Back
Home » ಸುದ್ದಿ
ಹುಬ್ಬಳ್ಳಿಯಲ್ಲಿ 14ರ ಬಾಲಕಿ ಮೇಲೆ ಅತ್ಯಾಚಾರ ಯತ್ನ
Oneindia | 16th Oct, 2019 04:47 PM

ಹುಬ್ಬಳ್ಳಿ, ಅಕ್ಟೋಬರ್ 16: ನಿನ್ನ ತಂದೆ ತಾಯಿ ದರ್ಗಾಕ್ಕೆ ಕರೆದುಕೊಂಡು ಬಾ ಎಂದಿದ್ದಾರೆ ಎಂದು ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಎಸ್ ಎಂ‌ ಕೃಷ್ಣ ನಗರದಲ್ಲಿ ತನ್ನ ಅಜ್ಜಿಯ ಮನೆಯಲ್ಲಿದ್ದ 14 ವರ್ಷದ ಬಾಲಕಿಯನ್ನು ಬೈಕ್ ನಲ್ಲಿ ಬಂದ ಯುವಕನೊಬ್ಬ ನಿನ್ನ ತಂದೆ ತಾಯಿ ಅಲ್ತಾಫ್ ನಗರದ ದರ್ಗಾದಲ್ಲಿದ್ದಾರೆ. ನಿನ್ನ ಕರೆದುಕೊಂಡು ಬಾ ಅಂತ ಹೇಳಿದ್ದಾರೆ ಎಂದು ನಂಬಿಸಿ ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದಾನೆ.

ಪತಿಯ ಚಿಕಿತ್ಸೆಗೆಂದು ಹೋಗಿದ್ದ ಮಹಿಳೆ ಮೇಲೆ ವೈದ್ಯರಿಂದ ಅತ್ಯಾಚಾರ

ಆತನ ಬೈಕನ್ನು ಆಟೋದಲ್ಲಿ ಹಿಂಬಾಲಿಸಿದ ನಾಲ್ವರು ಅಂಚಟಗೇರಿ ಕ್ರಾಸ್ ವರೆಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿ ಅಲ್ಲಿಯೇ ಬಾಲಕಿಯನ್ನು ಬಿಟ್ಟು ಹೋಗಿದ್ದಾರೆ. ತೀವ್ರ ಅಸ್ವಸ್ಥಗೊಂಡ ಬಾಲಕಿಯನ್ನು ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸಂಬಂಧ ಕೆಬಾಪೇಟೆ ಪೊಲೀಸ್ ಠಾಣೆಯಲ್ಲಿ ‌ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

   
 
ಟೆಕ್ನಾಲಜಿ