Back
Home » ಸುದ್ದಿ
ವೈರಲ್ ವಿಡಿಯೋ: ಏನಾಶ್ಚರ್ಯ, ಡ್ರೈವರ್ ನಿದ್ದೆಹೋದರೂ ಓಡುತ್ತಿತ್ತು ಕಾರು!
Oneindia | 11th Sep, 2019 02:26 PM

ಮೆಸಾಚುಸೆಟ್ಸ್, ಸೆಪ್ಟೆಂಬರ್ 11: "ಬಸ್ಸು, ಕಾರು ಇತ್ಯಾದಿ ವಾಹನಗಳಲ್ಲಿ ಪ್ರಯಾಣ ಮಾಡುವಾಗ ಯಾರಿಗೆ ನಿದ್ದೆ ಬಂದರೂ ಸರಿ, ಆದರೆ ಚಾಲಕನಿಗೆ ನಿದ್ದೆ ಹತ್ತಿದರೆ ಮಾತ್ರ ಪ್ರಯಾಣಿಕರು ಚಿರನಿದ್ದೆಗೆ ಜಾರಬೇಕಾಗುತ್ತದೆ" ಎಂಬ ಮಾತು ಈ ಕಾಲಕ್ಕೆ ಸೂಟ್ ಆಗಲ್ಲ ಬಿಡಿ! ಈಗೆಲ್ಲ ಡ್ರೈವರ್ ನಿದ್ದೆ ಹೋದರೂ ಕಾರು ಸುರಕ್ಷಿತವಾಗಿ ಓಡುತ್ತದೆ.

ಹಬ್ಬದ ಸೀಸನ್ ನಲ್ಲಿ ಕಾರು ಖರೀದಿ ಡಿಸ್ಕೌಂಟ್, ಆಫರ್, ಕಡಿಮೆ ಬಡ್ಡಿದರ

ಅದಕ್ಕೆ ಒಂದು ಅತ್ಯುತ್ತಮ ಉದಾಹರಣೆ ಅಮೆರಿಕದ ಮೆಸಾಚುಸೆಟ್ಸ್ ನಲ್ಲಿ ಡ್ರೈವರ್ ಮತ್ತು ಡ್ರೈವರ್ ಪಕ್ಕ ಕುಳಿತಿದ್ದ ವ್ಯಕ್ತಿ ಇಬ್ಬರೂ ನಿದ್ದೆ ಹೋಗಿದ್ದರೂ ಕಾರು ಗಂಟೆಗೆ 90 ಕಿ.ಮೀ. ವೇಗದಲ್ಲಿ ಸುರಕ್ಷಿತವಾಗಿ ಓಡುತ್ತಿತ್ತು! ಯಾಕಂದ್ರೆ ಟೆಸ್ಲಾದ ಸೆಲ್ಫ್ ಡ್ರೈವಿಂಗ್ ಕಾರು ಅದು!

ದಕೋಟ ರಾಂಡಾಲ್ ಎಂಬ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಗಂಟೆಗೆ ಸುಮಾರು 90-95 ಕಿ.ಮೀ. ವೇಗದಲ್ಲಿ ಕಾರು ಚಲಾಯಿಸುತ್ತಿದ್ದ ಸಂದರ್ಭದಲ್ಲಿ ತಮ್ಮ ಪಕ್ಕದಲ್ಲಿ ಅಷ್ಟೇ ವೇಗವಾಗಿ ಹೋಗುತ್ತಿದ್ದ ಟೆಸ್ಲಾ ಕಾರಿನಲ್ಲಿ ಮುಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ವ್ಯಕ್ತಿಗಳೂ ನಿದ್ದೆ ಮಾಡುತ್ತಿದ್ದುದನ್ನು ಕಂಡರು. ಆದರೆ ಅದನ್ನು ಅವರಿಗೆ ತಿಳಿಸಲು ಸಾಧ್ಯವಾಗಲಿಲ್ಲ. 'ಕಾರು ಮಾತ್ರ ಸುರಕ್ಷಿತವಾಗಿ ಅಡೆತಡೆಗನ್ನೆಲ್ಲ ನಾಜೂಕಾಗಿ ದಾಟಿಕೊಂಡು ಸಾಗುತ್ತಿತ್ತು. ನಾನು ಕೇವಲ 45 ಸೆಕೆಂಡ್ ಗಳ ಕಾಲ ಮಾತ್ರವೇ ಆ ಕಾರಿನ ಬಳಿ ಇದ್ದೆ. ಈ ದೃಶ್ಯವನ್ನು ವಿಡಿಯೋ ಮಾಡಿದೆ. ನಂತರ ಏನಾಯ್ತು ಎಂಬುದು ನನಗೆ ಗೊತ್ತಿಲ್ಲ. ನಾನು ಕಾರನ್ನು ವೇಗವಾಗಿ ಮುಂದೆ ಓಡಿಸಿಕೊಂಡು ಬಂದೆ' ಎನ್ನುತ್ತಾರೆ ರಾಂಡಾಲ್.

ತಂತ್ರಜ್ಞ, ಉದ್ಯಮಿ, ಇಂಜಿನಿಯರ್ ಆಗಿರುವ ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿಯ ಕನಸಿನ ಸೆಲ್ಫ್ ಡ್ರೈವಿಂಗ್ ಕಾರು ಈಗಾಗಲೇ ಅಮೆರಿಕ, ಯುರೋಪಿನ ರಾಷ್ಟ್ರಗಳಲ್ಲಿ ರಸ್ತೆಗಿಳಿದಿವೆ. ರಸ್ತೆಯಲ್ಲಿ ಲೇನ್ ಅನ್ನು ಅನುಸರಿಸಿ, ಮುಂದಿನ ಕಾರಿನ ವೇಗವನ್ನು ಸೆನ್ಸಾರ್ ಮೂಲಕ ಪತ್ತೆ ಮಾಡಿ ಅದಕ್ಕೆ ತಕ್ಕಂತೆ ತನ್ನ ವೇಗವನ್ನೂ ಹೊಂದಿಸಿಕೊಂಡು, ಲೇನ್ ಬದಲಿಸಬೇಕಿದ್ದರೆ ಬದಲಿಸಿ, ಮ್ಯಾಪ್ ಮೂಲಕ ತಾನೇ ದಾರಿ ಹುಡುಕಿಕೊಂಡು, ಪಾರ್ಕಿಂಗ್ ಜಾಗವನ್ನೂ ಹುಡುಕಿ, ತಾನೇ ಪಾರ್ಕಿಂಗ್ ಸಹ ಮಾಡುವ ಈ ಕಾರು ತಂತ್ರಜ್ಞಾನ ಕ್ಷೇತ್ರದ ಕ್ರಾಂತಿ ಎನ್ನಿಸಿದೆ.

ಕಾರಿನಲ್ಲೇ ಮಲಗಿದ್ದ ವೃದ್ಧೆ ಎಚ್ಚರವಾಗುವಷ್ಟರಲ್ಲಿ ಕಾರೇ ಮಿಸ್ಸಿಂಗ್

ಡ್ರೈವರ್ ನಿದ್ದೆ ಹೋದ ಮೇಲೂ ಸುರಕ್ಷಿತವಾಗಿ ಓಡುತ್ತಿದ್ದ ಈ ಕಾರಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಸಾಕಷ್ಟು ಸದ್ದು ಮಾಡಿದೆ.

   
 
ಟೆಕ್ನಾಲಜಿ