Back
Home » ಸಿನಿ ಸಮಾಚಾರ
'ಬುದ್ದಿವಂತ 2' ಸಿನಿಮಾಗೆ ಆರ್ ಚಂದ್ರು ಶಿಷ್ಯ ಆಕ್ಷನ್ ಕಟ್
Oneindia | 11th Sep, 2019 08:28 AM

ಉಪೇಂದ್ರ ನಟನೆಯ 'ಬುದ್ದಿವಂತ 2' ಸಿನಿಮಾದ ನಿರ್ದೇಶಕ ಮೌರ್ಯ ಚಿತ್ರದಿಂದ ಹೊರ ಬಂದ ಸುದ್ದಿ ಇತ್ತೀಚಿಗಷ್ಟೆ ಬಂದಿದೆ. ಈಗ ಈ ಜಾಗಕ್ಕೆ ಹೊಸ ನಿರ್ದೇಶಕನ ಆಗಮನ ಆಗಿದೆ.

ರಿಯಲ್ ಸ್ಟಾರ್ 'ಬುದ್ಧಿವಂತ 2' ಫಸ್ಟ್ ಲುಕ್ ರಿಲೀಸ್

'ಬುದ್ದಿವಂತ 2' ಸಿನಿಮಾದ ಸಾರಥ್ಯವನ್ನು ಜಯರಾಂ ಭದ್ರಾವತಿ ವಹಿಸಿಕೊಂಡಿದ್ದಾರೆ. ಈ ಹಿಂದೆ ನಿರ್ದೇಶಕ ಆರ್ ಚಂದ್ರು ಜೊತೆಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಇವರಿಗೆ ಒಂದು ದೊಡ್ಡ ಅವಕಾಶ ಒದಗಿದೆ.

ಆರ್ ಚಂದ್ರು ಜೊತೆಗೆ ಉಪೇಂದ್ರ ಮತ್ತೊಂದು ಸಿನಿಮಾ ಪ್ಲಾನ್ ಮಾಡುತ್ತಿದ್ದರು. ಈಗ ಅದರ ಜೊತೆಗೆ ಚಂದ್ರು ಶಿಷ್ಯ ಕೂಡ ಉಪ್ಪಿಗೆ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. 'ಬ್ರಹ್ಮ' ಚಿತ್ರದಲ್ಲಿ ಉಪೇಂದ್ರ ಜೊತೆಗೆ ಜಯರಾಂ ಭದ್ರಾವತಿ ಕೆಲಸ ಮಾಡಿದ್ದರು.

'ಬುದ್ಧಿವಂತ'ನ ಚಿತ್ರದಿಂದ ಹೊರಬಂದ ಯುವ ನಿರ್ದೇಶಕ

'ಬುದ್ದಿವಂತ 2' ಸಿನಿಮಾದಲ್ಲಿ ಮೇಘನಾ ರಾಜ್, ಸೋನಾಲ್ ಮಾಂಟೇರಿಯಾ ನಾಯಕಿಯರಾಗಿದ್ದಾರೆ. ಆದಿತ್ಯ ಖಳನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಟಿ ಆರ್ ಚಂದ್ರಶೇಖರ್ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ. ಗುರುಕಿರಣ್ ಸಂಗೀತ ನೀಡಲಿದ್ದಾರೆ.

   
 
ಟೆಕ್ನಾಲಜಿ