Back
Home » ಸಿನಿ ಸಮಾಚಾರ
ಟ್ರೇಲರ್ ನೋಡಿಯೇ 'ಪೈಲ್ವಾನ್' ಚಿತ್ರದ ಭವಿಷ್ಯ ಹೇಳಿದ ರವಿಚಂದ್ರನ್
Oneindia | 11th Sep, 2019 09:59 AM
 • ಆ ಕೃಷ್ಣ ಗೆದ್ದಾಯ್ತು, ಈ ಕೃಷ್ಣನೂ ಗೆಲ್ಲುತ್ತಾರೆ

  ''ಇತ್ತೀಚಿಗೆ ಕುರುಕ್ಷೇತ್ರ' ಸಿನಿಮಾದಲ್ಲಿ ನಾನು ಕೃಷ್ಣನ ಗೆಟಪ್ ಹಾಕಿದ್ದೆ. ನನ್ನ ಕೈನಲ್ಲಿ ಅದು ಆಗುತ್ತದೆಯೇ ಎಂದು ಅನೇಕರು ಅನುಮಾನ ಪಟ್ಟಿದ್ದರು. ಆದರೆ, ಆ ಕೃಷ್ಣ ಗೆದಾಯ್ತು. ಈಗ ಈ ಕೃಷ್ಣ (ನಿರ್ದೇಶಕ ಕೃಷ್ಣ) ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ. ನಿರ್ದೇಶನದ ಜೊತೆಗೆ ಮೊದಲ ಬಾರಿಗೆ ಅವರು ನಿರ್ಮಾಣವನ್ನೂ ಮಾಡಿದ್ದಾರೆ. ಅವರಿಗೆ ಒಳ್ಳೆದಾಗಲಿ.''


 • 'ಪೈಲ್ವಾನ್' ಸಿನಿಮಾದಲ್ಲಿ ಒಂದು ಬೆಂಕಿ ಇದೆ

  ''ಒಂದು ಸಿನಿಮಾದಲ್ಲಿ ಒಂದು ಬೆಂಕಿ ಕಾಣಿಸಬೇಕು. ಜೋಷ್ ಇರಬೇಕು. ನಾಳೆ ಬೆಳಗ್ಗೆ ಹೋಗಿ ಸಿನಿಮಾ ನೋಡಬೇಕು ಅಂತ ಜನರಿಗೆ ಅನಿಸಬೇಕು. ಅದು ಪೈಲ್ವಾನ್ ಟ್ರೇಲರ್ ನಲ್ಲಿದೆ. ಟ್ರೇಲರ್ ಗೆ ಒಂದು ತಾಕತ್ತು ಇದೆ. ಸುದೀಪ್ ಹಾಗೂ ಡೈರೆಕ್ಟರ್ ತೂಕ ಅದಕ್ಕೆ ನೀಡಿದ್ದಾರೆ. ಸಿನಿಮಾದಲ್ಲಿಯೂ ಆ ತೂಕ ಇರುತ್ತದೆ.''

  'ಪೈಲ್ವಾನ್' ಮುಂಗಡ ಟಿಕೆಟ್ ಬುಕ್ಕಿಂಗ್ ಓಪನ್: ಮೊದಲ ಶೋ ಎಷ್ಟೊತ್ತಿಗೆ ಗೊತ್ತಾ?


 • ಒಂದು ವರ್ಷ, ಒಂದು ಸಿನಿಮಾಗಾಗಿ ಕಷ್ಟ

  ''ಸುದೀಪ್ ಹೇಗೆ 'ಪೈಲ್ವಾನ್' ಆಗಬಹುದು ಎನ್ನುವುದು ನನಗೂ ಇತ್ತು. ಒಬ್ಬ ಕಲಾವಿದ ಪಾತ್ರಕ್ಕಾಗಿ ತನ್ನನ್ನು ಅರ್ಪಿಸಿಕೊಂಡು ಪಾತ್ರಕ್ಕೆ ತಕ್ಕ ಹಾಗೆ ಸಿದ್ಧವಾಗುವುದು ಮೆಚ್ಚುವಂತದ್ದು. ತೂಕ ಹಾಕಿ, ಮತ್ತೆ ಅದನ್ನು ಇಳಿಸುವುದು ಬಹಳ ಕಷ್ಟ. ಒಂದು ವರ್ಷ, ಒಂದು ಸಿನಿಮಾಗೆ ಕಷ್ಟ ಪಡುವುದು, ಅದಕ್ಕೆ ಫಲ ಸಿಗುತ್ತದೆ ಎಂದು ತೋರಿಸುವುದು ದೊಡ್ಡದು. ಸುದೀಪ್ ಗೆ ಹ್ಯಾಟ್ಸಫ್.''


 • ನೂರು ಕೋಟಿ ಮುಟ್ಟುವುದು ಕಷ್ಟ ಅಲ್ಲ

  ''ಕನ್ನಡ ಚಿತ್ರಗಳು ನೂರು ಕೋಟಿ ಮುಟ್ಟುವುದು ಕಷ್ಟ ಅಲ್ಲ ಎನ್ನುವ ದಾರಿ ಬಂದಿದೆ. ಅದನ್ನು ನೋಡಿದಾಗ ಬಹಳ ಖುಷಿ ಆಗುತ್ತದೆ. ಮೂವತ್ತು ವರ್ಷದ ಹಿಂದೆಯಿಂದಲೂ ನಾವು ಯಾರಿಗೂ ಕಡಿಮೆ ಇಲ್ಲ ಎಂದು ಹೇಳಿಕೊಂಡು ಬರುತ್ತಿದೆ. ನಮ್ಮ ಸಿನಿಮಾವನ್ನು ಬೇರೆ ಭಾಷೆಯವರು ನೋಡುತ್ತಿದ್ದಾರೆ, ಕನ್ನಡ ಚಿತ್ರವೊಂದು ಇಡೀ ಇಂಡಿಯಾ ಸುತ್ತಿಕೊಂಡು ಬರುತ್ತದೆ, ಅದರಲ್ಲಿ ನನ್ನ ದೊಡ್ಡ ಮಗ ಇದ್ದಾನೆ ಎಂದಾಗ ಅದಕ್ಕಿಂತ ಖುಷಿ ಇನ್ನೆನಿದೆ.''

  ತೆಲುಗು ರಾಜ್ಯದಲ್ಲಿ ಕೆಜಿಎಫ್ ಗೆ ಸಿಕ್ಕಿದ್ದ ಬಲ ಪೈಲ್ವಾನ್ ಗೂ ಸಿಕ್ಕಿದೆ


 • ಕಷ್ಟಕ್ಕೆ ಫಲ ಸಿಕ್ಕೆ ಸಿಗುತ್ತದೆ

  ''ಇಂಡಸ್ಟ್ರಿ ಬೆಳೆಯಬೇಕು. ಹಿಂದೆ ಬರುವವರಿಗೆ ಈ ರೀತಿಯ ಸಿನಿಮಾಗಳು ಧೈರ್ಯ ನೀಡುತ್ತದೆ. ನಾವು ಖರ್ಚು ಮಾಡಬೇಕು, ಕಷ್ಟಕ್ಕೆ ಫಲ ಸಿಗುತ್ತದೆ ಎಂಬ ಉತ್ಸಾಹ ನೀಡುತ್ತದೆ. ಇವರೇ ನಿಜವಾದ ಹೀರೋಗಳು. ಸುದೀಪ್ ಪ್ರತಿ ಬಾರಿ ಇನ್ನೊಂದು ಹಂತ ಮೇಲೆ ಸಿನಿಮಾ ಮಾಡಲು ಹೊರಡುತ್ತಾನೆ. ಅದೇ ಸಿನಿಮಾ ಇಂಡಸ್ಟ್ರಿ ಬೆಳೆಯಲು ಕಾರಣ. ಒಂದು ಕಾಲದಲ್ಲಿ ಒಂದು ಕೋಟಿ ಆಗಬಹುದು ಕಷ್ಟ ಇತ್ತು. ಈಗ ಮೂರು ವಾರಗಳಲ್ಲಿ ನೂರು ಕೋಟಿ ಕಲೆಕ್ಷನ್ ಆಗುತ್ತದೆ.''
''ನಾನು ಯಾವಾಗಲೂ ಸುದೀಪ್ ಜೊತೆಗೆ ಇರುತ್ತೇನೆ. ಅದರ ಬಗ್ಗೆ ಯಾವುದೇ ಸಂಶಯ ಇಲ್ಲ.'' ಹೀಗೆಂದು ತಮ್ಮ ಮಾತು ಶುರು ಮಾಡಿದರು ನಟ ರವಿಚಂದ್ರನ್.

'ಪೈಲ್ವಾನ್' ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮ ನಿನ್ನೆ (ಸಪ್ಟೆಂಬರ್ 10) ರಂದು ನಡೆದಿದೆ. ಈ ಕಾರ್ಯಕ್ರಮದಲ್ಲಿ ನಟ ರವಿಚಂದ್ರನ್ ಮುಖ್ಯ ಅತಿಥಿ ಆಗಿದ್ದರು. 'ಪೈಲ್ವಾನ್' ಚಿತ್ರಕ್ಕೆ, ಸುದೀಪ್ ರಿಗೆ ಮನಸಾರೆ ಶುಭ ಹಾರೈಸಿದರು.

ಸುದೀಪ್ 'ಪೈಲ್ವಾನ್'ಗೆ ಎದುರಾಳಿಯಾಗಿ ನಿಂತ 'ಗ್ಯಾಂಗ್ ಲೀಡರ್'

ರವಿಚಂದ್ರನ್ ಒಂದು ಸಿನಿಮಾದ ಬಗ್ಗೆ ಸುಮ್ಮನೆ ಹೊಗಳುವುದಿಲ್ಲ. ಇದ್ದಿದನ್ನು ಇದ್ದ ಹಾಗೆ ಹೇಳಿ ಬಿಡುತ್ತಾರೆ. ಜೀವನವೇ ಸಿನಿಮಾ ಎಂದು ನಂಬಿರುವ ಕನಸುಗಾರ 'ಪೈಲ್ವಾನ್' ಸಿನಿಮಾದ ಭವಿಷ್ಯ ನುಡಿದಿದ್ದಾರೆ.

'ಪೈಲ್ವಾನ್' ಸಿನಿಮಾ ಟ್ರೇಲರ್ ನೋಡಿದ ರವಿಚಂದ್ರನ್ ಈ ಸಿನಿಮಾ ಗೆದ್ದೆ ಗೆಲ್ಲುತ್ತದೆ ಎಂದು ಹೇಳಿದ್ದಾರೆ.

   
 
ಟೆಕ್ನಾಲಜಿ