Back
Home » ಟಿವಿ
'ಪ್ರೇಮಲೋಕ' ತಂಡಕ್ಕೆ ಎಂಟ್ರಿ ಕೊಟ್ಟ ಮಲ್ಲಿಕಾ
Oneindia | 13th Aug, 2019 07:08 PM

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಜುಲೈ 22ರಿಂದ ಪ್ರೇಮಲೋಕ ಧಾರಾವಾಹಿ ಪ್ರಸಾರವಾಗುತ್ತಿದೆ. ವಿಜಯ್ ಸೂರ್ಯ ಮತ್ತು ಅಂಕಿತಾ ಗೌಡ ಅಭಿನಯದ ಈ ಧಾರಾವಾಹಿಯಲ್ಲಿ ಈಗ ದೊಡ್ಡ ಟ್ವಿಸ್ಟ್ ಎದುರಾಗಲಿದೆ. ಸೂರ್ಯ ಪ್ರೇರಣಾ ಪ್ರೇಮಲೋಕದಲ್ಲಿ ಬಿರುಗಾಳಿಯಾಗಿ ಬಂದಿದ್ದಾಳೆ ಮಲ್ಲಿಕಾ.

ಸೂರ್ಯ ಮತ್ತು ಪ್ರೇರಣಾ ಜೀವನದಲ್ಲಿ ಪ್ರೀತಿ ಇನ್ನೂ ಸ್ಪಷ್ಟವಾಗಿ ಮೂಡಿಲ್ಲ. ಈಗಾಗಲೇ ತನ್ನ ಮನೆ ಮೇಲಿರುವ ಸಾಲ ತೀರಿಸಲು ಪ್ರೇರಣ ತನ್ನ ತಂದೆ ವಯಸ್ಸಿನವನಾಗಿರುವ ನವೀನ್ ಒಡೆಯರ್ ನನ್ನು ಮದುವೆಯಾಗಲು ಒಪ್ಪಿದ್ದಾಳೆ, ಪ್ರೇರಣಾ ಮತ್ತು ನವೀನ್ ನಡುವೆ ನಿಶ್ಚಿತಾರ್ಥ ಕೂಡ ನಡೆದಿದೆ.

ಯಾವುದೋ ಸಂರ್ದರ್ಭಕ್ಕೆ ಸಿಲುಕಿ ಪ್ರೇರಣಾ ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ನಂಬಿರುವ ಸೂರ್ಯ, ಪ್ರೇರಣಾ ಮತ್ತು ನವೀನ್ ಮದುವೆಯನ್ನು ನಿಲ್ಲಿಸುವ ಪ್ರಯತ್ನದಲ್ಲಿದ್ದಾನೆ. ನವೀನ್ ಒಡೆಯರ್ ವಿರುದ್ಧ ಸಾಕ್ಷಿ ಕಲೆಹಾಕಿದ್ದಾನೆ.

ಪ್ರೇರಣಾ ಬಗ್ಗೆ ಸೂರ್ಯನಿಗಿರುವ ಕಾಳಜಿ ಪ್ರೀತಿಯಾಗಿ ಬದಲಾಗುತ್ತಿದೆ ಅನ್ನುವಷ್ಟರಲ್ಲಿ ಇವರಿಬ್ಬರ ನಡುವೆ ಬಂದಿದ್ದಾಳೆ ಮಲ್ಲಿಕಾ. ಸೌಂದರ್ಯ ಮತ್ತು ಐಶ್ವರ್ಯ ಎರಡರಲ್ಲೂ ಶ್ರೀಮಂತೆ. ಪ್ರಭಾವಿ ರಾಜಕಾರಣಿ ಮಗಳು, ಹಠ ಮತ್ತು ಸಿಟ್ಟಿಗೂ ಹೆಸರುವಾಸಿ. ಬೇಕು ಅನಿಸಿದ್ದನ್ನು ಹೇಗಾದರು ಪಡೆಯುವ ಅಂದವಾದ ರಾಕ್ಷಸಿ.

ಆಗಸ್ಟ್ 13ರಂದು ರಾತ್ರಿ 8 ಗಂಟೆಗೆ ಪ್ರೇಮಲೋಕದಲ್ಲಿ ಮಲ್ಲಿಕಾ ಎಂಟ್ರಿಯಾಗಲಿದೆ. ಇದರಿಂದ ಸೂರ್ಯ ಮತ್ತು ಪ್ರೇರಣಾ ಒಂದಾಗುತ್ತಾರಾ, ದೂರಾಗುತ್ತಾರಾ ಅನ್ನೋ ಕುತೂಹಲ ಹೆಚ್ಚಾಗಿದೆ.

ದಿವ್ಯಾ ರಾವ್ ಮಲ್ಲಿಕಾ ಪಾತ್ರದಲ್ಲಿ ಮಿಂಚಲಿದ್ದಾರೆ. ಉಳಿದಂತೆ ಪ್ರೇಮಲೋಕದಲ್ಲಿ ಹಿರಿಯ ನಟ ಬಾಲ್ ರಾಜ್, ವಾಣಿಶ್ರೀ, ನೇತ್ರಾ ಸಿಂಧ್ಯಾ, ಅಶೋಕ್ ಹೆಗೆಡೆ, ಸಿದ್ದು, ಶಾಲಿನಿ, ರವಿ ಭಟ್, ಮಾಲತಿ ಸರದೇಶಪಾಂಡೆ, ಮಾಸ್ಟರ್ ರಾಮಪ್ರಸಾದ್ , ಶಶಿರಾಜ್ , ಶೀಲಾ ಮತ್ತು ಪ್ರಜ್ಞಾ ಭಟ್ ಮುಖ್ಯಭೂಮಿಕೆಯಲ್ಲಿದ್ದಾರೆ. ಪರಿಣಿತ ನಿರ್ಮಾಣ ಸಂಸ್ಥೆ ಮೂಲಕ ನಿರ್ಮಿಸಲಾಗಿರುವ 'ಪ್ರೇಮಲೋಕ'ಕ್ಕೆ, ಸಂಜೀವ್ ತಗಡೂರು ಅವರ ನಿರ್ದೇಶನವಿದೆ.

   
 
ಟೆಕ್ನಾಲಜಿ