Back
Home » ಸಿನಿ ಸಮಾಚಾರ
ಚಿತ್ರದುರ್ಗದಿಂದ ಬೆಂಗಳೂರಿಗೆ ಶಿಫ್ಟ್ ಆದ 'ಪೈಲ್ವಾನ್' ಆಡಿಯೋ ಕಾರ್ಯಕ್ರಮ
Oneindia | 13th Aug, 2019 05:23 PM

ಸುದೀಪ್ ಅಭಿನಯದ 'ಪೈಲ್ವಾನ್' ಆಡಿಯೋ ಕಾರ್ಯಕ್ರಮ ಚಿತ್ರದುರ್ಗದಲ್ಲಿ ಮಾಡುವ ಪ್ಲಾನ್ ಆಗಿತ್ತು. ಆದರೆ, ಆಗಸ್ಟ್ 9 ರಂದು ನಿಗದಿ ಆಗಿದ್ದ, ಕಾರ್ಯಕ್ರಮ ಕೊನೆಯ ಕ್ಷಣದಲ್ಲಿ ರದ್ದಾಯ್ತು. ಇದೀಗ ಈ ಕಾರ್ಯಕ್ರಮ ಬೆಂಗಳೂರಿಗೆ ಶಿಫ್ಟ್ ಆಗಿದೆ.

ಕೋಟೆ ನಾಡಿನಲ್ಲಿ 'ಪೈಲ್ವಾನ್' ಹಾಡುಗಳನ್ನು ಅದ್ದೂರಿಯಾಗಿ ಲಾಂಚ್ ಮಾಡುವ ಯೋಜನೆ ಚಿತ್ರತಂಡದ್ದಾಗಿತ್ತು. ಆದರೆ, ಅದೇ ಸಮಯಕ್ಕೆ ಉತ್ತರ ಕರ್ನಾಟಕದಲ್ಲಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಉಂಟಾಯಿತು. ಹೀಗಾಗಿ 'ಪೈಲ್ವಾನ್' ಚಿತ್ರತಂಡ ಕಾರ್ಯಕ್ರಮವನ್ನು ಮುಂದಕ್ಕೆ ಹಾಕಿತ್ತು.

'ಪೈಲ್ವಾನ್' ಚಿತ್ರದ ಆಡಿಯೋ ಕಾರ್ಯಕ್ರಮ ರದ್ದು

ಈಗ ಈ ಕಾರ್ಯಕ್ರಮ ಬೆಂಗಳೂರಿನಲ್ಲಿಯೇ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ. ಇದೇ ಭಾನುವಾರ (ಆಗಸ್ಟ್ 18) ರಂದು ಕಾರ್ಯಕ್ರಮ ನಡೆಯಲಿದೆ. ಯಾವುದೇ ದೊಡ್ಡ ಮಟ್ಟದ ಕಾರ್ಯಕ್ರಮದ ಮೂಲಕ ನಡೆಯುತ್ತಿಲ್ಲ. ಆಯ್ದ ವ್ಯಕ್ತಿಗಳಿಗೆ ಮಾತ್ರ ಇಲ್ಲಿ ಅವಕಾಶ ನೀಡಲಾಗುತ್ತದೆ.

'ಪೈಲ್ವಾನ್' ಸುದೀಪ್, ಆಕಾಂಕ್ಷ ಸಿಂಗ್ ಹಾಗೂ ಸುನೀಲ್ ಶೆಟ್ಟಿ ಅಭಿನಯದ ಸಿನಿಮಾವಾಗಿದೆ. ಕೃಷ್ಣ ಚಿತ್ರದ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಸಪ್ಟೆಂಬರ್ 12 ರಂದು ಚಿತ್ರ ದೇಶಾದ್ಯಂತ ಬಿಡುಗಡೆ ಆಗಲಿದೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

   
 
ಟೆಕ್ನಾಲಜಿ