Back
Home » ಟಿವಿ
'ಬಿಗ್ ಬಾಸ್ ಸೀಸನ್-7' ಸ್ಪರ್ಧಿಗಳ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗ
Oneindia | 11th Sep, 2019 05:00 PM
 • ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ

  ಬಿಗ್ ಬಾಸ್ ಸೀಸನ್ 7ನಲ್ಲಿ ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ. ಕಳೆದ ಬಾರಿ ಸೆಲೆಬ್ರಿಟಿಗಳ ಜೊತೆಗೆ ಕಾಮನ್ ಮ್ಯಾನ್ ಕೂಡ ಕಾಣಿಸಿಕೊಂಡದ್ದರು. ಆದ್ರೆ ಈ ಬಾರಿ ಕಾಮನ್ ಮ್ಯಾನ್ ಗೆ ಅವಕಾಶವಿಲ್ಲ. ಸಿನಿಮಾ, ಕಿರುತೆರೆ ಮತ್ತು ರಾಜಕೀಯರಂಗದ ಗಣ್ಯರಿಗೆ ಮಾತ್ರ ಈ ಬರಿಯ ಬಿಗ್ ಬಾಸ್ ಮಣೆ ಹಾಕಿದೆ. ಇನ್ನು ಬಾರಿ ಕೂಡ 15 ಜನ ಸ್ಪರ್ಧಿಗಳಿರುತ್ತಾರೆ.


 • ಪ್ರೋಮೊ ಶೂಟ್ ಪ್ರಾರಂಭ

  ಕಳೆದ 6 ಸೀಸನ್ ವರೆಗು ಯಶಸ್ವಿಯಾಗಿ ಬಿಗ್ ಬಾಸ್ ಹೋಸ್ಟ್ ಮಾಡಿರುವ ಕಿಚ್ಚ ಸುದೀಪ್ ಅವರ ಪ್ರೋಮೊ ಶೂಟಿಂಗ್ ಇಂದಿನಿಂದ ಪ್ರಾರಂಭವಾಗುತ್ತಿದೆ. ಪೈಲ್ವಾನ್ ರಿಲೀಸ್ ನ ಬ್ಯುಸಿಯ ನಡುವೆಯು ಕಿಚ್ಚ ಬಿಗ್ ಬಾಸ್-7 ಪ್ರೋಮೋ ಶೂಟ್ ನಲ್ಲಿ ಭಾಗಿಯಾಗುತ್ತಿದ್ದಾರೆ. ಇಂದು ಶೂಟ್ ಆಗುವ ಪ್ರೋಮೊ ಸೆಪ್ಟಂಬರ್ 13ರಿಂದ ಪ್ರಸಾರವಾಗಲಿದೆಯಂತೆ.


 • ವಾಹಿನಿ ಬದಲಾವಣೆ

  ಬಿಗ್ ಬಾಸ್ ಕನ್ನಡದ ನಾಲ್ಕು ಆವೃತ್ತಿಗಳು ಆರಂಭದಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಿತ್ತು. ಆಮೇಲೆ ಕಲರ್ ಸೂಪರ್ ವಾಹಿನಿ ಶಿಪ್ಟ್ ಆಗಿತ್ತು. ಕಾರಣ ಆ ವಾಹಿನಿಯನ್ನ ಮೇಲಕ್ಕೆ ತರಬೇಕು ಎಂಬ ಉದ್ದೇಶದಿಂದ ಬಿಗ್ ಬಾಸ್ ಅಂತಹ ದೊಡ್ಡ ಶೋವನ್ನ ಶಿಫ್ಟ್ ಮಾಡಿದ್ದರು. ಇದೀಗ ಬಿಗ್ ಬಾಸ್-7 ಮತ್ತೆ ಕಲರ್ಸ್ ಕನ್ನಡಕ್ಕೆ ಬಿಗ್ ಬಾಸ್ ಶಿಫ್ಟ್ ಆಗಿದೆ.


 • ಅಕ್ಟೋಬರ್ ನಲ್ಲಿ ಬಿಗ್ ಬಾಸ್ ಪ್ರಾರಂಭ

  ಬಿಗ್ ಬಾಸ್ ಯಾವಾಗ ಪ್ರಾರಂಭವಾಗುತ್ತೆ ಎನ್ನುವ ಕುತಹಲಕ್ಕೆ ತೆರೆಬಿದ್ದಿದೆ. ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಸೀಸನ್-7 ಅಕ್ಟೋಬರ್ 20ರಿಂದ ಪ್ರಾರಂಭವಾಗಲಿದೆಯಂತೆ. ಅಭಿಮಾನಿಗಳು ಕಿಚ್ಚನನ್ನು ಮತ್ತೆ ಕಿರುತೆರೆಯಲ್ಲಿ ನೋಡಿ ಕಣ್ತುಂಬಿಕೊಳ್ಳಬಹುದು.
ಬಿಗ್ ಬಾಸ್, ಕನ್ನಡ ಕಿರುತೆರೆ ವೀಕ್ಷಕರು ಕಾತುರದಿಂದ ಕಾಯುತ್ತಿರುವ ರಿಯಾಲಿಟಿ ಶೋ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಗ್ ಗಾಗಿ ಅಭಿಮಾನಿಗಳು ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ. ಈಗಾಗಲೆ ಬಿಗ್ ಬಾಸ್ ಸೀಸನ್ 7ಗೆ ಭರ್ಜರಿ ತಯಾರಿ ನಡೆಯುತ್ತಿದೆ.

'ಬಿಗ್ ಬಾಸ್ ಸೀಸನ್-7' ಪ್ರಸಾರದ ದಿನಾಂಕ ಬಹಿರಂಗ

ಅಕ್ಟೋಬರ್ ತಿಂಗಳಿಂದ ಪ್ರಾರಂಭವಾಗಿವ ಬಿಗ್ ಬಾಸ್ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಯಾರೆಲ್ಲ ಇರಲಿದ್ದಾರೆ ಎನ್ನುವ ಕುತೂಹಲಕ್ಕೆ ಕೊಂಡ ತೆರೆಬಿದ್ದಿದೆ. ಯಾಕಂದ್ರೆ ಕಳೆದ ಬಾರಿ ಬಿಗ್ ಬಾಸ್ ನಲ್ಲಿ ಸೆಲೆಬ್ರಿಟಿಗಳ ಜೊತೆಗೆ ಕಾಮನ್ ಮ್ಯಾನ್ ಕೂಡ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿದ್ದರು.

   
 
ಟೆಕ್ನಾಲಜಿ