Back
Home » ಸುದ್ದಿ
ಸಫಾರಿ ವಾಹನದ ಮೇಲೆ ದಾಳಿ ನಡೆಸಲು ಓಡಿ ಬಂದ ಆನೆ
Oneindia | 11th Sep, 2019 03:46 PM

ಚಾಮರಾಜನಗರ, ಸೆಪ್ಟೆಂಬರ್ 11: ಬಂಡೀಪುರದಲ್ಲಿ ಮತ್ತೆ ವಾಹನವೊಂದರ ಮೇಲೆ ಒಂಟಿ ಸಲಗ ದಾಳಿ ನಡೆಸಲು ಮುಂದಾಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.

ಕರ್ನಾಟಕ ಕೇರಳ ನಡುವೆ ರಾತ್ರಿ ಮಾತ್ರ ಸಂಚಾರ ಬಂದ್

ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಘಟನೆ ನಡೆದಿದ್ದು, ಸಫಾರಿಗೆ ತೆರಳಿದ ಪ್ರವಾಸಿಗರಿದ್ದ ವಾಹನದ ಮೇಲೆ ಸಲಗವೊಂದು ದಾಳಿ ನಡೆಸಿದೆ. ಪ್ರಯಾಣಿಕರು ಸಫಾರಿ ವಾಹನದಲ್ಲಿ ಕುಳಿತು ಆನೆಯನ್ನು ನೋಡುತ್ತಿದ್ದಾಗ ಏಕಾಏಕಿ ಆನೆ ಓಡಿ ಬಂದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ.

ಆನೆ ಓಡಿಬರುತ್ತಿದ್ದುದನ್ನು ಕಂಡು ವಾಹನದೊಳಗಿದ್ದವರು ಬೆಚ್ಚಿಬಿದ್ದಿದ್ದಾರೆ. ಚಾಲಕ ತಕ್ಷಣ ವಾಹನವನ್ನು ವೇಗವಾಗಿ ಮುಂದಕ್ಕೆ ಓಡಿಸಿಕೊಂಡು ಹೋಗಿದ್ದಾನೆ. ಆನೆ ದಾಳಿಯ ಘಟನೆಗಳು ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಾಗುತ್ತಿದ್ದು, ಇನ್ನಾದರೂ ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕಿದೆ.

   
 
ಟೆಕ್ನಾಲಜಿ