Back
Home » ಪ್ರವಾಸ
ಪಾಂಡವರು ಸ್ಥಾಪಿಸಿದ ಸ್ವರ್ಣಪ್ರಸ್ಥ ಇದು
Native Planet | 1st Aug, 2019 11:34 AM
 • ಕ್ರಿಪೂ.600ರಷ್ಟು ಹಳೆಯದು

  PC:Martin Lewison
  ಮಹಾಕಾವ್ಯದ ಪ್ರಕಾರ ಯುಧಿಷ್ಟರನು ಧುರ್ಯೋದನನಿಂದ ಈ ಭೂಮಿಯನ್ನು ಶಾಂತಿ ಸಂಧಾನದ ಮೂಲಕ ಪಡೆದನಂತೆ. ಇದಕ್ಕೆ ಯಾವುದೇ ಐತಿಹಾಸಿಕ ಆಧಾರಗಳಿಲ್ಲ. ಆದರೆ ವ್ಯಾಕರಣಿಗ ಪಾಣಿನಿಯು ಬರೆದ ಅಷ್ಟಾಧ್ಯಾಯಿಯಲ್ಲಿ ಸೋನಿಪತ್‌ನ ಪ್ರಸ್ತಾಪ ಮಾಡಿದ್ದಾನೆ. ಇದರರ್ಥ ಈ ಪಟ್ಟಣವು ಕ್ರಿಪೂ.600ರಷ್ಟು ಹಳೆಯದು.


 • ದಂತಕಥೆಯ ಪ್ರಕಾರ

  PC:Martin Lewison
  ಮಹಾಭಾರತದ ಸಮಯದಲ್ಲಿ ಐದು ಪಾಂಡವ ಸಹೋದರರಿಂದ ಇದನ್ನು ಸ್ವರ್ಣಪ್ರಸ್ಥ ಎಂದು ಸ್ಥಾಪಿಸಲಾಗಿದೆ ಎಂದು ನಂಬಿರುವ ಕಾರಣ ಸೋನಿಪತ್ ಪ್ರಾಚೀನ ಮಹತ್ವವನ್ನು ಹೊಂದಿದೆ. ಮತ್ತೊಂದು ದಂತಕಥೆಯ ಪ್ರಕಾರ, ಈ ಸ್ಥಳವು ಪಾಂಡವ ಸಹೋದರರಲ್ಲಿ ಒಬ್ಬನಾದ ಅರ್ಜುನನ ಹದಿಮೂರನೆಯ ವಂಶಸ್ಥ ರಾಜ ಸೋನಿಗೆ ಸೇರಿದೆ.


 • ಖ್ವಾಜ ಖಿಜ್ರ ಸಮಾಧಿ

  PC: Pardeep Dogra
  ಸೋನಿಪತ್‌ನ ಮುಖ್ಯ ಆಕರ್ಷಣೆ ಖ್ವಾಜ ಖಿಜ್ರ ಸಮಾಧಿ. ಇದು ದರಿಯಾ ಖಾನ್ನ ಸಂನ್ಯಾಸಿಯಾದ ಮಗನ ಸಮಾಧಿ. ಈತ ಇಬ್ರಾಹಿಂ ಲೊಧಿಯ ಕಾಲದಲ್ಲಿ ಜೀವಿಸಿದ್ದ ಎಂದು ಹೇಳಲಾಗುತ್ತದೆ. ಈ ಸಮಾಧಿಯು ಕ್ರಿ.ಶ 1522 ಮತ್ತು 1525ರ ನಡುವೆ ನಿರ್ಮಿಸಲಾಯಿತು. ಇದನ್ನು ಎತ್ತರದ ಪೀಠದ ಮೇಲೆ ಕಟ್ಟಲಾಗಿದೆ. ಇದನ್ನು ಕೆಂಪು ಮರಳಶಿಲೆ ಮತ್ತು ಕಂಕಾರ್ ಕಲ್ಲುಗಳನ್ನು ಬಳಸಿ ಕಟ್ಟಲಾಗಿದೆ. ಇದು ಭಾರತೀಯ ಪುರಾತತ್ವ ಪರಿವೀಕ್ಷಣಾಲಯದ ಸಂರಕ್ಷಣೆಯಲ್ಲಿದೆ. ಹವಾಮಾನ ಸೋನಿಪತ್‌ನಲ್ಲಿ ಸಾಮಾನ್ಯವಾಗಿ ಉಷ್ಣತೆ ಹೆಚ್ಚಿದ್ದು ಒಣ ಹವೆಯಿರುತ್ತದೆ.


 • ತಲುಪುವುದು ಹೇಗೆ?

  PC: Gopal Aggarwal

  ಸೋನಿಪತ್‌ನ ಹರಿಯಾಣದ ಹಿಸಾರ್, ಪಾಣಿಪತ್, ಕರ್ನಾಲ್ ಸೀರಸ, ಭಿವಾನಿ, ಬಹದುರ್ಗ, ಜಿಂದ್ ಮತ್ತು ಗುರ್ಗೊನ್ಗಳಂತಹ ನಗರ ಮತ್ತು ಪಟ್ಟಣಗಳೊಂದಿಗೆ ಸಂಪರ್ಕ ಹೊಂದಿದೆ. ಇದು ನವದೆಹಲಿಯ ಜಿಟಿ ಕರ್ನಾಲ್ ರಸ್ತೆಯಿಂದ 20ಕಿಮೀ ದೂರದಲ್ಲಿದೆ. ಹರಿಯಾಣ ಸರ್ಕಾರದ ಸಾರ್ವಜನಿಕ ಸಾರಿಗೆ ಮತ್ತು ಖಾಸಗಿ ಬಸ್ಸುಗಳು ಇಲ್ಲಿ ಓಡಾಡುತ್ತವೆ.

  ಸೋನಿಪತ್‌ನಲ್ಲಿ ಮುಖ್ಯ ರೈಲು ನಿಲ್ದಾಣವಿದೆ. ಇದು ಅಮೃತಸರ, ಉದಯಪುರ, ಜೈಪುರ, ಪೂನ, ನವದೆಹಲಿ, ಬಹದುರ್ಗ, ಜಿಂದ್ ಮತ್ತು ಪಾಣಿಪತ್‌ಗೆ ರೈಲು ಸೌಲಭ್ಯವನ್ನು ಹೊಂದಿದೆ.

  ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ನವದೆಹಲಿ ವಿಮಾನ ನಿಲ್ದಾಣ. ಇಲ್ಲಿಂದ ಸೋನೆಪತ್ಗೆ ಟ್ಯಾಕ್ಸಿ ಅಥವಾ ಸಾರ್ವಜನಿಕ/ಖಾಸಗಿ ಬಸ್‌ನಲ್ಲಿ ಪ್ರಯಾಣಿಸಬಹುದು.
ಹರಿಯಾಣದ ಸೋನಿಪತ್ ಜಿಲ್ಲೆಯ ಮುಖ್ಯ ಪಟ್ಟಣ ಮತ್ತು ಜಿಲ್ಲಾಕೇಂದ್ರ ಸೋನಿಪತ್. ಇದು ದೇಶದ ರಾಜಧಾನಿ ದೆಹಲಿಯಿಂದ 20 ಕಿಮೀ ದೂರದಲ್ಲಿದೆ. ಯಮುನ ನದಿಯು ಈ ಪಟ್ಟಣದ ಪಶ್ಚಿಮ ದಿಕ್ಕಿನಲ್ಲಿ ಹರಿಯುತ್ತದೆ. ಮಹಾಭಾರತ ಸಮಯದಲ್ಲಿ ಈ ಪಟ್ಟಣವನ್ನು ಪಾಂಡವರು ಸ್ವರ್ಣಪ್ರಸ್ಥ ಎಂದು ಸ್ಥಾಪಿಸಿದರು.

   
 
ಟೆಕ್ನಾಲಜಿ