Back
Home » ಸುದ್ದಿ
ಉನ್ನಾವೋ ಅತ್ಯಾಚಾರ: ಬಿಜೆಪಿ ಶಾಸಕನ ವಿರುದ್ಧ ಕೊಲೆ ಪ್ರಕರಣ
Oneindia | 13th Aug, 2019 10:29 PM

ನವದೆಹಲಿ, ಆಗಸ್ಟ್ 13: ಉನ್ನಾವೋ ಅತ್ಯಾಚಾರ ಘಟನೆಯ ಆರೋಪಿ, ಬಿಜೆಪಿಯ ಉಚ್ಚಾಟಿತ ಶಾಸಕ ಕುಲದೀಪ್ ಸೆಂಗರ್ ವಿರುದ್ಧ ಸಂತ್ರಸ್ತೆಯ ತಂದೆಯ ಹತ್ಯೆ ಪ್ರಕರಣದ ಆರೋಪ ದಾಖಲಿಸಲಾಗಿದೆ.

ಕುಲದೀಪ್ ಮತ್ತು ಪ್ರಕರಣದ ಸಹ ಆರೋಪಿಯಾಗಿರುವ ಅವರ ಸಹೋದರ ಅತುಲ್ ಸೆಂಗರ್ ವಿರುದ್ಧ ದೆಹಲಿಯ ನ್ಯಾಯಾಲಯವೊಂದು ಆರೋಪ ನಿಗದಿಪಡಿಸಿದೆ. ಈ ಪ್ರಕರಣದೊಂದಿಗೆ ನಂಟು ಹೊಂದಿರುವ ಆರೋಪ ಎದುರಿಸುತ್ತಿರುವ ಮೂವರು ಪೊಲೀಸರ ವಿರುದ್ಧವೂ ಕೊಲೆ ಆರೋಪ ದಾಖಲಿಸಲಾಗಿದೆ.

ಅತ್ಯಾಚಾರ ಆರೋಪಿ ಶಾಸಕ ಕೊನೆಗೂ ಬಿಜೆಪಿಯಿಂದ ಉಚ್ಚಾಟನೆ

ಕಳೆದ ತಿಂಗಳು ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಸಂತ್ರಸ್ತೆ, ಅಕೆಯ ಪರ ವಕೀಲರು ಮತ್ತು ಕುಟುಂಬದವರು ಸಾಗುತ್ತಿದ್ದ ವಾಹನಕ್ಕೆ ಟ್ರಕ್ ಒಂದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಇಬ್ಬರು ಸಂಬಂಧಿಕರು ಮೃತಪಟ್ಟರೆ, ಅತ್ಯಾಚಾರ ಸಂತ್ರಸ್ತೆ ಮತ್ತಯ ವಕೀಲರು ತೀವ್ರ ಗಾಯಗೊಂಡಿದ್ದರು. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಲಾಗಿದೆ. ಇಬ್ಬರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ.

ಕುಲದೀಪ್ ಸೆಂಗರ್ ಮತ್ತು ಇತರೆ ಆರೋಪಿಗಳು ಅತ್ಯಾಚಾರ ಸಂತ್ರಸ್ತೆಯ ತಂದೆಯ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೆ, ಅವರ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಅವರ ಮನೆಯಲ್ಲಿ ನಾಡ ಪಿಸ್ತೂಲು ಸಿಕ್ಕಿದೆ ಎಂದು ಸುಳ್ಳು ಪ್ರಕರಣ ದಾಖಲು ಮಾಡಿದ್ದರು. ಪೊಲೀಸರಿಂದ ಹಲ್ಲೆಗೆ ಒಳಗಾಗಿದ್ದ ಸಂತ್ರಸ್ತೆಯ ತಂದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಉನ್ನಾವೋ ಅತ್ಯಾಚಾರ ಪ್ರಕರಣ: ಸುಪ್ರೀಂಕೋರ್ಟ್ ಮಹತ್ವದ ಆದೇಶ

ಸಾಯುವ ಕೆಲವೇ ಗಂಟೆಗಳ ಮುನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ಹೊಟ್ಟೆನೋವು ಬಂದಿದೆ ಎಂದು ಹೇಳಲಾಗಿತ್ತು. ಆದರೆ, ಅವರ ದೇಹದಲ್ಲಿ ಸುಮಾರು 14 ಕಡೆ ಗಾಯಗಳಾಗಿದ್ದವು. ಅವರ ರಕ್ತಕ್ಕೆ ವಿಷಕಾರಿ ಅಂಶಗಳನ್ನು ಸೇರಿಸಿ ಸಾಯಿಸಲಾಗಿದೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿತ್ತು.

   
 
ಟೆಕ್ನಾಲಜಿ