Back
Home » ಸಮ್ಮಿಲನ
ವಿವಾಹದ ದಿನಾಂಕ ನಿಮ್ಮ ದಾಂಪತ್ಯದ ಭವಿಷ್ಯದ ಬಗ್ಗೆ ಏನನ್ನು ಸೂಚಿಸುತ್ತದೆ ಗೊತ್ತೆ?
Boldsky | 15th Oct, 2019 07:00 PM
 • ವಿವಾಹದ ಸಂಖ್ಯೆ ಲೆಕ್ಕ ಹಾಕುವುದು ಹೇಗೆ?

  ನಿಮ್ಮ ಮದುವೆಯಾಗಬೇಕೆಂದುಕೊಂಡ ದಿನ ಅಥವಾ ವಿವಾಹವಾದ ದಿನವನ್ನು ಒಟ್ಟಾಗಿ ಕೂಡಿಸಿ. ಉದಾಹರಣೆಗೆ ಅಕ್ಟೋಬರ್ 28, 2018 ಎಂದಾದರೆ, (1+0+2+8+2+0+1+8=(22) 2+2=4). ಈ ರೀತಿಯಾಗಿ ಕೂಡಿಸಿದಾಗ ಅಂತಿಮವಾಗಿ 4 ಸಂಖ್ಯೆ ನಿಮ್ಮ ವಿವಾಹದ ಸಂಖ್ಯೆಯಾಗಿರುತ್ತದೆ.


 • 1ನೇ ಸಂಖ್ಯೆಯ ವೈವಾಹಿಕ ಜೀವನಕ್ಕೆ ಹೊಂದಾಣಿಕೆಯೇ ಅದೃಷ್ಟ

  ಇಬ್ಬರ ಪ್ರಣಯವು ಅವಿಸ್ಮರಣೀಯವಾಗಿರುತ್ತದೆ. ನೀವು ಮತ್ತು ನಿಮ್ಮ ಪ್ರೇಮಿ,ಸಂಗಾತಿಯು ಹೇಗೆ ಭೇಟಿಯಾಗಿದ್ದೀರಿ ಎಂಬುದೇ ಒಂದು ಪ್ರಣಯ ಕಥೆಯಾಗಿರುತ್ತದೆ. ಇದು ವಿಧಿಯ ಕೈವಾಡವೇ ಸರಿ. ಒಂದನೇ ಸಂಖ್ಯೆ ದಿನದಂದು ಮದುವೆಯಾದವರು ಪರಸ್ಪರ ವಿಶ್ವಾಸಪಾತ್ರರು ಹಾಗೂ ಪ್ರೀತಿಯ ದಂಪತಿಗಳು ಎಂದು ಸೂಚಿಸುತ್ತದೆ. ಅಲ್ಲದೇ ಈ ದಂಪತಿಗಳ ವೈವಾಹಿಕ ಜೀವನದಲ್ಲಿ ಪ್ರಬುದ್ಧತೆಯನ್ನು ಒಂದನೇ ಅಂಕಿ ತೋರಿಸುತ್ತದೆ. ಭಿನ್ನಾಭಿಪ್ರಾಯಗಳು ಮತ್ತು ಅಸಮಾಧಾನಗಳ ನಡುವೆಯೂ ಪರಸ್ಪರ ಗೌರವಯುತವಾಗಿ ಬಾಳುವ ಸಾಮರ್ಥ್ಯವನ್ನು ಸಹ ತೋರಿಸುತ್ತದೆ. ಈ ಪ್ರೀತಿಯ ದಂಪತಿಗಳು ಒಟ್ಟಾರೆ ಪರಸ್ಪರ ಏಕತೆಯನ್ನು ಬಯಸುತ್ತಾರೆ. ಹೊಂದಾಣಿಕೆ ಮತ್ತು ತಿಳುವಳಿಕೆಯು ಒಂದೇ ಸಂಖ್ಯೆಯ ದಿನದಂದು ವಿವಾಹವಾದವರ ಯಶಸ್ವೀ ಜೀವನದ ಕೀಲಿಯಾಗಿದೆ!


 • 2 ಅಂಕಿಯ ದಾಂಪತ್ಯಕ್ಕೆ ಪರಿಪಕ್ವತೆಯೇ ಆಸ್ತಿ

  ನೀವು ಎರಡನೇ ಅಂಕಿಯ ದಿನದಂದು ವಿವಾಹವಾಗಲು ಬಯಸಿದ್ದರೆ ನೀವು ತುಂಬಾ ಖಾಸಗಿ ಅಥವಾ ಬೃಹತ್ ಸಾರ್ವಜನಿಕ ವಿವಾಹವನ್ನು ಬಯಸುತ್ತೀರಿ. ಈ ದಿನದಲ್ಲಿ ವಿವಾಹವಾಗುವವರು ಓಡಿಹೋಗಿ ಅಥವಾ ರಹಸ್ಯವಾಗಿ ವಿವಾಹವಾಗಬೇಕಾಗಬಹುದು. ವಿವಾಹದ ಯೋಜನೆಗಳನ್ನು ಮಾಡುವಾಗ ನಿಮ್ಮ ತಾಯಿಯ ಸಲಹೆಯನ್ನು ಬಲವಾಗಿ ಒಪ್ಪುತ್ತೀರಿ ಅಥವಾ ತಿರಸ್ಕರಿಸುತ್ತೀರಿ. ಇದರ ನಡುವೆ ಯಾವುದೇ ಆಯ್ಕೆ ಅವರಿಗೆ ಇರುವುದಿಲ್ಲ.

  ಈ ದಿನದಂದು ವಿವಾಹವಾದ ದಂಪತಿಗಳಲ್ಲಿ ಭಾವನಾತ್ಮಕ ಪರಿಪಕ್ವತೆಯ ಕೊರತೆಯಾಗಿರಬಹುದು, ಆದರೆ ಪರಿಪಕ್ವತೆಯು ಇಬ್ಬರ ಯಶಸ್ಸಿನ ಅಮೂಲ್ಯ ಆಸ್ತಿಯಾಗಿದೆ. ನಿಮ್ಮ ಮದುವೆಯ ದಿನ ಎಲ್ಲರೂ ಕಣ್ಣೀರು ಹಾಕಿದರೆ ನೀವು ಆಶ್ಚರ್ಯಪಡಬೇಕಿಲ್ಲ, ಏಕೆಂದರೆ ಶುಭಸಮಾರಂಭವು ಖಂಡಿತವಾಗಿಯೂ ಭಾವನಾತ್ಮಕವಾಗಿಯೇ ಇರುತ್ತದೆ.


 • 3ನೇ ಅಂಕಿಯ ದಾಂಪತ್ಯ ರಹಸ್ಯ ಹಣ

  ಮೂರನೇ ಸಂಖ್ಯೆಯ ದಿನ ನಿಮ್ಮ ವಿವಾಹವಾದರೆ ನೀವು ಆರ್ಥಿಕವಾಗಿ ಅದೃಷ್ಟವಂತರಾಗುತ್ತೀರಿ. ನಿಮ್ಮಬ್ಬರ ಬಂಧನವು ಅದೃಷ್ಟದ ಮೂಲಕ ನಿಮ್ಮ ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತದೆ. ನಿಮ್ಮಿಬ್ಬರ ದಾಂಪತ್ಯದ ಬಗ್ಗೆ ಕುಟುಂಬಸ್ಥರು ಮತ್ತು ಸ್ನೇಹಿತರು ಏನು ಯೋಚಿಸುತ್ತಿದ್ದಾರೆ ಎಂಬುದರ ಬಗ್ಗೆ ನೀವಿಬ್ಬರೂ ಅತಿಯಾಗಿ ಕಾಳಜಿ ವಹಿಸುತ್ತೀರಿ. ನಿಮ್ಮ ವಿವಾಹವು ಅತ್ಯಂತ ವಿಜೃಂಭಣೆಯ ಮತ್ತು ಆಕರ್ಷಕ ವಿವಾಹವಾಗಿರುವ ಸಾಧ್ಯತೆ ಇದೆ. ಈ ದಂಪತಿಗಳು ಹೆಚ್ಚು ನಿರೀಕ್ಷಿಸುವುದು ಒಳಿತಲ್ಲ. ಕಾರಣ ಇಬ್ಬರ ನಿರೀಕ್ಷೆಗಳಿಂದ ಸಂತೋಷಕ್ಕಿಂತ ಹೆಚ್ಚಾಗಿ ನಿರಾಶೇಗಳೇ ಎದುರಾಗುತ್ತದೆ.


 • 4ನೇ ಸಂಖ್ಯೆಯ ಜೋಡಿ ಮಾಡುತ್ತದೆ ಸಾಧನೆಯ ಮೋಡಿ

  4ನೇ ಸಂಖ್ಯೆ ವೈವಾಹಿಕ ಜೀವನಕ್ಕೆ ಕಾಲಿಡುವವರಿಗೆ ಅತೀ ಮಹತ್ವದ ಮತ್ತು ವೈಶಿಷ್ಟ್ಯಪೂರ್ಣ ಸಂಖ್ಯೆಯಾಗಿದೆ. ಕಾರಣ ಈ ದಿನದಲ್ಲಿ ಮದುವೆಯಾದವರು ಪರಸ್ಪರ ಬಹಳ ನಿಷ್ಠಾವಂತರಾಗಿರುತ್ತಾರೆ ಹಾಗೂ ಸಾವಿನ ಕೊನೆಯ ಕ್ಷಣದವರೆಗೂ ಒಟ್ಟಾಗಿಯೇ ಇರುತ್ತಾರೆ.

  ಆದ್ದರಿಂದಲೇ ಮದುವೆಯ ನಂತರ ಬರುವ ಎಲ್ಲ ಜವಾಬ್ದಾರಿಗಳ ಬಗ್ಗೆಯೂ ಇಬ್ಬರೂ ಚರ್ಚಿಸಿದ್ದರೆ ಮತ್ತು ಇಬ್ಬರಿಗೂ ಸಹಮತವಿದ್ದರೆ, ಅಲ್ಲದೆ ವೈವಾಹಿಕ ಜೀವನದ ಸಾಧಕ-ಬಾಧಕಗಳ ಬಗ್ಗೆ ಇಬ್ಬರಿಗೂ ಸ್ಪಷ್ಟ ಚಿತ್ರಣವಿದ್ದರೆ ಬಹುಶಃ ನೀವು ಮದುವೆಯಾಗಲು ನಾಲ್ಕನೇ ಅಂಕಿಯ ದಿನವನ್ನೇ ಬಹುತೇಕರು ಆರಿಸಿಕೊಳ್ಳುತ್ತೀರಿ.

  ಈ ದಂಪತಿಗಳು ಅಸಾಧ್ಯವೆಂದು ತೋರುವಂತಹ ಗುರಿಗಳನ್ನು ಸಹ ಒಟ್ಟಾಗಿ ಸೇರಿ ಕೆಲಸ ಮಾಡಿ ಸಾಧಿಸಬಲ್ಲ ದಂಪತಿಗಳಾಗಿರುತ್ತಾರೆ. ಉದಾಹರಣೆಗೆ ವ್ಯವಹಾರವನ್ನು ಯಶಸ್ವಿಯಾಗಿ ಒಟ್ಟಿಗೆ ನಡೆಸುವುದು ಅಥವಾ ಮನೆ, ಆಸ್ತಿ ಖರೀದಿಸುವುದು ಸೇರಿದಂತೆ ಒಂದೇ ಬ್ಯಾಂಕ್ ಖಾತೆ ಹೊಂದುವುದು ಮತ್ತು ಪ್ರತಿ ಯೋಜನೆಯು ಒಟ್ಟಾಗಿಯೇ ಮಾಡುತ್ತಾರೆ. ಯಾವುದೇ ವಿಷಯವಾಗಿರಲಿ ಮನೆ ಖರೀದಿಸುವುದರಿಂದ ಹಿಡಿದು ನಿಮ್ಮ ಮಕ್ಕಳನ್ನು ಹೊಂದುವವರೆಗೆ ಬಹಳ ಎಚ್ಚರಿಕೆಯಿಂದ ಸಮಯ ಮತ್ತು ಯೋಜನೆಯನ್ನು ರೂಪಿಸುತ್ತಾರೆ.


 • 5ನೇ ಅಂಕಿಯದ್ದು ಕ್ರಿಯಾತ್ಮಕ ವಿವಾಹ

  ನಿಮ್ಮ ಮದುವೆ ದಿನವಾಗಿ ನೀವು ಐದು ಸಂಖ್ಯೆಯನ್ನು ಆಯ್ಕೆ ಮಾಡಿದ್ದರೆ ನೀವು ಮತ್ತು ನಿಮ್ಮ ಸಂಗಾತಿ ಪರಸ್ಪರ ಎಷ್ಟು ಚೆನ್ನಾಗಿ ಸಂವಹನ ನಡೆಸುತ್ತೀರಿ ಎಂಬುದಕ್ಕೆ ನೀವು ಒತ್ತು ನೀಡುತ್ತಿರಬಹುದು. ಈ ದಿನದಂದು ವಿವಾಹವಾದರೆ ಕ್ರಿಯಾತ್ಮಕ ವಿವಾಹವಾಗಲಿದೆ. ಇಬ್ಬರೂ ಏಕತಾನತೆ ಮತ್ತು ಬೇಸರದ ವಿರುದ್ಧ ಹೋರಾಡುವ ಅಗತ್ಯವಿರುತ್ತದೆ, ಆದ್ದರಿಂದ ಕೆಲವು ವೈಯಕ್ತಿಕ ಹಿತಾಸಕ್ತಿಗಳನ್ನು ಇಬ್ಬರೂ ಹಂಚಿಕೊಳ್ಳುವುದು ಬುದ್ಧಿವಂತಿಕೆಯ ಲಕ್ಷಣವಾಗಿರುತ್ತದೆ. ಈ ದಿನದಂದು ವಿವಾಹವಾದವರು ಪ್ರತಿಯೊಬ್ಬರಿಗೂ ನಿಮ್ಮದೇ ಸ್ಥಳ, ನಿಮ್ಮದೇ ಸ್ವಂತ ಕೆಲಸದ ಸ್ಥಳ ಮತ್ತು ಸಾಕಷ್ಟು ಏಕಾಂತದ ಸಮಯವನ್ನು ಬಯಸುತ್ತೀರಿ.


 • 6ನೇ ಸಂಖ್ಯೆಯ ದಿನದ ದಂಪತಿಗೆ ಶುಕ್ರನ ಅನುಗ್ರಹ

  ಆರನೇ ಅಂಕಿಯ ದಿನ ವಿವಾಹವಾದ ಮಹಿಳೆಯ ಮೇಲೆ ಶುಕ್ರನ ಆಶೀರ್ವಾದ ಸದಾ ಇರುತ್ತದೆ. ಶುಕ್ರನ ಅನುಗ್ರಹದಿಂದ ಪ್ರೀತಿ, ವಾತ್ಸಲ್ಯ, ಶಾಂತಿ ಮತ್ತು ಸಂತೋಷಗಳು ಇವರ ದಯಪಾಲಿಸಿರುತ್ತದೆ. ಇದರರ್ಥ ಯಾವುದೇ ಸವಾಲು ಇಲ್ಲವೆಂದಲ್ಲ ಅಥವಾ ಮಾಂತ್ರಿಕ ಮೋಡಿಗೆ ಒಳಗಾಗಿದ್ದೀರಿ ಎಂದಲ್ಲ. ಇಂಥ ಅದ್ಭುತವಾದ ವೈವಾಹಿಕ ಆರಂಭವನ್ನು ಕಾಪಾಡಿಕೊಳ್ಳಲು ಜವಾಬ್ದಾರಿ, ವಿಶ್ವಾಸ ಮತ್ತು ಕಾಳಜಿಯು ಅಗತ್ಯ ಹೆಚ್ಚೇ ಇರುತ್ತದೆ. ಈ ದಂಪತಿಗಳು ಕಠಿಣ ಮತ್ತು ಸುದೀರ್ಘ ಸಮಯ ಒಟ್ಟಿಗೆ ಕೆಲಸ ಮಾಡಲು ಸಿದ್ಧರಿರುತ್ತಾರೆ, ಚರ್ಚೆಗಳು ಮತ್ತು ವಿಷಯಗಳನ್ನು ಯೋಜಿಸಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆ. ಏಕೆಂದರೆ ಮದುವೆ, ವೈವಾಹಿಕ ಜೀವನವು ಇಬ್ಬರ ಜೀವನದಲ್ಲಿ ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತದೆ.


 • 7ನೇ ಸಂಖ್ಯೆಯ ದಿನದ ವಿವಾಹಕ್ಕೆ ಎಚ್ಚರ ಅತ್ಯಗತ್ಯ

  ಮದುವೆಯಾಗಲು ಏಳನೇ ಅಂಕಿ ಕೂಡಿಬರುವ ದಿನವನ್ನು ನೀವು ಆಯ್ಕೆ ಮಾಡುತ್ತೀರಾದರೆ ಸ್ವಲ್ಪ ಎಚ್ಚರದಿಂದಿರಿ. ಏಕೆಂದರೆ ಒಳ್ಳೆಯದಕ್ಕಿಂತ ಸಮಸ್ಯೆಗಳೇ ಹೆಚ್ಚು ಬರಬಹುದು. ಏಳನೇ ಸಂಖ್ಯೆಯನ್ನು ಯುರೇನಸ್ ಗ್ರಹವು ಆಳುತ್ತಿದೆ. ಕೊನೆಕ್ಷಣದಲ್ಲಿ ಯೋಜಿತ ಕೆಲಸಗಳು ಈಡೇರದ ಸಂಕೇತವನ್ನು ಏಳು ಸೂಚಿಸುತ್ತದೆ. ವಿವಾಹಕ್ಕೆ ನಿಗದಿಯಾದ ಸ್ಥಳ ಬದಲಾಗಬಹುದು, ವಿಮಾನದ ಟಿಕೆಟ್ ಕಳೆದುಹೋಗಬಹುದು, ಅಪಘಾತಗಳು, ಹೊಂದಿಕೊಳ್ಳದ ವಸ್ತ್ರಗಳು ಹೀಗೆ ಅಶುಭಗಳನ್ನೇ ಹೆಚ್ಚುಪ್ರತಿನಿಧಿಸುತ್ತದೆ. ಆದರೆ ಯಾವುದೇ ಯೋಜನೆಗಳು ಅದಲುಬದಲಾದರೂ ಶುಭ ಕಾರ್ಯ ಮಾತ್ರ ಸಾಂಗವಾಗಿ ನೆರವೇರುತ್ತದೆ.

  ಏಳನೇ ಸಂಖ್ಯೆಯು ಉಗ್ರ ಪ್ರಣಯವನ್ನು ಪ್ರತಿನಿಧಿಸುತ್ತದೆ. ಇದ್ದಕ್ಕಿದ್ದಂತೆ ವಿವಾಹದ ನಂತರ ಅಪರಿಚಿತರನ್ನು ಮದುವೆಯಾಗಿರುವುದನ್ನು ಕಂಡುಕೊಳ್ಳುತ್ತೀರಿ, ಇಬ್ಬರ ಜೋಡಿಯು ಅವಿವೇಕದ ನಿರ್ಧಾರವಾಗಿರುವ ಸಾಧ್ಯತೆ ಇದೆ. ನಿಮ್ಮಿಬ್ಬರ ಜೋಡಿಯನ್ನು ನಿಮ್ಮ ಪೊಷಕರು ಒಪ್ಪದೇ ಇರುವ ಸಾಧ್ಯತೆ ಕೂಡ ಇದೆ.


 • 8ನೇ ಅಂಕಿಯಂದು ಪ್ರಣಕ್ಕೆ ಒತ್ತು ನೀಡುವ ದಂಪತಿ

  ನೀವು ಮದುವೆಯಾಗುವ ಸಂಗಾತಿಯೊಂದಿಗೆ ಎಲ್ಲಾ ರೀತಿಯಲ್ಲೂ ಹೊಂದಾಣಿಕೆ ಆಗಲು ಬಯಸುತ್ತೀರಿ ಎಂಬುದನ್ನು ಹಾಗೂ ವಿಶೇಷವಾಗಿ ಲೈಂಗಿಕ ಸಂಬಂಧಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತೀರಿ ಎಂದು 8ನೇ ಸಂಖ್ಯೆಯು ಸೂಚಿಸುತ್ತದೆ. ಈ ದಂಪತಿಗಳು ಕಿಕ್ಕಿರಿದ ಜನರ ನಡುವೆಯು ಪರಸ್ಪರ ನೋಟವನ್ನು ವಿನಿಮಯ ಮಾಡಿಕೊಳ್ಳುವಷ್ಟು ಮಟ್ಟಿಗೆ ಪ್ರಣಯ ಜೀವನವನ್ನು ಅನುಭವಿಸುತ್ತಾರೆ. ಇವರು ಇವ್ವರು ಇರುವುದೇ ಪರಸ್ಪರರಿಗಾಗಿ ಎನ್ನುವಂತೆ ಬದುಕುತ್ತಾರೆ. ಇವರು ಒಮ್ಮೆ ಜೋಡಿಯಾದರೆ ಯಾರೂ ಇವರನ್ನು ಬೇರ್ಪಡಿಸಲಾಗದು!.


 • 9ನೇ ಸಂಖ್ಯೆಯ ವಿವಾಹಕ್ಕೆ ದೈವದ ವಿಧಿಯಾಟದ ಸಾಧ್ಯತೆ

  ಒಂಬತ್ತು ಸಂಖ್ಯೆಯ ದಿನದಂದು ವಿವಾಹವಾದವರು ಸಕಲ ಸಂಪ್ರಾದಾಯಗಳನ್ನು ಅನುಸರಿಸಿ, ಆಧ್ಯಾತ್ಮಿಕ ವಿಷಯಗಳಿಗೆ ಒತ್ತು ಕೊಟ್ಟು ವಿವಾಹವಾಗುವ ಸಾಧ್ಯತೆ ಹೆಚ್ಚಿದೆ. ಈ ದಿನದಲ್ಲಿ ವಿವಾಹವಾದ ದಂಪತಿಗಳಲ್ಲಿ ಒಬ್ಬರು ವೈದ್ಯಕೀಯ ಅಭ್ಯಾಸ ಮಾಡಿರಬೇಕು ಅಥವಾ ವಿಕಲಚೇತನರಿರಬಹುದು. ಈ ದಂಪತಿಗಳ ಜೀವನ ಕಾಂತಿಹೀನ ಮಾಡುವ ಅಥವಾ ಮಂಕಾಗಿಸುವಂತೆ ಆ ದೈವ ಒಂದು ರೀತಿಯ ವಿಧಿಯಾಟವನ್ನು ಆಡುವ ಸಾಧ್ಯತೆ ಇದೆ. ಈ ಬಗ್ಗೆ ದಂಪತಿಗಳಿಗೆ ತಿಳಿದಿರಬಹುದು ಅಥವಾ ತಿಳಿಯದೆಯೂ ಇರಬಹುದು.
ವಿವಾಹ ಎಂದರೆ ಪ್ರತಿ ಹೆಣ್ಣು-ಗಂಡಿನಲ್ಲಿ ಸಾಕಷ್ಟು ಕನಸು, ಆಸೆಗಳು ಚಿಗುರೊಡೆದಿರುತ್ತದೆ. ತಮ್ಮ ವೈವಾಹಿಕ ಬದುಕು ಹೀಗೆ ಇರಬೇಕು, ಇಬ್ಬರಲ್ಲೂ ಅನ್ಯೋನ್ಯತೆ, ಪ್ರೀತಿ, ವಿಶ್ವಾಸ ಕೊನೆಯ ಕ್ಷಣದವರೆಗೂ ಉಳಿಯಬೇಕು ಎಂಬೆಲ್ಲಾ ಇಚ್ಚೆಯನ್ನು ಹೊಂದಿರುತ್ತಾರೆ. ಆದರೆ ಇದೆಲ್ಲಾ ಕೇವಲ ಕಾಲ್ಪನಿಕವಾಗಿಯೇ ಇರುತ್ತದೆಯೇ ವಿನಃ ನಿಜವಾದ ಬದುಕು ವಿವಾಹದ ನಂತರವೇ ಅರಿಯುತ್ತದೆ.

ಆದರೆ ವಿವಾಹಕ್ಕೂ ಮುನ್ನವೇ ನಿಮ್ಮ ಬದುಕು ಹೇಗಿರಲಿದೆ ಎಂದು ತಿಳಿಯಬೇಕೆ ಹಾಗಿದ್ದರೆ ಸಂಖ್ಯಾಶಾಸ್ತ್ರ ಈ ಬಗ್ಗೆ ನಿಮಗೆ ಮಾಹಿತಿ ತಿಳಿಸಿಕೊಡಲಿದೆ. ವಿವಾಹದ ನಂತರ ನಿಮ್ಮಿಬ್ಬರ ಬದುಕು ಹೇಗಿರುತ್ತದೆ, ಈಗಾಗಲೇ ವಿವಾಹವಾದವರ ದಾಂಪತ್ಯ ಹೇಗಿದೆ, ಯಾವ ದಿನ ವಿವಾಹವಾದರೆ ನಿಮ್ಮಿಬ್ಬರ ಬದುಕು ಹಸನಾಗಿರುತ್ತದೆ ಎಂದು ನಿಮ್ಮ ಮದುವೆಯ ದಿನದ ಆಧಾರದ ಮೇಲೆ ಸಂಖ್ಯಾಶಾಸ್ತ್ರ ತಿಳಿಸಿಕೊಡುತ್ತದೆ.

   
 
ಟೆಕ್ನಾಲಜಿ