Back
Home » ಪ್ರವಾಸ
ಸಿರ್ಸಾದ ಪ್ರಮುಖ ತಾಣಗಳಿವು
Native Planet | 8th Aug, 2019 05:14 PM

ಸಿರ್ಸಾ ಜಿಲ್ಲೆಗೆ ಈ ಹೆಸರು ಬಂದಿದ್ದು ಸಿರ್ಸಾ ಮುಖ್ಯ ಕೇಂದ್ರವಾಗಿರುವುದರಿಂದ ಈ ಜಿಲ್ಲೆಯನ್ನು ಉತ್ತರ ಭಾರತದ ಅತ್ಯಂತ ಪುರಾತನ ಜಿಲ್ಲೆ ಎನ್ನಲಾಗುತ್ತದೆ. ಸಿರ್ಸಾವನ್ನು ಮಹಾಭಾರತದಲ್ಲೂ ಉಲ್ಲೇಖಿಸಲಾಗಿದೆ, ಮಹಾಭಾರತದ ಆ ಕಾಲದಲ್ಲಿ ಸಿರ್ಸಾವನ್ನು ಶೈರಿಕ್ಷಿಕಾ ಎಂದು ಉಲ್ಲೇಖಿಸಲಾಗಿದೆ.

ಮಹಾಭಾರತದಲ್ಲಿ ಉಲ್ಲೇಖವಾಗುವಂತೆ ಸಿರ್ಸಾವನ್ನು ಪಾಂಡವರಲ್ಲಿ ಒಬ್ಬರಾದ ನಕುಲ ಪಶ್ಚಿಮ ಭಾಗದಿಂದ ಗೆದ್ದು ತಂದನು ಎಂದು. ಪನಿನಿಯಲ್ಲಿ ಹೇಳಿದಂತೆ ಸಿರ್ಸಾ ಕ್ರಿಸ್ತಪೂರ್ವ ಐದರಲ್ಲಿ ಬೆಳೆಯುತ್ತಿರುವ ನಗರವೆಂದು ಉಲ್ಲೇಖವಾಗಿದೆ. ಇತಿಹಾಸ ಸಿರ್ಸಾ ಭಾರತದ ಹರ್ಯಾಣ ರಾಜ್ಯದ ಒಂದು ಜಿಲ್ಲೆ. ಇದು ರಾಷ್ಟ್ರೀಯ ಹೆದ್ದಾರಿ ಹತ್ತರಲ್ಲಿದೆ. 1819ರಲ್ಲಿ ಈ ಪ್ರದೇಶವನ್ನು ಬ್ರಿಟಿಷರು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಅದಾದ ನಂತರ ಈ ಭಾಗ ವಾಯುವ್ಯ ದೆಹಲಿ ಭಾಗಕ್ಕೆ ಸೇರ್ಪಡೆಯಾಯಿತು.

ಒಂದು ವರ್ಷದ ತರುವಾಯ ವಾಯುವ್ಯ ಜಿಲ್ಲೆಯು ಉತ್ತರ ಮತ್ತು ಪಶ್ಚಿಮ ಜಿಲ್ಲೆಯಾಗಿ ವಿಭಾಗವಾಗಿ ಮತ್ತು ಸಿರ್ಸಾ ಪಶ್ಚಿಮ ಭಾಗದ ಜಿಲ್ಲೆಯಾಯಿತು. ಅದಾದ ನಂತರ ಅದನ್ನು ಹರ್ಯಾಣ ಎಂದು ನಾಮಕರಣ ಮಾಡಲಾಯಿತು. ಸಿರ್ಸಾ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು ಪ್ರವಾಸಿಗರು ನೋಡಬಹುದಾದ ಸ್ಥಳಗಳು ಸಿರ್ಸಾದಲ್ಲಿ ಬಹಳಷ್ಟಿವೆ. ಸಿರ್ಸಾ ದೇರಾ ಸಚ್ಚಾ ಸೌದಾದ ಕೇಂದ್ರ ಭಾಗವಾಗಿದೆ, ಈ ಧಾರ್ಮಿಕ ಪಂಗಡವನ್ನು ಶಾ ಮಸ್ತಾನ ಹುಟ್ಟು ಹಾಕಿ, ಅವರ ಮೂಲ ಹೆಸರು ಖೇಮಮಾಲ್. ಈ ಪಂಗಡವು ಸಾಮಾಜಿಕ ಚಟುವಟಿಕೆಗಳಿಗೆ ಹೆಸರುವಾಸಿ ಮತ್ತು ಉಚಿತ ಊಟಕ್ಕೂ. ಸಾರ್ವಜನಿಕರಿಂದ ಯಾವುದೇ ಆರ್ಥಿಕ ಸಹಾಯ ಪಡೆಯದೇ ಈ ಕೆಲಸವನ್ನು ಈ ಪಂಗಡ ನಡೆಸುತ್ತದೆ.

ಇನ್ನೊಂದು ಹೆಸರುವಾಸಿಯಾಗಿರುವ ಪಂಗಡವೆಂದರೆ ರಾಧಾ ಸ್ವಾಮಿ, ಈ ಪಂಗಡದ್ದೂ ಮೂಲ ಇಲ್ಲಿ. ರಾಧಾಸ್ವಾಮಿ ಸಾಸ್ತಾಂಗ್ ಘರ್ ಸಿಖಂದರ್ ಪುರ್ ಹಳ್ಳಿಗೆ ಹತ್ತಿರವಿದೆ, ಇದು ಸಿರ್ಸಾ ನಗರದಿಂದ ಐದು ಕಿಲೋಮೀಟರ್ ಪೂರ್ವಕ್ಕಿದೆ. ಮೇಲೆ ಉಲ್ಲೇಖಿಸಿದ ರಾಧಾಸ್ವಾಮಿ ಪಂಗಡದ ಕೇಂದ್ರ ಕಚೇರಿಯು ಪಂಜಾಬಿನ ಅಮೃತಸರ ಜಿಲ್ಲೆಯಲ್ಲಿದೆ. ಸಿರ್ಸಾದಲ್ಲಿರ ಬೇಕಾದರೆ ಖಾಗದಾನದಲ್ಲಿರುವ ರಾಮ ದೇವ ಮಂದಿರವನ್ನೂ ಭೇಟಿ ಮಾಡಬಹುದು.

ಹೆಸರೇ ಹೇಳುವಂತೆ ಈ ದೇವಾಲಯ ಬಾಬ ರಾಮದೇವಜಿ ಅವರಿಗೆ ಅರ್ಪಿತವಾಗಿದೆ, ಅವರು ಭಾರತದ ಇತರ ಕೆಲವು ರಾಜ್ಯಗಳಲ್ಲಿ ಹೆಸರುವಾಸಿ. ಪ್ರಮುಖವಾಗಿ ರಾಜಸ್ಥಾನದಲ್ಲಿ ಮತ್ತು ಪಾಕಿಸ್ಥಾನದ ಸಿಂಧ್ ನಲ್ಲಿ. ಇವರು ಬಡವರಿಗೆ, ಬಲ್ಲಿದರಿಗೆ ಸಹಾಯ ಹಸ್ತ ಚಾಚಿದ್ದರು ಮತ್ತು ಅವರ ಕೆಲವೊಂದು ಪವಾಡಗಳ ಬಗ್ಗೆ ಮಾತುಗಳು ಕೇಳಿ ಬರುತ್ತದೆ. ಅಲ್ಲದೇ ಭೇಟಿಗೆ ಯೋಗ್ಯವಾದ ಇನ್ನೊಂದು ದೇವಾಲಯವೆಂದರೆ ರಾಮ್ ನಗರಿಯಾದ ಹನುಮಾನ್ ಮಂದಿರ ಮತ್ತು ಚೋರ್ಮರ್ ಖೇರಾದಲ್ಲಿರುವ ಗುರುದ್ವಾರ ಗುರು ಗೋಬಿಂದ್ ಸಿಂಗ್. ನಂಬಿಕೆಯ ಪ್ರಕಾರ ಸಿಖ್ ಗುರು ಇಲ್ಲಿ ರಾತ್ರಿಯೊಂದನ್ನು ಕಳೆದಿದ್ದರು.

ದೇರಾ ಬಾಬ ಸಾರ್ಸಿ ನಾಥ್ ದೇವಾಲಯ ಹದಿಮೂರನೇ ಶತಮಾನದಲ್ಲಿ ನಿರ್ಮಾಣವಾಗಿದೆ. ಇದು ಈಗ ಸಿರ್ಸಾದಲ್ಲಿ ಹಿಸಾರ್ ಗೇಟ್ ಎಂದು ಪ್ರಸಿದ್ದಿಯಾಗಿದೆ. ಈ ದೇವಾಲವನ್ನು ಸಾರ್ಸಿ ನಾಥ್ ನಿರ್ಮಿಸಿದ್ದರು, ಇವರು ನಾಥ್ ಪಂಗಡದ ಪ್ರಮುಖ ಧಾರ್ಮಿಕ ಮುಖಂಡರು. ಇವರು ತಮ್ಮ ಅನುಯಾಯಿಗಳೊಂದಿಗೆ ಪ್ರಾರ್ಥನೆ, ಪೂಜೆ, ಧ್ಯಾನ ಮಾಡಿದ್ದರು. ಸಿರ್ಸಾ ನಗರವು ಗಗ್ಗರ್ ಕಣಿವೆಯ ಶ್ರೀಮಂತ ಐತಿಹಾಸಿಕ ಮತ್ತು ಸಾಂಸ್ಕ್ರುತಿಕ ವೈಭವನ್ನು ಹೊಂದಿದೆ. ಈ ಪ್ರದೇಶವನ್ನು ಭಾರತದ ಪುರಾತನ ಇಲಾಖೆಯ ಸಂಶೋಧನೆಯ ಸಮಯದಲ್ಲಿ ಅಸ್ತಿತ್ವಕ್ಕೆ ಬಂತು. ಸಿರ್ಸಾದಲ್ಲಿ ಉಪ ಉಷ್ಣಾಂಶ ವಾತಾವರಣವಿದ್ದು ಮೂರು ಕಾಲವಾಗಿ ವಿಂಗಡಿಸ ಬಹುದು. ಅದು ಬೇಸಿಗೆ, ಮಳೆಗಾಲ ಮತ್ತು ಚಳಿಗಾಲ.

 
ಟೆಕ್ನಾಲಜಿ