Back
Home » ಸಿನಿ ಸಮಾಚಾರ
ಹಾಡುಹಗಲೆ 'ಬೀದಿ ಕಾಳಗ'ಕ್ಕಿಳಿದ ನಟ ಕೋಮಲ್‌
Oneindia | 13th Aug, 2019 06:55 PM
 • ಕಾರಿಗೆ ಡಿಕ್ಕಿ ಹೊಡೆದಿದ್ದಕ್ಕೆ ಜಗಳ

  ಮಲ್ಲೇಶ್ವರ ಬಳಿ ಹೋಗುತ್ತಿದ್ದ ನಟ ಕೋಮಲ್ ಕಾರಿಗೆ ಟ್ರಾಫಿಕ್ ನಲ್ಲಿ ಮತ್ತೊಂದು ಕೋರು ಟಚ್ ಆಗಿದೆ. ಸಹಜವಾಗಿ ಕಾರಿನಿಂದ ಇಳಿದ ಕೋಮಲ್, ವಾಹನದ ಚಾಲಕನ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಇಬ್ಬರು ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮೀಲಾಯಿಸುವ ಹಂತಕ್ಕೆ ಹೋಗಿದೆ. ಇದರಿಂದ ತೀವ್ರ ಆಕ್ರೋಶಕ್ಕೆ ಒಳಗಾದ ಕೋಮಲ್ ಆ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ.


 • ಕೋಮಲ್ ಗೆ ಹಿಗ್ಗಾಮುಗ್ಗಾ ಥಳಿತ

  ಕೋಮಲ್ ಅವರಿಂದ ಹೊಡೆತ ತಿಂದ ಆ ವ್ಯಕ್ತಿ ಬಳಿಕ ಕೋಮಲ್ ವಿರುದ್ದ ತಿರುಗಿ ಬಿದಿದ್ದಾನೆ. ವ್ಯಕ್ತಿಯ ಜೊತೆ ಅವರ ಸ್ನೇಹಿತರು ಕೂಡ ಜೊತೆಯಲ್ಲಿ ಇದ್ದರು. ಎಲ್ಲರು ಕೋಮಲ್ ಅವರಿಗೆ ರಕ್ತ ಬರುವಂತೆ ಥಳಿಸಿದ್ದಾನೆ. ಸ್ಥಳದಲ್ಲಿ ಪೊಲೀಸರು ಇದ್ದರು ಎಂಬ ಮಾಹಿತಿ ಇದೆ. ಪೊಲೀಸರ ಎದುರೆ ನಡುಬೀದಿಯಲ್ಲಿ ನಟ ಕೋಮಲ್ ಗೆ ಎಲ್ಲರು ಹೊಡೆಯುತ್ತಿದ್ದಿದ್ದನ್ನು ನೋಡಿ ಜನರು ಗಾಬರಿಯಾಗಿದ್ದಾರೆ. ಹೊಡೆತ ತಿಂದು ಕೆಳಗೆ ಬಿದ್ದ ಕೋಮಲ್ ಅವರನ್ನ ಸ್ಥಳಿಯರು ರಕ್ಷಿಸಿದ್ದಾರೆ.


 • ಕೋಮಲ್ ಪೊಲೀಸರ ವಶಕ್ಕೆ

  ಈ ಸಂಬಂಧ ಮಲ್ಲೇಶ್ವರ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಕೂಡಲೇ ಸ್ಥಳಕ್ಕೆ ದಾವಿಸಿ ವ್ಯಕ್ತಿ ಮತ್ತು ಕೋಮಲ್ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ನಂತರ ವಿಚಾರ ತಿಳಿದ ಅಣ್ಣ ನಟ ಜಗ್ಗೇಶ್ ಕೂಡ ಪೊಲೀಸ್ ಸ್ಟೇಷನ್ ಗೆ ಧಾವಿಸಿದ್ದಾರೆ.


 • ದೂರು ಸಾಧ್ಯತೆ.!

  ಸದ್ಯ ಕೋಮಲ್ ಮತ್ತು ಆ ವ್ಯಕ್ತಿಯನ್ನ ಮಲ್ಲೇಶ್ವರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ. ಇಬ್ಬರಲ್ಲಿ ತಪ್ಪು ಯಾರದ್ದು, ಯಾಕೆ ಆ ಗಲಾಟೆ ಆಯಿತು ಎಂಬುದರ ವಿಚಾರಣೆ ನಡೆಯುತ್ತಿದೆ. ಕೋಮಲ್ ಅಥವಾ ಆ ವ್ಯಕ್ತಿ ವಿಚಾರಣೆ ಬಳಿಕ ದೂರು ದಾಖಲಾಗುವ ಸಾಧ್ಯತೆ ಇದೆ. ನಂತರ ಕೋಮಲ್ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಕನ್ನಡದ ಖ್ಯಾತ ನಟ, ರಾಜಕಾರಣಿ ಜಗ್ಗೇಶ್ ತಮ್ಮ ಕೋಮಲ್ ಕುಮಾರ್ ಮೇಲೆ ಹಾಡುಹಗಲೇ ಹಲ್ಲೆ ನಡೆದ ಘಟನೆ ಬೆಂಗಳೂರಿನಲ್ಲಿ ಮಂಗಳವಾರ ನಡೆದಿದೆ. ಕೋಮಲ್ ಕೂಡ ಜನಪ್ರಿಯ ನಾಯಕರಾಗಿದ್ದು 'ಕೆಂಪೇಗೌಡ ೨' ಅವರ ಇತ್ತೀಚಿನ ಚಿತ್ರವಾಗಿದೆ.

'ಫಿಲ್ಮಿ ಬೀಟ್‌ ಕನ್ನಡ'ಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಮಂತ್ರಿ ಮಾಲ್ ಮುಂಭಾಗ ನಡೆದ ಗಲಾಟೆಯೊಂದರಲ್ಲಿ ಕೋಮಲ್‌ ಮೇಲೆ ಹಲ್ಲೆ ನಡೆದಿದೆ. "ವಾಹನ ಅಪಘಾತದ ವಿಚಾರದಲ್ಲಿ ಸಣ್ಣ ಗಲಾಟೆ ನಡೆದಿದೆ. ಗಲಾಟೆ ತಾರಕ್ಕೇರಿ ಕೋಮಲ್‌ ಮೇಲೆ ಹಲ್ಲೆ ನಡೆಸಲಾಗಿದೆ. ಸದ್ಯ ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ,'' ಎಂದು ಮಲ್ಲೇಶ್ವರ ಪೊಲೀಸ್ ಠಾಣೆ ಮೂಲಗಳು ಖಚಿತಪಡಿಸಿವೆ.

   
 
ಟೆಕ್ನಾಲಜಿ