Back
Home » ಸಿನಿ ಸಮಾಚಾರ
ಚಿತ್ರರಂಗದಲ್ಲಿ ಅರ್ಧ ಶತಕ ಬಾರಿಸಿದ 'ಮೈನಾ' ಸುಂದರಿ
Oneindia | 10th Sep, 2019 05:58 PM

ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಬಹುಭಾಷಾ ನಟಿ ನಿತ್ಯ ಮೆನನ್ ಅರ್ಧ ಸೆಂಚುರಿ ಬಾರಿಸಿದ ಸಂತಸದಲ್ಲಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ನಿತ್ಯಾ ಬಣ್ಣ ಹಚ್ಚಿದ್ದು ತೀರ ಕಡಿಮೆ. ಆದ್ರೆ ಕನ್ನಡಾಭಿಮಾನಿಗಳ ಹೃದಯ ಗೆದ್ದಿರುವ ನಿತ್ಯಾ ಇಂದು ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

ದಕ್ಷಿಣ ಭಾರತೀಯ ಚಿತ್ರರಂಗದ ಜೊತೆಗೆ ಬಾಲಿವುಡ್ ನಲ್ಲೂ ಮಿಂಚಿರುವ ನಿತ್ಯಾ ಸದ್ಯ 50 ಸಿನಿಮಾಗಳನ್ನು ಪೂರೈಸಿದ್ದಾರೆ. "Seven O Clock" ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಿತ್ಯಾ ಮಲಯಾಳಂನ "ಅರಾಮ್ ತಿರುಕಲ್ಪನ" ಚಿತ್ರಕ್ಕೆ ಸಹಿ ಮಾಡುವ ಮೂಲಕ 50ನೇ ಸಿನಿಮಾ ಮಾಡುತ್ತಿದ್ದಾರೆ.

ಗೊತ್ತಿಲ್ಲದೇ ಏನೇನೋ ಮಾತಾಡಬೇಡಿ: ನೆಟ್ಟಿಗರ ವಿರುದ್ಧ ನಿತ್ಯಾ ಮೆನನ್ ಬೇಸರ

ಈ ಬಗ್ಗೆ ನಿತ್ಯಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 50ನೇ ಸಿನಿಮಾದ ಫಸ್ಟ್ ಲುಕ್ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ನೈಜ ಘಟನೆ ಆಧಾರಿತ ಕ್ರೈಮ್ ಥ್ರಿಲ್ಲರ್ ಚಿತ್ರ ಇದಾಗಿದೆ. ಸದ್ಯ ಮಲಯಾಳಂ ಜೊತೆಗೆ ತಮಿಳು ಚಿತ್ರರಂಗದಲ್ಲೂ ಬ್ಯುಸಿಯಾಗಿದ್ದಾರೆ ನಿತ್ಯಾ.

ಪೋಷಕ ನಟಿಯ ಪಾತ್ರದ ಮೂಲಕ ಕನ್ನಡದಲ್ಲಿ ಮೊದಲು ಬಣ್ಣ ಹಚ್ಚಿದ ನಿತ್ಯಾ, ನಂತರ ಮಲಯಾಳಂ ಚಿತ್ರದ ಮೂಲಕ ನಾಯಕಿಯಾಗಿ ಮಿಂಚಿದ್ದಾರೆ. ಜೋಷ್ ಚಿತ್ರದ ಗೆಸ್ಟ್ ಪಾತ್ರದ ಮೂಲಕ ಕನ್ನಡ ಚಿತ್ರಾಭಿಮಾನಿಗಳ ನಿದ್ದೆ ಗೆಡಿಸಿದ್ದ ನಿತ್ಯಾ ಮೈನಾ ಚಿತ್ರದ ಮೂಲಕ ಮತ್ತೆ ಕನ್ನಡಿಗರನ್ನು ಮೋಡಿಮಾಡಿದ್ದರು.

ಸದ್ಯ ಬಹುಭಾಷೆಯ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ನಿತ್ಯಾ "ಮಿಶನ್ ಮಂಗಲ್" ಚಿತ್ರದ ಮೂಲಕ ಬಾಲಿವುಡ್ ಗೆ ಹಾರಿದ್ದಾರೆ. ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಜೊತೆ ಸ್ಕ್ರೀನ್ ಶೇರ್ ಮಾಡುವ ಮೂಲಕ ಹಿಂದಿ ಚಿತ್ರರಂಗದ ಹೃದಯ ಗೆದ್ದಿದ್ದಾರೆ.

   
 
ಟೆಕ್ನಾಲಜಿ