೆಯು ಅಧಿಕವಾಗಿ ಇರುವುದು.

    ಆಘಾತದ ಅಲ್ಪಾವಧಿ ಹಾಗೂ ದೀರ್ಘಾವಧಿ ಪರಿಣಾಮಗಳು ಸಾಮಾನ್ಯವಾಗಿ ಒಂದೇ ರೀತಿಯಾಗಿ ಇರುವುದು. ಆದರೆ ದೀರ್ಘಾವಧಿಯ ಆಘಾತದ ಪರಿಣಾಮವು ತುಂಬಾ ತೀವ್ರವಾಗಿ ಇರುವುದು. ಆಘಾತದ ಬಳಿಕ ಅಲ್ಪಾವಧಿಗೆ ಮನಸ್ಥಿತಿ ಬದಲಾಗುವುದು ಸಾಮಾನ್ಯ. ಆದರೆ ಕೆಲವು ವಾರಗಳ ತನಕ ಮನಸ್ಥಿತಿ ಬದಲಾವಣೆ ಪರಿಣಾಮವು ಇದ್ದರೆ ಆಗ ಇದು ದೀರ್ಘಾವಧಿಗೆ ಪರಿಣಾಮ ಬೀರಬಹುದು.


  • ಸ್ವಯಂ ಮೌಲ್ಯಮಾಪನಕ್ಕಿಂತ ವೈದ್ಯರ ಭೇಟಿ ಸೂಕ್ತ

    ಆನ್ ಲೈನ್ ನಲ್ಲಿ ಕೆಲವೊಂದು ಮೌಲ್ಯಮಾಪನಗಳು ಲಭ್ಯವಿದೆ. ಆದರೆ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವ ಬದಲು ತಜ್ಞರಿಂದ ಮೌಲ್ಯಮಾಪನ ಮಾಡಿಸಿಕೊಳ್ಳುವುದು ಒಳ್ಳೆಯದು. ಪೀಡಿತರು ಅಥವಾ ಪ್ರೀತಿ ಪಾತ್ರರು ಕೆಲವೊಂದು ವಿಚಾರಗಳನ್ನು ನೋಡಲು ಇಷ್ಟಪಡದೆ ಇರಬಹುದು. ಆದರೆ ವೃತ್ತಿಪರರು ಇದನ್ನು ಸರಿಯಾಗಿ ಗುರುತಿಸುವರು ಮತ್ತು ಅವರಿಗೆ ಯಾವುದೇ ಪಕ್ಷಪಾತವಿರಲ್ಲ.


  • ಔಷಧಿ ಅಗತ್ಯವೇ?

    ಬೇರೆ ಯಾವುದೇ ರೀತಿಯ ಮಾನಸಿಕ ತೊಂದರೆಗೆ ವಿರುದ್ಧವಾದ ಆಘಾತವು ಒಂದು ಘಟನೆ ಅಥವಾ ಅನುಭವದ ಪರಿಣಾಮವಾಗಿರುವುದು. ಕೆಲವೊಂದು ಔಷಧಿಗಳಿಂದ ಇದನ್ನು ನಿವಾರಣೆ ಮಾಡಬಹುದು. ಎಲ್ಲಾ ರೀತಿಯ ಆಘಾತಕ್ಕೆ ಔಷಧಿಯು ಬೇಕೆಂದಿಲ್ಲ. ಆದರೆ ಆತಂಕ ಮತ್ತು ಖಿನ್ನತೆಗೆ ಇದು ತುಂಬಾ ಪ್ರಭಾವಿಯಾಗಿರುವ ಚಿಕಿತ್ಸಾ ವಿಧಾನವಾಗಿರುವುದು. ಔಷಧಿಯು ಬೇಕೇ ಎಂದು ತಿಳಿಯಲು ನೀವು ವೈದ್ಯರಿಂದ ಸರಿಯಾದ ಸಲಹೆ ಪಡೆದುಕೊಳ್ಳಬೇಕು.


  • ಆಘಾತಕ್ಕೆ ಮಾತ್ರೆಗಳು: ಕೆಲವೊಂದು ಆಯ್ಕೆಗಳು

    ಪೀಡಿತರ ಮಾನಸಿಕ ಮತ್ತು ವೈದ್ಯಕೀಯ ಇತಿಹಾಸವನ್ನು ನೋಡಿಕೊಂಡು, ಅದೇ ರೀತಿಯಾಗಿ ಆಘಾತದ ತೀವ್ರತೆ ಹಾಗೂ ಲಕ್ಷಣಗಳನ್ನು ನೋಡಿಕೊಂಡು ಔಷಧಿ ಸೂಚಿಸಬಹುದು. ಖಿನ್ನತೆಯು ತೀವ್ರವಾಗಿದ್ದರೆ ಮತ್ತು ಇದು ದೀರ್ಘಕಾಲದ ತನಕ ಮುಂದುವರಿದರೆ ಆಗ ಇದಕ್ಕೆ ಖಿನ್ನತೆ ವಿರೋಧಿ ಔಷಧಿ ನೀಡುವ ಮೂಲಕ ಚಿಕಿತ್ಸೆ ನೀಡಬಹುದು. ಮೂರು ತಿಂಗಳಿಗಿಂತಲೂ ಹೆಚ್ಚು ಕಾಲ ಕಾಡುವಂತಹ ಖಿನ್ನತೆಯ ಪ್ರಸಂಗವನ್ನು ವೈದ್ಯಕೀಯವಾಗಿ ಖಿನ್ನತೆ ಎಂದು ಹೇಳಲಾಗುತ್ತದೆ. ಆಘಾತಕ್ಕೆ ಒಳಗಾಗುವಂತಹವರು ಹೆಚ್ಚಾಗಿ ಆತಂಕದಿಂದ ಬಳಲುತ್ತಿರುವರು ಮತ್ತು ಇದಕ್ಕೆ ಆತಂಕ ವಿರೋಧಿ ಔಷಧಿಗಳು ತುಂಬಾ ಪರಿಣಾಮಕಾರಿ ಆಗಿರುವುದು.


  • ಔಷಧಿಯ ಅಡ್ಡ ಪರಿಣಾಮಗಳು

    ಆಘಾತದ ಲಕ್ಷಣಗಳಿಗೆ ಔಷಧಿ ನೀಡುವುದೇ ಅಥವಾ ಬೇಡವೇ ಎನ್ನುವುದು ಒಂದು ರೀತಿಯ ವೈದ್ಯಕೀಯ ಗೊಂದಲವಾಗಿದೆ. ಎಲ್ಲಾ ರೀತಿಯ ಔಷಧಿಗಳಲ್ಲೂ ತನ್ನದೇ ಆಗಿರುವಂತಹ ಅಡ್ಡಪರಿಣಾಮಗಳು ಇರುವುದು ಮತ್ತು ವ್ಯಕ್ತಿಯ ದೇಹರಚನೆ ಹಾಗೂ ಔಷಧಿಯ ಮೇಲೆ ಇದರ ತೀವ್ರತೆಯು ಅವಲಂಬಿಸಿರುವುದು. ಕೆಲವೊಂದು ಅಡ್ಡಪರಿಣಾಮಗಳನ್ನು ಬೇರೆಲ್ಲದಕ್ಕಿಂತಲೂ ಚೆನ್ನಾಗಿ ನಿಭಾಯಿಸಬಹುದು ಮತ್ತು ಕೆಲವೊಂದು ಸಾಮರ್ಥ್ಯದ ನಕಾರಾತ್ಮಕ ಅಡ್ಡ ಪರಿಣಾಮಗಳು ರೋಗಿಗೆ ತುಂಬಾ ಲಾಭಕಾರಿ ಆಗಿ ಪರಿಣಮಿಸಹುದು.


  • ಆಘಾತಕ್ಕೊಳಗಾದವರು ಡ್ರಗ್ಸ್ ಗೆ ದಾಸರಾಗುವ ಸಾಧ್ಯತೆ

    ಕೆಲವೊಂದು ಸಂದರ್ಭದಲ್ಲಿ ಆಘಾತ ಪೀಡಿತವು ಸ್ವಯಂ ಆಗಿ ಈ ಡ್ರಗ್ಸ್ ಅನ್ನು ತೆಗೆದುಕೊಳ್ಳಬಹುದು ಮತ್ತು ಆಘಾತದ ಪರಿಣಾಮವನ್ನು ದೂರ ಮಾಡಲು ಪ್ರಯತ್ನಿಸಬಹುದು. ಸರ್ಕಾರಿ ಅಂಕಿಅಂಶಗಳ ಪ್ರಕಾರ, 16ರ ಹರೆಯಕ್ಕಿಂತ ಕಡಿಮೆ ವಯಸ್ಸಿನಲ್ಲಿ ಆಘಾತಕ್ಕೆ ಒಳಗಾಗುವಂತಹ ಶೇ.25ರಷ್ಟು ಜನರು ಡ್ರಗ್ಸ್ ಮತ್ತು ಆಲ್ಕೋಹಾಲ್ ಗೆ ದಾಸರಾಗುವಂತಹ ಸಾಧ್ಯತೆಯು ಹೆಚ್ಚಾಗಿರುವುದು.


  • ಔಷಧಿಯ ಓವರ್ ಡೋಸ್

    ದೈಹಿಕವಾಗಿ ಹಾನಿ ಉಂಟು ಮಾಡಲು ಪ್ರಯತ್ನಿಸುವ ವೇಳೆ ಯಾರಾದರೂ ಔಷಧಿ ಚುಚ್ಚಿದರೆ, ಆಗ ಇದು ಓವರ್ ಡೋಸ್ ಆಗುವ ಸಾಧ್ಯತೆಗಳು ಇವೆ. ಓವರ್ ಡೋಸ್ ಎನ್ನುವುದು ಹೆಚ್ಚಾಗಿ ಮಾದಕ ದ್ರವ್ಯದೊಂದಿಗೆ ಸಂಭವಿಸುವುದು. ಆದರೆ ಇದು ಕೆಲವೊಂದು ಸಲ ಆಕಸ್ಮಿಕ ಮತ್ತು ಇನ್ನು ನಿಯಮಿತ ಸಂದರ್ಭದಲ್ಲಿ ನಡೆಯುವುದು. ಓವರ್ ಡೋಸ್ ನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಇದು ಮರುಕಳಿಸದಂತೆ ತಡೆಯಲು ವೃತ್ತಿಪರರ ನೆರವು ಪಡೆಯಬೇಕು.


  • ದೀರ್ಘಕಾಲದ ಆಘಾತದ ನೋವಿಗೆ ವೈದ್ಯರ ನೆರವು ಕಡ್ಡಾಯ

    ನೀವು ಅಥವಾ ನಿಮ್ಮ ಪ್ರೀತಿಪಾತ್ರರು ಆಘಾತದಿಂದ ಬಳಲುತ್ತಲಿದ್ದರೆ ಎಲ್ಲಾ ರೀತಿಯ ನೆರವು ಲಭ್ಯವಿದೆ. ಆಘಾತಕ್ಕೆ ವಿವಿಧ ರೀತಿಯ ಚಿಕಿತ್ಸೆಗಳು ಇವೆ ಮತ್ತು ಇದಕ್ಕೆ ವೈದ್ಯರ ನೆರವು ನೀಡುವರು. ಇದರ ಪರಿಣಾಮವಾಗಿ ಆಘಾತಕ್ಕೀಡಾದವರು ಬೇಗನೆ ಚೇತರಿಸಿಕೊಳ್ಳಬಹುದು. ತಿಂಗಳುಗಳ ಕಾಲ ಆಘಾತದ ನೋವು ಮನಸ್ಸಿಂದ ದೂರಾವಾಗದೇ ಇದ್ದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ.




ಜೀವನದಲ್ಲಿ ಯಾವುದಾದರೂ ಕೆಟ್ಟ ಘಟನೆಗಳು ಅಥವಾ ನಮ್ಮ ನಿರೀಕ್ಷೆಗಳಿಗೆ ವಿರುದ್ಧವಾಗಿ ಏನಾದರೂ ಸಾಗಿದರೆ ಆಗ ಖಂಡಿತವಾಗಿಯೂ ಆಘಾತವಾಗುವುದು. ಇದು ಕೆಲವು ಜನರಲ್ಲಿ ತುಂಬಾ ದೀರ್ಘ ಪರಿಣಾಮ ಬೀರುವುದು. ಇದು ಮಾನಸಿಕವಾಗಿಯೂ ಅವರ ಮೇಲೆ ಪರಿಣಾಮ ಬೀರಬಹುದು. ಈ ಆಘಾತದಿಂದಾಗಿ ಎಲ್ಲರಂತೆ ಸಾಮಾನ್ಯ ಜೀವನ ಸಾಗಿಸಲು ಸಾಧ್ಯವಾಗದೆ ಇರಬಹುದು. ಆಘಾತದಿಂದ ಕೆಲವೊಂದು ಸಲ ಖಿನ್ನತೆ ಹಾಗೂ ದೈನಂದಿನ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗದೆ ಇರಬಹುದು. ಭಾವನಾತ್ಮಕವಾಗಿ ಅವರು ಕುಸಿದು ಹೋಗುವರು. ಇದರಲ್ಲಿ ಕೆಲವೊಂದು ಘಟನೆಗಳು ಸಂಪೂರ್ಣವಾಗಿ ಮೌನಿಯಾಗುವಂತೆ ಕೂಡ ಮಾಡುವುದು. ಏನಿದು ಅಂತಹ ಆಘಾತ ಎಂದು ನೀವು ಕೇಳಬಹುದು. ಅಮೆರಿಕನ್ ಸೈಕಾಜಲಿ ಅಸೋಸಿಯೇಶನ್(ಎಪಿಎ) ಪ್ರಕಾರ ಆಘಾತ ಎಂದರೆ ಅದೊಂದು ತೀರ ನಕಾರಾತ್ಮಕವಾದ ಘಟನೆಗೆ ಭಾವನಾತ್ಮಕ ಪ್ರತಿಕ್ರಿಯೆ.

   
 
ಟೆಕ್ನಾಲಜಿ